ಬಾಂಗ್ಲಾ ವಿರುದ್ಧ ಅರ್ಧಶತಕ ಸಿಡಿಸಿ ವಿರಾಟ್‌ ಕೊಹ್ಲಿ ದಾಖಲೆ ಮುರಿದ ಬಾಬರ್‌ ಆಝಮ್‌!

14-10-22 12:49 pm       Source: Vijayakarnataka   ಕ್ರೀಡೆ

ನ್ಯೂಜಿಲೆಂಡ್‌ನಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯ ಬಾಂಗ್ಲಾದೇಶ ವಿರುದ್ಧ ಅರ್ಧಶತಕ ಸಿಡಿಸುವ ಮೂಲಕ.

ಹೊಸದಿಲ್ಲಿ: ಬಾಂಗ್ಲಾದೇಶ ವಿರುದ್ದ ತ್ರಿಕೋನ ಟಿ20 ಸರಣಿಯ ಪಂದ್ಯದಲ್ಲಿ ಅರ್ಧಶತಕ ಸಿಡಿಸುವ ಮೂಲಕ ಪಾಕಿಸ್ತಾನ ತಂಡದ ನಾಯಕ ಬಾಬರ್‌ ಆಝಮ್‌ ಅವರು ಭಾರತ ತಂಡದ ಸ್ಟಾರ್‌ ಬ್ಯಾಟ್ಸ್‌ಮನ್‌ಗಳಾದ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಅವರ ದಾಖಲೆಗಳನ್ನು ಮುರಿದಿದ್ದಾರೆ.

ಗುರುವಾರ ನಡೆದಿದ್ದ ಪಂದ್ಯದಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದ ಬಾಬರ್‌ ಆಝಮ್‌ 40 ಎಸೆತಗಳಲ್ಲಿ 55 ರನ್‌ ಸಿಡಿಸಿದರು. ಇದರ ಜೊತೆಗೆ ಮೊಹಮ್ಮದ್‌ ರಿಝ್ವಾನ್ ಅವರ ಜೊತೆ ಮುರಿಯದ ಮೊದಲನೇ ವಿಕೆಟ್‌ಗೆ 101 ರನ್‌ ಗಳಿಸುವ ಮೂಲಕ ಆಝಮ್‌, ಪಾಕಿಸ್ತಾನ ತಂಡದ 7 ವಿಕೆಟ್‌ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ್ದರು.

India vs England: Skipper Virat Kohli scripts major records in second T20

ಈ ಪಂದ್ಯದಲ್ಲಿ ಅರ್ಧಶತಕ ಸಿಡಿಸುವ ಮೂಲಕ ಬಾಬರ್‌ ಆಝಮ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗವಾಗಿ 11,000 ರನ್‌ ಗಳಿಸಿದ ಮೊದಲ ಬ್ಯಾಟ್ಸ್‌ಮನ್‌ ಎನಿಸಿಕೊಂಡರು. ಆ ಮೂಲಕ ಟೀಮ್‌ ಇಂಡಿಯಾ ಮಾಜಿ ನಾಯಕ ವಿರಾಟ್‌ ಕೊಹ್ಲಿ ದಾಖಲೆಯನ್ನು ಮುರಿದರು. ವಿರಾಟ್‌ ಕೊಹ್ಲಿ ಈ ಸಾಧನೆಯನ್ನು ಮಾಡಲು 261 ಇನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದರು. ಆದರೆ, 27ರ ಪ್ರಾಯದ ಆಝಮ್ 251 ಇನಿಂಗ್ಸ್‌ಗಳನ್ನು ಪಡೆದುಕೊಂಡಿದ್ದಾರೆ.

I never even thought about it': Sunil Gavaskar reveals why he wasn't a good  fit to become India head coach | Cricket - Hindustan Times

262 ಇನಿಂಗ್ಸ್‌ಗಳ ಮೂಲಕ ಇಷ್ಟು ರನ್‌ಗಳನ್ನು ಪೂರ್ಣಗೊಳಿಸಿದ್ದ ಭಾರತದ ಬ್ಯಾಟಿಂಗ್ ದಿಗ್ಗಜ ಸುನೀಲ್‌ ಗವಾಸ್ಕರ್‌ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನ ಬ್ಯಾಟಿಂಗ್‌ ದಂತಕತೆ ಜಾವೇದ್‌ ಮಿಯಾಂದದ್‌ ಅವರು 266 ಇನಿಂಗ್ಸ್‌ಗಳಿಂದ 11 ಸಾವಿರ ರನ್‌ಗಳನ್ನು ಮೈಲುಗಲ್ಲು ದಾಟಿದ್ದಾರೆ. ಆ ಮೂಲಕ ಅವರು ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

