ಟಿ20 ವಿಶ್ವಕಪ್‌ ಭಾರತ ತಂಡಕ್ಕೆ ಅಕ್ಷರ್‌ ಪಟೇಲ್‌ ಕೀ ಆಟಗಾರ ಎಂದ ಗವಾಸ್ಕರ್‌!

22-10-22 02:08 pm       Source: Vijayakarnataka   ಕ್ರೀಡೆ

ಆಸ್ಟ್ರೇಲಿಯಾ ಆತಿಥ್ಯದ 2022ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡದ ಪ್ರಶಸ್ತಿ ಗೆಲುವಿನ ಹಾದಿಯಲ್ಲಿ ಅಕ್ಷರ್‌ ಪಟೇಲ್‌ ಕೀ ಆಟಗಾರರಾಗಲಿದ್ದಾರೆಂದು ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೆಲ್ಬೋರ್ನ್‌: ಸ್ಟಾರ್‌ ಆಲ್‌ರೌಂಡ್‌ ರವೀಂದ್ರ ಜಡೇಜಾ ಅವರು ಗಾಯದಿಂದ 2022ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಅಕ್ಷರ್ ಪಟೇಲ್‌ ಪಾಕಿಸ್ತಾನ ವಿರುದ್ದದ ಪಂದ್ಯದಲ್ಲಿ ಮೊದಲ ಆಯ್ಕೆಯ ಸ್ಪಿನ್‌ ಆಲ್‌ರೌಂಡರ್‌ ಆಗಿ ಕಣಕ್ಕೆ ಇಳಿಯಲಿದ್ದಾರೆ.

ಈ ಬಾರಿ ಟಿ20 ವಿಶ್ವಕಪ್‌ ಗೆಲುವಿನ ಹಾದಿಯಲ್ಲಿ ರೋಹಿತ್‌ ಶರ್ಮಾ ನಾಯಕತ್ವದ ಭಾರತ ತಂಡಕ್ಕೆ ಅಕ್ಷರ್‌ ಪಟೇಲ್‌ ಕೀ ಆಟಗಾರರಾಗಲಿದ್ದಾರೆಂದು ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದರಂತೆ ಅಕ್ಷರ್‌ ಪಟೇಲ್‌ ಕಳೆದ ಹಲವು ಟಿ20 ಸರಣಿಗಳಲ್ಲಿ ಅತ್ಯುತ್ತಮ ಎಕಾನಮಿ ರೇಟ್‌ನೊಂದಿಗೆ ಬೌಲಿಂಗ್‌ ಪ್ರದರ್ಶನ ತೋರಿದ್ದರೆ ಹಾಗೂ ಬ್ಯಾಟಿಂಗ್‌ನಲ್ಲಿಯೂ ಉಪಯುಕ್ತ ಕೊಡುಗೆ ನೀಡಿದ್ದಾರೆ.

What Rohit Sharma Said About India Not Touring Pakistan For Asia Cup 2023 |  Cricket News

ಭಾನುವಾರ ಮೆಲ್ಬೋರ್ನ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಸೂಪರ್-12ರ ಪಂದ್ಯದಲ್ಲಿ ಸೆಣಸುವ ಮೂಲಕ ಭಾರತ ತಂಡ ಮಹತ್ವದ ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದೆ. ಭಾರತ ತಂಡದಲ್ಲಿ ಎಡಗೈ ಬ್ಯಾಟ್ಸ್‌ಮನ್‌ಗಳ ಸಮಸ್ಯೆ ಇರುವ ಹಿನ್ನೆಲೆಯಲ್ಲಿ ಅಕ್ಷರ್‌ ಪಟೇಲ್ ಕೀ ಆಟಗಾರರಾಗಲಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಇಬ್ಬರು ಸ್ಪಿನ್ನರ್‌ಗಳನ್ನು ಆಡಿಸಬೇಕೆಂದು ಟೀಮ್ ಮ್ಯಾನೇಜ್‌ಮೆಂಟ್ ನಿರ್ಧರಿಸಿದರೆ, ಅಕ್ಷರ್‌ ಪಟೇಲ್‌ ಹಾಗೂ ಆರ್‌ ಅಶ್ವಿನ್‌ ಅವರನ್ನು ಆಡಿಸಬೇಕೆಂದು ಸುನೀಲ್‌ ಗವಾಸ್ಕರ್‌ ಇಂಡಿಯಾ ಟುಡೇ ಜೊತೆ ಮಾತನಾಡುವುದು ಈ ಅಭಿಪ್ರಾಯ ತಿಳಿಸಿದರು.

"ಭಾರತ ತಂಡದಲ್ಲಿ ಅಕ್ಷರ್‌ ಪಟೇಲ್‌ ನಿರ್ಣಾಯಕ ಆಟಗಾರ. ಟೀಮ್‌ ಮ್ಯಾನೇಜ್‌ಮೆಂಟ್‌ ಇಬ್ಬರು ಸ್ಪಿನ್ನರ್‌ಗಳೊಂದಿಗೆ ಆಡಿದರೆ, ಅಕ್ಷರ್‌ ಪಟೇಲ್‌ ಮತ್ತು ಆರ್‌ ಅಶ್ವಿನ್‌ ಅವರನ್ನು ಆಡಿಸಬೇಕಾಗುತ್ತದೆ. ಮೂವರು ಫಾಸ್ಟ್‌ ಬೌಲರ್‌ಗಳಲ್ಲಿ ಹಾರ್ದಿಕ್‌ ಪಾಂಡ್ಯ ಆರನೇ ಬೌಲರ್‌ ಆಯ್ಕೆಯಾಗಲಿದ್ದಾರೆ," ಎಂದರು.

