'ನನ್ನ ಬೌಲಿಂಗ್‌ನಲ್ಲಿ ವಿರಾಟ್‌ ಕೊಹ್ಲಿ ಸಿಕ್ಸ್‌ ಹೊಡೆದರೆ ನನಗೆ ಬೇಸರವಿಲ್ಲ'-ಹ್ಯಾರಿಸ್‌ ರೌಫ್‌!

01-12-22 02:16 pm       Source: Vijayakarnataka   ಕ್ರೀಡೆ

ಕಳೆದ 2022ರ ಐಸಿಸಿ ಟಿ20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ತನ್ನ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ದ ಭಾರತ ತಂಡ ರೋಚಕ.

ಪಾಕಿಸ್ತಾನ ವಿರುದ್ಧ ಟಿ20 ವಿಶ್ವಕಪ್‌ ಟೂರ್ನಿಯ ಪಂದ್ಯದಲ್ಲಿ ವೃತ್ತಿ ಜೀವನದ ಶ್ರೇಷ್ಠ ಇನಿಂಗ್ಸ್ ಆಡಿದ್ದ ವಿರಾಟ್‌ ಕೊಹ್ಲಿ ಬ್ಯಾಟಿಂಗ್‌ ಪ್ರದರ್ಶನವನ್ನು ಪಾಕ್‌ ವೇಗಿ ಹ್ಯಾರಿಸ್‌ ರೌಫ್‌ ಮುಕ್ತಕಂಠದಿಂದ ಗುಣಗಾಣ ಮಾಡಿದ್ದಾರೆ. ವಿರಾಟ್‌ ಕೊಹ್ಲಿ ಕ್ಲಾಸ್‌ ಬ್ಯಾಟ್ಸ್‌ಮನ್‌ ಆಗಿರುವ ಹಿನ್ನೆಲೆಯಲ್ಲಿ ಅವರು ನನ್ನ ಬೌಲಿಂಗ್‌ನಲ್ಲಿ ಸಿಕ್ಸರ್‌ ಸಿಡಿಸಿದರೆ, ನನಗೆ ಬೇಸರವಾಗುವುದಿಲ್ಲ ಎಂದಿದ್ದಾರೆ.

ಅಕ್ಟೋಬರ್‌ 23 ರಂದು ಮೆಲ್ಬೋರ್ನ್‌ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಪಾಕಿಸ್ತಾನ ವಿರುದ್ದ ಟಿ20 ವಿಶ್ವಕಪ್‌ ಟೂರ್ನಿಯ ಸೂಪರ್‌-12ರ ಹಂತದ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ವೃತ್ತಿ ಜೀವನದ ಶ್ರೇಷ್ಠ ಇನಿಂಗ್ಸ್ ಆಡಿದ್ದರು. 160 ರನ್‌ ಗುರಿ ಹಿಂಬಾಲಿಸಿದ್ದ ಭಾರತ ತಂಡದ ಪರ ವಿರಾಟ್‌ ಕೊಹ್ಲಿ ವೃತ್ತಿ ಜೀವನದ ಶ್ರೇಷ್ಠ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದರು. ಎದುರಿಸಿದ್ದ 53 ಎಸೆತಗಳಲ್ಲಿ ಅಜೇಯ 82 ರನ್‌ ಸಿಡಿಸಿದ್ದರು.

If Karthik, Pandya had hit them, it would've hurt': Haris Rauf on Kohli's  sixes | Cricket - Hindustan Times

ವಿರಾಟ್‌ ಕೊಹ್ಲಿಯ ಈ ಇನಿಂಗ್ಸ್‌ನಲ್ಲಿ 6 ಬೌಂಡರಿಗಳು ಹಾಗೂ 4 ಸಿಕ್ಸರ್‌ಗಳು ಒಳಗೊಂಡಿದ್ದವು. ಆ ಮೂಲಕ ಭಾರತ ತಂಡ ಈ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧದ ಗೆಲುವಿನಲ್ಲಿ ವಿರಾಟ್‌ ಕೊಹ್ಲಿ ಪ್ರಮುಖ ಪಾತ್ರವಹಿಸಿದ್ದರು. ಅದರಲ್ಲೂ ಹ್ಯಾರಿಸ್‌ ರೌಫ್ ಅವರಿಗೆ ಬಾರಿಸಿದ ಎರಡು ಸಿಕ್ಸರ್‌ಗಳು ಎಲ್ಲರ ಗಮನ ಸೆಳೆಯಿತು. ಇವು ವಿಶ್ವ ದರ್ಜೆಯ ಹೊಡೆತಗಳಾಗಿದ್ದವು. ಇದರಿಂದ ಹ್ಯಾರಿಸ್‌ ಬೌಲಿಂಗ್‌ ವೇಳೆ ಕಕ್ಕಾಬಿಕ್ಕಿಯಾಗಿದ್ದರು.

