36 ವರ್ಷಗಳ ಬಳಿಕ ಜಾಗತಿಕ ಫುಟ್ಬಾಲ್ ಗೆದ್ದ ಅರ್ಜೆಂಟೀನಾ ; ವಿಶ್ವ ಟ್ರೋಫಿ ಗೆಲ್ಲಿಸಿ ವೃತ್ತಿ ಬದುಕು ಮುಗಿಸಿದ ಮೆಸ್ಸಿ ! 

19-12-22 12:09 pm       HK News Desk   ಕ್ರೀಡೆ

ಫಿಫಾ ಫುಟ್ಬಾಲ್ ವಿಶ್ವಕಪ್‌ ಗೆಲುವಿನೊಂದಿಗೆ ವೃತ್ತಿ ಬದುಕಿಗೆ ವಿದಾಯ ಹೇಳುವ ಕನಸನ್ನು ಅರ್ಜೆಂಟೀನಾದ ದಿಗ್ಗಜ ಲಿಯೊನೆಲ್‌ ಮೆಸ್ಸಿ ನನಸಾಗಿಸಿದ್ದಾರೆ.

ಕತಾರ್, ಡಿ.19: ಫಿಫಾ ಫುಟ್ಬಾಲ್ ವಿಶ್ವಕಪ್‌ ಗೆಲುವಿನೊಂದಿಗೆ ವೃತ್ತಿ ಬದುಕಿಗೆ ವಿದಾಯ ಹೇಳುವ ಕನಸನ್ನು ಅರ್ಜೆಂಟೀನಾದ ದಿಗ್ಗಜ ಲಿಯೊನೆಲ್‌ ಮೆಸ್ಸಿ ನನಸಾಗಿಸಿದ್ದಾರೆ. ಫ್ರಾನ್ಸ್‌ ವಿರುದ್ಧದ ರೋಚಕ ಫೈನಲ್‌ ಪಂದ್ಯದಲ್ಲಿ ಅರ್ಜೆಂಟೀನಾ ಪಾಲಿಗೆ ಮೆಸ್ಸಿ ಅದ್ಭುತ ಆಟವಾಡಿ ಗೆಲುವಿನ ರೂವಾರಿಯೆನಿಸಿದರು. ಫುಟ್ಬಾಲ್‌ ಪ್ರಿಯರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ್ದ ರೋಚಕ ಪೆನಾಲ್ಟಿ ಶೂಟೌಟ್ ನಲ್ಲಿ ಒತ್ತಡ ಮೆಟ್ಟಿನಿಂತ ಮೆಸ್ಸಿ ಬಳಗ 4-2 ಅಂತರದಲ್ಲಿ ಕಳೆದ ಬಾರಿಯ ಚಾಂಪಿಯನ್ ಫ್ರಾನ್ಸ್‌ ತಂಡವನ್ನು ಸೋಲಿಸಿ 2022ರ ಸಾಲಿನ ಫಿಫಾ ವಿಶ್ವಕಪ್‌ ಟ್ರೋಫಿ ಎತ್ತಿಹಿಡಿಯಿತು.

ಪಂದ್ಯದ ಮೊದಲಾರ್ಧದಲ್ಲೇ ಮೆಸ್ಸಿ ಮ್ಯಾಜಿಕ್‌ನೊಂದಿಗೆ 2-0 ಅಂತರದ ಮುನ್ನಡೆ ಪಡೆದಿದ್ದ ಅರ್ಜೆಂಟೀನಾ ಜಯ ದಾಖಲಿಸುವ ಹಾಟ್‌ ಫೇವರಿಟ್‌ ಆಗಿತ್ತು. ಆದರೆ, ದ್ವಿತೀಯಾರ್ಧದಲ್ಲಿ ಎಲ್ಲ ಲೆಕ್ಕಾಚಾರಗಳು ಬುಡಮೇಲಾಗಿದ್ದವು. ಫ್ರಾನ್ಸ್‌ ಪರ ಏಕಾಂಗಿ ಹೋರಾಟ ನಡೆಸಿದ್ದ ಸ್ಟಾರ್‌ ಆಟಗಾರ ಕಿಲಿಯನ್‌ ಎಂಬಾಬೆ ಎರಡು ನಿಮಿಷಗಳಲ್ಲಿ ಬ್ಯಾಕ್‌-ಟು-ಬ್ಯಾಕ್‌ ಗೋಲ್‌ ಬಾರಿಸಿ ಪೂರ್ಣ ಸಮಯದ ಅಂತ್ಯಕ್ಕೆ 2-2ರ ಸಮಬಲ ತಂದರು.

