3ನೇ ಒಡಿಐ ಗೆದ್ದು ಆಸ್ಟ್ರೇಲಿಯಾದ ವಿಶ್ವ ದಾಖಲೆ ಸರಿಗಟ್ಟಿದ ಭಾರತ!

12-10-22 02:33 pm       Source: Vijayakarnataka   ಕ್ರೀಡೆ

ಮಂಗಳವಾರ ದಕ್ಷಿಣ ಅಫ್ರಿಕಾ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಏಳು ವಿಕೆಟ್‌ ಗೆಲುವು ಪಡೆಯುವ ಮೂಲಕ ಶಿಖರ್‌ ಧವನ್‌ ನಾಯಕತ್ವದ.

ಹೊಸದಿಲ್ಲಿ:ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ಹಾಗೂ ಸರಣಿ ನಿರ್ಣಾಯಕ ಪಂದ್ಯದಲ್ಲಿ ಶಿಖರ್ ಧವನ್ ನಾಯಕತ್ವದ ಭಾರತ ತಂಡ 7 ವಿಕೆಟ್‌ಗಳಿಂದ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಟೀಮ್‌ ಇಂಡಿಯಾ 2-1 ಅಂತರದಲ್ಲಿ ಮುಡಿಗೇರಿಸಿಕೊಂಡಿತು.

ಮಂಗಳವಾರ ಇಲ್ಲಿನ ಅರುಣ್‌ ಜೆಟ್ಲಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಮೂರನೇ ಪಂದ್ಯದಲ್ಲಿ ಕುಲ್‌ದೀಪ್‌ ಯಾದವ್ (18ಕ್ಕೆ 4) ಸ್ಪಿನ್‌ ಮೋಡಿ ಹಾಗೂ ಶುಭಮನ್ ಗಿಲ್‌(49 ರನ್‌) ಅವರ ಅತ್ಯುತ್ತಮ ಬ್ಯಾಟಿಂಗ್‌ ನೆರವಿನಿಂದ ಭಾರತ ತಂಡ ಭರ್ಜರಿ ಗೆಲುವು ಪಡೆದಿತ್ತು. ಆ ಮೂಲಕ 2003ರ ರಿಕಿ ಪಾಂಟಿಂಗ್‌ ನಾಯಕತ್ವದ ಆಸ್ಟ್ರೇಲಿಯಾ ತಂಡದ ವಿಶ್ವ ದಾಖಲೆಯನ್ನು ಟೀಮ್‌ ಇಂಡಿಯಾ ಸರಿಗಟ್ಟಿತು.

Kuldeep Yadav all focussed

ಈ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರಿದ್ದ ಕುಲ್‌ದೀಪ್‌ ಯಾದವ್‌ 4.1 ಓವರ್‌ಗಳಿಗೆ ಕೇವಲ 18 ರನ್‌ ನೀಡಿ 4 ವಿಕೆಟ್‌ಗಳನ್ನು ಕಬಳಿಸಿದ್ದರು. ಆ ಮೂಲಕ ದಕ್ಷಿಣ ಆಫ್ರಿಕಾ ತಂಡವನ್ನು 99 ರನ್‌ಗಳಿಗೆ ಆಲ್‌ಔಟ್‌ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರು. ನಂತರ ಗುರಿ ಹಿಂಬಾಲಿಸಿದ ಭಾರತ ತಂಡ, 19.1 ಓವರ್‌ಗಳಿಗೆ 105 ರನ್ ಗಳಿಸಿ ಗೆಲುವು ಪಡೆಯಿತು.

ಅಂತಾರಾಷ್ಟ್ರೀಯ ಕ್ರಿಕೆಟ್‌ನ 2022ರ ಆವೃತ್ತಿಯಲ್ಲಿ ಭಾರತ ತಂಡದ 38ನೇ ಗೆಲುವು ಇದಾಯಿತು. ಆ ಮೂಲಕ ಏಕೈಕ ಆವೃತ್ತಿಯಲ್ಲಿ ಇಷ್ಟೇ ಪಂದ್ಯಗಳನ್ನು ಗೆದ್ದಿರುವ ಆಸ್ಟ್ರೇಲಿಯಾ ತಂಡದ ವಿಶ್ವ ದಾಖಲೆಯನ್ನು ಭಾರತ ಸರಿಗಟ್ಟಿತು. 2003ರ ಆವೃತ್ತಿಯಲ್ಲಿ ರಿಕಿ ಪಾಂಟಿಂಗ್‌ ನಾಯಕತ್ವದ ಆಸ್ಟ್ರೇಲಿಯಾ ತಂಡ ಒಟ್ಟು 38 ಪಂದ್ಯಗಳನ್ನು ಗೆದ್ದಿತ್ತು.

