ಐಸಿಸಿ ವರ್ಷದ ಟೆಸ್ಟ್ ತಂಡ ಪ್ರಕಟ; ರಿಷಭ್​ ಪಂತ್​ಗೆ ಸ್ಥಾನ, ರೋಹಿತ್​-ಕೊಹ್ಲಿಗೆ ಮತ್ತೆ ಶಾಕ್​!

25-01-23 02:55 pm       Source: news18   ಕ್ರೀಡೆ

ಐಸಿಸಿ ಟೆಸ್ಟ್​ ಕ್ರಿಕೆಟ್​ನ ಸ್ವರೂಪದಲ್ಲಿ ವರ್ಷದ ತನ್ನ ಅತ್ಯುತ್ತಮ ತಂಡವನ್ನು ಘೋಷಿಸಿದೆ. ಈ ತಂಡಕ್ಕೆ ಇಂಗ್ಲೆಂಡ್​ನ ಬೆನ್​ ಸ್ಟೋಕ್ಸ್ ನಾಯಕರಾದರೆ, ಭಾರತದ ಪರ ಏಕೈಕ ಆಟಗಾರನಿಗೆ ಅವಕಾಶ ದೊರಕಿದೆ.

ಐಸಿಸಿ ಟೆಸ್ಟ್​ ಕ್ರಿಕೆಟ್​ನ ವರ್ಷದ ತನ್ನ ಅತ್ಯುತ್ತಮ ತಂಡವನ್ನು ಘೋಷಿಸಿತು. ಈ ತಂಡದಲ್ಲಿ ಒಬ್ಬ ಭಾರತೀಯನಿಗೆ ಮಾತ್ರ ಸ್ಥಾನ ನೀಡಲಾಗಿದೆ. ರೋಹಿತ್ ಶರ್ಮಾ ಅಥವಾ ವಿರಾಟ್ ಕೊಹ್ಲಿಗೆ ಸ್ಥಾನ ದೊರಕಿಲ್ಲ. ಬೆನ್ ಸ್ಟೋಕ್ಸ್ ಅವರನ್ನು ಐಸಿಸಿ ತಂಡದ ನಾಯಕರನ್ನಾಗಿ ಮಾಡಲಾಗಿದೆ. ಸ್ಟೋಕ್ಸ್ ನಾಯಕತ್ವದಲ್ಲಿ ಇಂಗ್ಲೆಂಡ್ ತಂಡ ಕಳೆದ ಒಂದು ವರ್ಷದಲ್ಲಿ 10 ಟೆಸ್ಟ್ ಪಂದ್ಯಗಳಲ್ಲಿ ಒಂಬತ್ತನ್ನು ಗೆದ್ದಿದೆ. ಬ್ರೆಂಡನ್ ಮೆಕಲಮ್ ಇಂಗ್ಲೆಂಡ್‌ನ ಟೆಸ್ಟ್ ಕೋಚ್ ಆದ ನಂತರ ಈ ತಂಡದ ಆಟದ ಶೈಲಿಯೇ ಬದಲಾಗಿದೆ.

ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಕೂಡ ವರ್ಷದ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಕಳೆದ ಒಂದು ವರ್ಷದಲ್ಲಿ ಈ ಮಾದರಿಯಲ್ಲಿ ಬಾಬರ್ ತಂಡದ ಪ್ರದರ್ಶನ ತೀರಾ ಕಳಪೆಯಾಗಿದೆ. ಇದರ ಹೊರತಾಗಿಯೂ, ವೈಯಕ್ತಿಕ ಪ್ರದರ್ಶನದ ಆಧಾರದ ಮೇಲೆ ಐಸಿಸಿ ಅವರಿಗೆ ಟೆಸ್ಟ್ ತಂಡದಲ್ಲಿ ಸ್ಥಾನ ನೀಡಿದೆ.

