'ಹಾರ್ದಿಕ್‌ ಪಾಂಡ್ಯ ಭಾರತ ತಂಡದ ಮುಂದಿನ ನಾಯಕನಾದರೂ ಅಚ್ಚರಿ ಇಲ್ಲ', ವಖಾರ್‌ ಯೂನಿಸ್‌!

25-10-22 03:22 pm       Source: Vijayakarnataka   ಕ್ರೀಡೆ

ಪಾಕಿಸ್ತಾನ ವಿರುದ್ದ 2022ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಸೂಪರ್‌-12ರ ಹಂತದ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಜೊತೆ 113 ರನ್‌ ಜೊತೆಯಾಟವಾಡಿದ ಹಾರ್ದಿಕ್‌ ಪಾಂಡ್ಯ ಅವರನ್ನು ಪಾಕಿಸ್ತಾನ ಮಾಜಿ ವೇಗಿ ವಖಾರ್‌ ಯೂನಿಸ್‌ ಮುಕ್ತಕಂಠದಿಂದ ಗುಣಗಾನ ಮಾಡಿದರು.

ಪಾಕಿಸ್ತಾನ ವಿರುದ್ದ 2022ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಸೂಪರ್‌-12ರ ಪಂದ್ಯದಲ್ಲಿ ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಮೂಲಕ ಭಾರತ ತಂಡದ 4 ವಿಕೆಟ್‌ ರೋಚಕ ಗೆಲುವಿಗೆ ನೆರವಾಗಿದ್ದ ಹಾರ್ದಿಕ್‌ ಪಾಂಡ್ಯ ಅವರನ್ನು ಪಾಕ್‌ ಮಾಜಿ ವೇಗಿ ವಖಾರ್‌ ಯೂನಿಸ್‌ ಗುಣಗಾನ ಮಾಡಿದ್ದಾರೆ.

ಟಾಸ್‌ ಗೆದ್ದು ಪಾಕಿಸ್ತಾನ ತಂಡವನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿದ ಬಳಿಕ ಪವರ್‌ಪ್ಲೇ ಓವರ್‌ಗಳಲ್ಲಿ ಅರ್ಷದೀಪ್‌ ಸಿಂಗ್‌ ಮಾರಕ ದಾಳಿ ನಡೆಸಿದ್ದರು. ಆದರೆ, ಮಧ್ಯ ಕ್ರಮಾಂಕದ ಓವರ್‌ಗಳಲ್ಲಿ ಹಾರ್ದಿಕ್‌ ಪಾಂಡ್ಯ ಶಿಸ್ತುಬದ್ದವಾಗಿ ಬೌಲ್‌ ಮಾಡಿದ್ದರು. ಆ ಮೂಲಕ ತಮ್ಮ ಪಾಲಿನ 4 ಓವರ್‌ಗಳಿಗೆ 30 ರನ್ ನೀಡಿ ಪ್ರಮುಖ 3 ವಿಕೆಟ್‌ಗಳನ್ನು ಕಬಳಿಸಿದ್ದರು. ಆ ಮೂಲಕ ಪಾಕಿಸ್ತಾನ ತಂಡವನ್ನು 159 ರನ್‌ಗಳಿಗೆ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

Fit Virat Kohli stands out NCA report shows 23 India cricketers checked in  for rehab in 2021-22 season - India Today

ಬಳಿಕ 160 ರನ್‌ ಗುರಿ ಹಿಂಬಾಲಿಸಿದ ಭಾರತ ತಂಡ ಕೇವಲ 31 ರನ್‌ಗಳಿಗೆ ಪ್ರಮುಖ 4 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ವಿರಾಟ್‌ ಕೊಹ್ಲಿ(82* ರನ್‌) ಜೊತೆ ಐದನೇ ವಿಕೆಟ್‌ಗೆ 113 ರನ್‌ ನಿರ್ಣಾಯಕ ಜೊತೆಯಾಟವಾಡಿದ ಹಾರ್ದಿಕ್‌ ಪಾಂಡ್ಯ, 37 ಎಸೆತಗಳಲ್ಲಿ 40 ರನ್‌ ಸಿಡಿಸಿದರು. ಆ ಮೂಲಕ ಟೀಮ್‌ ಇಂಡಿಯಾದ 4 ವಿಕೆಟ್‌ ರೋಚಕ ಗೆಲುವಿನಲ್ಲಿ ಹಾರ್ದಿಕ್‌ ಪಾಂಡ್ಯ ತಮ್ಮದೇ ಆದ ಪಾತ್ರವನ್ನು ನಿರ್ವಹಿಸಿದರು.

