ಡಿ.ಕೆ ಔಟ್‌-ಪಂತ್ ಇನ್‌? ಬಾಂಗ್ಲಾ ಪಂದ್ಯಕ್ಕೆ ಭಾರತ ತಂಡದಲ್ಲಿ 2 ಬದಲಾವಣೆ ಸಾಧ್ಯತೆ!

01-11-22 02:51 pm       Source: Vijayakarnataka   ಕ್ರೀಡೆ

ದಕ್ಷಿಣ ಆಫ್ರಿಕಾ ವಿರುದ್ಧ ಬ್ಯಾಟಿಂಗ್‌ ಹಾಗೂ ಫೀಲ್ಡಿಂಗ್‌ ವೈಫಲ್ಯದಿಂದ 5 ವಿಕೆಟ್‌ಗಳ ಸೋಲು ಅನುಭವಿಸಿದ್ದ ಭಾರತ ತಂಡ ಬುಧವಾರ ಅಡಿಲೇಡ್‌ ಓವಲ್‌ ಮೈದಾನದಲ್ಲಿ ಬಾಂಗ್ಲಾದೇಶ ವಿರುದ್ಧ ಸೆಣಸಲಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ಬ್ಯಾಟಿಂಗ್‌ ಹಾಗೂ ಫೀಲ್ಡಿಂಗ್ ವೈಫಲ್ಯದಿಂದ 5 ವಿಕೆಟ್‌ಗಳಿಂದ ಸೋಲು ಅನುಭವಿಸಿದ್ದ ಭಾರತ ತಂಡ ಬುಧವಾರ ಅಡಿಲೇಡ್‌ ಓವಲ್ ಮೈದಾನದಲ್ಲಿ ಬಾಂಗ್ಲಾದೇಶ ವಿರುದ್ಧ ಸೆಣಸಲು ಸಜ್ಜಾಗುತ್ತಿದೆ. ಈ ಪಂದ್ಯದಲ್ಲಿ ಗದ್ದು ಸೆಮಿಫೈನಲ್‌ ಹಾದಿಯನ್ನು ಸುಲಭಗೊಳಿಸಿಕೊಳ್ಳಲು ರೋಹಿತ್‌ ಶರ್ಮಾ ಪಡೆ ಎದುರು ನೋಡುತ್ತಿದೆ.

ಅಂದಹಾಗೆ ಭಾನವಾರ ಪರ್ತ್‌ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿದ್ದ ಭಾರತ ತಂಡದ ಪರ ಅಗ್ರ ಹಾಗೂ ಮಧ್ಯಮ ಕ್ರಮಾಂಕದ ಬಹುತೇಕ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿದ್ದರು. ಆದರೆ, ಸೂರ್ಯಕುಮಾರ್‌ ಯಾದವ್ ಅವರ ನಿರ್ಣಾಯಕ ಅರ್ಧಶತಕದ ಬಲದಿಂದ ಎದುರಾಳಿ ದಕ್ಷಿಣ ಆಫ್ರಿಕಾ ತಂಡಕ್ಕೆ ಭಾರತ ಕೇವಲ 134 ರನ್‌ ಗುರಿ ನೀಡಿತ್ತು.

EXCLUSIVE: Mohammed Shami Comes In Support Of Arshdeep Singh says Pakistani  trolls only live to troll us, 'वे सिर्फ हमें ट्रोल करने के लिए जीते हैं',  अर्शदीप के बचाव में आए शमी,

ಬಳಿಕ ಗುರಿ ಹಿಂಬಾಲಿಸಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಅರ್ಷದೀಪ್‌ ಸಿಂಗ್‌ ಹಾಗೂ ಮೊಹಮ್ಮದ್‌ ಶಮಿ ಆರಂಭಿಕ ಆಘಾತ ನೀಡಿದ್ದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಏಡೆನ್‌ ಮಾರ್ಕ್ರಮ್‌ ಹಾಗೂ ಡೇವಿಡ್‌ ಮಿಲ್ಲರ್‌ ಅವರ ಅರ್ಧಶತಕಗಳ ಬಲದಿಂದ ಹರಿಣಗಳು 5 ವಿಕೆಟ್‌ಗಳಿಂದ ಗೆದ್ದು ಸಂಭ್ರಮಿಸಿದ್ದರು.

