ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ದೊಡ್ಡ ದಾಖಲೆ ಬರೆದ ವಿರಾಟ್‌ ಕೊಹ್ಲಿ!

31-10-22 02:22 pm       Source: Vijayakarnataka   ಕ್ರೀಡೆ

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈಗಾಗಲೇ ಹಲವು ದಾಖಲೆಗಳನ್ನು ಬರೆದಿರುವ ಭಾರತ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಇದೀಗ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ವಿಶೇಷ ಸಾಧನೆಗೆ ಭಾಜನರಾಗಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಭಾನುವಾರದ ಪಂದ್ಯದಲ್ಲಿ ಕೇವಲ 12 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರೂ ಟೀಮ್‌ ಇಂಡಿಯಾ ಮಾಜಿ ನಾಯಕ ವಿರಾಟ್‌ ಕೊಹ್ಲಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ 1000 ರನ್‌ ಮೈಲುಗಲ್ಲು ಸ್ಥಾಪಿಸಿದ್ದಾರೆ. ಆ ಮೂಲಕ ಈ ಸಾಧನೆ ಮಾಡಿದ ವಿಶ್ವದ ಎರಡನೇ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ. 

ಹರಿಣಗಳ ವಿರುದ್ಧ ಸೂಪರ್ 12ರ ಪಂದ್ಯದಲ್ಲಿ ರೋಹಿತ್‌ ಶರ್ಮಾ ವಿಕೆಟ್‌ ಒಪ್ಪಿಸಿದ ಬಳಿಕ ಕ್ರೀಸ್‌ಗೆ ಆಗಮಿಸಿದ ವಿರಾಟ್‌ ಕೊಹ್ಲಿ 11 ಎಸೆತಗಳಲ್ಲಿ ಎರಡು ಮನ ಮೋಹಕ ಬೌಂಡರಿಗಳನ್ನು ಸಿಡಿಸುವ ಮೂಲಕ ಉತ್ತಮ ಆರಂಭ ಕಂಡಿದ್ದರು. ಆದರೆ, ಲುಂಗಿ ಎನ್ಗಿಡಿ ಶಾರ್ಟ್‌ ಬಾಲ್‌ ಎಸೆತದಲ್ಲಿ ಪುಲ್‌ ಮಾಡಲು ಪ್ರಯತ್ನಿಸಿ ಕ್ಯಾಚಿತ್ತರು.

ಇಲ್ಲಿಯವರೆಗೂ ಟಿ20 ವಿಶ್ವಕಪ್‌ ಟೂರ್ನಿಯ ಇತಿಹಾಸದಲ್ಲಿ 24 ಪಂದ್ಯಗಳ 22 ಇನಿಂಗ್ಸ್‌ಗಳಿಂದ 83.41ರ ಸರಾಸರಿಯಲ್ಲಿ ವಿರಾಟ್‌ ಕೊಹ್ಲಿ 1001 ರನ್‌ ಗಳಿಸಿದ್ದಾರೆ. ಪಾಕಿಸ್ತಾನ ವಿರುದ್ಧ ಅಜೇಯ 82* ರನ್‌ ಅವರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. ಇದರಲ್ಲಿ ಅವರು 12 ಅರ್ಧಶತಕಗಳನ್ನು ಸಿಡಿಸಿದ್ದಾರೆ.

Some Interesting Facts About Mahela Jayawardene

ಒಟ್ಟಾರೆ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿರುವ ಬ್ಯಾಟ್ಸ್‌ಮನ್‌ ಎಂಬ ದಾಖಲೆ ಮಹೇಲಾ ಜಯವರ್ಧನೆ ಅವರ ಹೆಸರಿನಲ್ಲಿದೆ. 31 ಪಂದ್ಯಗಳಾಡಿರುವ ಶ್ರೀಲಂಕಾ ಮಾಜಿ ನಾಯಕ 39.07ರ ಸರಾಸರಿಯಲ್ಲಿ 1016 ರನ್‌ ಗಳಿಸಿದ್ದಾರೆ. ಇದರಲ್ಲಿ ಅವರು ಒಂದು ಶತಕ ಹಾಗೂ 6 ಅರ್ಧಶತಕಗಳನ್ನು ಸಿಡಿಸಿದ್ದಾರೆ. 100 ರನ್‌ ಜಯವರ್ಧನೆ ಅವರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.