FIFA World Cup 2022 Winner is Argentina, Beat France 4-2 on penalties |  PINKVILLA

Who won the FIFA World Cup 2022 final in Qatar?

ನಿಗದಿತ 90 ನಿಮಷಗಳ ಅಂತ್ಯಕ್ಕೆ ಸ್ಕೋರ್‌ 2-2ರ ಸಮಬಲ ಕಂಡಿದ್ದರಿಂದ ಆಟ ಹೆಚ್ಚುವರಿ 30 ನಿಮಿಷಗಳಿಗೆ ವಿಸ್ತರಣೆಯಾಯಿತು.  ಆಕ್ರಮಣಕಾರಿ ಆಟವಾಡಿ ಗೋಲ್‌ ಗಳಿಕೆಗೆ ಸತತ ಪ್ರಯತ್ನ ನಡೆಸಿದ ಅರ್ಜೆಂಟೀನಾ ಪರ ಮತ್ತೆ ಮಿಂಚಿದ ಮೆಸ್ಸಿ 108ನೇ ನಿಮಿಷದಲ್ಲಿ ಗೋಲ್‌ ಗಳಿಸಿದರು. ಆದರೆ, ಅದರ ಬೆನ್ನಲ್ಲೇ ಡಿಫೆನ್ಸ್‌ನಲ್ಲಿ ಮಾಡಿಕೊಂಡ ಎಡವಟ್ಟಿನ ಕಾರಣ 118ನೇ ನಿಮಿಷದಲ್ಲಿ ಎದುರಾಳಿಗೆ ಪೆನಾಲ್ಟಿ ಸ್ಪಾಟ್‌ ಕಿಕ್‌ ಬಿಟ್ಟುಕೊಡ ಬೇಕಾಯಿತು. ಇದರ ಲಾಭ ಪಡೆದ ಕಿಲಿಯನ್‌ ಎಂಬಾಪೆ ಚೆಂಡನ್ನು ಗೋಲ್‌ ಪೆಟ್ಟಿಗೆ ಸೇರಿಸಿ 3-3ರ ಸಮಬಲ ತಂದರು. ಇದು ವಿಶ್ವಕಪ್‌ ಫೈನಲ್‌ ಒಂದರಲ್ಲಿ ಮೂಡಿಬಂದ ಮೊದಲ ಬಾರಿಯ ಹ್ಯಾಟ್ರಿಕ್‌ ಗೋಲು. ಹೆಚ್ಚುವರಿ ಸಮಯದ ಕೊನೆಯ ಎರಡು ನಿಮಿಷಗಳಲ್ಲಿ ಎರಡೂ ತಂಡಗಳಿಗೆ ಗೋಲ್‌ ಗಳಿಕೆಯ ಅವಕಾಶ ಸಿಕ್ಕಿತ್ತಾದರೂ ಕೂದಲೆಳೆ ಅಂತರದಲ್ಲಿ ಅದೃಷ್ಟ ಕೈತಪ್ಪಿ ಹೋಯಿತು. ಕೊನೆಗೆ, ಫಲಿತಾಂಶಕ್ಕಾಗಿ ಪಂದ್ಯ ಪೆನಾಲ್ಟಿ ಶೂಟ್‌ಔಟ್‌ ಕಡೆಗೆ ಹೋಗುವಂತಾಯಿತು. 

Messi leads Argentina to win over France on penalties in stunning World Cup  final | The Times of Israel

FIFA World Cup 2022 Final: Kylian Mbappe beats Lionel Messi to win Golden  Boot award in thrilling finish - India Today

