'ಆರ್‌ಸಿಬಿ ಪರ ಆಡಿದ್ದು ನನ್ನ ವೃತ್ತಿ ಜೀವನಕ್ಕೆ ಟರ್ನಿಂಗ್‌ ಪಾಯಿಂಟ್‌', ರಜತ್‌ ಪಾಟಿದಾರ್‌!

06-10-22 12:41 pm       Source: Vijayakarnataka   ಕ್ರೀಡೆ

ರಾಯಲ್‌ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ತಂಡದ ಪರ ಆಡಿದ 2022ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌) ಟೂರ್ನಿಯ ಒಂದೇ ಒಂದು ದೊಡ್ಡ ಇನಿಂಗ್ಸ್‌ ನನ್ನ ವೃತ್ತಿ ಜೀವನವನ್ನು ಬದಲಾಯಿಸಿತು ಎಂದು ರಜತ್‌ ಪಾಟಿದಾರ್‌ ಹೇಳಿಕೊಂಡಿದ್ದಾರೆ.

ಹೊಸದಿಲ್ಲಿ: ರಾಯಲ್‌ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಪರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ ಒಂದೇ ಒಂದು ಇನಿಂಗ್ಸ್‌ನಿಂದ ನನ್ನ ವೃತ್ತಿ ಜೀವನ ಬದಲಾಯಿತು ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿದೆ ಎಂದು ಹೇಳಿದ್ದಾರೆ.

ಬಿಸಿಸಿಐ ತನ್ನ ಅಧಿಕೃತ ಟ್ವಿಟರ್‌ನಲ್ಲಿ ಶೇರ್‌ ಮಾಡಿರುವ ವಿಡಿಯೋದಲ್ಲಿ ಮಾತನಾಡಿರುವ ರಜತ್‌ ಪಾಟಿದಾರ್‌, "ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿನ ಪ್ರದರ್ಶನದಿಂದ ನನ್ನ ವೃತ್ತಿ ಜೀವನಕ್ಕೆ ತಿರುವು ಸಿಕ್ಕಿದೆ. ನನ್ನ ಕನಸು ನನಸಾಗುತ್ತಿದೆ," ಎಂದು ಹೇಳಿಕೊಂಡಿದ್ದಾರೆ.

ಭಾರತ ತಂಡಕ್ಕೆ ನಾನು ಆಯ್ಕೆಯಾಗಿದ್ದಕ್ಕೆ ದಿನೇಶ್‌ ಕಾರ್ತಿಕ್ ಟ್ವಿಟರ್‌ನಲ್ಲಿ ನನಗೆ ಅಭಿನಂದಿಸಿದ್ದರು. ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ದಿನೇಶ್‌ ಕಾರ್ತಿಕ್‌ ನನಗೆ ಮಾದರಿಯಾಗಿದ್ದಾರೆಂದು 29ರ ಪ್ರಾಯದ ಆಟಗಾರ ತಿಳಿಸಿದ್ದಾರೆ.

Can't ignore such performers': Karthik wants 2 domestic stars in Test team  | Cricket - Hindustan Times

"ಅವರು(ದಿನೇಶ್‌ ಕಾರ್ತಿಕ್) ನನಗೆ ಅಭಿನಂದನೆ ಸಲ್ಲಿಸಿದ ಟ್ವೀಟ್‌ ಅನ್ನು ನಾನು ನೋಡಿದ್ದೇನೆ. ಆ ಟ್ವಿಟ್‌ನಿಂದ ನನಗೆ ತುಂಬಾ ಖುಷಿಯಾಗಿತ್ತು. ದಿನೇಶ್‌ ಕಾರ್ತಿಕ್‌ ಜೊತೆ ನಾನು ಐಪಿಎಲ್‌ ಆಡಿದ್ದೇನೆ. ನನ್ನ ವಿಶ್ವಾಸ ಹೆಚ್ಚಿಸಲು ಅವರು ಸಹಾಯ ಮಾಡಿದ್ದಾರೆ. ಅವರು ನನಗೆ ಒಂದು ರೀತಿ ಮಾದರಿ. ಕಾರ್ತಿಕ್‌ ಸಾಕಷ್ಟು ವರ್ಷಗಳ ಕಾಲ ಭಾರತ ತಂಡದಲ್ಲಿ ಆಡಿದ್ದಾರೆ. ಅವರ ನನಗೋಸ್ಕರ ಟ್ವೀಟ್‌ ಮಾಡಿದ್ದರಿಂದ ನನಗೆ ತುಂಬಾ ಖುಷಿಯಾಗಿದೆ," ಎಂದು ರಜತ್‌ ಪಾಟಿದಾರ್‌ಸಂತೋಷ ವ್ಯಕ್ತಪಡಿಸಿದರು.

