ಬ್ರೇಕಿಂಗ್ ನ್ಯೂಸ್
25-11-22 12:35 pm Source: Vijayakarnataka ಕ್ರೀಡೆ
ಕತಾರ್ ಆತಿಥ್ಯದಲ್ಲಿ ನಡೆಯುತ್ತಿರುವ 2022ರ ಸಾಲಿನ ಫಿಫಾ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಫುಟ್‌ಬಾಲ್ ಮಾಂತ್ರಿಕ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಕಲಾತ್ಮಕ ಆಟದ ನೆರವಿನಿಂದಾಗಿ ಪೋರ್ಚುಗಲ್, ಘಾನಾ ವಿರುದ್ಧ 3-2 ಅಂತರದಿಂದ ರೋಚಕ ಗೆಲುವು ಸಾಧಿಸಿ ಶುಭಾರಂಭ ಕಂಡಿತು.
ಪಂದ್ಯದ ಪ್ರಮುಖ ಕೇಂದ್ರ ಬಿಂದುವಾಗಿದ್ದ ಪೋರ್ಚುಗಲ್ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಗೋಲು ಗಳಿಸುವ ಮೂಲಕ 5 ವಿಭಿನ್ನ ಫಿಫಾ ವಿಶ್ವಕಪ್ ಟೂರ್ನಿಗಳಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ವಿಶ್ವ ದಾಖಲೆ ಬರೆದರು. ಘಾನಾ ವಿರುದ್ಧ ಗೆಲುವು ಸಾಧಿಸಿದ ಪೋರ್ಚುಗಲ್ 'ಎಚ್' ಗುಂಪಿನ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನ ಸ್ಥಾನಕ್ಕೇರಿತು.
ಪೋರ್ಚುಗಲ್ ಹಾಗೂ ಘಾನಾ ನಡುವಿನ ಪಂದ್ಯವು ಆರಂಭದಿಂದಲೂ ರೋಚಕತೆಯಿಂದ ಕೂಡಿತ್ತು. ಪಂದ್ಯ ಆರಂಭವಾದ 10 ನಿಮಿಷದಲ್ಲೇ ಪೋರ್ಚುಗಲ್‌ಗೆ ಗೋಲು ಗಳಿಸುವ ಅವಕಾಶ ದೊರೆತರೂ, ಅದನ್ನು ಗೋಲಾಗಿ ಪರಿವರ್ತಿಸುವಲ್ಲಿ ಆ ತಂಡದ ಆಟಗಾರರು ಎಡವಿದರು. ಪ್ರಥಮಾರ್ಧದಲ್ಲೇ ಪೋರ್ಚುಗಲ್‌ಗೆ ಮತ್ತೊಂದು ಗೋಲು ಗಳಿಸುವ ಅವಕಾಶ ಸಿಕ್ಕಿತ್ತು. ಆದರೆ, ಇದನ್ನು ಆಟಗಾರರು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾದರು. ಮೊದಲಾಧಿಯ ಅಂತ್ಯಕ್ಕೆ ಉಭಯ ತಂಡಗಳು ಗೋಲು ಗಳಿಸುವಲ್ಲಿ ವಿಫಲವಾದವು.
ದ್ವಿತೀಯಾರ್ಧ ಆರಂಭದಿಂದಲೂ ಗೋಲು ಗಳಿಸಲು ಎರಡೂ ತಂಡಗಳು ಪೈಪೋಟಿ ನಡೆಸಿದವು. 65ನೇ ನಿಮಿಷದಲ್ಲಿ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ತಮಗೆ ಸಿಕ್ಕ ಪೆನಾಲ್ಟಿ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡರು ಹಾಗೂ ಪೋರ್ಚುಗಲ್ ಗೆ 1-0 ಮುನ್ನಡೆ ತಂದುಕೊಟ್ಟರು.
First steps! 👣🗺️🏆 #VesteABandeira #WearTheFlag #FIFAWorldCup pic.twitter.com/SwYfkUQ43L
— Portugal (@selecaoportugal) November 24, 2022
ಪೋರ್ಚುಗಲ್ ತಂಡ ಗೋಲು ಗಳಿಸಿದ ನಂತರ ಮತ್ತಷ್ಟು ಆಕ್ರಮಣಕಾರಿ ಆಟ ಪ್ರದರ್ಶಿಸಿದ ಘಾನಾದ ಮುಂಚೂಣಿ ಆಟಗಾರ ಆಂಡ್ರೆ ಅಯೆವ್ 73ನೇ ನಿಮಿಷದಲ್ಲಿ ಗೋಲು ಗಳಿಸಿದಾಗ, ಘಾನಾದ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತು. ಈ ಗೋಲಿನ ನೆರವಿನಿಂದ ಘಾನಾ 1-1 ಗೋಲುಗಳಿಂದ ಪಂದ್ಯವನ್ನು ಸಮಬಲಗೊಳಿಸಿತು.
