ಬ್ರೇಕಿಂಗ್ ನ್ಯೂಸ್
07-11-22 01:29 pm Source: Vijayakarnataka ಕ್ರೀಡೆ
ಜಿಂಬಾಬ್ವೆ ವಿರುದ್ದ ಸ್ಪೋಟಕ ಅರ್ಧಶತಕ ಸಿಡಿಸುವ ಮೂಲಕ ಭಾರತ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಅವರನ್ನು ನಾಯಕ ರೋಹಿತ್ ಶರ್ಮಾ ಮುಕ್ತ ಕಂಠದಿಂದ ಗುಣಗಾನ ಮಾಡಿದ್ದಾರೆ.
ಭಾನುವಾರ ಇಲ್ಲಿನ ಮೆಲ್ಬೋರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡದ ಪರ ನಾಲ್ಕನೇ ಕ್ರಮಾಂಕದಲ್ಲಿ ಆಡಿದ ಸೂರ್ಯಕುಮಾರ್ ಯಾದವ್ ಕೇವಲ 25 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 6 ಬೌಂಡರಿಗಳೊಂದಿಗೆ ಅಜೇಯ 61 ರನ್ ಸಿಡಿಸಿದರು. ಆ ಮೂಲಕ ಭಾರತ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 5 ವಿಕೆಟ್ ನಷ್ಟಕ್ಕೆ 186 ರನ್ ಗಳಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.
ಬಳಿಕ ಗುರಿ ಹಿಂಬಾಲಿಸಿದ ಜಿಂಬಾಬ್ವೆ ತಂಡವನ್ನು ಭಾರತ ತಂಡದ ಬೌಲರ್‌ಗಳು 17.2 ಓವರ್‌ಗಳಿಗೆ 115 ರನ್‌ಗಳಿಗೆ ಆಲ್‌ಔಟ್ ಮಾಡಿದರು. ಆ ಮೂಲಕ ಭಾರತ ತಂಡ 71 ರನ್ ಭರ್ಜರಿ ಗೆಲುವಿನ ಮೂಲಕ 8 ಅಂಕಗಳೊಂದಿಗೆ ಸೆಮಿಫೈನಲ್ಸ್‌ಗೆ ಅರ್ಹತೆ ಪಡೆಯಿತು. ನವೆಂಬರ್ 10 ರಂದು ಇಂಗ್ಲೆಂಡ್ ವಿರುದ್ಧ ಭಾರತ ತಂಡ ಸೆಮಿಫೈನಲ್ ಪಂದ್ಯದಲ್ಲಿ ಸೆಣಸಲಿದೆ.
ಗೆಲುವಿನ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ರೋಹಿತ್ ಶರ್ಮಾ, " ತಂಡಕ್ಕಾಗಿ ಸೂರ್ಯಕುಮಾರ್ ಯಾದವ್ ಮಾಡುತ್ತಿರುವುದು ಅಸಾಧಾರಣವಾಗಿದೆ. ಬೇರೆ ಆಟಗಾರರಲ್ಲಿನ ಒತ್ತಡವನ್ನು ಕಸಿದುಕೊಳ್ಳುತ್ತಿರುವುದು ತುಂಬಾ ಮುಖ್ಯವಾಗಿದೆ. ಅವರ ಸಾಮರ್ಥ್ಯದ ಬಗ್ಗೆ ನಮಗೆ ವಿಶ್ವಾಸವಿದೆ. ಇವರು ಮೊದಲ ಎಸೆತದಿಂದಲೇ ಆಕ್ರಮಣಕಾರಿಯಾಗಿ ಆಡುವುದರಿಂದ ಇತರೆ ಆಟಗಾರರು ಕ್ರೀಸ್‌ನಲ್ಲಿ ಹೊಂದಿಕೊಳ್ಳಲು ಸ್ವಲ್ಪ ಹೆಚ್ಚಿನ ಸಮಯ ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ," ಎಂದು ಹೇಳಿದರು.
"ಅವರು(ಸೂರ್ಯಕುಮಾರ್ ಯಾದವ್) ಕ್ರೀಸ್‌ನಲ್ಲಿ ಬ್ಯಾಟ್ ಮಾಡುತ್ತಿರುವಾಗ ಡಗ್‌ಔಟ್‌ನಲ್ಲಿ ಕುಳಿತಿರುವ ನಮಗೆ ನೆಮ್ಮದಿ ಇರುತ್ತದೆ. ಅವರು ತಮ್ಮ ಆಟದಲ್ಲಿ ಸಾಕಷ್ಟು ಸಂಯೋಜನೆಯನ್ನು ತೋರಿಸುತ್ತಾರೆ. ನಾವು ಅವರಿಂದ ನಿರೀಕ್ಷಿಸುತ್ತಿರುವುದೂ ಇದನ್ನೇ. ಅವರು ಪಂದ್ಯದಿಂದ ಪಂದ್ಯಕ್ಕೆ ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ," ಎಂದರು.