Haris Rauf: Would have felt hurt if Pandya or DK hit me for sixes but Kohli  is different class

ಇದೀಗ ಪಾಕ್‌ ವೇಗಿ ಹ್ಯಾರಿಸ್‌ ರೌಫ್ ಅವರು ವಿರಾಟ್‌ ಕೊಹ್ಲಿ ಅವರ ಈ ಇನಿಂಗ್ಸ್‌ ಹಾಗೂ ತಮ್ಮ ಓವರ್‌ನಲ್ಲಿ ಸಿಡಿಸಿದ್ದ ಸಿಕ್ಸರ್‌ಗಳ ಬಗ್ಗೆ ಮಾತನಾಡಿದ್ದಾರೆ. ವಿರಾಟ್‌ ಕೊಹ್ಲಿ ಕ್ಲಾಸ್‌ ಆಟಗಾರ. ಹಾಗಾಗಿ ಅವರು ನನ್ನ ಓವರ್‌ನಲ್ಲಿ ಸಿಕ್ಸ್‌ ಹೊಡೆದರೆ, ನನಗೆ ಬೇಸರವಾಗುವುದಿಲ್ಲ. ಆದರೆ, ದಿನೇಶ್‌ ಕಾರ್ತಿಕ್‌ ಅಥವಾ ಹಾರ್ದಿಕ್‌ ಪಾಂಡ್ಯ ಹೊಡೆದರೆ, ನನಗೆ ನಿಜಕ್ಕೂ ಬೇಸರವಾಗುತ್ತದೆ ಎಂದಿದ್ದಾರೆ.

"ಟಿ20 ವಿಶ್ವಕಪ್‌ ಟೂರ್ನಿಯ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಬ್ಯಾಟ್‌ ಮಾಡಿದ ಹಾದಿ ಕ್ಲಾಸ್‌ ಆಗಿತ್ತು. ವಿರಾಟ್‌ ಕೊಹ್ಲಿ ಯಾವ ಬಗೆಯ ಶಾಟ್ಸ್‌ ಆಡುತ್ತಾರೆಂದು ನಮ್ಮೆಲ್ಲರಿಗೂ ಗೊತ್ತಿದೆ. ಅವರು ನನ್ನ ಬೌಲಿಂಗ್‌ನಲ್ಲಿ ಹೊಡೆದಿದ್ದ ಸಿಕ್ಸರ್‌ಗಳನ್ನು ಬೇರೆ ಯಾವ ಬ್ಯಾಟ್ಸ್‌ಮನ್‌ ಹೊಡೆಯುತ್ತಾರೆಂದು ನಾನು ಭಾವಿಸುವುದಿಲ್ಲ," ಎಂದು ಹ್ಯಾರಿಸ್‌ ರೌಫ್‌ ಪಾಕಿಸ್ತಾನ ನ್ಯೂಸ್‌ ಓಟ್‌ಲೆಟ್‌ ಕ್ರಿಕ್‌ವಿಕ್‌ಗೆ ತಿಳಿಸಿದ್ದಾರೆ.

"ಒಂದು ವೇಳೆ ನನ್ನ ಬೌಲಿಂಗ್‌ನಲ್ಲಿ ಆ ರೀತಿ ದಿನೇಶ್‌ ಕಾರ್ತಿಕ್‌ ಅಥವಾ ಹಾರ್ದಿಕ್‌ ಪಾಂಡ್ಯ ಸಿಕ್ಸರ್‌ ಸಿಡಿಸಿದರೆ, ನನಗೆ ತುಂಬಾ ನೋವಾಗುತ್ತಿತ್ತು. ಆದರೆ, ವಿರಾಟ್‌ ಕೊಹ್ಲಿ ಬ್ಯಾಟ್‌ನಿಂದ ಆ ರೀತಿಯ ಶಾಟ್ಸ್‌ ಬಂದಿರುವುದರಿಂದ ನನಗೆ ಖುಷಿ ಇದೆ. ಅಂದಹಾಗೆ ವಿರಾಟ್‌ ಕೊಹ್ಲಿ ವಿಭಿನ್ನ ಬಗೆಯ ಕ್ಲಾಸ್‌ ಆಟಗಾರ," ಎಂದು ಪಾಕ್ ವೇಗಿ ಗುಣಗಾಣ ಮಾಡಿದರು.

