'ಎರಡು ಶಾಟ್ಸ್‌ ಮಿಸ್‌ ಆಯ್ತು'-ತಮ್ಮ ಬ್ಯಾಟಿಂಗ್‌ ಬಗ್ಗೆ ಸಂಜು ಸ್ಯಾಮ್ಸನ್‌ ಹೇಳಿದ್ದಿದು!

07-10-22 12:11 pm       Source: Vijayakarnataka   ಕ್ರೀಡೆ

ದಕ್ಷಿಣ ಆಫ್ರಿಕಾ ವಿರುದ್ಧ ಲಖನೌದಲ್ಲಿ ಗುರುವಾರ ರಾತ್ರಿ ನಡೆದಿದ್ದ ಮೊದಲನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಕೇವಲ 9 ರನ್‌ಗಳಿಂದ ಸೋಲು ಅನುಭವಿಸಿತು.

ಲಖನೌ: ದಕ್ಷಿಣ ಆಫ್ರಿಕಾ ವಿರುದ್ಧ ಮೊದಲನೇ ಏಕದಿನ ಪಂದ್ಯದಲ್ಲಿ ನನ್ನಿಂದ ಎರಡು ಶಾಟ್ಸ್‌ ಮಿಸ್‌ ಆಗಿದೆ. ಆದರೆ, ಪಂದ್ಯದಲ್ಲಿನ ತನ್ನ ಬ್ಯಾಟಿಂಗ್‌ ಪ್ರದರ್ಶನದ ಬಗ್ಗೆ ತನಗೆ ಸಂಪೂರ್ಣ ತೃಪ್ತಿ ಇದೆ ಎಂದು ಭಾರತ ತಂಡದ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಸಂಜು ಸ್ಯಾಮ್ಸನ್‌ ಹೇಳಿದ್ದಾರೆ.

ಇಲ್ಲಿನ ಏಕನಾ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ನೀಡಿದ್ದ 250 ರನ್‌ ಗುರಿ ಹಿಂಬಾಲಿಸಿದ ಭಾರತ ತಂಡ ಕೇವಲ 51 ರನ್‌ಗಳಿಗೆ ಪ್ರಮುಖ 4 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್‌ ಅಯ್ಯರ್‌ (50 ರನ್‌) ಹಾಗೂ ಸಂಜು ಸ್ಯಾಮ್ಸನ್‌ (86*) ನಿರ್ಣಾಯಕ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದರು. ಅದರಲ್ಲೂ ಸಂಜು ಸ್ಯಾಮ್ಸನ್‌ 63 ಎಸೆತಗಳಲ್ಲಿ 3 ಭರ್ಜರಿ ಸಿಕ್ಸರ್ ಹಾಗೂ 9 ಬೌಂಡರಿಗಳೊಂದಿಗೆ ಅಜೇಯ 86 ರನ್ ಸಿಡಿಸಿದರು. ಆದರೂ ಭಾರತ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.

South Africa's Shamsi brings magic to cricket celebrations - Saudi  Gazette

ಅಂದಹಾಗೆ ಕೊನೆಯ ಓವರ್‌ನಲ್ಲಿ ಭಾರತ ತಂಡಕ್ಕೆ 30 ರನ್‌ ಅಗತ್ಯವಿತ್ತು. ಈ ವೇಳೆ ತಬ್ರೇಝ್‌ ಶಾಮ್ಸಿ ಅವರ ಓವರ್‌ನಲ್ಲಿ ಸಂಜು ಸ್ಯಾಮ್ಸನ್‌, ಒಂದು ಸಿಕ್ಸರ್‌ ಹಾಗೂ ಮೂರು ಬೌಂಡರಿಯೊಂದಿಗೆ 20 ರನ್‌ ಗಳಿಸಿದರೂ ಭಾರತ ತಂಡ ಅಂತಿಮವಾಗಿ ಕೇವಲ 9 ರನ್‌ಗಳಿಂದ ಸೋಲು ಒಪ್ಪಿಕೊಳ್ಳಬೇಕಾಯಿತು.

ಪಂದ್ಯದ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಂಜು ಸ್ಯಾಮ್ಸನ್‌, ಕ್ರೀಸ್‌ನಲ್ಲಿ ದೀರ್ಘಾವಧಿ ಸಮಯ ಕಳೆದಿದ್ದರಿಂದ ನನಗೆ ತುಂಬಾ ಸಂತೋಷವಾಗಿದೆ. ಮುಂದಿನ ಸಲ ಭಾರತ ತಂಡವನ್ನು ಗೆಲುವಿನ ದಡ ಸೇರಿಸಲು ಇನ್ನಷ್ಟು ಕಠಿಣ ಪರಿಶ್ರಮಪಡುತ್ತೇನೆ. ಆದರೆ, ಇಂದಿನ ಪಂದ್ಯದ ಪ್ರದರ್ಶನದ ಬಗ್ಗೆ ನನಗೆ ಸಂಪೂರ್ಣ ತೃಪ್ತಿ ಇದೆ ಎಂದು ಹೇಳಿದರು.

