ಬ್ರೇಕಿಂಗ್ ನ್ಯೂಸ್
06-02-23 02:54 pm Source: news18 ಕ್ರೀಡೆ
ಪಾಕಿಸ್ತಾನ ಕ್ರಿಕೆಟ್ ಬಗ್ಗೆ ಮಾತನಾಡುವಾಗ, ಇಲ್ಲಿ ಯಾವಾಗಲೂ ಒಂದಲ್ಲ ಒಂದು ವಿವಾದ ನಡೆಯುತ್ತಲೇ ಇರುತ್ತದೆ. ಇಲ್ಲಿಯವರೆಗೆ ಕೇವಲ 2 ಹಿಂದೂ ಕ್ರಿಕೆಟಿಗರಿಗೆ ಮಾತ್ರ ಪಾಕ್ ತಂಡದ ಪರ ಆಟವಾಡಿದ್ದಾರೆ. ಅಲ್ಲದೇ ಈ ಆಟಗಾರರು ಪಾಕ್ ತಂಡದ ಸ್ಟಾರ್ ಪ್ಲೇಯರ್ಸ್ಗಳಾಗಿದ್ದರು. ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಅನಿಲ್ ದಲ್ಪತ್ ಪಾಕಿಸ್ತಾನದಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ಮೊದಲ ಹಿಂದೂ ಕ್ರಿಕೆಟಿಗ. ಅವರು ಮಾರ್ಚ್ 1984ರಲ್ಲಿ ತಮ್ಮ ಅಂತರರಾಷ್ಟ್ರೀಯ ಚೊಚ್ಚಲ ಪಂದ್ಯವಾಡಿದರು. ಅವರು 9 ಟೆಸ್ಟ್‌ಗಳಲ್ಲಿ 167 ರನ್ ಮತ್ತು 15 ODIಗಳಲ್ಲಿ 87 ರನ್ ಗಳಿಸಿದ್ದಾರೆ.
59 ವರ್ಷ ವಯಸ್ಸಿನ ಅನಿಲ್ ದಲ್ಪತ್ ಪ್ರಥಮ ದರ್ಜೆ ಕ್ರಿಕೆಟ್‌ನ 137 ಪಂದ್ಯಗಳಲ್ಲಿ 9 ಅರ್ಧ ಶತಕಗಳ ಸಹಾಯದಿಂದ 2556 ರನ್ ಗಳಿಸಿದ್ದಾರೆ. ಆಟದಿಂದ ನಿವೃತ್ತರಾದ ನಂತರ ಅವರು ಪಾಕಿಸ್ತಾನವನ್ನು ತೊರೆದು ಕೆನಡಾದಲ್ಲಿ ನೆಲೆಸಿದ್ದಾರೆ. ಅಲ್ಲಿ ತಮ್ಮ ವ್ಯಾಪಾರ ನಡೆಸುತ್ತಿದ್ದಾರೆ. ನಂತರ ಅವರ ಸಹೋದರ ಕೂಡ ಪಾಕಿಸ್ತಾನವನ್ನು ಪ್ರತಿನಿಧಿಸಿದ್ದರು. ಅನಿಲ್ ದಲ್ಪತ್ ಅವರ ಸೋದರ ಸಂಬಂಧಿ ಡ್ಯಾನಿಶ್ ಕನೇರಿಯಾ ಅವರು ಪಾಕಿಸ್ತಾನಕ್ಕಾಗಿ ಕ್ರಿಕೆಟ್ ಆಡಿದ್ದಾರೆ. ಕನೇರಿಯಾ, 42, ಡಿಸೆಂಬರ್ 2000 ರಲ್ಲಿ ಪಾದಾರ್ಪಣೆ ಮಾಡಿದರು. ಈ ಲೆಗ್ ಸ್ಪಿನ್ನರ್ 61 ಟೆಸ್ಟ್‌ಗಳಲ್ಲಿ 261 ವಿಕೆಟ್‌ಗಳನ್ನು ಪಡೆದಿದ್ದಾರೆ. ಅದೇ ಸಮಯದಲ್ಲಿ, ಅವರು 18 ODIಗಳಲ್ಲಿ 15 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಪ್ರಥಮ ದರ್ಜೆ ಕ್ರಿಕೆಟ್ ಬಗ್ಗೆ ಮಾತನಾಡುತ್ತಾ, ಅವರು 1000ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದಿದ್ದಾರೆ. ಆದಾಗ್ಯೂ, ಡ್ಯಾನಿಶ್ ಕನೇರಿಯಾ ವಿವಾದಗಳ ಮೂಲಕ ಹೆಚ್ಚು ಸುದ್ದಿಯಾಗಿದ್ದರು. ಅವರು 2004 ಮತ್ತು 2010ರ ನಡುವೆ ಇಂಗ್ಲಿಷ್ ಕೌಂಟಿ ತಂಡಕ್ಕಾಗಿ ಆಡಿದ್ದಾರೆ. ಆದರೆ ಫಿಕ್ಸಿಂಗ್ ಆರೋಪದಿಂದಾಗಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯಿಂದ ಆಜೀವ ನಿಷೇಧ ಹೇರಲಾಗಿತ್ತು.
ನಂತರ ಡ್ಯಾನಿಶ್ ಕನೇರಿಯಾ ಅವರು ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದರು. ಅಷ್ಟೇ ಅಲ್ಲ, ಮಾಜಿ ನಾಯಕ ಹಾಗೂ ಸಹ ಕ್ರಿಕೆಟಿಗ ಶಾಹಿದ್ ಅಫ್ರಿದಿ ಮೇಲೆ ದೊಡ್ಡ ಆರೋಪ ಸಹ ಮಾಡಿದ್ದರು. ಅಫ್ರಿದಿ ಮತಾಂತರಗೊಳ್ಳುವಂತೆ ಕೇಳಿಕೊಂಡಿದ್ದರು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು. ಡ್ಯಾನಿಶ್ ಕನೇರಿಯಾ ಅವರು ಹಿಂದೂ ಆಗಿರುವುದರಿಂದ ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು ಎಂದು ಹಲವು ಬಾರಿ ಹೇಳಿದ್ದಾರೆ. ಶಾಹಿದ್ ಅಫ್ರಿದಿ ಮತಾಂತರದ ವಿಷಯದಲ್ಲಿ ಕೋಪಗೊಂಡಿದ್ದರು ಎಂದು ಹೇಳಿಕೊಂಡಿದ್ದರು.
Danish Kaneria and Anil Dalpat Hindu Cricketers play in Pakistan Cricket team.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 11:02 pm
HK News Desk
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm