ಬ್ರೇಕಿಂಗ್ ನ್ಯೂಸ್
19-10-22 12:31 pm Source: Vijayakarnataka ಕ್ರೀಡೆ
ಬೆಂಗಳೂರು: ಭಾರತೀಯ ಕ್ರಿಕೆಟ್ ಕಂಡ ಶ್ರೇಷ್ಠ ಆಟಗಾರರು ಹಾಗೂ ನಾಯಕರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಇವರಿಬ್ಬರ ನಡುವೆ ಸ್ಪರ್ಧೆ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಕಳೆದ ವರ್ಷ ಯುಎಇ ಹಾಗೂ ಒಮಾನ್ ಆತಿಥ್ಯದಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸಿದ್ದರು. ಆದರೆ, ಲೀಗ್ ಹಂತದಲ್ಲಿ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ವಿರುದ್ದ ಸತತ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿ ಭಾರತ ಟೂರ್ನಿಯಿಂದ ಹೊರ ಬಿದ್ದಿತ್ತು.
2021ರ ಟಿ20 ವಿಶ್ವಕಪ್ ಟೂರ್ನಿಯ ಬಳಿಕ ವಿರಾಟ್ ಕೊಹ್ಲಿ ಭಾರತ ಟಿ20 ತಂಡದ ನಾಯಕತ್ವದಿಂದ ಕೆಳಗೆ ಇಳಿದಿದ್ದರು. ನಂತರ ಭಾರತ ಟಿ20 ತಂಡದ ನಾಯಕನಾಗಿ ವಿರಾಟ್ ಕೊಹ್ಲಿ ಸ್ಥಾನವನ್ನು ತುಂಬಿದ್ದ ರೋಹಿತ್ ಶರ್ಮಾ ಇದೀಗ ತಂಡವನ್ನು ನಂ.1 ಶ್ರೇಯಾಂಕಕ್ಕೆ ತಂದಿದ್ದಾರೆ ಹಾಗೂ ಎರಡನೇ ಟಿ20 ವಿಶ್ವಕಪ್ ಗೆದ್ದುಕೊಡುವ ಹೊಸ್ತಿಲಲ್ಲಿದ್ದಾರೆ. ಚುಟಕು ವಿಶ್ವಕಪ್ ಸನಿಹವಾಗುತ್ತಿದ್ದಂತೆ ರೋಹಿತ್ ಹಾಗೂ ಕೊಹ್ಲಿ ನಡುವೆ ಸಮರ ಜೋರಾಗಿದೆ.
ಅರೆ! ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ನಡುವೆ ಸಮರ ಶುರುವಾಗಿದೆಯೇ? ಹಾಗಾದರೆ ಇವರಿಬ್ಬರ ನಡುವೆ ಕೆಮಿಸ್ಟ್ರಿ ಸರಿಯಾಗಿಲ್ಲವೆ? ಇವರಿಬ್ಬರು ಮೈದಾನದಲ್ಲಿ ಮುಖಾಮುಖಿಯಾಗುವುದಿಲ್ಲವೆ? ಎಂಬ ನಾನಾ ಪ್ರಶ್ನೆಗಳು ನಿಮ್ಮನ್ನು ಕಾಡುತ್ತಿರಬಹುದು! ಆದರೆ, ಕೊಹ್ಲಿ ಹಾಗೂ ರೋಹಿತ್ ಸಮರ ಸಾರಿರುವುದು ವೈಯಕ್ತಿಕವಾಗಿ ಅಲ್ಲ, ಬದಲಿಗೆ ಚುಟುಕು ವಿಶ್ವ ಕಪ್ ಟೂರ್ನಿಯಲ್ಲಿ 1000 ರನ್ ಗಳನ್ನು ಪೂರೈಸುವ ಸಲುವಾಗಿ!