ಅಂದಹಾಗೆ ಈ ಪಂದ್ಯದಲ್ಲಿ ಭಾರತ ತಂಡಕ್ಕೆ ಕೊನೆಯ ಎರಡು ಓವರ್‌ಗಳಲ್ಲಿ 31 ರನ್ ಅಗತ್ಯವಿತ್ತು. ಹ್ಯಾರಿಸ್‌ ರೌಫ್‌ 19ನೇ ಓವರ್‌ನ ಆರಂಭಿಕ 4 ಎಸೆತಗಳಲ್ಲಿ ಉತ್ತಮವಾಗಿ ಹಾಕಿ, ಕೇವಲ 3 ರನ್‌ ಕೊಟ್ಟಿದ್ದರು. ಈ ವೇಳೆ ಕೊನೆಯ ಎರಡು ಎಸೆತಗಳಲ್ಲಿ ವಿರಾಟ್‌ ಕೊಹ್ಲಿ ಸಿಕ್ಸರ್‌ ಸಿಡಿಸಿದರು. ಆ ಮೂಲಕ ಈ ಪಂದ್ಯದಲ್ಲಿ ಭಾರತ ತಂಡಕ್ಕೆ ಟರ್ನಿಂಗ್‌ ಪಾಯಿಂಟ್‌ ಸಿಕ್ಕಿತ್ತು.

"ನೋಡಿ, 12 ಎಸೆತಗಳಲ್ಲಿ ಭಾರತಕ್ಕೆ 31 ರನ್‌ ಅಗತ್ಯವಿತ್ತು. ಆರಂಭಿಕ 4 ಎಸೆತಗಳಲ್ಲಿ ನಾನು ಕೇವಲ 3 ರನ್‌ ಕೊಟ್ಟಿದ್ದೆ. ಮೊಹಮ್ಮದ್‌ ನವಾಝ್‌ ಕೊನೆಯ ಓವರ್‌ ಬೌಲ್‌ ಮಾಡಲಿದ್ದಾರೆಂದು ನನಗೆ ಗೊತ್ತಿತ್ತು. ಅವರು ಸ್ಪಿನ್ನರ್ ಆಗಿದ್ದರಿಂದ, ಅವರಿಗೆ 20ಕ್ಕೂ ಹೆಚ್ಚಿನ ರನ್‌ಗಳನ್ನು ಉಳಿಸುವುದು ನನ್ನ ಯೋಚನೆಯಾಗಿತ್ತು," ಎಂದು ಹ್ಯಾರಿಸ್‌ ರೌಫ್‌ ತಿಳಿಸಿದ್ದಾರೆ.

"ಕೊನೆಯ 8 ಎಸೆತಗಳಲ್ಲಿ 28 ರನ್‌ ಅಗತ್ಯವಿದ್ದಾಗ, ನಾನು ನಿಧಾನಗತಿಯ ಎಸೆತಗಳನ್ನು ಹಾಕಿದ್ದೆ ಹಾಗೂ ಇದನ್ನು ವಿರಾಟ್‌ ಕೊಹ್ಲಿ ಅರಿತುಕೊಂಡರು. ಆರಂಭಿಕ 4 ಎಸೆತಗಳಲ್ಲಿ ಕೇವಲ ಒಂದೇ ಒಂದು ಎಸೆತವನ್ನು ಮಾತ್ರ ಜೋರಾಗಿ ಹಾಕಿದ್ದೆ. ಸ್ಕೈರ್‌ ಲೆಗ್‌ ಕಡೆ ದೊಡ್ಡ ಬೌಂಡರಿಗಳಾಗಿರುವುದದಿಂದ ಕೊನೆಯ ಎಸೆತಗಳಲ್ಲಿ ನಿಧಾನವಾಗಿ ಹಾಕಲು ನಿರ್ಧರಿಸಿದ್ದೆ," ಎಂದರು.

"ನಾನು ಹಾಕಿದ ಆ ಲೆನ್ತ್‌ಗೆ ವಿರಾಟ್‌ ಕೊಹ್ಲಿ ನೇರವಾಗಿ ಸಿಕ್ಸರ್‌ ಸಿಡಿಸುತ್ತಾರೆಂದು ನನಗೆ ಹೊಳೆದಿರಲಿಲ್ಲ. ಅವರು ನನಗೆ ನುಗ್ಗಿ ಸಿಕ್ಸರ್‌ ಸಿಡಿಸಿದರು, ಇದು ಅವರ ಕ್ಲಾಸ್‌ ಆಟವನ್ನು ತೋರಿಸುತ್ತದೆ. ನನ್ನ ಯೋಜನೆಯನ್ನು ಆ ಎಸೆದಲ್ಲಿ ಕಾರ್ಯಗೊಳಿಸುವಲ್ಲಿ ಯಶಸ್ವಿಯಾಗಿದ್ದೆ, ಆದರೆ ಕೊಹ್ಲಿ ಹೊಡೆದಿದ್ದ ಶಾಟ್ಸ್‌ ಕ್ಲಾಸ್‌ ಆಗಿ ಇತ್ತು," ಎಂದು ಹ್ಯಾರಿಸ್‌ ರೌಫ್‌ ಗುಣಗಾಣ ಮಾಡಿದರು.

Ind Vs Pak If Karthik And Pandya Had Hit Them, It Wouldve Hurt-Haris Rauf On Kohlis Twin-Sixes Vs Pakistan Star At T20 Wc.