ಇಂದು ಭಾರತ-ಲಂಕಾ 2ನೇ ಪಂದ್ಯ, ಹೇಗಿದೆ ಉಭಯ ತಂಡಗಳ ಪ್ಲೇಯಿಂಗ್​ 11?

12-01-23 01:42 pm       Source: news18   ಕ್ರೀಡೆ

ಕೋಲ್ಕತ್ತಾದ ಐತಿಹಾಸಿಕ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಇಂದು ನಡೆಯಲಿರುವ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಮತ್ತು ಶ್ರೀಲಂಕಾ (IND vs SL) ತಂಡಗಳು ಮುಖಾಮುಖಿಯಾಗಲಿವೆ.

ಈಡನ್ ಗಾರ್ಡನ್ಸ್ ಕ್ರೀಡಾಂಗಣದ ಬೌಂಡರಿ ಚಿಕ್ಕದಾಗಿದೆ, ಆದ್ದರಿಂದ ಪಿಚ್ ಬ್ಯಾಟ್ಸ್‌ಮನ್ ಸ್ನೇಹಿಯಾಗಿರುತ್ತದೆ. ಆಟ ಮುಂದುವರೆದಂತೆ, ವಿಕೆಟ್ ಸ್ಪಿನ್ನರ್‌ಗಳಿಗೆ ಸಹಾಯ ಮಾಡಲು ಪ್ರಾರಂಭಿಸುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ವೇಗದ ಬೌಲರ್‌ಗಳೂ ಇಲ್ಲಿ ಯಶಸ್ಸು ಕಾಣುತ್ತಿದ್ದಾರೆ. ಎರಡನೇ ಇನ್ನಿಂಗ್ಸ್‌ನಲ್ಲಿ ಇಬ್ಬನಿಯ ಪಾತ್ರ ಮಹತ್ವದ್ದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಯಾವ ತಂಡ ಟಾಸ್ ಗೆದ್ದರೂ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳಬಹುದು. ಅಲ್ಲದೇ ಇಂದು ಮತ್ತೊಂದು ದೊಡ್ಡ ಇನ್ನಿಂಗ್ಸ್​ ಬರುವ ಸಾಧ್ಯತೆ ಇದೆ.

ಈಡನ್ ದಾಖಲೆಗಳು ಹೇಗಿದೆ?:

ಇನ್ನು, ಕೋಲ್ಕತ್ತಾದಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ 5 ಏಕದಿನ ಪಂದ್ಯಗಳು ನಡೆದಿವೆ. ಇಲ್ಲಿಯವರೆಗೆ ಶ್ರೀಲಂಕಾದ ಮೇಲೆ ಭಾರತವು ಮೇಲುಗೈ ಸಾಧಿಸಿದೆ. ಈ ಪೈಕಿ ಟೀಂ ಇಂಡಿಯಾ 3 ಪಂದ್ಯಗಳನ್ನು ಗೆದ್ದಿದ್ದರೆ ಶ್ರೀಲಂಕಾ ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಒಂದು ಪಂದ್ಯ ರದ್ದಾಗಿತ್ತು. ಪ್ರವಾಸಿ ತಂಡವು 1996 ರಲ್ಲಿ ಕೊನೆಯ ಬಾರಿಗೆ ಕೋಲ್ಕತ್ತಾದಲ್ಲಿ ಭಾರತದ ವಿರುದ್ಧ ಗೆದ್ದಿತು. ಭಾರತ ಈಡನ್ ಗಾರ್ಡನ್ಸ್‌ನಲ್ಲಿ ಒಟ್ಟಾರೆ 21 ODI ಪಂದ್ಯಗಳನ್ನು ಆಡಿದೆ, ಅಲ್ಲಿ ಅದು 12 ಗೆದ್ದಿದೆ ಮತ್ತು 10 ಪಂದ್ಯಗಳಲ್ಲಿ ಸೋತಿದೆ.

