ಭಾರತದ ಪರ ಟೆಸ್ಟ್ ಕ್ರಿಕೆಟ್‌ ಆಡಲು ಉತ್ಸುಕನಾಗಿದ್ದೇನೆಂದ ಸೂರ್ಯಕುಮಾರ್‌!

01-02-23 01:33 pm       Source: Vijayakarnataka   ಕ್ರೀಡೆ

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ 360 ಡಿಗ್ರಿ ಬ್ಯಾಟಿಂಗ್‌ ಮೂಲಕ ಭಾರತ ತಂಡದ ಸೂರ್ಯಕುಮಾರ್ ಯಾದವ್ ಗಮನ ಸೆಳೆದಿದ್ದಾರೆ. ಆ ಮೂಲಕ ಐಸಿಸಿ ಟಿ20 ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲ ನಂ.1 ಸ್ಥಾನವನ್ನು ಅಲಂಕರಿಸಿದ್ದಾರೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಬುಧವಾರ (ಫೆ.1) ನ್ಯೂಜಿಲೆಂಡ್ ವಿರುದ್ಧ ಮೂರನೇ ಟಿ20 ಪಂದ್ಯದಲ್ಲಿ ಭಾರತ ಸೆಣಸಲಿದೆ.

ಆಸ್ಟ್ರೇಲಿಯಾ ವಿರುದ್ಧ ಮುಂಬರುವ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಆಡಲು ಉತ್ಸುಕನಾಗಿದ್ದೇನೆ. ಆದರೆ, ಇದಕ್ಕೂ ಮುನ್ನ ನ್ಯೂಜಿಲೆಂಡ್ ವಿರುದ್ಧ ಮೂರನೇ ಪಂದ್ಯ ಗೆದ್ದು ಏಕದಿನ ಸರಣಿ ಮುಡಿಗೇರಿಸಿಕೊಳ್ಳಲು ಎದುರು ನೋಡುತ್ತಿದ್ದೇನೆಂದು ಭಾರತ ತಂಡ ಸೂರ್ಯಕುಮಾರ್‌ ಯಾದವ್‌ ಹೇಳಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ರಾಂಚಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ 21 ರನ್ ಗಳಿಂದ ಸೋಲು ಕಂಡಿದ್ದ ಭಾರತ ತಂಡ, ಲಖನೌದ ಪಂದ್ಯದಲ್ಲಿ 6 ವಿಕೆಟ್‌ಗಳಿಂದ ಗೆದ್ದು ಪ್ರವಾಸಿಗರಿಗೆ ತಿರುಗೇಟು ನೀಡಿತ್ತು. ಈ ಪಂದ್ಯದಲ್ಲಿ ಅಜೇಯ 26 ರನ್‌ ಗಳಿಸಿದ್ದ ಸೂರ್ಯಕುಮಾರ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

ನ್ಯೂಜಿಲೆಂಡ್ ಸರಣಿಯ ನಂತರ ಭಾರತ ತಂಡ, ಆಸ್ಟ್ರೇಲಿಯಾ ವಿರುದ್ಧ 4 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಕಾದಾಟ ನಡೆಸಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಸತತ ಎರಡನೇ ಬಾರಿ ಫೈನಲ್‌ಗೆ ಪ್ರವೇಶಿಸಲು ಭಾರತ ತಂಡಕ್ಕೆ ಈ ಟೆಸ್ಟ್‌ ಸರಣಿ ನಿರ್ಣಾಯಕವಾಗಿದೆ.

Border Gavaskar Trophy: Shubman Gill, Suryakumar Yadav to Compete for  Shreyas Iyer's Slot in Middle Order

ಈ ಟೆಸ್ಟ್‌ ಸರಣಿಯ ಆರಂಭಿಕ ಎರಡು ಪಂದ್ಯಗಳಿಗೆ ಸೂರ್ಯಕುಮಾರ್ ಯಾದವ್ ಅವರಿಗೆ ಅವಕಾಶ ಕಲ್ಪಿಸಲಾಗಿದೆ. ರೆಡ್ ಬಾಲ್ (ಟೆಸ್ಟ್) ಚಾಲೆಂಜ್ ಕುರಿತು ಕೇಳಿದ ಪ್ರಶ್ನೆಗೆ ಸೂರ್ಯಕುಮಾರ್ ಯಾದವ್ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ್ದಾರೆ.

