'ಫಿಟ್‌ ಅಂಡ್‌ ಫೈನ್‌', ದ್ವಿತೀಯ ಟೆಸ್ಟ್‌ಗೂ ಮುನ್ನ ತಂಡ ಸೇರಲು ಸಜ್ಜಾದ ರೋಹಿತ್‌ ಶರ್ಮಾ!

17-12-22 01:28 pm       Source: Vijayakarnataka   ಕ್ರೀಡೆ

ಬಾಂಗ್ಲಾದೇಶ ಪ್ರವಾಸದಲ್ಲಿ ಇರುವ ಟೀಮ್ ಇಂಡಿಯಾ ಟೆಸ್ಟ್‌ ಸರಣಿ ಆರಂಭಕ್ಕೂ ಮುನ್ನ ಕ್ಯಾಪ್ಟನ್‌ ರೋಹಿತ್‌ ಶರ್ಮಾ ಅವರ ಸೇವೆ ಕಳೆದುಕೊಂಡಿತು.

ಆತಿಥೇಯ ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ವೈಟ್‌ವಾಶ್‌ ಗೆಲುವನ್ನು ಎದುರು ನೋಡುತ್ತಿರುವ ಟೀಮ್ ಇಂಡಿಯಾ, ಪ್ರಥಮ ಟೆಸ್ಟ್‌ ಪಂದ್ಯದಲ್ಲಿ ಬೃಹತ್‌ ಗೆಲುವನ್ನು ಎದುರು ನೋಡುತ್ತಿದೆ. ಇದರ ಬೆನ್ನಲ್ಲೇ ತಂಡದ ವಿಶ್ವಾಸ ದುಪ್ಪಟ್ಟಾಗಿದ್ದು, ಗಾಯದ ಸಮಸ್ಯೆಯಿಂದ ಚೇತರಿಸಿರುವ ನಾಯಕ ರೋಹಿತ್‌ ಶರ್ಮಾ ಎರಡನೇ ಟೆಸ್ಟ್‌ ಪಂದ್ಯಕ್ಕೂ ಮುನ್ನ ತಂಡ ಸೇರಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್‌ 7ರಂದು ಮೀರ್‌ಪುರದಲ್ಲಿ ನಡೆದ ಏಕದಿನ ಕ್ರಿಕೆಟ್‌ ಸರಣಿಯ ಎರಡನೇ ಪಂದ್ಯದಲ್ಲಿ ಫೀಲ್ಡಿಂಗ್‌ ಮಾಡುವಾಗವ ಸ್ಲಿಪ್‌ ವಿಭಾಗದಲ್ಲಿ ಕ್ಯಾಚ್‌ ತೆಗೆದುಕೊಳ್ಳುವ ಪ್ರಯತ್ನದಲ್ಲಿ ರೋಹಿತ್‌ ತಮ್ಮ ಎಡಗೈ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದರು.

ಗಾಯದ ಸಮಸ್ಯೆ ಕಾರಣ 3ನೇ ಒಡಿಐ ಮತ್ತು ಪ್ರಥಮ ಟೆಸ್ಟ್‌ ಪಂದ್ಯದಿಂದ ಹೊರಗುಳಿದ ರೋಹಿತ್‌ ಶರ್ಮಾ ಈಗ ಗುಣಮುಖರಾಗಿದ್ದಾರೆ ಎಂದು ರೆವ್‌ಸ್ಪೋರ್ಟ್ಸ್‌ ವರದಿ ಮಾಡಿದೆ. ಸರಣಿಯ ಎರಡನೇ ಪಂದ್ಯ ಡಿಸೆಂಬರ್‌ 22ರಿಂದ 26ರವರೆಗೆ ಢಾಕಾದ ಶೇರ್‌ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಐಸಿಸಿ ಟೆಸ್ಟ್‌ ವಿಶ್ವ ಚಾಂಪಿಯನ್‌ಷಿಪ್‌ ಟೂರ್ನಿಯ ಎರಡನೇ ಆವೃತ್ತಿಯಲ್ಲಿ ಭಾರತ ತಂಡ ಫೈನಲ್‌ ತಲುಪಲು ಬಾಂಗ್ಲಾ ಎದುರು 2-0 ಅಂತರದ ಜಯ ದಾಖಲಿಸಬೇಕಿದೆ.