If Rishabh Pant Played For Pakistan...": Ex-Pak Cricketer's Big Statement  On Team Selection For T20 World Cup | Cricket News

ಈ ಪಂದ್ಯದಲ್ಲಿ ವಿಕೆಟ್‌ ಕೀಪಿಂಗ್‌ ವೇಳೆ ದಿನೇಶ್‌ ಕಾರ್ತಿಕ್‌ ಬೆನ್ನು ನೋವಿಗೆ ತುತ್ತಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ಬದಲು ಕೊನೆಯ 5 ಓವರ್‌ಗಳಲ್ಲಿ ರಿಷಭ್‌ ಪಂತ್‌ ವಿಕೆಟ್‌ ಕೀಪಿಂಗ್‌ ಜವಾಬ್ದಾರಿ ನಿರ್ವಹಿಸಿದ್ದರು. ಅಂದಹಾಗೆ ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೆ ದಿನೇಶ್‌ ಕಾರ್ತಿಕ್‌ ಲಭ್ಯರಾಗುವುದು ಅನುಮಾನ. ಈ ಹಿನ್ನೆಲೆಯಲ್ಲಿ ಅವರ ಬದಲು ರಿಷಭ್‌ ಪಂತ್‌ ಆಡುವ ಸಾಧ್ಯತೆ ದಟ್ಟವಾಗಿದೆ.

Dinesh Karthik Apologizes For 'Neighbour's Wife' Comment, Says 'Got Lot Of  Stick From Mum & Wife'

ಆಸ್ಟ್ರೇಲಿಯಾದಲ್ಲಿನ ತಣ್ಣನೆಯ ವಾತಾವರಣದಿಂದಾಗಿ ದಿನೇಶ್‌ ಕಾರ್ತಿಕ್‌ ಅವರ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಅವರ ಬೆನ್ನಿನಲ್ಲಿ ನೋವು ಕಾಣಿಸಿಕೊಂಡಿದೆ. ಇವರು ಸಂಪೂರ್ಣವಾಗಿ ಗುಣಮುಖರಾಗಲು ಕನಿಷ್ಠ 5 ದಿನಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ ಮುಂದಿನ ಎರಡು ಪಂದ್ಯಗಳಿಗೂ ಕಾರ್ತಿಕ್‌ ಹೊರಗುಳಿಯುವ ಸಾಧ್ಯತೆ ಇದೆ.

"ಕಾರ್ತಿಕ್‌ ಅವರ ಕೆಳ ಬೆನ್ನಿನ ಭಾಗದಲ್ಲಿ ನೋವು ಕಾಣಿಸಿಕೊಂಡಿತ್ತು. ವೈದ್ಯಕೀಯ ತಂಡ ಕಾರ್ತಿಕ್‌ ಅವರನ್ನು ನಿರ್ವಹಿಸುತ್ತಿದೆ. ಅವರ ಬೆನ್ನಿಗೆ ಬಿಸಿ ತಾಗಿಸಿ, ಮಸಾಜ್‌ ಮಾಡುವ ಮೂಲಕ ಅವರನ್ನು ಗುಣಮುಖರಾಗಲು ವೈದ್ಯಕೀಯ ತಂಡ ಪ್ರಯತ್ನಿಸುತ್ತಿದೆ. ಟೂರ್ನಿಯಿಂದಲೇ ಅವರು ಹೊರಬೀಳಲಿದ್ದಾರೆಂದು ನಮಗೆ ಗೊತ್ತಿಲ್ಲ," ಎಂದು ಬಿಸಿಸಿಸಿಐ ಮೂಲಗಳು ತಿಳಿಸಿರುವುದನ್ನು ಪಿಟಿಐ ವರದಿ ಮಾಡಿದೆ.