 ಐಸಿಸಿ ಟೆಸ್ಟ್​ ಕ್ರಿಕೆಟ್​ನ ವರ್ಷದ ತನ್ನ ಅತ್ಯುತ್ತಮ ತಂಡವನ್ನು ಘೋಷಿಸಿತು. ಈ ತಂಡದಲ್ಲಿ ಒಬ್ಬ ಭಾರತೀಯನಿಗೆ ಮಾತ್ರ ಸ್ಥಾನ ನೀಡಲಾಗಿದೆ. ರೋಹಿತ್ ಶರ್ಮಾ ಅಥವಾ ವಿರಾಟ್ ಕೊಹ್ಲಿಗೆ ಸ್ಥಾನ ದೊರಕಿಲ್ಲ.

ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಕೂಡ ವರ್ಷದ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಕಳೆದ ಒಂದು ವರ್ಷದಲ್ಲಿ ಈ ಮಾದರಿಯಲ್ಲಿ ಬಾಬರ್ ತಂಡದ ಪ್ರದರ್ಶನ ತೀರಾ ಕಳಪೆಯಾಗಿದೆ. ಇದರ ಹೊರತಾಗಿಯೂ, ವೈಯಕ್ತಿಕ ಪ್ರದರ್ಶನದ ಆಧಾರದ ಮೇಲೆ ಐಸಿಸಿ ಅವರಿಗೆ ಟೆಸ್ಟ್ ತಂಡದಲ್ಲಿ ಸ್ಥಾನ ನೀಡಿದೆ.

 ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಕೂಡ ವರ್ಷದ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಕಳೆದ ಒಂದು ವರ್ಷದಲ್ಲಿ ಈ ಮಾದರಿಯಲ್ಲಿ ಬಾಬರ್ ತಂಡದ ಪ್ರದರ್ಶನ ತೀರಾ ಕಳಪೆಯಾಗಿದೆ. ಇದರ ಹೊರತಾಗಿಯೂ, ವೈಯಕ್ತಿಕ ಪ್ರದರ್ಶನದ ಆಧಾರದ ಮೇಲೆ ಐಸಿಸಿ ಅವರಿಗೆ ಟೆಸ್ಟ್ ತಂಡದಲ್ಲಿ ಸ್ಥಾನ ನೀಡಿದೆ.

ಐಸಿಸಿ ವರ್ಷದ ಟೆಸ್ಟ್ ತಂಡದಲ್ಲಿ ಮೂವರು ಇಂಗ್ಲೆಂಡ್ ಕ್ರಿಕೆಟಿಗರನ್ನು ಸೇರಿಸಿಕೊಳ್ಳಲಾಗಿದೆ. ಬೆನ್ ಸ್ಟೋಕ್ಸ್ ಹೊರತುಪಡಿಸಿ, ಜಾನಿ ಬ್ಯಾಟರ್ ಬೈರ್‌ಸ್ಟೋವ್ ಮತ್ತು ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಅವರನ್ನು ಐಸಿಸಿ ಆಯ್ಕೆ ಮಾಡಿದೆ.ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾದ ತಲಾ ಒಬ್ಬ ಆಟಗಾರ ಈ ತಂಡದ ಭಾಗವಾಗಿದ್ದಾರೆ.  ವಿಂಡೀಸ್‌ನ ಕಾರ್ಲೋಸ್ ಬ್ರಾಥ್‌ವೈಟ್‌ಗೆ ಐಸಿಸಿ ಆರಂಭಿಕ ಆಟಗಾರನಾಗಿ ಉಸ್ಮಾನ್ ಖವಾಜಾಗೆ ಸ್ಥಾನ ನೀಡಿದೆ. ದಕ್ಷಿಣ ಆಫ್ರಿಕಾದ ಮಾರಕ ವೇಗದ ಬೌಲರ್ ಕಗಿಸೊ ರಬಾಡ ಕೂಡ ಐಸಿಸಿಯಿಂದ ಆಯ್ಕೆಯಾಗಿದ್ದಾರೆ.