They are not going to leave KL Rahul out, Shubman Gill might have to sit  out'

ರೋಹಿತ್‌ ಶರ್ಮಾ ಅನುಪಸ್ಥಿತಿಯಲ್ಲಿ ಅನುಭವಿ ಓಪನರ್‌ ಕೆ.ಎಲ್‌ ರಾಹುಲ್‌ ಪ್ರಥಮ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಚೇತೇಶ್ವರ್‌ ಪೂಜಾರ ತಂಡದ ಉಪನಾಯಕನ ಜವಾಬ್ದಾರಿ ಹೊತ್ತಿದ್ದಾರೆ. ರೋಹಿತ್ ದ್ವಿತೀಯ ಟೆಸ್ಟ್‌ಗೆ ಕಮ್‌ಬ್ಯಾಕ್‌ ಮಾಡಿದರೆ ನಾಯಕತ್ವವನ್ನೂ ವಹಿಸಿಕೊಳ್ಳಲಿದ್ದಾರೆ. ಇದು ಸಾಧ್ಯವಾದರೆ ಮನೆಯಾಚೆ ರೋಹಿತ್‌ ಭಾರತ ಟೆಸ್ಟ್‌ ತಂಡವನ್ನು ಮೊದಲ ಬಾರಿ ಮುನ್ನಡೆಸಿದಂತ್ತಾಗುತ್ತದೆ. ಕಳೆದ ಬಾರಿ ಇಂಗ್ಲೆಂಡ್‌ ಪ್ರವಾಸದಲ್ಲಿನ 5ನೇ ಹಾಗೂ ಅಂತಿಮ ಟೆಸ್ಟ್‌ನಲ್ಲೇ ರೋಹಿತ್‌ ಭಾರತ ತಂಡವನ್ನು ಮುನ್ನಡೆಸಬೇಕಿತ್ತು. ಆದರೆ, ಕೋವಿಡ್‌-19 ಸೋಂಕಿಗೆ ತುತ್ತಾದ ಕಾರಣ ಅವರು ಆ ಪಂದ್ಯದಲ್ಲಿ ಆಡಿರಲಿಲ್ಲ.

ಪ್ರಥಮ ಟೆಸ್ಟ್‌ನಲ್ಲಿ ಭಾರತದ ಪ್ರಾಬಲ್ಯ
ಮೊದಲ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಟೀಮ್ ಇಂಡಿಯಾ, ಪ್ರಥಮ ಇನಿಂಗ್ಸ್‌ನಲ್ಲಿ 404 ರನ್‌ಗಳ ದೊಡ್ಡ ಮೊತ್ತ ಕಲೆಹಾಕಿತು. ಬಳಿಕ ಎದುರಾಳಿಯನ್ನು 150 ರನ್‌ಗೆ ಆಲ್‌ಔಟ್‌ ಮಾಡಿ 254 ರನ್‌ಗಳ ಮುನ್ನಡೆ ಪಡೆದುದ್ದಲ್ಲದೆ, ಎರಡನೇ ಇನಿಂಗ್ಸ್‌ ಬ್ಯಾಟಿಂಗ್ ಆರಂಭಿಸಿ 258/2 ರನ್‌ ಗಳಿಸುವ ಮೂಲಕ ಎದುರಾಳಿಗೆ 513 ರನ್‌ಗಳ ಗುರಿ ನೀಡಿದೆ. ಭಾರತದ ಪರ ಎರಡನೇ ಇನಿಂಗ್ಸ್‌ನಲ್ಲಿ ಶುಭಮನ್‌ ಗಿಲ್‌ (110) ಮತ್ತು ಚೇತೇಶ್ವರ್‌ ಪೂಜಾರ (102*) ಶತಕ ಬಾರಿಸಿ ತಂಡದ ಬೃಹತ್‌ ಮುನ್ನಡೆಗೆ ಕಾರಣರಾದರು.

