ವೇಲ್ಸ್ ವಿರುದ್ಧ ಗೆದ್ದರೂ ಟೀಂ ಇಂಡಿಯಾಗಿಲ್ಲ ನೇರ ಕ್ವಾರ್ಟರ್​​ ಫೈನಲ್​​ ಪ್ರವೇಶ

20-01-23 01:28 pm       Source: news18   ಕ್ರೀಡೆ

ಭಾರತ ತಂಡ ತನ್ನ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ 7 ಗೋಲ್ಸ್ ದಾಖಲಿಸಬೇಕಿತ್ತು. ಆದರೆ ನಮ್ಮ ತಂಡ 4 ಗೋಲ್​​​ ಮಾತ್ರ ಸಿಡಿಸಿದ ಕಾರಣ ನೇರವಾಗಿ ಕ್ವಾರ್ಟರ್ ಫೈನಲ್​ ಪ್ರವೇಶಿಸುವ ಅವಕಾಶ ಮಿಸ್ ಆಯ್ತು.

ಬರೋಬ್ಬರಿ ನಾಲ್ಕೂವರೆ ದಶಕಗಳ ನಂತರ ವಿಶ್ವಕಪ್‌ನಲ್ಲಿ ಪದಕ ಗೆಲ್ಲುವ ಗುರಿಯೊಂದಿಗೆ ಕಣಕ್ಕೆ ಇಳಿದಿರುವ ಭಾರತ ಹಾಕಿ ತಂಡ ಕ್ವಾರ್ಟರ್‌ ಫೈನಲ್​ ಪ್ರವೇಶ ಮಾಡಲು ಕ್ರಾಸ್‌ಓವರ್ ಪಂದ್ಯವನ್ನು ಆಡಬೇಕಾಗಿದೆ. ಗ್ರೂಪ್-ಡಿಯಲ್ಲಿ ಗುರುವಾರ ನಡೆದ ರೋಚಕ ಹಣಾಹಣಿಯ ಅಂತಿಮ ಲೀಗ್​ ಪಂದ್ಯದಲ್ಲಿ ಹರ್ಮನ್​​ಪ್ರಿತ್​ ಸಿಂಗ್​ ತಂಡ 4-2 ಸ್ಕೋರ್​ನೊಂದಿಗೆ ವೇಲ್ಸ್ ವಿರುದ್ಧ ಗೆಲುವು ಸಾಧಿಸಿದೆ. ಆದರೆ ಈ ಗೆಲುವಿನೊಂದಿಗೆ ಗ್ರೂಪ್​​-ಡಿನಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ.

ಗ್ರೂಪ್​​-ಡಿನಲ್ಲೇ ಇರುವ ಇಂಗ್ಲೆಂಡ್​ ಕೂಡ ಮೂರು ಪಂದ್ಯಗಳೊಂದಿಗೆ ಏಳು ಅಂಕ ಗಳಿಸಿ ಸಮಬಲ ಸಾಧಿಸಿತ್ತು. ಆದರೆ ಆದರೆ ಭಾರತ ತಂಡಕ್ಕಿಂತ (+4) ಉತ್ತಮ ಗೋಲ್​​ಗಳೊಂದಿಗೆ (+9) ವ್ಯತ್ಯಾಸದೊಂದಿಗೆ ಇಂಗ್ಲೆಂಡ್​ ಟಾಪರ್​ ಆಗಿ ಸ್ಥಾನ ಪಡೆದು ರೌಂಡ್​-8ಕ್ಕೆ ಪ್ರವೇಶಿಸಿದೆ.

 ಗ್ರೂಪ್-ಡಿಯಲ್ಲಿ ಗುರುವಾರ ನಡೆದ ರೋಚಕ ಹಣಾಹಣಿಯ ಅಂತಿಮ ಲೀಗ್​ ಪಂದ್ಯದಲ್ಲಿ ಹರ್ಮನ್​​ಪ್ರಿತ್​ ಸಿಂಗ್​ ತಂಡ 4-2 ಸ್ಕೋರ್​ನೊಂದಿಗೆ ವೇಲ್ಸ್ ವಿರುದ್ಧ ಗೆಲುವು ಸಾಧಿಸಿದೆ. ಆದರೆ ಈ ಗೆಲುವಿನೊಂದಿಗೆ ಗ್ರೂಪ್​​-ಡಿನಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ.