IND vs SA 2022: Mukesh Kumar, Rajat Patidar make it into India's ODI squad,  Prithvi Shaw misses out again

ದಕ್ಷಿಣ ಆಫ್ರಿಕಾ ವಿರುದ್ದ ಮೂರು ಪಂದ್ಯಗಳ ಒಡಿಐ ಸರಣಿಯ ಭಾರತ ತಂಡಕ್ಕೆ ಆಯ್ಕೆಯಾದ ರಜತ್ ಪಟಿದಾರ್‌ ಹಾಗೂ ಮುಖೇಶ್‌ ಕುಮಾರ್‌ ಅವರಿಗೆ ದಿನೇಶ್‌ ಕಾರ್ತಿಕ್‌ ತಮ್ಮ ಅಧಿಕೃತ ಟ್ವಿಟರ್‌ನಲ್ಲಿ ಅಭಿನಂದನೆ ಸಲ್ಲಿಸಿದ್ದರು.

"ರಜತ್‌ ಪಾಟಿದಾರ್‌ ಅವರನ್ನು ಭಾರತ ತಂಡದಲ್ಲಿ ನೋಡಲು ತುಂಬಾ ಖುಷಿಯಾಗುತ್ತದೆ, ಅವರು ರಾಷ್ಟ್ರೀಯ ತಂಡದಲ್ಲಿರಲು ಅರ್ಹರಾಗಿದ್ದಾರೆ. ವೆಲ್ ಡನ್‌ ಮುಖೇಶ್‌ ಕುಮಾರ್‌. ಈಗ ಸರ್ಫರಾಝ್‌ ಖಾನ್ ಹಾಗೂ ಬಾಬಾ ಇಂದ್ರಜಿತ್‌ ಅವರು ಟೆಸ್ಟ್‌ ಯೋಜನೆಯಲ್ಲಿದ್ದಾರೆ. ನಿಮ್ಮ ಅದ್ಭುತ ಪ್ರದರ್ಶನವನ್ನು ಮರೆಯಲು ಸಾಧ್ಯವಿಲ್ಲ. ಇವರೆಲ್ಲಾ ಅಸಾಧಾರಣರಾಗಿದ್ದಾರೆ," ಎಂದು ದಿನೇಶ್‌ ಕಾರ್ತಿಕ್‌ ಈ ಹಿಂದೆ ಟ್ವೀಟ್‌ ಮಾಡಿದ್ದರು.

ಆರ್‌ಸಿಬಿ ತಂಡದಲ್ಲಿ ಆಡುವಾಗ ಭಾರತ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಹಾಗೂ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಎಬಿ ಡಿ ವಿಲಿಯರ್ಸ್‌ ಅವರ ಜೊತೆಗೆ ನಡೆಸಿದ್ದ ಸಂಭಾಷಣೆಯನ್ನು ರಜತ್‌ ಪಾಟಿದಾರ್ ಬಹಿರಂಗಪಡಿಸಿದರು. ಮೊಟ್ಟ ಮೊದಲ ಈ ಬಾರಿ ಈ ಇಬ್ಬರನ್ನು ಭೇಟಿಯಾದ ವೇಳೆ ನಾನು ನರ್ವಸ್‌ ಆಗಿದ್ದೆ ಎಂಬ ಅಂಶವನ್ನು ರಿವೀಲ್‌ ಮಾಡಿದರು.

Virat Kohli didn't care whether he was getting runs or getting out...' |  Cricket - Hindustan Times

"ಎಬಿ ಡಿ ವಿಲಿಯರ್ಸ್ ಹಾಗೂ ವಿರಾಟ್‌ ಕೊಹ್ಲಿ ನನಗೆ ಮಾದರಿಯಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ಇಬ್ಬರೂ ದೊಡ್ಡ ಕ್ರಿಕೆಟಿಗರು. ಮೊದಲ ಬಾರಿ ಅವರನ್ನು ನೋಡಿದಾಗ ನನಗೆ ಬಹಳಾ ನರ್ವಸ್‌ ಆಗಿತ್ತು. ಅವರೇ ನನ್ನ ಬಳಿ ಮೊದಲು ಮಾತನಾಡಿದ್ದರು ಹಾಗೂ ಈ ಕ್ಷಣ ನಿಜಕ್ಕೂ ನನ್ನ ಪಾಲಿಗೆ ಸ್ಮರಣೀಯ," ಎಂದು ರಜತ್‌ ಪಾಟಿದಾರ್‌ ಹೇಳಿದರು.

Ind Vs Sa That Ipl Knock Was A Turning Point For Me Rajat Patidar Talks About His Indian Team Selection.