"ವಿಕೆಟ್‌ಗಳ ನಡುವೆ ಸಮಯ ಕಳೆಯುವುದು ಯವಾಗಲೂ ಒಳ್ಳೆಯ ಭಾವನೆಯನ್ನು ಮೂಡಿಸುತ್ತದೆ. ಪಂದ್ಯದಲ್ಲಿ ತಂಡವನ್ನು ಗೆಲುವಿನ ಗೆರೆ ದಾಟಿಸುವ ಉದ್ದೇಶದಿಂದ ನಾವು ಯಾವಾಗಲೂ ಆಡುತ್ತೇವೆ. ನಾನು ಎರಡು ಶಾಟ್‌ಗಳನ್ನು ಮಿಸ್‌ ಮಾಡಿದ್ದೇನೆ. ಮುಂದಿನ ಪಂದ್ಯಕ್ಕೆ ಇನ್ನಷ್ಟು ಕಠಿಣ ಪರಿಶ್ರಮಪಡುತ್ತೇನೆ. ಆದರೆ, ನನ್ನ ಬ್ಯಾಟಿಂಗ್‌ ಪ್ರದರ್ಶನದಿಂದ ನನಗೆ ಸಂಪೂರ್ಣ ತೃಪ್ತಿ ಇದೆ," ಎಂದು ಸಂಜು ಸ್ಯಾಮ್ಸನ್‌ ತಿಳಿಸಿದರು.

"ದಕ್ಷಿಣ ಆಫ್ರಿಕಾ ಬೌಲರ್‌ಗಳು ಅತ್ಯುತ್ತಮವಾಗಿ ಬೌಲ್‌ ಮಾಡಿದ್ದಾರೆ. ಇವತ್ತು(ಗುರುವಾರ) ತಬ್ರೇಝ್‌ ಶಾಮ್ಸಿ ಸ್ವಲ್ಪ ದುಬಾರಿಯಾಗಿದ್ದಾರೆ. ಹಾಗಾಗಿ ಅವರನ್ನು ನಾವು ಟಾರ್ಗೆಟ್‌ ಮಾಡಬಹುದೆಂದು ಗೊತ್ತಿತ್ತು. ಕೊನೆಯ ಓವರ್‌ ಇವರೇ ಬೌಲ್ ಮಾಡುತ್ತಾರೆಂದು ನಮಗೆ ತಿಳಿದಿತ್ತು. ಹಾಗಾಗಿ 20ನೇ ಓವರ್‌ನಲ್ಲಿ ನಾಲ್ಕು ಸಿಕ್ಸರ್‌ ಬಾರಿಸುತ್ತೇನೆ ಹಾಗೂ ನಮಗೆ 24 ರನ್ ಸಿಗುತ್ತದೆ ಎಂದು ನನಗೆ ಗೊತ್ತಿತ್ತು. ನಾನು ಪಂದ್ಯವನ್ನು ಕೊನೆಯವರೆಗೂ ತೆಗೆದುಕೊಂಡು ಹೋಗಿದ್ದೆ, ಯೋಜನೆಗೆ ತಕ್ಕಂತೆ ಬ್ಯಾಟ್ಸ್‌ಮನ್‌ಗಳು ಕೂಡ ಸ್ಪಂದಿಸಿದ್ದಾರೆ," ಎಂದು ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಹೇಳಿದರು.

David Miller - The Horse to Bet on!

ದಕ್ಷಿಣ ಆಫ್ರಿಕಾ ಪರ ಅಜೇಯ 75 ರನ್ ಸಿಡಿಸಿದ ಡೇವಿಡ್‌ ಮಿಲ್ಲರ್‌ ಅವರನ್ನು ಇದೇ ವೇಳೆ ಸಂಜು ಸ್ಯಾಮ್ಸನ್‌ ಗುಣಗಾನ ಮಾಡಿದರು.

"ನಾವು ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ನೋಡಿಕೊಂಡು ಬೌಲ್‌ ಮಾಡಬೇಕಾಗುತ್ತದೆ. ಡೇವಿಡ್‌ ಮಿಲ್ಲರ್‌ ವಿಶ್ವದ ಅತ್ಯುತ್ತಮ ಫಿನಿಷರ್‌ ಆಗಿದ್ದಾರೆ. ಹಾಗಾಗಿ ಇಂತಹ ಬ್ಯಾಟ್ಸ್‌ಮನ್‌ಗಳಿಗೆ ಈ ಮೈದಾನದಲ್ಲಿ ಬೌಲ್‌ ಮಾಡುವುದು ಸವಾಲುದಾಯಕವಾಗಿರುತ್ತದೆ," ಎಂದು ಸಂಜು ಸ್ಯಾಮ್ಸನ್‌ ತಿಳಿಸಿದರು.

Ind Vs Sa I Am Satisfied With My Contribution Sanju Samson Opens Up About Brave Knock In First Odi Against South Africa.