ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಟಿ20 ವಿಶ್ವಕಪ್​ ಹೀರೋ!

03-02-23 02:57 pm       Source: news18   ಕ್ರೀಡೆ

ಟಿ20 ವಿಶ್ವಕಪ್ 2007ರ ಫೈನಲ್‌ಗೂ ಮುನ್ನ ಜೋಗಿಂದರ್ ಶರ್ಮಾ (Joginder Sharma) ಅವರಿಗೆ ಹೆಚ್ಚಿನ ಮನ್ನಣೆ ಇರಲಿಲ್ಲ. ವಿಶ್ವಕಪ್‌ನ ಅಂತಿಮ ಪಂದ್ಯ ಭಾರತ ಮತ್ತು ಪಾಕಿಸ್ತಾನ (IND vs PAK) ನಡುವೆ ನಡೆಯಿತು.

39 ವರ್ಷದ ಜೋಗಿಂದರ್ ಶರ್ಮಾ ಇದೀಗ ತಮ್ಮ ಕ್ರಿಕೆಟ್​ ವೃತ್ತಿ ಜೀವನಕ್ಕೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದಾರೆ. ಟ್ವೀಟ್​ ಮೂಲಕ ಎಲ್ಲರಿಗೂ ಧನ್ಯವಾದ ತಿಳಿಸುವ ಮೂಲಕ ಶರ್ಮಾ ಅವರು ಕ್ರಿಕೆಟ್​ಗೆ ಗುಡ್​ ಬೈ ಹೇಳಿದ್ದಾರೆ. ಅವರು, ಈವರೆಗೆ ಅಂತರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಕೇವಲ 4 ಪಂದ್ಯಗಳನ್ನು ಆಡಿದ್ದಾರೆ. ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯದ ನಂತರ ಅವರು ಟೀಂ ಇಂಡಿಯಾ ಪರ ಯಾವುದೇ ಪಂದ್ಯವನ್ನು ಆಡಿರಲಿಲ್ಲ.

ಜೋಗಿಂದರ್​ ವೃತ್ತಿ ಜೀವನ:

ಜೋಗಿಂದರ್ ಶರ್ಮಾ ಅವರು ತಮ್ಮ ಅಂತಿಮ ಪಂದ್ಯವನ್ನು 2007ರಲ್ಲಿ, ಪಾಕಿಸ್ತಾನ ವಿರುದ್ಧ ಆಡಿದ್ದಾರೆ. ಆ ಪಂದ್ಯದಲ್ಲಿ ಜೋಗಿಂದರ್ ಶರ್ಮಾ 20ನೇ ಓವರ್ ಅನ್ನು ಉತ್ತಮ ರೀತಿಯಲ್ಲಿ ಆರಂಭಿಸಲು ಸಾಧ್ಯವಾಗದಿದ್ದರೂ ಮೊದಲ 2 ಎಸೆತಗಳಲ್ಲಿ 7 ರನ್ ನೀಡಿದರು . ಮೊದಲ ಚೆಂಡು ವೈಡ್ ಆಗಿತ್ತು. ಮುಂದಿನ ಎಸೆತದಲ್ಲಿ ಮಿಸ್ಬಾ ಉಲ್ ಹಕ್ ರನ್ ಗಳಿಸಲಿಲ್ಲ. ಎರಡನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದರು.

Joginder Sharma Announces Retirement | Joginder Sharma Retires All forms of  cricket | DSP Joginder Sharma Retires All forms of cricket

ಈ ಮೂಲಕ ಮೊದಲ 2 ಎಸೆತಗಳಲ್ಲಿ 7 ರನ್‌ಗಳು ಬಂದವು. ಆಗ ಪಾಕಿಸ್ತಾನ ಗೆಲುವಿಗೆ 4 ಎಸೆತಗಳಲ್ಲಿ 6 ರನ್‌ಗಳ ಅಗತ್ಯವಿತ್ತು. ಮಿಸ್ಬಾ ಮೂರನೇ ಎಸೆತದಲ್ಲಿ ಸ್ಕೂಪ್ ಶಾಟ್ ಆಡಲು ಹೋದರು, ಆದರೆ ಅವರು ಔಟ್ ಆದರು. ಅವರ ಸ್ಮರಣೀಯ ಕ್ಯಾಚ್ ಅನ್ನು ಶ್ರೀಶಾಂತ್ ಶಾರ್ಟ್ ಫೈನ್ ಲೆಗ್‌ನಲ್ಲಿ ಹಿಡಿದರು. ಈ ಪಂದ್ಯದಲ್ಲಿ ಭಾರತದ 157 ರನ್‌ಗಳಿಗೆ ಉತ್ತರವಾಗಿ ಪಾಕಿಸ್ತಾನ ತಂಡ 152 ರನ್ ಗಳಿಸುವ ಮೂಲಕ ಆಲೌಟ್ ಆಯಿತು.

ಜಂಗಿಂದರ್ ಶರ್ಮಾ ಭಾರತ ಪರ 4 ODI ಮತ್ತು 4 T20 ಪಂದ್ಯಗಳನ್ನು ಆಡಿದ್ದಾರೆ. ಒಂದು ವಿಕೆಟ್ ಪಡೆದಿದ್ದಲ್ಲದೆ, ಅವರು ಏಕದಿನದಲ್ಲಿ 35 ರನ್ ಗಳಿಸಿದ್ದಾರೆ. ಅದೇ ಸಮಯದಲ್ಲಿ, ಅವರು ಟಿ20ಯಲ್ಲಿ 4 ವಿಕೆಟ್​ಗಳನ್ನು ಪಡೆದಿದ್ದಾರೆ. ಆದರೆ ಅವರಿಗೆ ಬ್ಯಾಟಿಂಗ್ ಅವಕಾಶ ಸಿಗಲಿಲ್ಲ. ಅವರ ಪ್ರಥಮ ದರ್ಜೆ ವೃತ್ತಿಜೀವನದಲ್ಲಿ 2800ಕ್ಕೂ ಹೆಚ್ಚು ರನ್ ಗಳಿಸಿದ್ದಲ್ಲದೆ, ಅವರು 297 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದಲ್ಲದೇ ಜೋಗಿಂದರ್ ಶರ್ಮಾ 16 ಐಪಿಎಲ್ ಪಂದ್ಯಗಳನ್ನೂ ಆಡಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿದಿದ್ದರು.

Joginder Sharma Announced Retired from International and Domestic Cricket.