IND vs WI 2nd Test: 2ನೇ ಟೆಸ್ಟ್​ನಲ್ಲಿಯೂ ಇಬ್ಬರಿಗೆ ನಿರಾಸೆ! ಇಲ್ಲಿದೆ ಟೀಂ ಇಂಡಿಯಾ ಪ್ಲೇಯಿಂಗ್​ 11

20-07-23 03:58 pm       Source: News18 Kannada   ಕ್ರೀಡೆ

ವೇಗಿಗಳಾಗಿ ಮೊಹಮ್ಮದ್ ಸಿರಾಜ್, ಉನದ್ಕತ್ ಮತ್ತು ಶಾರ್ದೂಲ್​ ಠಾಕೂರ್ ಇರಲಿದ್ದಾರೆ. ಅಶ್ವಿನ್ ಮತ್ತು ಜಡೇಜಾ ಸ್ಪಿನ್ನರ್‌ಗಳಾಗಲಿದ್ದಾರೆ. ಆ ಮೂಲಕ ರುತುರಾಜ್ ಗಾಯಕ್ವಾಡ್ ಹಾಗೂ ಮುಖೇಶ್ ಕುಮಾರ್ ಬೆಂಚ್​ ಕಾಯಬೇಕಾಗಬಹುದು.

ವೇಗಿಗಳಾಗಿ ಮೊಹಮ್ಮದ್ ಸಿರಾಜ್, ಉನದ್ಕತ್ ಮತ್ತು ಶಾರ್ದೂಲ್​ ಠಾಕೂರ್ ಇರಲಿದ್ದಾರೆ. ಅಶ್ವಿನ್ ಮತ್ತು ಜಡೇಜಾ ಸ್ಪಿನ್ನರ್‌ಗಳಾಗಲಿದ್ದಾರೆ. ಆ ಮೂಲಕ ರುತುರಾಜ್ ಗಾಯಕ್ವಾಡ್ ಹಾಗೂ ಮುಖೇಶ್ ಕುಮಾರ್ ಬೆಂಚ್​ ಕಾಯಬೇಕಾಗಬಹುದು.

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಎಲ್ಲಾ ವಿಭಾಗಗಳಲ್ಲೂ ಮೇಲುಗೈ ಸಾಧಿಸಿತ್ತು. ಕೇವಲ ಮೂರೇ ದಿನಗಳಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಎರಡು ಬಾರಿ ಆಲೌಟ್ ಮಾಡಿ ಸೂಪರ್ ಗೆಲುವು ಸಾಧಿಸಿತ್ತು.

Team India To Make 2 Changes? Predicting Rohit Sharma & Co.'s Likely Playing  XI For 2nd Test Against West Indies | Cricket News, Times Now

ಐದು ದಿನಗಳ ವಿರಾಮದ ನಂತರ ಟೆಸ್ಟ್ ಸರಣಿಯ ಎರಡನೇ ಪಂದ್ಯಕ್ಕೆ ಸಿದ್ಧವಾಗಿದೆ. ಎರಡನೇ ಟೆಸ್ಟ್ ಪಂದ್ಯ ಪೋರ್ಟ್ ಆಫ್ ಸ್ಪೇನ್‌ನಲ್ಲಿ ನಡೆಯಲಿದೆ. ಈ ಪಂದ್ಯ ಜುಲೈ 20 ರಿಂದ 24ರ ವರೆಗೆ ನಡೆಯಲಿದೆ.

ಈ ಪಂದ್ಯ ಗೆದ್ದರೂ ಡ್ರಾ ಮಾಡಿಕೊಂಡರೂ ಭಾರತ ಸರಣಿ ಗೆಲುವು ದಾಖಲಿಸಿದೆ. ಮೊದಲ ಟೆಸ್ಟ್‌ನಲ್ಲಿ ಸ್ಪಿನ್ ಟ್ರ್ಯಾಕ್ ಮಾಡುವ ಮೂಲಕ ಬೆಲೆ ತೆರಬೇಕಾದ ವೆಸ್ಟ್ ಇಂಡೀಸ್ ಎರಡನೇ ಟೆಸ್ಟ್‌ಗೆ ಬೌನ್ಸಿ ಪಿಚ್ ಅನ್ನು ಸಿದ್ಧಪಡಿಸಿದೆ ಎಂದು ವರದಿಯಾಗಿದೆ.

Another debut on cards? A look at India's likely playing XI for 2nd Test vs  WI | Cricket - Hindustan Times

ಈ ಪಂದ್ಯದಲ್ಲಿ ಭಾರತ ಯಾವುದೇ ಬದಲಾವಣೆ ಇಲ್ಲದೆ ಕಣಕ್ಕೆ ಇಳಿಯಲಿದೆ. ಮೊದಲ ಟೆಸ್ಟ್‌ನಲ್ಲಿ ಆಡಿದ ತಂಡವನ್ನೇ ಭಾರತ ಆಡುವ ಸಾಧ್ಯತೆ ಇದೆ. ಇದನ್ನು ನಾಯಕ ರೋಹಿತ್ ಶರ್ಮಾ ಪರೋಕ್ಷವಾಗಿ ಸ್ಪಷ್ಟಪಡಿಸಿದ್ದಾರೆ.

ಎರಡನೇ ಟೆಸ್ಟ್‌ನಲ್ಲಿ ಯಾವುದೇ ಪ್ರಮುಖ ಬದಲಾವಣೆಗಳಿಲ್ಲ ಎಂದು ಅವರು ಹೇಳಿದರು. ಆದರೆ ಪಿಚ್ ನೋಡಿದ ಬಳಿಕ ಅಗತ್ಯಬಿದ್ದರೆ ಬದಲಾವಣೆ ಮಾಡುವುದಾಗಿ ಹೇಳಿದ್ದಾರೆ. ಆದರೆ ಇದು ಸಂಭವಿಸುವ ಸಾಧ್ಯತೆಗಳು ತುಂಬಾ ಕಡಿಮೆ.

IND vs WI 2nd Test Dream11 prediction: Check fantasy cricket tips, playing  XI, pitch report, more | How-to

ಮೊದಲ ಟೆಸ್ಟ್‌ನಲ್ಲಿ ಭಾರತದ ಬ್ಯಾಟಿಂಗ್ ಮತ್ತು ಬೌಲಿಂಗ್ ಅದ್ಭುತ ಪ್ರದರ್ಶನ ನೀಡಿದೆ. ಚೊಚ್ಚಲ ಪಂದ್ಯದಲ್ಲೇ ಯಶಸ್ವಿ ಜೈಸ್ವಾಲ್ ಶತಕ ಸಿಡಿಸಿದ್ದರು. ರೋಹಿತ್ ಮತ್ತು ಜೈಸ್ವಾಲ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ನಂತರ ಕ್ರಮವಾಗಿ ಗಿಲ್, ಕೊಹ್ಲಿ, ರಹಾನೆ, ಇಶಾನ್ ಕಿಶನ್, ಜಡೇಜಾ ಮತ್ತು ಅಶ್ವಿನ್ ಇರಲಿದ್ದಾರೆ.

ವೇಗಿಗಳಾಗಿ ಮೊಹಮ್ಮದ್ ಸಿರಾಜ್, ಉನದ್ಕತ್ ಮತ್ತು ಶಾರ್ದೂಲ್​ ಠಾಕೂರ್ ಇರಲಿದ್ದಾರೆ. ಅಶ್ವಿನ್ ಮತ್ತು ಜಡೇಜಾ ಸ್ಪಿನ್ನರ್‌ಗಳಾಗಲಿದ್ದಾರೆ. ಆ ಮೂಲಕ ರುತುರಾಜ್ ಗಾಯಕ್ವಾಡ್ ಹಾಗೂ ಮುಖೇಶ್ ಕುಮಾರ್ ಬೆಂಚ್​ ಕಾಯಬೇಕಾಗಬಹುದು.

ರೋಹಿತ್ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಅಜಿಂಕ್ಯಾ ರಹಾನೆ, ಇಶಾನ್ ಕಿಶನ್, ರವೀಂದ್ರ ಜಡೇಜಾ, ಅಶ್ವಿನ್, ಶಾರ್ದೂಲ್ ಠಾಕೂರ್, ಉನದ್ಕತ್, ಮೊಹಮ್ಮದ್ ಸಿರಾಜ್.

Ind vs WI 2nd test team India predicted playing xi.