ಕೆ.ಎಲ್‌ ರಾಹುಲ್‌ಗೆ ಮತ್ತೊಂದು ಅವಕಾಶ: ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಆಡಿದ ಮೂರೂ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿರುವ ಕೆಎಲ್‌ ರಾಹುಲ್ ಅವರಿಗೆ ಟೀಮ್‌ ಮ್ಯಾನೇಜ್‌ಮೆಂಟ್‌ ಮತ್ತೊಂದು ಅವಕಾಶ ನೀಡಲಿದೆ. ಏಕೆಂದರೆ ದಿನೇಶ್‌ ಕಾರ್ತಿಕ್ ಗಾಯಕ್ಕೆ ತುತ್ತಾಗಿರುವ ಹಿನ್ನೆಲೆಯಲ್ಲಿ ಅವರ ಸ್ಥಾನವನ್ನು ರಿಷಭ್‌ ಪಂತ್‌ ತುಂಬಲಿದ್ದಾರೆ. ಹಾಗಾಗಿ ರೋಹಿತ್‌ ಶರ್ಮಾ ಜೊತೆ ಇನಿಂಗ್ಸ್ ಆರಂಭಿಸಲು ಸೂಕ್ತ ಆಟಗಾರ ತಂಡದಲ್ಲಿ ಇಲ್ಲ. ಹಾಗಾಗಿ ಕೆ.ಎಲ್‌ ರಾಹುಲ್‌ಗೆ ಟೀಮ್‌ ಮ್ಯಾನೇಜ್‌ಮೆಂಟ್‌ ಮತ್ತೊಂದು ಅವಕಾಶ ನೀಡಲಿದೆ ಎಂದು ಅಂದಾಜಿಸಬಹುದು.

KL Rahul: Biography, Career, Love Affair, Rankings, Statistics, Awards &  Achievements

ಭಾರತ-ಬಾಂಗ್ಲಾದೇಶ ಪಂದ್ಯಕ್ಕೆ ಮಳೆ ಭೀತಿ: ಸೆಮಿಫೈನಲ್‌ ಆಸೆಯನ್ನು ಜೀವಂತವಾಗಿರಿಸಿಕೊಳ್ಳಲು ಭಾರತ ಹಾಗೂ ಬಾಂಗ್ಲಾದೇಶ ತಂಡಗಳಿಗೆ ಬುಧವಾರದ ಪಂದ್ಯ ಅತ್ಯಂತ ನಿರ್ಣಾಯಕವಾಗಿದೆ. ಈ ಹಿನ್ನೆಲೆಯಲ್ಲಿ ಈ ಪಂದ್ಯ ರೋಚಕತೆಯಿಂದ ಕೂಡಿರುತ್ತದೆ. ಆದರೆ, ಮಂಗಳವಾರ ಬೆಳಗ್ಗೆಯಿಂದಲೂ ಅಡಿಲೇಡ್‌ನಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಉಭಯ ತಂಡಗಳ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಒಂದು ವೇಳೆ ಬುಧವಾರ ಮಳೆ ಇಲ್ಲವಾದರೆ ನಿಗದಿತ ಸಮಯಕ್ಕೆ ಪಂದ್ಯ ಆರಂಭವಾಗಲಿದೆ. ಇಲ್ಲವಾದಲ್ಲಿ ತಡವಾಗಿ ಆರಂಭವಾಗಬಹುದು. ಮಳೆ ವಿರಾಮ ನೀಡಿಲ್ಲವಾದರೆ, ಪಂದ್ಯ ಟಾಸ್ ಕಾಣದೆ ಫಲಿತಾಂಶವಿಲ್ಲದೆ ಅಂತ್ಯ ಕಂಡರೂ ಅಚ್ಚರಿ ಇಲ್ಲ.