India vs Sri Lanka 2nd ODI Predicted Playing 11: Washington Sundar may  REPLACE Yuzvendra Chahal, Dilshan Madushanka ruled OUT | Cricket News | Zee  News

ಪಂದ್ಯದ ವಿವರ:

ಭಾರತ ಮತ್ತು ಶ್ರೀಲಂಕಾ ನಡುವಿನ 3 ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯವು ನಾಳೆ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಲಂಕಾ ವಿರುದ್ಧದ ಎಲ್ಲಾ ಮೂರು ODI ಪಂದ್ಯಗಳು ಮಧ್ಯಾಹ್ನ 1:30 ISTಗೆ ಪ್ರಾರಂಭವಾಗುತ್ತವೆ. ಏಕದಿನ ಪಂದ್ಯಗಳನ್ನು ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ ಮತ್ತು ಲೈವ್ ಸ್ಟ್ರೀಮಿಂಗ್ ಡಿಸ್ನಿ+ ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ. 

Ind Vs Sl 2nd Odi Live Score: Sri Lanka Win Toss And Opt To Bat First;  Kuldeep Replaces Chahal In India'S Playing Xi

ಮತ್ತೆ ಅಬ್ಬರುಸುತ್ತಾರಾ ತ್ರಿಮೂರ್ತಿಗಳು?:

ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಅಗ್ರ 3 ಬ್ಯಾಟ್ಸ್‌ಮನ್‌ಗಳು ಅದ್ಭುತ ಪ್ರದರ್ಶನ ನೀಡಿದರು. ನಾಯಕ ರೋಹಿತ್ ಶರ್ಮಾ ಮತ್ತು ಓಪನರ್ ಶುಭಮನ್ ಗಿಲ್ ಅರ್ಧಶತಕ ಇನಿಂಗ್ಸ್ ಆಡಿದರೆ ವಿರಾಟ್ ಕೊಹ್ಲಿ ಬಿರುಸಿನ ಶತಕ ಗಳಿಸಿದರು. ಮೂವರೂ ಶ್ರೀಲಂಕಾ ಬೌಲರ್‌ಗಳ ವಿರುದ್ಧ ಭರ್ಜರಿ ಬ್ಯಾಟಿಂಗ್ ಮಾಡಿದರು. ಕೋಲ್ಕತ್ತಾ ಏಕದಿನ ಪಂದ್ಯಕ್ಕೂ ಮುನ್ನ ರೋಹಿತ್ ಫಾರ್ಮ್‌ಗೆ ಮರಳಿರುವುದು ಶುಭ ಸೂಚನೆ. ಎಂಟು ವರ್ಷಗಳ ಹಿಂದೆ ಇಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಉಭಯ ತಂಡಗಳು ಕೊನೆಯ ಬಾರಿಗೆ ಮುಖಾಮುಖಿಯಾದಾಗ ರೋಹಿತ್ 264 ರನ್ ಗಳಿಸಿದ್ದರು. ಅವರು 2020ರ ಜನವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ತಮ್ಮ ಕೊನೆಯ ODI ಶತಕವನ್ನು ಗಳಿಸಿದ್ದರು.

ಟೀಂ ಇಂಡಿಯಾ ಸಂಭಾವ್ಯ ಪ್ಲೇಯಿಂಗ್​ 11: ರೋಹಿತ್ ಶರ್ಮಾ(ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್/ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಉಮ್ರಾನ್ ಮಲಿಕ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಾಹಲ್.


ಶ್ರೀಲಂಕಾ ಸಂಭಾವ್ಯ ಪ್ಲೇಯಿಂಗ್​ 11: ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್(ನಾಯಕ), ಅವಿಷ್ಕ ಫೆರ್ನಾಂಡೋ, ಧನಂಜಯ ಡಿ ಸಿಲ್ವ, ಚರಿತ್ ಅಸಲಂಕ, ದಸುನ್ ಶನಕ(ನಾಯಕ), ವನಿಂದು ಹಸರಂಗ, ಚಾಮಿಕ ಕರುಣಾರತ್ನ, ದುನಿತ್ ವೆಲ್ಲಲಾಗೆ, ಕಸುನ್ ರಜಿತ, ದಿಲ್ಶಾನ್ ಮಧುಶಂಕ.

India vs Sri lanka 2nd odi team playing 11.