ಜಿಂಬಾಬ್ವೆ ವಿರುದ್ದದ ಪಂದ್ಯದಲ್ಲಿ ಭಾರತ ತಂಡ ತೋರಿದ ಪ್ರದರ್ಶನವನ್ನು ಇದೇ ವೇಳೆ ರೋಹಿತ್ ಶರ್ಮಾ ಗುಣಗಾಣ ಮಾಡಿದರು. ಭಾನುವಾರ ಮೆಲ್ಬೋರ್ನ್‌ನಲ್ಲಿ ಆಟಗಾರರು ತಮಗೆ ಇಷ್ಟಬಂದ ರೀತಿ ಆಡಿ ಗೆಲುವು ಸಾಧಿಸಿದ್ದಾರೆ ಎಂದು ಶ್ಲಾಘಿಸಿದರು.
"ಇದು ನಮ್ಮಿಂದ ಒಳ್ಳೆಯ ಆಲ್‌ರೌಂಡ್ ಆಟ, ಇದನ್ನೇ ನಾವು ಕೂಡ ನಿರೀಕ್ಷಿಸುತ್ತಿದ್ದೇವೆ. ಈ ಪಂದ್ಯಕ್ಕೂ ಮೊದಲೇ ನಾವು ಸೆಮಿಫೈನಲ್ಸ್‌ಗೆ ಅರ್ಹತೆ ಪಡೆದಿದ್ದೆವು. ಆದರೆ, ನಾವು ಮೈದಾನಕ್ಕೆ ಬಂದು ನಮಗೆ ಇಷ್ಟವಾಗುವಂತೆ ಆಡುವುದು ಇಲ್ಲಿ ತುಂಬಾ ಮುಖ್ಯವಾಗುತ್ತದೆ," ಎಂದು ರೋಹಿತ್ ಶರ್ಮಾ ಹೇಳಿದರು.
ಈ ಪಂದ್ಯದ ಗೆಲುವಿನಿಂದ ವಿಶ್ವಾಸ ಹೆಚ್ಚಿಸಿಕೊಂಡಿರುವ ಭಾರತ ತಂಡ ನವೆಂಬರ್ 10 ರಂದು ಅಡಿಲೇಡ್ ಓವಲ್ ಮೈದಾನದಲ್ಲಿ ನಡೆಯುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಸೆಣಸಲಿದೆ. ಈ ಪಂದ್ಯ ನಮಗೆ ಸವಾಲುದಾಯಕವಾಗಿದೆ ಎಂದು ರೋಹಿತ್ ಶರ್ಮಾ ತಿಳಿಸಿದ್ದಾರೆ.
"ನಮ್ಮ ಪಾಲಿಗೆ ಕೀ ಸಂಗತಿ ಏನೆಂದರೆ, ಯಾವುದೇ ಕಂಡೀಷನ್ಸ್ ಇರಲಿ ಸಾಧ್ಯವಾದಷ್ಟು ಬೇಗ ನಾವು ಅದಕ್ಕೆ ಹೊಂದಿಕೊಳ್ಳುತ್ತೇವೆ. ಅಡಿಲೇಡ್‌ನಲ್ಲಿ ನಾವು ಪಂದ್ಯವನ್ನು ಆಡಿದ್ದೇವೆ. ಆದರೆ, ಇಂಗ್ಲೆಂಡ್ ನಮಗೆ ಸವಾಲುದಾಯಕವಾಗಿದೆ. ಈ ಪಂದ್ಯದಲ್ಲಿ ಪ್ರಯೊಬ್ಬರೂ ವೈಯಕ್ತಿಕವಾಗಿ ಉತ್ತಮ ಪ್ರದರ್ಶನ ತೋರುವುದು ಇಲ್ಲಿ ಮುಖ್ಯವಾಗುತ್ತದೆ," ಎಂದು ಹೇಳಿದರು.
"ಇಂಗ್ಲೆಂಡ್ ಹಾಗೂ ಭಾರತ ನಡುವಣ ಪಂದ್ಯ ಹೆಚ್ಚಿನ ಒತ್ತಡದ ಪಂದ್ಯವಾಗಲಿದೆ. ನಾವು ಅತ್ಯುತ್ತಮವಾಗಿ ಆಡಬೇಕಾದ ಅಗತ್ಯವಿದೆ. ಒಂದು ವೇಳೆ ನಾವು ಚೆನ್ನಾಗಿ ಆಡಿದರೆ, ನಮ್ಮ ಪಾಲಿಗೆ ಒಳ್ಳೆಯ ಪಂದ್ಯವಾಗಲಿದೆ. ಆದಷ್ಟು ಬೇಗ ಕಂಡೀಷನ್ಸ್‌ಗೆ ಹೊಂದಾಣಿಕೆ ಸಾಧಿಸಬೇಕು ಹಾಗೂ ಯೋಜನೆಗೆ ತಕ್ಕಂತೆ ಆಡಬೇಕು," ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
Ind Vs Zim, Icc T20 World Cup 2022, Suryakumar Yadav, Rohit Sharma, Team India.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am