ಪಿಚ್‌ ರಿಪೋರ್ಟ್‌: ಕಳೆದ ಪಂದ್ಯವಾಡಿದ್ದ ಪರ್ತ್‌ ಸ್ಟೇಡಿಯಂಗಿಂತಲೂ ಅಡಿಲೇಡ್‌ ಓವಲ್‌ ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿದೆ. ಈ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ಬೌಲರ್‌ಗಳ ವಿರುದ್ದ ಭಾರತೀಯ ಬ್ಯಾಟ್ಸ್‌ಮನ್‌ಗಳು ಪ್ರಾಬಲ್ಯ ಸಾಧಿಸಬಹುದು. ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಹಾಗು ಸೂರ್ಯಕುಮಾರ್‌ ಯಾದವ್ ಅವರು ಹೆಚ್ಚಿನ ರನ್‌ಗಳನ್ನು ಗಳಿಸುವ ಸಾಧ್ಯತೆ ಇದೆ.

ICC T20I Rankings: Virat Kohli, Rohit Sharma move up in batsmen's list |  Sports News,The Indian Express

ಭಾರತ ಹಾಗೂ ಬಾಂಗ್ಲಾದೇಶ ಆಡಿರುವ ಮೂರು ಪಂದ್ಯಗಳ ಪೈಕಿ ಎರಡರಲ್ಲಿ ಗೆಲುವು ಪಡೆದುಕೊಂಡಿದ್ದು, ಇನ್ನುಳಿದ ಒಂದೊಂದು ಪಂದ್ಯದಲ್ಲಿ ಸೋಲು ಅನುಭವಿಸಿವೆ. ಆ ಮೂಲಕ ಎರಡನೇ ಗುಂಪಿನ ಪಾಯಿಂಟ್ಸ್‌ ಟೇಬಲ್‌ನಲ್ಲಿ ಭಾರತ ಎರಡನೇ ಸ್ಥಾನದಲ್ಲಿದ್ದರೆ, ಬಾಂಗ್ಲಾದೇಶ ಮೂರನೇ ಸ್ಥಾನದಲ್ಲಿದೆ.

ಬಾಂಗ್ಲಾದೇಶ ವಿರುದ್ದದ ಪಂದ್ಯಕ್ಕೆ ಭಾರತ ಸಂಭಾವ್ಯ ಪ್ಲೇಯಿಂಗ್‌ XI:ಕೆ.ಎಲ್‌ ರಾಹುಲ್‌, ರೋಹಿತ್‌ ಶರ್ಮಾ(ನಾಯಕ), ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್, ರಿಷಭ್‌ ಪಂತ್‌(ವಿ.ಕೀ), ಹಾರ್ದಿಕ್‌ ಪಾಂಡ್ಯ, ಅಕ್ಷರ್‌ ಪಟೇಲ್‌, ರವಿಚಂದ್ರನ್‌ ಅಶ್ವಿನ್‌, ಭುವನೇಶ್ವರ್‌ ಕುಮಾರ್‌, ಅರ್ಷದೀಪ್‌ ಸಿಂಗ್‌, ಮೊಹಮ್ಮದ್‌ ಶಮಿ

ಪಂದ್ಯದ ವಿವರ
ಭಾರತ vs ಬಾಂಗ್ಲಾದೇಶ
ಟಿ20 ವಿಶ್ವಕಪ್‌ 2022
ದಿನಾಂಕ: ನವೆಂಬರ್‌ 2, 2022
ಸಮಯ: ಮಧ್ಯಾನ 01: 30ಕ್ಕೆ (ಭಾರತೀಯ ಕಾಲಮಾನ)
ಸ್ಥಳ: ಅಡಿಲೇಡ್‌ ಓವಲ್‌, ಅಡಿಲೇಡ್‌
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌

Ind Vs Ban Match Preview, Indias Predicted Playing Xi Vs Bangladesh, Pitch Report, Weather Forecast Adelaide Oval, Date, Time.