ಗ್ರೂಪ್​​-ಡಿನಲ್ಲೇ ಇರುವ ಇಂಗ್ಲೆಂಡ್​ ಕೂಡ ಮೂರು ಪಂದ್ಯಗಳೊಂದಿಗೆ ಏಳು ಅಂಕ ಗಳಿಸಿ ಸಮಬಲ ಸಾಧಿಸಿತ್ತು. ಆದರೆ ಆದರೆ ಭಾರತ ತಂಡಕ್ಕಿಂತ (+4) ಉತ್ತಮ ಗೋಲ್​​ಗಳೊಂದಿಗೆ (+9) ವ್ಯತ್ಯಾಸದೊಂದಿಗೆ ಇಂಗ್ಲೆಂಡ್​ ಟಾಪರ್​ ಆಗಿ ಸ್ಥಾನ ಪಡೆದು ರೌಂಡ್​-8ಕ್ಕೆ ಪ್ರವೇಶಿಸಿದೆ.

 ಗ್ರೂಪ್​​-ಡಿನಲ್ಲೇ ಇರುವ ಇಂಗ್ಲೆಂಡ್​ ಕೂಡ ಮೂರು ಪಂದ್ಯಗಳೊಂದಿಗೆ ಏಳು ಅಂಕ ಗಳಿಸಿ ಸಮಬಲ ಸಾಧಿಸಿತ್ತು. ಆದರೆ ಆದರೆ ಭಾರತ ತಂಡಕ್ಕಿಂತ (+4) ಉತ್ತಮ ಗೋಲ್​​ಗಳೊಂದಿಗೆ (+9) ವ್ಯತ್ಯಾಸದೊಂದಿಗೆ ಇಂಗ್ಲೆಂಡ್​ ಟಾಪರ್​ ಆಗಿ ಸ್ಥಾನ ಪಡೆದು ರೌಂಡ್​-8ಕ್ಕೆ ಪ್ರವೇಶಿಸಿದೆ.

ವೇಲ್ಸ್ ವಿರುದ್ಧದ ಪಂದ್ಯದಲ್ಲಿ ಭಾರತದ ಪರ ಶಂಶೇರ್ ಸಿಂಗ್ (21), ಆಕಾಶದೀಪ್ ಸಿಂಗ್ (32, 45) ಮತ್ತು ಹರ್ಮನ್‌ಪ್ರೀತ್ ಸಿಂಗ್ (59) ಗೋಲು ಗಳಿಸಿದ್ದರು. ವೇಲ್ಸ್ ಪರ ಗರೆಥ್ (42) ಮತ್ತು ಜಾಕೋಬ್ (44) ಗೋಲ್​​ ಗಳಿಸಿದ್ದರು.

 ಇಂಗ್ಲೆಂಡ್ ತಂಡ ತನ್ನ ಅಂತಿಮ ಲೀಗ್​ ಪಂದ್ಯದಲ್ಲಿ ಸ್ಪೇನ್ ವಿರುದ್ಧ​ 4-0 ಅಂತರದಲ್ಲಿ ಗೆಲುವು ಪಡೆದಿತ್ತು. ಇದರೊಂದಿಗೆ ಭಾರತ ತಂಡ ತನ್ನ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ 7 ಗೋಲ್ಸ್ ದಾಖಲಿಸಬೇಕಿತ್ತು. ಆದರೆ ನಮ್ಮ ತಂಡ 4 ಗೋಲ್​​​ ಮಾತ್ರ ಸಿಡಿಸಿದ ಕಾರಣ ನೇರವಾಗಿ ಕ್ವಾರ್ಟರ್ ಫೈನಲ್​ ಪ್ರವೇಶಿಸುವ ಅವಕಾಶ ಮಿಸ್ ಆಯ್ತು.

ಪಂದ್ಯದಲ್ಲಿ ಭಾರತ ತಂಡ 5 ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ವ್ಯರ್ಥ ಮಾಡಿತ್ತು. ಅಲ್ಲದೇ ಎರಡು ಗೋಲುಗಳನ್ನು ಎದುರಾಳಿ ತಂಡಕ್ಕೆ ಬಿಟ್ಟುಕೊಟ್ಟಿತ್ತು. ಪರಿಣಾಮ ತಂಡಕ್ಕೆ 4-2 ಅಂತರದಲ್ಲಿ ಗೆಲುವು ಪಡೆಯಿತು. ಉಳಿದಂತೆ ಜನವರಿ 22ರಂದು ನಡೆಯುವ ಕ್ರಾಸ್ ಓವರ್ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಅದೇ ದಿನ ಸ್ಪೇನ್ ಮಲೇಷ್ಯಾವನ್ನು ಎದುರಿಸಲಿದೆ.

Hockey World Cup 2023 India win but Fail to Qualify for  Quarterfinals from group Stage.