Wasim Akram, Misbah-ul-Haq and Mohsin Khan part of new PCB cricket committee

ಎ ಸ್ಪೋರ್ಟ್ಸ್‌ ವಾಹಿನಿಯಲ್ಲಿ ವಸೀಮ್‌ ಅಕ್ರಮ್ ಹಾಗು ಮಿಸ್ಬಾ ಉಲ್‌ ಹಕ್‌ ಅವರ ಜೊತೆ ಚರ್ಚೆಯಲ್ಲಿ ಭಾಗವಹಿಸಿದ ವಖಾರ್‌ ಯೂನಿಸ್‌, ಭಾರತ ತಂಡದ ಸ್ಟಾರ್‌ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರನ್ನು ಗುಣಗಾನ ಮಾಡಿದರು. ಅಷ್ಟೇ ಅಲ್ಲದೆ ಅವರು ಭಾರತ ತಂಡದ ಮುಂದಿನ ನಾಯಕ ಎಂದು ಭವಿಷ್ಯ ನುಡಿದರು.

I won't be surprised if Hardik Pandya is the next Indian captain: Waqar  Younis

"2022ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಮೊದಲ ಬಾರಿ ತಂಡವನ್ನು ಹಾರ್ದಿಕ್‌ ಪಾಂಡ್ಯ ಮುನ್ನಡೆಸಿದ್ದರು. ಅದೇ ರೀತಿ ಅವರು ತಂಡವನ್ನು ಹೇಗೆ ಮುನ್ನಡೆಸಿದ್ದರು ಎಂಬುದನ್ನು ಒಮ್ಮೆ ನೋಡಿ. ಅವರು ಗುಜರಾತ್‌ ಟೈಟನ್ಸ್‌ ತಂಡಕ್ಕೆ ಚೊಚ್ಚಲ ಪ್ರಶಸ್ತಿ ಗೆದ್ದು ಕೊಟ್ಟಿದ್ದರು. ಒತ್ತಡವನ್ನು ಹೇಗೆ ನಿರ್ವಹಿಸಬೇಕೆಂಬುದನ್ನು ಅವರು ಇಲ್ಲಿ ತಿಳಿದಿದ್ದರು," ಎಂದರು."ಅವರು ವಿಶೇಷವಾಗಿ ಫಿನಿಷರ್ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಹೆಚ್ಚಿನ ವಿಶ್ವಾಸ ಹೊಂದಿರುವ ಹಾಗೂ ಮಾನಸಿಕವಾಗಿ ಶಕ್ತಿಯುತವಾಗಿರುವ ಆಟಗಾರನಿಗೆ ತಂಡದಲ್ಲಿ ಈ ಪಾತ್ರವನ್ನು ನೀಡಬಹುದು. ಪಂದ್ಯದಲ್ಲಿ ಸನ್ನಿವೇಶ ಹಾಗೂ ಬೇಡಿಕೆಗೆ ತಕ್ಕಂತೆ ಆಡಬೇಕು. ಈ ಪಾತ್ರವನ್ನು ಯಶಸ್ವಿಯಾಗಿ ಹಾರ್ದಿಕ್‌ ಪಾಂಡ್ಯ ನಿರ್ವಹಿಸಿದ್ದಾರೆ. ಹಾರ್ದಿಕ್‌ ಪಾಂಡ್ಯ ಭಾರತ ತಂಡದ ಮುಂದಿನ ನಾಯಕರಾದರೂ ನನಗೆ ಅಚ್ಚರಿಯಿಲ್ಲ," ಎಂದು ವಖಾರ್‌ ಯೂನಿಸ್‌ ತಿಳಿಸಿದರು.

ವಖಾರ್‌ ಯೂನಿಸ್‌ ಬಳಿಕ ಮಾತನಾಡಿದ ವಸೀಮ್‌ ಅಕ್ರಮ್‌, "ಮೊದಲನೇ ಬಾರಿ ತಂಡವನ್ನು ಮುನ್ನಡೆಸಿ ಐಪಿಎಲ್‌ ಗೆದ್ದ ಮೊದಲ ನಾಯಕ ಹಾರ್ದಿಕ್‌ ಪಾಂಡ್ಯ. ಇದೀಗ ರಾಷ್ಟ್ರೀಯ ತಂಡದಲ್ಲಿ ಅಗತ್ಯ ಸಂದರ್ಭಗಳಲ್ಲಿ ನಾಯಕನಿಗೆ ಸಲಹೆಗಳನ್ನು ನೀಡುತ್ತಿದ್ದಾರೆ. ತಾವು ಕೂಡ ಕಲಿಯುವ ಜೊತೆಗೆ ಮೈದಾನದಲ್ಲಿ ಶಾಂತ ಭಾವನೆಯಿಂದ ವರ್ತಿಸುತ್ತಾರೆ," ಎಂದು ಹೇಳಿದರು.

T20 World Cup 2022 I Wont Be Surprised If Hardik Pandya Is The Next Indian Captain,Says Waqar Younis.