ಪೋರ್ಚುಗಲ್ ತಂಡದ ಮತ್ತೊಬ್ಬ ಸ್ಟಾರ್ ಆಟಗಾರ ಜೋವೊ ಫೆಲಿಕ್ಸ್ 78ನೇ ನಿಮಿಷದಲ್ಲಿ ತಮ್ಮ ಕಾಲಿನ ಚಮತ್ಕಾರದಿಂದಾಗಿ ಗೋಲು ಗಳಿಸಿ ಪಂದ್ಯವನ್ನು ಹಿಡಿತಕ್ಕೆ ತಂದುಕೊಟ್ಟರು. ಇದಾದ 2ನೇ ನಿಮಿಷದ ಅಂತರದಲ್ಲಿ (80ನೇ ನಿಮಿಷ) ಮತ್ತೊಂದು ಗೋಲು ಗಳಿಸಿ ಪೋರ್ಚುಗಲ್ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ರೊನಾಲ್ಡೊ ತಮಗೆ ಸಿಕ್ಕ ಚೆಂಡನ್ನು ಕೌಶಲದಿಂದ ರಾಫೆಲ್ ಲಿಯೊಗೆ ಪಾಸ್ ಮಾಡಿದರು. ಲಿಯೊ ಕೂಡ ಅಷ್ಟೇ ಚಮತ್ಕಾರಿಯುತವಾಗಿ ಚೆಂಡನ್ನು ಎದುರಾಳಿಯ ನೆಟ್ ಒಳಗೆ ಸುರಕ್ಷಿತವಾಗಿ ಸೇರಿಸಿ ತಂಡಕ್ಕೆ 3-1 ರಿಂದ ಮುನ್ನಡೆ ದೊರಕಿಸಿಕೊಟ್ಟರು. ಪಂದ್ಯ ಮುಗಿಯಲು 10 ನಿಮಿಷಗಳಿರುವಾಗ ಈ ಗೋಲು ಬಂದಿದ್ದರಿಂದ ಘಾನಾಗೆ ಆತಂಕ ಎದುರಾಯಿತು.
ಪಂದ್ಯವನ್ನು ಮತ್ತೆ ಹಿಡಿತಕ್ಕೆ ತೆಗೆದುಕೊಳ್ಳಲು ಘಾನಾ ಆಟಗಾರರು ಹರಸಾಹಸ ಪಟ್ಟರು. 89ನೇ ನಿಮಿಷದಲ್ಲಿ ಘಾನಾದ ಮುಂಚೂಣಿ ಆಟಗಾರ ಒಸ್ಮಾನ್ ಬುಕಾರಿ ಗೋಲು ಗಳಿಸಿದರಾದರೂ ಪಂದ್ಯದ ಅವಧಿ ಮುಗಿದ ಪರಿಣಾಮ 3-2 ಗೋಲುಗಳ ಅಂತರದಿಂದ ಸೋಲು ಕಂಡು ಆಘಾತ ಅನುಭವಿಸಿತು.
ಪೋರ್ಚುಗಲ್ ತಂಡವು ಕಳೆದ 4 ಫಿಫಾ ವಿಶ್ವಕಪ್ ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ಸೋಲು ಕಂಡಿತ್ತು. ಆದರೆ, ಈ ಬಾರಿ ಮೊದಲ ಪಂದ್ಯದಲ್ಲೇ ಜಯ ಗಳಿಸುವ ಮೂಲಕ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಘಾನಾ ತನ್ನ ಮುಂದಿನ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ ನವೆಂಬರ್ 28 ರಂದು ಸೆಣಸಾಟ ನಡೆಸಿದರೆ, ಪೋರ್ಚುಗಲ್ 29 ರಂದು ಉರುಗ್ವೆ ಸವಾಲು ಸ್ವೀಕರಿಸಲಿದೆ.
Fifa World Cup 2022 Star Player Cristiano Ronaldo World Record Helps Portugal To Win Over Ghana.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am