ಅಗ್ರ ಸ್ಥಾನದಲ್ಲಿ ಮಹೇಲಾ ಜಯವರ್ಧನೆ: 2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಆರಂಭವಾದ ಟಿ20 ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ಇಲ್ಲಿಯವರೆಗೂ ಸಹಸ್ರ ರನ್‌ಗಳನ್ನು ಪೂರೈಸಿದ ದಾಖಲೆ ಶ್ರೀಲಂಕಾ ದಿಗ್ಗಜ ಮಹೇಲಾ ಜಯವರ್ಧನೆ ಅವರ ಹೆಸರಿನಲ್ಲಿದೆ. ಲಂಕಾ ಮಾಜಿ ನಾಯಕ ತಾವಾಡಿರುವ 31 ಚುಟುಕು ವಿಶ್ವಕಪ್ ಪಂದ್ಯಗಳಲ್ಲಿ ಒಂದು ಶತಕ, 6 ಅರ್ಧಶತಕ ಸೇರಿದಂತೆ ಒಟ್ಟು 1016 ರನ್ ಸಿಡಿಸಿದ್ದಾರೆ. ಅದೂ ಅಲ್ಲದೆ 5 ಬಾರಿ ಅಜೇಯರಾಗಿ ಉಳಿದಿರುವ ಜಯವರ್ಧನೆ ಒಂದೇ ಒಂದು ಬಾರಿ ಡಕ್‌ಔಟ್ ಆಗಿದ್ದಾರೆ. ಇದರಲ್ಲಿ 111 ಬೌಂಡರಿಗಳು ಹಾಗೂ 25 ಭರ್‌ಜರಿ ಸಿಕ್ಸರ್ ಜಯವರ್ಧನೆ ಹೆಸರಿನಲ್ಲಿದೆ.
ಮಹೇಲಾ ಜಯವರ್ಧನೆ ನಂತರದ ಸ್ಥಾನದಲ್ಲಿ ವೆಸ್ಟ್ ಇಂಡೀಸ್ ದೈತ್ಯ ಬ್ಯಾಟ್ಸ್‌ಮನ್ ಹಾಗೂ ಯೂನಿವರ್ಸ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ (33 ಪಂದ್ಯ, 965 ರನ್, 2 ಶತಕ, 7 ಅರ್ಧಶತಕ, 78 ಬೌಂಡರಿ, 63 ಸಿಕ್ಸರ್), ಲಂಕಾ ಮಾಜಿ ಆರಂಭಿಕ ಆಟಗಾರ ತಿಲಕರತ್ನೆ ದಿಲ್ಷಾನ್ (35 ಪಂದ್ಯಗಳು , 897 ರನ್, 6 ಅರ್ಧಶತಕ) ಇದ್ದಾರೆ.
ಅಂದಹಾಗೆ ಮಹೇಲಾ ಜಯವರ್ಧನೆ ಅವರ 1000 ಟಿ20 ವಿಶ್ವಕಪ್ ಟೂರ್ನಿಯ ರನ್‌ಗಳ ದಾಖಲೆಯನ್ನು ಮುರಿಯಲು ಇಲ್ಲಿಯವರೆಗೂ ಯಾರಿಂದಲೂ ಸಾಧ್ಯವಾಗಿಲ್ಲ. ಆದರೆ, ಶ್ರೀಲಂಕಾ ದಿಗ್ಗಜನ ಈ ಮಹತ್ವದ ದಾಖಲೆಯನ್ನು ಮುರಿಯಲು ಈ ಬಾರಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಅತ್ಯುತ್ತಮ ಅವಕಾಶವಿದೆ. ಈ ದಾಖಲೆಯ ಸಲುವಾಗಿ ಈ ಇಬ್ಬರ ನಡುವೆ ಜಿದ್ದಾಜಿದ್ದಿ ನಡೆಯಲಿದೆ ಎಂದರೆ ತಪ್ಪಾಗಲಾರದು.
ರೋಹಿತ್ ಶರ್ಮಾಗೆ 153 ರನ್ ಅಗತ್ಯ: ಉದ್ಘಾಟನಾ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಫೈನಲ್ ಪ್ರವೇಶಿಸುವಲ್ಲಿ ತಮ್ಮದೇ ಆದ ಪಾತ್ರವನ್ನು ನಿರ್ವಹಿಸಿದ್ದ ರೋಹಿತ್ ಶರ್ಮಾ, ಇಲ್ಲಿಯವರೆಗೂ 30 ಚುಟುಕು ವಿಶ್ವಕಪ್ ಇನಿಂಗ್ಸ್‌ಗಳಲ್ಲಿ 131.52ರ ಸರಾಸರಿಯಲ್ಲಿ 8 ಅರ್ಧಶತಕಗಳ ಸೇರಿದಂತೆ 847 ರನ್ ಗಳಿಸಿದ್ದಾರೆ. ಅಜೇಯ 79 ರನ್ ಇವರ ಗರಿಷ್ಠ ಸ್ಕೋರ್. ಇದರಲ್ಲಿ ಇವರು 80 ಬೌಂಡರಿಗಳು ಹಾಗೂ 31 ಸಿಕ್ಸರ್ ಸಿಡಿಸಿದ್ದಾರೆ. ಇನ್ನೂ 1000 ರನ್ ಪೂರ್ಣಗೊಳಿಸಲು ರೋಹಿತ್ ಶರ್ಮಾಗೆ ಕೇವಲ 153 ರನ್‌ಗಳ ಅಗತ್ಯವಿದೆ.