 ಆಸ್ಟ್ರೇಲಿಯಾ ತಂಡದ ನಾಲ್ವರು ಕ್ರಿಕೆಟಿಗರು ವರ್ಷದ ಟೆಸ್ಟ್ ತಂಡದ ಭಾಗವಾಗಿದ್ದಾರೆ. ಉಸ್ಮಾನ್ ಖವಾಜಾಗೆ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಅವಕಾಶ ನೀಡಲಾಗಿದೆ. ಯಂಗ್ ಬ್ಯಾಟರ್ ಮಾರ್ನಸ್ ಲಬುಶಾನೆ ಅವರು ನಂಬರ್-3 ಸ್ಥಾನಕ್ಕಾಗಿ ತಂಡದ ಭಾಗವಾಗಲಿದ್ದಾರೆ. ಆಸ್ಟ್ರೇಲಿಯದ ನಾಯಕ ಪ್ಯಾಟ್ ಕಮಿನ್ಸ್‌ಗೆ ಈ ತಂಡದಲ್ಲಿ ವೇಗದ ಬೌಲರ್ ಆಗಿ ಅವಕಾಶ ನೀಡಲಾಗಿದೆ. ಅಲ್ಲದೇ ನಾಥನ್ ಲಿಯಾನ್ ಮಾತ್ರ ಈ ತಂಡದಲ್ಲಿ ಸ್ಪಿನ್ನರ್ ಆಗಿ ಆಯ್ಕೆಯಾಗಿದ್ದಾರೆ.

ಐಸಿಸಿ ವರ್ಷದ ಟೆಸ್ಟ್ ತಂಡದಲ್ಲಿ ಭಾರತದ ಏಕೈಕ ಕ್ರಿಕೆಟಿಗನಾಗಿ ರಿಷಭ್​ ಪಂತ್‌ಗೆ ಅವಕಾಶ ನೀಡಲಾಗಿದೆ. ODIಗಳು ಮತ್ತು T20 ಗಳಲ್ಲಿ ಪಂತ್ ಅವರ ಪ್ರದರ್ಶನವು ನಿರಂತರವಾಗಿ ಕುಸಿಯುತ್ತಿರಬಹುದು, ಆದರೆ ಟೆಸ್ಟ್​ ಸ್ವರೂಪಕ್ಕೆ ಬಂದಾಗ, ಅವರ ಆಟವು ಅದ್ಭುತವಾಗಿದೆ. ವಿಕೆಟ್ ಕೀಪರ್ ಬ್ಯಾಟರ್ ಆಗಿ ಅವರಿಗೆ ಈ ತಂಡದಲ್ಲಿ ಸ್ಥಾನ ನೀಡಲಾಗಿದೆ. 2022 ರ ಕೊನೆಯಲ್ಲಿ, ಅವರು ದೆಹಲಿಯಿಂದ ರೂರ್ಕಿಯಲ್ಲಿರುವ ತಮ್ಮ ಮನೆಗೆ ಹೋಗುತ್ತಿದ್ದಾಗ ರಸ್ತೆ ಅಪಘಾತಕ್ಕೆ ಒಳಗಾಗಿದ್ದರು. ಸದ್ಯ ಮುಂಬೈನ ಕೋಕಿಲಾ ಬೆನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಗಾಯದಿಂದಾಗಿ ಅವರು ಮುಂದಿನ ತಿಂಗಳು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿರುವ ಗವಾಸ್ಕರ್ ಬಾರ್ಡರ್ ಟ್ರೋಫಿಯಿಂದ ಹೊರಗುಳಿಯಲಿದ್ದಾರೆ.

ICC ಟೆಸ್ಟ್​ ತಂಡ 2022: ಉಸ್ಮಾನ್ ಖವಾಜಾ, ಕ್ರೈಗ್ ಬ್ರಾಥ್‌ವೈಟ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಬಾಬರ್ ಅಜಮ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್ (ನಾಯಕ), ರಿಷಭ್ ಪಂತ್ (WK), ಪ್ಯಾಟ್ ಕಮಿನ್ಸ್, ಕಗಿಸೊ ರಬಾಡ, ನಾಥನ್ ಲಿಯಾನ್, ಜೇಮ್ಸ್ ಆಂಡರ್ಸನ್.

ICC Test Team 2022 Rishabh Pant only Indian ICC test team on the Year.