ಬ್ರೇಕಿಂಗ್ ನ್ಯೂಸ್
06-01-23 01:16 pm Source: news18 ಕ್ರೀಡೆ
ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಭಾರತ ರೋಚಕ ಸೋಲನ್ನು ಅನುಭವಿಸಿತು. ಟೀಂ ಇಂಡಿಯಾ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 190 ರನ್ ಗಳಿಸುವ ಮೂಲಕ 16 ರನ್ಗಳಿಂದ ಸೋಲನ್ನಪ್ಪಿತು.

ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-1ರಿಂದ ಸಮಬಲ ಸಾಧಿಸಿದ್ದು, ಕೊನೆಯ ಪಂದ್ಯದ ಮೇಲೆ ನಿರೀಕ್ಷೆ ಹೆಚ್ಚಿದೆ. ಆದರೆ ಈ ಪಂದ್ಯದಲ್ಲಿ ಮುಖ್ಯವಾಗಿ ಅರ್ಷದೀಪ್ ಸಿಂಗ್ ಮೇಲೆ ಅಬೀಮಾನಿಗಳು ಬೇಸರಗೊಂಡರು.

T20 ಕ್ರಿಕೆಟ್‌ನಲ್ಲಿ, ಅರ್ಶ್‌ದೀಪ್ ಸಿಂಗ್ 41 ದಿನಗಳ ನಂತರ ಮರಳಿದರು. ಆದರೆ ಈ ಪಂದ್ಯವೇ ಅವರ ವೃತ್ತಿಜೀವನದ ಅತ್ಯಂತ ಕೆಟ್ಟ ಪಂದ್ಯವಾಯಿತು. ಅವರು ಈ ಪಂದ್ಯದಲ್ಲಿ ಅತ್ಯಂತ ಕೆಟ್ಟ ದಾಖಲೆಯನ್ನು ಬರೆದಿದ್ದಾರೆ.

ಅರ್ಷದೀಪ್ ಸಿಂಗ್ ಪಂದ್ಯದ ಎರಡನೇ ಓವರ್‌ನಲ್ಲಿ ಐದು ಎಸೆತಗಳನ್ನು ಸುರಕ್ಷಿತವಾಗಿ ಬೌಲ್ ಮಾಡಿದರು, ಆದರೆ ಅವರು ಕೊನೆಯ ಬೌಲ್ ಎಸೆಯಲು ಇನ್ನೂ ಹೆಚ್ಚನ 3 ಬೌಲ್ ಅನ್ನು ತೆಗೆದುಕೊಂಡರು. ಅಲ್ಲದೇ ಈ ಓವರ್‌ನಲ್ಲಿ ಬರೋಬ್ಬರಿ 9 ಎಸೆತ ಎಸೆದು 19 ರನ್ ನೀಡಿದರು.

ಅರ್ಷದೀಪ್ ಕೇವಲ 21 ಟಿ20 ಪಂದ್ಯಗಳನ್ನಾಡಿದ್ದು, 14 ನೋಬಾಲ್ ಎಸೆದಿದ್ದಾರೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 5 ನೋಬಾಲ್‌ಗಳನ್ನು ಎಸೆದ ನಂತರ, ಅವರು T20 ಸ್ವರೂಪದಲ್ಲಿ ವಿಶ್ವದ ಅತಿ ಹೆಚ್ಚು ನೋಬಾಲ್ ಎಸೆದ ಬೌಲರ್ ಎಂಬ ಬೇಡದ ದಾಖಲೆಯನ್ನು ಮಾಡಿದರು.

ಟಿ20ಯಲ್ಲಿ ಒಟ್ಟು 11 ನೋಬಾಲ್ ಎಸೆದಿರುವ ಪಾಕಿಸ್ತಾನದ ಹಸನ್ ಅಲಿ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು, ನೋ ಬಾಲ್‌ನಿಂದಾಗಿ ಭಾರತ ಭಾರೀ ನಷ್ಟ ಅನುಭವಿಸಿದೆ. ಒಟ್ಟು 7 ನೋಬಾಲ್ ಗಳನ್ನು ಟೀಂ ಇಂಡಿಯಾ ಎಸೆದಿತ್ತು. ಪ್ರವಾಸಿ ತಂಡದ ಬ್ಯಾಟ್ಸ್‌ಮನ್‌ಗಳು ಇದರ ಸಂಪೂರ್ಣ ಲಾಭ ಪಡೆದರು.

ಇನ್ನು, ಸರಣಿ 1-1ರಿಂದ ಸಮಬಲವಾಗಿದ್ದು, ನಾಳೆ ಅಂದರೆ ಡಿಸೆಂಬರ್ 7ರಂದು ಸರಣಿಯ ಕೊನೆಯ ಪಂದ್ಯ ನಡೆಯಲಿದೆ. ಈ ಪಂದ್ಯವನ್ನು ಗೆದ್ದ ತಂಡ ಸರಣಿಯನ್ನು ಗೆಲ್ಲಲಿದೆ.
IND vs SL 2nd T20i team india bowler arshdeep singh no balls in one over
16-09-26 10:40 pm
kannada news
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
17-09-26 09:41 am
HK News Staffer
Mangalore Jail, Fight, Crime: ಜೈಲಿನಲ್ಲಿ ಬೀಡಿ...
16-09-26 10:46 pm
ಪುತ್ತೂರಿಗೆ ಮೆಡಿಕಲ್ ಕಾಲೇಜು ಅನುಮೋದನೆ, ತುಳು ಭಾಷೆ...
16-09-26 09:56 pm
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ಡೆಡ್ ; ಮೂ...
16-09-26 08:49 pm
ಸೆ.18ರಂದು ಸಂಪುಟ ಸಭೆಗೆ ಗಣ್ಯರ ಆಗಮನ ; ಮಂಗಳೂರಿನ ಪ...
16-09-26 06:28 pm
17-09-26 12:35 pm
HK News Staffer
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm