ಭಾರತ ಟೆಸ್ಟ್‌ ತಂಡದಲ್ಲಿಯೂ ಸೂರ್ಯಕುಮಾರ್‌ ಯಾದವ್‌ ಆಡಬೇಕೆಂದ ಹಾರ್ದಿಕ್‌ ಪಾಂಡ್ಯ!

03-01-23 11:48 am       Source: Vijayakarnataka   ಕ್ರೀಡೆ

ಕಳೆದ 2022ರ ವರ್ಷದಲ್ಲಿ ಭಾರತ ತಂಡದ ಪರ ಟಿ20 ಕ್ರಿಕೆಟ್‌ನಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದ ಸೂರ್ಯಕುಮಾರ್‌ ಯಾದವ್‌ ಅವರನ್ನು ಹಂಗಾಮಿ ನಾಯಕ ಹಾರ್ದಿಕ್‌ ಪಾಂಡ್ಯ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಹಲವು ವರ್ಷಗಳ ಹಿಂದೆಯೇ ನಾನು ಸೂರ್ಯಕುಮಾರ್‌ ಯಾದವ್‌ ಬಗ್ಗೆ ಮಾತನಾಡಿದ್ದೆ. ಅವರು ತಡವಾಗಿಯಾದರೂ ಭಾರತ ತಂಡಕ್ಕೆ ಬಂದಿದ್ದಾರೆ.

ಕಳೆದ 2022ರ ವರ್ಷದಲ್ಲಿ ಟಿ20 ಕ್ರಿಕೆಟ್‌ನಲ್ಲಿ ರನ್‌ ಹೊಳೆ ಹರಿಸುವ ಮೂಲಕ ಗಮನ ಸೆಳೆದಿರುವ ಸೂರ್ಯಕುಮಾರ್‌ ಯಾದವ್‌ ಅವರನ್ನು ಗುಣಗಾಣ ಮಾಡಿದ ಭಾರತ ತಂಡದ ಹಂಗಾಮಿ ನಾಯಕ ಹಾರ್ದಿಕ್‌ ಪಾಂಡ್ಯ, ಬಲಗೈ ಬ್ಯಾಟ್ಸ್‌ಮನ್‌ ಟೆಸ್ಟ್‌ ತಂಡದಲ್ಲಿಯೂ ಆಡಬೇಕೆಂದು ಹೇಳಿದ್ದಾರೆ.

ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಹಾಗೂ ಕೆ.ಎಲ್‌ ರಾಹುಲ್ ಸೇರಿದಂತೆ ಹಲವು ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಭಾರತ ತಂಡ ಇಂದಿನಿಂದ (ಮಂಗಳವಾರ) ಶ್ರೀಲಂಕಾ ವಿರುದ್ದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಕಾದಾಟ ನಡೆಸಲಿದೆ. ಈ ಸರಣಿಯಲ್ಲಿ ಭಾರತ ತಂಡವನ್ನು ಹಾರ್ದಿಕ್‌ ಪಾಂಡ್ಯ ಮುನ್ನಡೆಸಿದರೆ, ಸೂರ್ಯಕುಮಾರ್‌ ಯಾದವ್‌ ಉಪನಾಯಕನ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.

IND vs SL, Predicted and probable XI Team India set to make changes again  against sri lanka in super 4, Axar patel may gets the game टीम इंडिया  श्रीलंका के खिलाफ भी

ಮಂಗಳವಾರ ಸಂಜೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುವ ಮೊದಲನೇ ಟಿ20 ಪಂದ್ಯದ ನಿಮಿತ್ತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಾರ್ದಿಕ್‌ ಪಾಂಡ್ಯ ಹಲವು ಸಂಗತಿಗಳ ಬಗ್ಗೆ ಬೆಳಕು ಚೆಲ್ಲಿದರು. ಅದರಲ್ಲಿಯೂ ವಿಶೇಷವಾಗಿ ಸಹ ಆಟಗಾರ ಸೂರ್ಯಕುಮಾರ್‌ ಯಾದವ್‌ ಅವರನ್ನು ಮುಕ್ತಕಂಠದಿಂದ ಗುಣಗಾಣ ಮಾಡಿದರು.

"ಹಲವು ವರ್ಷಗಳ ಹಿಂದೆಯೇ ನಾನು ಸೂರ್ಯಕುಮಾರ್‌ ಯಾದವ್ ಬಗ್ಗೆ ಭವಿಷ್ಯ ನುಡಿದಿದ್ದೆ ಹಾಗೂ ತಡವಾಗಿದರೂ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಿದ್ದಾರೆ. 2020ರಲ್ಲಿಯೇ ಭಾರತ ತಂಡದ ಪರ ಸೂರ್ಯ ಆಡಬೇಕಾಗಿತ್ತು. ಆದರೆ, ಅನಿರೀಕ್ಷಿತವಾಗಿ ಅವರು ಆಡಲು ಸಾಧ್ಯವಾಗಿರಲಿಲ್ಲ. ದೇವರು ಆಶಿರ್ವಾದ ಅವರ ಮೇಲಿದೆ. ಭಾರತ ತಂಡದ ಪರ ತಡವಾಗಿ ಆಡಿದರೂ ಅಂದುಕೊಂಡಂತೆ ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ," ಎಂದರು.