Big boost for Team India as Rohit Sharma fit for 2nd Test, to leave for Bangladesh  soon: Report

ರೋಹಿತ್‌ ಅನುಪಸ್ಥಿತಿಯಲ್ಲಿ ಇನಿಂಗ್ಸ್‌ ಆರಂಭಿಸುವ ಅವಕಾಶ ಪಡೆದ ಶುಭಮನ್‌ ಗಿಲ್‌, ಮೊದಲ ಇನಿಂಗ್ಸ್‌ನಲ್ಲಿ 20 ರನ್‌ಗಳಿಸಿ ವಿಕೆಟ್‌ ಕೈಚೆಲ್ಲಿದರೂ ಎರಡನೇ ಇನಿಂಗ್ಸ್‌ನಲ್ಲಿ ಭರ್ಜರಿಯಾಗಿ ಬ್ಯಾಟ್‌ ಬೀಸಿ 152 ಎಸೆತಗಳಲ್ಲಿ 110 ರನ್‌ ಬಾರಿಸಿದರು. ಇದು ಅವರ ಟೆಸ್ಟ್‌ ವೃತ್ತಿಬದುಕಿನ ಮೊದಲ ಶತಕವಾಗಿದೆ. ಈಗ ರೋಹಿತ್‌ ತಂಡಕ್ಕೆ ಮರಳಿದರೆ ಶುಭಮನ್ ಗಿಲ್‌ ಬೆಂಚ್‌ ಕಾಯಬೇಕಾಗುತ್ತದೆ.

ಭಾರತ: ಮೊದಲ ಇನಿಂಗ್ಸ್‌ 90 ಓವರ್‌ಗಳಲ್ಲಿ 404 ರನ್‌ಗಳಿಗೆ ಆಲ್‌ಔಟ್‌ (ಕೆ.ಎಲ್‌ ರಾಹುಲ್‌ 22, ಶುಭಮನ್ ಗಿಲ್ 20, ಚೇತೇಶ್ವರ್‌ ಪೂಜಾರ 90, ರಿಷಭ್ ಪಂತ್‌ 46, ಶ್ರೇಯಸ್‌ ಅಯ್ಯರ್‌ 86, ಆರ್‌. ಅಶ್ವಿನ್‌ 58, ಕುಲ್ದೀಪ್‌ ಯಾದವ್‌ 40, ಉಮೇಶ್‌ ಯಾದವ್‌ 15*; ತೈಜುಲ್‌ ಇಸ್ಲಾಮ್‌ 133ಕ್ಕೆ 4, ಮೆಹ್ದಿ ಹಸನ್‌ 113ಕ್ಕೆ 4).
ಬಾಂಗ್ಲಾದೇಶ: ಮೊದಲ ಇನಿಂಗ್ಸ್‌ 55.5 ಓವರ್‌ಗಳಲ್ಲಿ 150 ರನ್‌ಗೆ ಆಲ್‌ಔಟ್‌ (ಝಾಕಿರ್‌ ಹಸನ್‌ 20, ಲಿಟನ್‌ ದಾಸ್‌ 24, ಮುಷ್ಫಿಕರ್‌ ರಹೀಮ್ 28, ನೂರುಲ್‌ ಹಸನ್‌ 16; ಮೊಹಮ್ಮದ್‌ ಸಿರಾಜ್ 20ಕ್ಕೆ 3, ಕುಲ್ದೀಪ್‌ ಯಾದವ್‌ 40ಕ್ಕೆ 5).
ಭಾರತ: ಎರಡನೇ ಇನಿಂಗ್ಸ್‌ 61.4 ಓವರ್‌ಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 258 ರನ್‌ಗಳಿಗೆ ಡಿಕ್ಲೇರ್‌ (ಕೆ.ಎಲ್‌ ರಾಹುಲ್‌ 23, ಶುಭಮನ್‌ ಗಿಲ್‌ 110, ಚೇತೇಶ್ವರ್‌ ಪೂಜಾರ 102*; ಖಲೀದ್‌ ಅಹ್ಮದ್‌ 51ಕ್ಕೆ 1).
ಬಾಂಗ್ಲಾದೇಶ: ಎರಡನೇ ಇನಿಂಗ್ಸ್‌ 12 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 42 ರನ್‌ (ನಜ್ಮುಲ್‌ ಹುಸೇನ್‌ 25*, ಝಾಕಿರ್‌ ಹಸನ್‌ 17*).

Ind Vs Ban Rohit Sharma Fit For 2nd Test, Set To Leave For Bangladesh Soon Says Report.