ರೋಚಕ ಪೆನಾಲ್ಟಿ ಶೂಟ್‌ಔಟ್‌

ಪೆನಾಲ್ಟಿ ಶೂಟ್‌ನಲ್ಲೂ ತಮ್ಮ ಏಕಾಗ್ರತೆ ಕಾಯ್ದುಕೊಂಡ ಎಂಬಾಪೆ ಫ್ರಾನ್ಸ್‌ಗೆ 1-0 ಅಂತರದ ಮುನ್ನಡೆ ಕೊಟ್ಟರು. ಬಳಿಕ ಬಂದ ಮೆಸ್ಸಿ 1-1 ಅಂತರದ ಸಮಬಲ ತಂದರು. ಆದರೆ ಫ್ರಾನ್ಸ್‌ ಪರ 2ನೇ ಮತ್ತು 3ನೇ ಪ್ರಯತ್ನದಲ್ಲಿ ಕಿಂಗ್‌ಸ್ಲೀ ಕೊಮನ್‌ ಮತ್ತು ಅರುಲೆನ್ ತೊಮೆನಿ ಚೆಂಡನ್ನು ಗೋಲ್‌ ಪೆಟ್ಟಿಗೆ ಸೇರಿಸಲು ವಿಫಲವಾದರೆ, ನಾಲ್ಕನೇ ಪ್ರಯತ್ನದಲ್ಲಿ ರಾಂಡಲ್‌ ಕೊಲೊ ಗಳಿಸಿದ ಗೋಲ್‌ ಸೋಲಿನ ಅಂತರ ತಗ್ಗಿಸುವುದಕ್ಕಷ್ಟೇ ಸೀಮಿತವಾಯಿತು. ಅರ್ಜೆಂಟೀನಾ ಪರ 2ನೇ, 3ನೇ ಮತ್ತು 4ನೇ ಪ್ರಯತ್ನಗಳಲ್ಲಿ ಪಾಲೊ ಡಿಬಾಲ, ಲಿಯನಾರ್ಡೊ ಪರೇಡಸ್‌ ಮತ್ತು ಗೊನ್ಸಾಲೊ ಮೌಟಿಯೆಲ್‌ ಗೋಲ್‌ ಗಳಿಸುವ ಮೂಲಕ ಇತಿಹಾಸದ ಪುಟದಲ್ಲಿ ತಮ್ಮ ಹೆಸರುಗಳನ್ನು ಅಚ್ಚಳಿಯದಂತೆ ಒತ್ತಿಬಿಟ್ಟರು.

FIFA World Cup winners list: Know the champions

ಅರ್ಜೆಂಟೀನಾ 3ನೇ ಬಾರಿ ಚಾಂಪಿಯನ್ಸ್ 

1986ರಲ್ಲಿ ಡಿಯೇಗೊ ಮರಡೊನಾ ಸಾರಥ್ಯದಲ್ಲಿ ಕೊನೆಯ ಬಾರಿ ವಿಶ್ವ ಕಪ್‌ ಗೆದ್ದಿದ್ದ ಅರ್ಜೆಂಟೀನಾ ತಂಡ ಇದೀಗ ಲಿಯೋನೆಲ್‌ ಮೆಸ್ಸಿ ಸಾರಥ್ಯದಲ್ಲಿ ಮತ್ತೊಮ್ಮೆ ಟ್ರೋಫಿ ಎತ್ತಿ ಹಿಡಿದು, ವಿಶ್ವಕಪ್‌ ಇತಿಹಾಸದಲ್ಲಿ ಮೂರನೇ ಬಾರಿ ಚಾಂಪಿಯನ್ಸ್‌ ಪಟ್ಟ ಅಲಂಕರಿಸಿದೆ. 2014ರಲ್ಲೂ ಮೆಸ್ಸಿ ಸಾರಥ್ಯದಲ್ಲಿ ಅರ್ಜೆಂಟೀನಾ ಫೈನಲ್‌ ತಲುಪಿತ್ತಾದರೂ ಜರ್ಮನಿ ವಿರುದ್ಧದ ಫೈನಲ್‌ನಲ್ಲಿ ಮುಗ್ಗರಿಸಿತ್ತು. 1978ರಲ್ಲಿ ಅರ್ಜೆಂಟೀನಾ ತನ್ನ ಮೊದಲ ವಿಶ್ವಕಪ್‌ ಗೆದ್ದಿತ್ತು.

OFFICIAL! Messi & Argentina crowned World Champions | KickOff

How much prize money will the winner of the Qatar 2022 FIFA World Cup  receive? - AS USA

2022ರ ಸಾಲಿನಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಸೌದಿ ಅರೇಬಿಯಾ ಎದುರು ಮುಗ್ಗರಿಸಿದ ಅರ್ಜೆಂಟೀನಾ ತಂಡ ನಂತರದ ಎಲ್ಲ ಪಂದ್ಯಗಳನ್ನು ಗೆದ್ದು ವಿಶ್ವ ಚಾಂಪಿಯನ್ಸ್‌ ಎನಿಸಿದ್ದು ವಿಶೇಷ. ‌

Lionel Messi led Argentina to victory yesterday at the FIFA World Cup as the world held its breath for a while. Argentina recorded a historic win over France even as the latter team’s Kylian Mbappe, Messi’s club teammate, put up an immense show with a thrilling hat-trick. The match went to a penalty shootout where Emiliano Martinez came up big and saved Kingsley Coman’s shot, while Aurélien Tchouaméni missed the target as Argentina defeated France 4-2 as the match ended 3-3 after the extra time.