"ಭಾರತ ತಂಡದ ಪರ ಇದೇ ರೀತಿ ಅವರು ರನ್‌ ಗಳಿಸಲಿ ಎಂದು ನಾನು ಆಶಿಸುತ್ತೇನೆ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರು ಇನ್ನಷ್ಟು ರನ್‌ಗಳನ್ನು ಗಳಿಸಲಿ. ನನ್ನ ಪ್ರಕಾರ ನಮ್ಮ ತಂಡದಲ್ಲಿ ಸೂರ್ಯಕುಮಾರ್‌ ಯಾದವ್ ಅದ್ಭುತ ಆಟಗಾರ," ಎಂದು ಹಾರ್ದಿಕ್‌ ಪಾಂಡ್ಯ ಗುಣಗಾಣ ಮಾಡಿದ್ದಾರೆ.

ಸೀಮಿತ ಓವರ್‌ಗಳ ಭಾರತ ತಂಡದಲ್ಲಿ ಈಗಾಗಲೇ ಅತ್ಯುತ್ತಮ ಪ್ರದರ್ಶನ ತೋರುವ ಮೂಲಕ ಗಮನ ಸೆಳೆದಿರುವ ಸೂರ್ಯಕುಮಾರ್‌ ಯಾದವ್‌, ಇನ್ನೂ ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವುದು ಬಾಕಿ ಇದೆ. ಅದರಂತೆ ಟೆಸ್ಟ್‌ ಕ್ರಿಕೆಟ್‌ನಲ್ಲಿಯೂ ಸೂರ್ಯ ಆಡಬೇಕೆಂದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

"ಸೀಮಿತ ಓವರ್‌ಗಳ ಕ್ರಿಕೆಟ್‌ ಮಾತ್ರವಲ್ಲದೆ ಭಾರತ ತಂಡದ ಎಲ್ಲಾ ಸ್ವರೂಪಕ್ಕೂ ಸೂರ್ಯಕುಮಾರ್‌ ಯಾದವ್‌ ಪ್ರಮುಖ ಆಟಗಾರರಾಗಿದ್ದಾರೆ. ಟೆಸ್ಟ್‌ ಕ್ರಿಕೆಟ್‌ಗೂ ಕೂಡ ಸೂರ್ಯಕುಮಾರ್‌ ಯಾದವ್‌ ಬರಬೇಕು. ಏಕೆಂದರೆ ಸನ್ನಿವೇಶ ಯಾವುದೇ ಇರಲಿ, ಅದನ್ನು ಬದಲಾವಣೆ ಮಾಡುವ ಸಾಮರ್ಥ್ಯ ಹಾರ್ದಿಕ್ ಪಾಂಡ್ಯ ಅವರಲ್ಲಿದೆ. ಸೆಲೆಕ್ಟರ್‌ಗಳು ಹಾಗೂ ಕೋಚ್‌ಗಳ ಈ ಬಗ್ಗೆ ಚಿಂತಿಸಲಿದ್ದಾರೆಂಬ ಬಗ್ಗೆ ನನಗೆ ಖಚಿತತೆ ಇದೆ," ಎಂದು ಹಾರ್ದಿಕ್‌ ಪಾಂಡ್ಯ ತಿಳಿಸಿದ್ದಾರೆ.

"ವೈಟ್‌ ಬಾಲ್‌ ಕ್ರಿಕೆಟ್‌ನಲ್ಲಿ ಸೂರ್ಯಕುಮಾರ್‌ ಯಾದವ್‌ ಎಂಥಾ ಆಟಗಾರ ಎಂಬುದು ಎಲ್ಲರಿಗೂ ಗೊತ್ತಿದೆ. ಈ ಬಗ್ಗೆ ಹೇಳಬೇಕಾದ ಅಗತ್ಯವಿಲ್ಲ. ಒಬ್ಬ ನಾಯಕನಾಗಿ, ಟೀಮ್‌ ಮ್ಯಾನೇಜ್‌ಮೆಂಟ್‌ಗೆ ಸೂರ್ಯ ಅತ್ಯಂತ ಪ್ರಮುಖ ಆಟಗಾರ," ಎಂದು ಭಾರತ ತಂಡದ ಹಂಗಾಮಿ ನಾಯಕ ಹೇಳಿದ್ದಾರೆ.

 

Ind Vs Sl Suryakumar Yadav Is Very Important For All The Formats And In Red Ball As Well ,Says Hardik Pandya.