ತಮ್ಮ 251ನೇ ಇನಿಂಗ್ಸ್‌ನ ಅಂತ್ಯಕ್ಕೆ ಬಾಬರ್‌ ಆಝಮ್‌ 11,002 ರನ್‌ಗಳನ್ನು ಗಳಿಸಿದ್ದಾರೆ. ಒಟ್ಟಾರೆ ಈ ಸಾಧನೆ ಮಾಡಿದ 11ನೇ ಪಾಕಿಸ್ತಾನದ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ. 42 ಟೆಸ್ಟ್‌ ಪಂದ್ಯಗಳ 75 ಇನಿಂಗ್ಸ್‌ಗಳಿಂದ 3122 ರನ್‌, 92 ಒಡಿಐನ 90 ಇನಿಂಗ್ಸ್‌ಗಳಿಂದ 4664 ರನ್‌ ಹಾಗೂ 91 ಟಿ20ಐ ಪಂದ್ಯಗಳ 86 ಇನಿಂಗ್ಸ್‌ಗಳಿಂದ 3216 ರನ್‌ಗಳನ್ನು ದಾಖಲಿಸಿದ್ದಾರೆ.

Most Centuries as a Captain in T20Is PAK vs ENG Babar Azam equals Rohit  Sharma special captaincy world record - PAK vs ENG: बतौर कप्तान बाबर आजम ने  की रोहित शर्मा के

ರೋಹಿತ್‌ ಶರ್ಮಾ ದಾಖಲೆ ಮುರಿದ ಆಝಮ್‌: ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಸಿಡಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಅವರನ್ನು ಬಾಬರ್‌ ಆಝಮ್‌ ಹಿಂದಿಕ್ಕಿದ್ದಾರೆ. ಇದಕ್ಕೂ ಮುನ್ನ ವಿರಾಟ್‌ ಕೊಹ್ಲಿ ಈ ದಾಖಲೆ ಪಟ್ಟಿಯಲ್ಲಿ ರೋಹಿತ್‌ ಶರ್ಮಾ ಅವರನ್ನು ಹಿಂದಿಕ್ಕಿದ್ದರು. 33 ಅರ್ಧಶತಕಗಳನ್ನು ಸಿಡಿಸಿರುವ ಕಿಂಗ್‌ ಕೊಹ್ಲಿ ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದರೆ, 29 ಅರ್ಧಶತಕಗಳೊಂದಿಗೆ ಆಝಮ್ ಎರಡನೇ ಸ್ಥಾನದಲ್ಲಿದ್ದಾರೆ ಹಾಗೂ ರೋಹಿತ್‌ ಶರ್ಮಾ ಮೂರನೇ ಸ್ಥಾನದಲ್ಲಿದ್ದಾರೆ.

ಅಂದಹಾಗೆ ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಬಾಂಗ್ಲಾದೇಶ ಲಿಟಾನ್ ದಾಸ್‌(69 ರನ್) ಹಾಗೂ ಶಕಿಬ್‌ ಅಲ್‌ ಹಸನ್‌(68) ಅವರ ಅರ್ಧಶತಕಗಳ ನೆರವಿನಿಂದ 20 ಓವರ್‌ಗಳಿಗೆ 6 ವಿಕೆಟ್‌ ನಷ್ಟಕ್ಕೆ 173 ರನ್‌ ಗಳಿಸಿತ್ತು. ನಂತರ 174 ರನ್‌ ಗುರಿ ಹಿಂಬಾಲಿಸಿದ ಪಾಕಿಸ್ತಾನ ತಂಡ, ಬಾಬರ್‌ ಆಝಮ್(55 ರನ್) ಹಾಗೂ ಮೊಹಮ್ಮದ್‌ ರಿಝ್ವಾನ್‌(69 ರನ್‌) ಸಹಾಯದಿಂದ ಪಾಕಿಸ್ತಾನ ತಂಡ ಗೆಲುವಿನ ಗಡಿ ದಾಟಿತು.

Pakistan Captain Babar Azam Breaks Virat Kohli, Rohit Sharmas Records, Continues Run Scoring Spree Ahead Of T20 World Cup.