IPL 2021: If I Had Half The Skills As Ravichandran Ashwin Does, I Would Do  Much Better – Axar Patel

"ಹೌದು, ಅಕ್ಷರ್ ಪಟೇಲ್‌ ಭಾರತ ತಂಡದಲ್ಲಿ ಟಾಪ್‌ ಫೀಲ್ಡರ್ ಕೂಡ. ಟೆಸ್ಟ್‌, ಒಡಿಐ ಅಥವಾ ಟಿ20 ಯಾವುದೇ ಸ್ವರೂಪವಾದರೂ ವಿಕೆಟ್‌ಗಳನ್ನು ಪಡೆಯಬಲ್ಲ ಸಾಮರ್ಥ್ಯವನ್ನು ಅಕ್ಷರ್‌ ಪಟೇಲ್‌ ಹೊಂದಿದ್ದಾರೆ. ಇದರ ಜೊತೆಗೆ ಅವರು ಒಳ್ಳೆಯ ಬ್ಯಾಟ್ಸ್‌ಮನ್‌ ಆಗಿದ್ದಾರೆ. ವೆಸ್ಟ್‌ ಇಂಡೀಸ್‌ನಲ್ಲಿ ನಾವು ಇದನ್ನು ನೋಡಿದ್ದೇವೆ, ಭಾರತ ತಂಡವನ್ನು ಅವರು ಗೆಲ್ಲಿಸಿದ್ದರು," ಎಂದು ಸುನೀಲ್‌ ಗವಾಸ್ಕರ್‌ ಗುಣಗಾನ ಮಾಡಿದರು.

ಬೌಲಿಂಗ್‌, ಬ್ಯಾಟಿಂಗ್‌ ಹಾಗೂ ಫೀಲ್ಡಿಂಗ್‌ನಲ್ಲಿಯೂ ನೆರವಾಗಬಲ್ಲ ಅಕ್ಷರ್‌ ಪಟೇಲ್‌ ಭಾರತ ತಂಡಕ್ಕೆ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಕೀ ಆಟಗಾರರಾಗಿದ್ದಾರೆ. ಟಿ20 ವಿಶ್ವಕಪ್ ಗೆಲುವಿನ ಭಾರತ ತಂಡದ ಹಾದಿಯಲ್ಲಿ ಅಕ್ಷರ್ ಪಟೇಲ್‌ ನಿರ್ಣಾಯಕವಾಗಲಿದ್ದಾರೆ," ಎಂದು ಭಾರತ ತಂಡದ ಮಾಜಿ ನಾಯಕ ಅಭಿಪ್ರಾಯ ವ್ಯಕ್ತಪಡಿಸಿದರು.

ಪಾಕಿಸ್ತಾನ ವಿರುದ್ದದ ಪಂದ್ಯಕ್ಕೆ ಭಾರತ ತಂಡದ ಸಂಭಾವ್ಯ ಪ್ಲೇಯಿಂಗ್‌ XI
1. ರೋಹಿತ್‌ ಶರ್ಮಾ (ನಾಯಕ, ಓಪನರ್)
2. ಕೆ.ಎಲ್‌ ರಾಹುಲ್‌ (ಓಪನರ್‌)
3. ವಿರಾಟ್‌ ಕೊಹ್ಲಿ (ಬ್ಯಾಟ್ಸ್‌ಮನ್‌)
4. ಸೂರ್ಯಕುಮಾರ್‌ ಯಾದವ್ (ಬ್ಯಾಟ್ಸ್‌ಮನ್‌)
5. ಹಾರ್ದಿಕ್‌ ಪಾಂಡ್ಯ(ಆಲ್‌ರೌಂಡರ್‌)
6. ಅಕ್ಷರ್ ಪಟೇಲ್‌ (ಆಲ್‌ರೌಂಡರ್‌)
7. ದಿನೇಶ್‌ ಕಾರ್ತಿಕ್‌ (ವಿಕೆಟ್‌ ಕೀಪರ್‌)
8. ಆರ್‌ ಅಶ್ವಿನ್ ಅಥವಾ ಯುಜ್ವೇಂದ್ರ ಚಹಲ್‌(ಸ್ಪಿನ್ನರ್‌)
9. ಭುವನೇಶ್ವರ್‌ ಕುಮಾರ್‌(ವೇಗದ ಬೌಲರ್‌)
10. ಮೊಹಮ್ಮದ್‌ ಶಮಿ/ಹರ್ಷಲ್‌ ಪಟೇಲ್‌ (ವೇಗದ ಬೌಲರ್)
11.ಅರ್ಷದೀಪ್‌ ಸಿಂಗ್‌(ವೇಗದ ಬೌಲರ್‌)

Ind Vs Pak Spin All Rounder Axar Will Be Key To India’s Ambitions Of Lifting T20 World Cup ,Says Sunil Gavaskar.