"ಪ್ರತಿಯೊಬ್ಬ ಆಟಗಾರ ಪ್ರಥಮ ದರ್ಜೆ ಕ್ರಿಕೆಟ್ ಆಡುವ ಸಮಯದಲ್ಲಿ ಮುಂದೊಂದು ದಿನ ರಾಷ್ಟ್ರೀಯ ತಂಡದ ಪರ ಟೆಸ್ಟ್ ಕ್ರಿಕೆಟ್‌ ಆಡಬೇಕೆಂಬ ಬಯಕೆ ಹೊಂದಿರುತ್ತಾರೆ. ನನಗೂ ಕೂಡ ಮುಂಬೈ ಪರ ರೆಡ್ ಬಾಲ್ ಕ್ರಿಕೆಟ್‌ ಆಡಿದ ಅಪಾರ ಅನುಭವ ಇದೆ. ಈಗ ರಾಷ್ಟ್ರೀಯ ತಂಡದ ಪರ ಟೆಸ್ಟ್ ಕ್ರಿಕೆಟ್‌ ಆಡಲು ಉತ್ಸುಕನಾಗಿದ್ದೇನೆ. ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ಗೆ ಅರ್ಹತೆ ಪಡೆಯಲು ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್‌ ಸರಣಿ ನಮಗೆ ನಿರ್ಣಾಯಕವಾಗಿದೆ ಹಾಗೂ ತಂಡದ ಗೆಲುವಿಗೆ ಶ್ರಮಿಸುತ್ತೇನೆ," ಎಂದು ಸೂರ್ಯಕುಮಾರ್ ಯಾದವ್ ತಿಳಿಸಿದ್ದಾರೆ.

Ind Vs Nz Washington Sundar, You Beauty. What A Catch Fans Louds Allrounder  For Beautiful Catch In 1st T20i Against New Zealand | 'ವಾಷಿಂಗ್ಟನ್‌, ನೀನು  ಸುಂದರ ಕಣಯ್ಯ!'-ಸ್ಟನ್ನಿಂಗ್ ಕ್ಯಾಚ್‌ಗೆ ಫ್ಯಾನ್ಸ್‌ ...

"ನಾವು ಈಗ ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ ಆಡುತ್ತಿದ್ದು, ಸರಣಿ ಗೆಲ್ಲಲು ಬುಧುವಾರ (ಫೆ.1) ದಂದು ನಡೆಯುವ ಅಂತಿಮ ಪಂದ್ಯವು ನಮಗೆ ನಿರ್ಣಾಯಕವಾಗಿದೆ. ಈ ಪಂದ್ಯದ ಕಡೆಗೆ ಚಿಂತಿಸುತ್ತಿದ್ದೇವೆ. ಹಾಗಾಗಿ, ನನಗೆ ಸದ್ಯ ಟೆಸ್ಟ್ ಸರಣಿ ಚಿಂತೆ ಇಲ್ಲ. ಈ ಬಗ್ಗೆ ಚಿಂತಿಸಲು ಇನ್ನೂ ಸಾಕಷ್ಟು ಸಮಯವಿದೆ," ಎಂದು ಹೇಳಿದ್ದಾರೆ.

ಕಳೆದ ಎರಡು ಪಂದ್ಯಗಳಲ್ಲಿ ಬೆಂಚ್‌ ಕಾದಿದ್ದ ಪೃಥ್ವಿ ಶಾಗೆ ಮೂರನೇ ಪಂದ್ಯದಲ್ಲಿ ಅವಕಾಶದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ಪೃಥ್ವಿ ಶಾ ಅವರಿಗೆ ಮೂರನೇ ಪಂದ್ಯದಲ್ಲಿ ಅವಕಾಶ ನೀಡುವ ಬಗ್ಗೆ ನನಗೆ ಗೊತ್ತಿಲ್ಲ. ಈ ನಿರ್ಧಾರ ನಾಯಕ ಹಾರ್ದಿಕ್‌ ಪಾಂಡ್ಯ ಹಾಗೂ ಟೀಮ್‌ ಮ್ಯಾನೇಜ್‌ಮೆಂಟ್‌ಗೆ ಬಿಟ್ಟಿದ್ದು," ಎಂದರು.

ಸೂರ್ಯಕುಮಾರ್ ಯಾದವ್ ಅವರು ಇಲ್ಲಿಯವರೆಗೂ 79 ಪ್ರಥಮ ದರ್ಜೆ ಪಂದ್ಯಗಳಾಡಿದ್ದು, 44.75ರ ಸರಾಸರಿಯಲ್ಲಿ 14 ಶತಕಗಳು ಹಾಗೂ 28 ಅರ್ಧಶತಕಗಳು ಸೇರಿದಂತೆ 5,549 ರನ್ ಸಿಡಿಸಿದ್ದಾರೆ.

Border Gavaskar Trophy Everyone Wants To Play Test Cricket, We All Know How Exciting The Series Would Be,Says Suryakumar Yadav.