ಮಹೇಲಾ ಜಯವರ್ಧನೆ ಅವರ ಟಿ20 ವಿಶ್ವಕಪ್‌ ಟೂರ್ನಿಯ ಅತಿ ಹೆಚ್ಚು ರನ್‌ಗಳ ದಾಖಲೆ ಮುರಿಯಲು ವಿರಾಟ್‌ ಕೊಹ್ಲಿಗೆ ಇನ್ನು ಕೇವಲ 16 ರನ್ ಅಗತ್ಯವಿದೆ. ಈ ಸಾಧನೆ ಮಾಡಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ವೆಸ್ಟ್ ಇಂಡೀಸ್‌ ದಿಗ್ಗಜ ಕ್ರೀಸ್‌ ಗೇಲ್‌(965 ರನ್), ನಾಲ್ಕನೇ ಸ್ಥಾನದಲ್ಲಿ ಭಾರತ ತಂಡದ ನಾಯಕ ರೋಹಿತ್‌ ಶರ್ಮಾ(919 ರನ್‌) ಇದ್ದಾರೆ. ಶ್ರೀಲಂಕಾದ ಮತ್ತೊರ್ವ ಮಾಜಿ ಆಟಗಾರ ತಿಲಕರತ್ನೆ ದಿಲ್ಷಾನ್(897 ರನ್‌) ಐದನೇ ಸ್ಥಾನದಲ್ಲಿದ್ದಾರೆ.

How Can Someone Bat Like That': Cricket Fraternity Hails Suryakumar Yadav  For His 68-run Knock Versus South Africa

ಇನ್ನು ಪಂದ್ಯದಲ್ಲಿ ಅಗ್ರ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯದ ಹೊರತಾಗಿಯೂ ಸೂರ್ಯಕುಮಾರ್‌ ಯಾದವ್‌ ನಿರ್ಣಾಯಕ ಅರ್ಧಶತಕ ಸಿಡಿಸಿದರು. ಕೇವಲ 40 ಎಸೆತಗಳಲ್ಲಿ 3 ಭರ್ಜರಿ ಸಿಕ್ಸರ್‌ ಹಾಗೂ 6 ಬೌಂಡರಿಗಳೊಂದಿಗೆ 68 ರನ್‌ ಸಿಡಿಸಿದರು. ಆ ಮೂಲಕ ಭಾರತ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 9 ವಿಕೆಟ್‌ ನಷ್ಟಕ್ಕೆ 133 ರನ್‌ ಗಳಿಸಿತು.

ಬಳಿಕ ಗುರಿ ಹಿಂಬಾಲಿಸಿದ ದಕ್ಷಿಣ ಆಫ್ರಿಕಾ ತಂಡ ಆರಂಭಿಕ ಆಘಾತ ಅನುಭವಿಸಿದ ಹೊರತಾಗಿಯೂ ಡೇವಿಡ್‌ ಮಿಲ್ಲರ್‌ ಹಾಗೂ ಏಡೆನ್ ಮಾರ್ಕ್ರಮ್ ಅವರ ಅರ್ಧಶತಕಗಳ ಸಹಾಯದಿಂದ 19.4 ಓವರ್‌ಗಳಿಗೆ 5 ವಿಕೆಟ್‌ ಕಳೆದುಕೊಂಡು 137 ರನ್‌ ಗಳಿಸಿ ಗೆಲುವು ಪಡೆಯಿತು. ಈ ಪಂದ್ಯದ ಗೆಲುವಿನೊಂದಿಗೆ ದಕ್ಷಿಣ ಆಪ್ರಿಕಾ ಟೂರ್ನಿಯ ಎರಡನೇ ಗುಂಪಿನ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನ ಅಲಂಕರಿಸಿತು.

Ind Vs Sa Virat Kohli Breaks Huge T20 World Cup Record, Becomes Only Second Player To Achieve This Milestone.