845 ರನ್ ಗಳಿಸಿರುವ ವಿರಾಟ್ ಕೊಹ್ಲಿ: 2012ರಲ್ಲಿ ಟಿ20 ವಿಶ್ವಕಪ್ ಟೂರ್ನಿಗೆ ಪದಾರ್ಪಣೆ ಮಾಡಿದ್ದ ವಿರಾಟ್ ಕೊಹ್ಲಿ, ರನ್ ಹೊಳೆಯನ್ನೇ ಹರಿಸಿದ್ದಾರೆ. 2014 ಹಾಗೂ 2016ರ ವಿಶ್ವಕಪ್ ಟೂರ್ನಿಗಳಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ಮ್ಯಾನ್ ಆಫ್ ದಿ ಸೀರೀಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಈ ಬಾರಿಯೂ ಅವರು ಉತ್ತಮ ಪ್ರದರ್ಶನ ತೋರುವ ಮೂಲಕ ಟೂರ್ನಿ ಶ್ರೇಷ್ಠ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. ಚುಟುಕು ವಿಶ್ವಕಪ್ ಟೂರ್ನಿಯಲ್ಲಿ 19 ಇನಿಂಗ್ಸ್‌ಗಳಿಂದ ವಿರಾಟ್ ಕೊಹ್ಲಿ 845 ರನ್ ಗಳಿಸಿದ್ದು, 1000 ರನ್‌ಗಳ ರೇಸ್‌ನಲ್ಲಿ ಸಹ ಆಟಗಾರ ರೋಹಿತ್ ಶರ್ಮಾ ಜೊತೆ ಪೈಪೋಟಿಯಲ್ಲಿದ್ದಾರೆ.
129.60 ರ ಸರಾಸರಿಯಲ್ಲಿ 10 ಅರ್ಧಶತಕ ಸಿಡಿಸಿರುವ ವಿರಾಟ್ ಕೊಹ್ಲಿ, ಈ ಬಾರಿ ಟೂರ್ನಿಯಲ್ಲಿ ಚೊಚ್ಚಲ ಶತಕದ ಮೇಲೆ ಕಣ್ಣಿಟ್ಟಿದ್ದಾರೆ. ಈಗಾಗಲೇ ಏಷ್ಯಾಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಅಫಘಾನಿಸ್ತಾನ ವಿರುದ್ಧ ಅಂತಾರಾಷ್ಟ್ರೀಯ ಟಿ20 ಚೊಚ್ಚಲ ಶತಕ ಸಿಡಿಸಿದ್ದರು. ಟಿ20 ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್, 78 ಬೌಂಡರಿ ಹಾಗೂ 20 ಸಿಕ್ಸರ್ ಸಿಡಿಸಿದ್ದಾರೆ.
ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಜೊತೆಗೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸಹಸ್ರ ರನ್‌ಗಳ ದಾಖಲೆ ಸನಿಹದಲ್ಲಿ ಆಸ್ಟ್ರೇಲಿಯಾದ ಆರಂಭಿಕ ಡೇವಿಡ್ ವಾರ್ನರ್ (30 ಇನಿಂಗ್ಸ್ ,762ರನ್ , ಗರಿಷ್ಠ ಸ್ಕೋರ್ 89*, 6 ಅರ್ಧಶತಕ, 80 ಬೌಂಡರಿ, 31 ಸಿಕ್ಸರ್), ಬಾಂಗ್ಲಾದೇಶ ನಾಯಕ ಶಕಿಬ್ ಅಲ್ ಹಸನ್ (31 ಇನಿಂಗ್ಸ್ , 698 ರನ್, 84 ಗರಿಷ್ಠ ಸ್ಕೋರ್, 3 ಅರ್ಧಶತಕ, 59 ಬೌಂಡರಿ, 23 ಸಿಕ್ಸರ್), ನ್ಯೂಜಿಲೆಂಡ್‌ನ ಮಾರ್ಟಿನ್ ಗಪ್ಟಿಲ್ (27 ಇನಿಂಗ್ಸ್, 617 ರನ್, 93 ಗರಿಷ್ಠ ಸ್ಕೋರ್ , 2 ಅರ್ಧಶತಕ, 61 ಬೌಂಡರಿ, 23 ಸಿಕ್ಸರ್) ಕೂಡ ಇದ್ದಾರೆ.