Ricky Ponting backs Australia turnaround ahead of next year's World Cup |  Sports News,The Indian Express

ರಿಕಿ ಪಾಂಟಿಂಗ್‌ ನಾಯಕತ್ವದಲ್ಲಿ ಆಸ್ಟ್ರೇಲಿಯಾ ತಂಡ 2003ರಲ್ಲಿ 30 ಏಕದಿನ ಪಂದ್ಯಗಳು ಹಾಗೂ ಎಂಟು ಟೆಸ್ಟ್‌ ಪಂದ್ಯಗಳು ಸೇರಿ ಒಟ್ಟು 38 ಪಂದ್ಯಗಳನ್ನು ಗೆದ್ದುಕೊಂಡಿತ್ತು. 2017ರಲ್ಲಿ ಭಾರತ ತಂಡ 37 ಪಂದ್ಯಗಳಲ್ಲಿ ಗೆಲುವು ಪಡೆದುಕೊಂಡಿತ್ತು. ಇದೀಗ ಟೀಮ್‌ ಇಂಡಿಯಾ ತನ್ನದೇ ದಾಖಲೆಯನ್ನು ಉತ್ತಮಪಡಿಸಿಕೊಂಡಿದೆ.

The favourite duo is back' - Twitter ecstatic as Virat Kohli, KL Rahul  return in India colours

ವಿರಾಟ್‌ ಕೊಹ್ಲಿ ಹಾಗೂ ಕೆ.ಎಲ್‌ ರಾಹುಲ್‌ ಅವರ ನಾಯಕತ್ವದಲ್ಲಿ ಭಾರತ ತಂಡ, 2022ರ ಆರಂಭದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಟೆಸ್ಟ್‌ ಹಾಗೂ ಮೂರು ಒಡಿಐ ಸೇರಿದಂತೆ ಒಟ್ಟು ಐದು ಪಂದ್ಯಗಳಲ್ಲಿ ಸೋಲು ಅನುಭವಿಸಿತ್ತು. ಆ ಮೂಲಕ ಪ್ರಸಕ್ತ ಆವೃತ್ತಿಯ ಆರಂಭದಲ್ಲಿಯೂ ಭಾರಿ ಹಿನ್ನಡೆ ಅನುಭವಿಸಿತ್ತು.

ಇದಾದ ಬಳಿಕ ವೆಸ್ಟ್‌ ಇಂಡೀಸ್‌, ಶ್ರೀಲಂಕಾ, ಜಿಂಬಾಬ್ವೆ, ಇಂಗ್ಲೆಂಡ್‌ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ವಿರುದ್ಧ ಸರಣಿಗಳನ್ನು ಗೆದ್ದುಕೊಂಡಿತ್ತು. 2022ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೂ ಮುನ್ನ ರೋಹಿತ್‌ ಶರ್ಮಾ ನಾಯಕತ್ವದ ಭಾರತ ತಂಡ ದಾಖಲೆಯ 23 ಪಂದ್ಯಗಳಲ್ಲಿ ಗೆಲುವು ಪಡೆದುಕೊಂಡಿತ್ತು.

IND vs SA: Rohit Sharma Completes 10 Bilateral Series Wins As India's  Full-Time Captain

ಇದೀಗ ಭಾರತ ತಂಡ ಟಿ20 ವಿಶ್ವಕಪ್‌ ಟೂರ್ನಿಯಲ್ಲಿಯೂ ತನ್ನ ದಾಖಲೆಯನ್ನು ವಿಸ್ತರಿಸಲು ಎದುರು ನೋಡುತ್ತಿದೆ. ಇನ್ನೊಂದು ಪಂದ್ಯ ಗೆದ್ದರೂ ಟೀಮ್ ಇಂಡಿಯಾ, ಆಸ್ಟ್ರೇಲಿಯಾ ತಂಡದ ವಿಶ್ವ ದಾಖಲೆಯನ್ನು ಮುರಿಯಲಿದೆ. ಆ ಮೂಲಕ ಏಕೈಕ ಆವೃತ್ತಿಯಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ತಂಡವೆಂಬ ಕೀರ್ತಿಗೆ ಟೀಮ್ ಇಂಡಿಯಾ ಭಾಜನವಾಗಲಿದೆ.

ಅಂದಹಾಗೆ ಅಕ್ಟೋಬರ್‌ 23 ರಂದು ಪಾಕಿಸ್ತಾನ ವಿರುದ್ದ ಸೆಣಸುವ ಮೂಲಕ ಭಾರತ ತಂಡ ಚುಟುಕು ವಿಶ್ವಕಪ್‌ ಟೂರ್ನಿಯ ಅಭಿಯಾನವನ್ನು ಅಧಿಕೃತವಾಗಿ ಆರಂಭಿಸಲಿದೆ.

Ind Vs Sa Team India Matches Australias World Record With 7 Wicket Win Over South Africa In 3rd Odi.