ಆದರೆ, ಸಹಸ್ರ ರನ್‌ಗಳ ರೇಸ್‌ನಲ್ಲಿ ಸಮರ ಸಾರಿರುವ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಪೈಕಿ ಯಾರು ಮೊದಲಿಗೆ 1000 ರನ್ ಗಳಿಸುತ್ತಾರೆ ಎಂಬುದು ಅಭಿಮಾನಿಗಳಲ್ಲಿ ತೀವ್ರ ಕೂತೂಹಲ ಕೆರಳಿಸಿದೆ. ಚುಟುಕು ವಿಶ್ವಕಪ್ ಟೂರ್ನಿಯಲ್ಲಿ ಸಹಸ್ರ ರನ್‌ಗಳಿಸಲು ಹೊರಟಿರುವ ಭಾರತದ ಹಾಲಿ ಹಾಗೂ ಮಾಜಿ ನಾಯಕರಿಗೆ ಬೆಸ್ಟ್ ಆಫ್ ಲಕ್ ಹೇಳೋಣ ಅಲ್ಲವೆ?
T20 World Cup 2022 India Star Batters Virat Kohli And Rohit Sharma In The Race For 1000 Runs In The T20 World Cup Tournament.
23-11-24 07:43 pm
Bangalore Correspondent
B Y Vijayendra, DK Shivkumar: ವಿಜಯೇಂದ್ರಗೆ ತೀವ...
23-11-24 02:15 pm
Karnataka Bypolls Live Updates Congress: ಉಪ ಚ...
23-11-24 11:35 am
ಲಾರಿ ಡ್ರೈವರ್ ಎಡವಟ್ಟಿಗೆ ಫಾರ್ಚುನರ್ ಕಾರು ಡಿಕ್ಕ...
22-11-24 05:16 pm
Kodava News, children : ಕೊಡವ ಜನಸಂಖ್ಯೆ ಹೆಚ್ಚಿಸ...
22-11-24 03:53 pm
23-11-24 05:34 pm
HK News Desk
ಮಹಾರಾಷ್ಟ್ರದಲ್ಲಿ ಕೇಸರಿ ಕಮಾಲ್ ; ನಿರೀಕ್ಷೆಗೂ ಮೀರಿ...
23-11-24 04:33 pm
ಭಾರೀ ವಿವಾದ ಸೃಷ್ಟಿಸಿದ್ದ 'ಎಮರ್ಜೆನ್ಸಿ' ಚಿತ್ರ ಬಿಡ...
18-11-24 03:54 pm
ಶ್ರದ್ಧಾ ವಾಳ್ಕರ್ ಹತ್ಯೆಗೆ ಸೇಡು ತೀರಿಸಲು ಬಿಷ್ಣೋಯಿ...
18-11-24 01:09 pm
ಭಾರತೀಯ ರೈಲ್ವೇ ಹೊಸ ಇತಿಹಾಸದತ್ತ ಹೆಜ್ಜೆ ; ವಿದ್ಯುತ...
14-11-24 11:11 pm
23-11-24 12:20 pm
Mangalore Correspondent
Ut Khader, Mangalore: ನೇತ್ರಾವತಿ ತೀರದಲ್ಲಿ ತಡೆಗ...
22-11-24 10:33 pm
Kuthar, Mangalore News: ಕುತ್ತಾರಿನಲ್ಲಿ ಜೆಸಿಬಿ...
22-11-24 10:17 pm
Brijesh Chowta, MIR group, Mangalore: ಸಂಸದ ಕ್...
22-11-24 09:04 pm
BJP Vijay Kumar shetty, Mangalore video: ಬಿಜೆ...
22-11-24 08:21 pm
23-11-24 10:49 am
Mangaluru Correspondent
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm
Mangalore crime, Sexual Harrasment, Police: ಮ...
22-11-24 09:37 pm
Bangalore crime, Stabbing: ಬೈಕ್ ಪಾರ್ಕಿಂಗ್ ವಿಚ...
22-11-24 04:14 pm
Belthangady, Mangalore, Crime : ಟೋರ್ನ್ ಜೀನ್ಸ್...
22-11-24 03:04 pm