Team India: ಹಾರ್ದಿಕ್​ ಪಾಂಡ್ಯ ಕೈ ತಪ್ಪುತ್ತಾ ಟೀಂ ಇಂಡಿಯಾ ನಾಯಕತ್ವ? ಹೊಸ ಕ್ಯಾಪ್ಟನ್​ ಹುಡುಕಾಟದಲ್ಲಿ ಬಿಸಿಸಿಐ

24-07-23 04:13 pm       Source: News18 Kannada   ಕ್ರೀಡೆ

ಐರ್ಲೆಂಡ್ ಪ್ರವಾಸದ ವೇಳೆ ರುತುರಾಜ್ ಗಾಯಕ್ವಾಡ್ ಭಾರತ ತಂಡದ ನಾಯಕರಾಗುವ ಸಾಧ್ಯತೆ ಇದೆ. ಭಾರತೀಯ ಯುವ ತಂಡ ಸೆಪ್ಟೆಂಬರ್‌ನಲ್ಲಿ ಏಷ್ಯನ್ ಗೇಮ್ಸ್ ಆಡಲು ಚೀನಾಕ್ಕೆ ತೆರಳಲಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ 2023 (IPL 2023) ನಂತರ ಹಾರ್ದಿಕ್ ಪಾಂಡ್ಯ ಮತ್ತೆ ಮೈದಾನಕ್ಕೆ ಕಾಲಿಡಲಿಲ್ಲ. ಈ ತಿಂಗಳಾಂತ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆರಂಭವಾಗಲಿರುವ ಏಕದಿನ ಸರಣಿಯೊಂದಿಗೆ ಮತ್ತೆ ಮೈದಾನಕ್ಕಿಳಿಯಲಿದ್ದಾರೆ.

ನಂತರ ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ನಾಯಕನಾಗಿ ಕಾರ್ಯನಿರ್ವಹಿಸಲಿದ್ದಾರೆ. ಇದರ ನಡುವೆ ಬಿಸಿಸಿಐ ಟಿ20ಯಲ್ಲಿ ಹೊಸ ನಾಯಕನ ಹುಡುಕಾಟ ಆರಂಭಿಸಿದೆ.

 ಆದರೆ ಆ ಸರಣಿಯಿಂದ ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ ನೀಡಲು ಬಿಸಿಸಿಐ ಚಿಂತನೆ ನಡೆಸಿದೆಯಂತೆ. ಜೊತೆಗೆ ಶುಭ್‌ಮನ್ ಗಿಲ್‌ಗೂ ವಿಶ್ರಾಂತಿ ನೀಡುವ ಯೋಜನೆ ಇದೆ ಎಂದು ವರದಿಯಾಗಿದೆ.

ಭಾರತ ಆಗಸ್ಟ್ 18 ರಿಂದ 21ರ ವರೆಗೆ ಐರ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಪ್ರವಾಸದ ವೇಳೆ ಭಾರತ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಆದರೆ ಈ ಸರಣಿಗೆ ಈವರಗೆ ತಂಡವನ್ನು ಘೋಷಣೆ ಮಾಡಿಲ್ಲ.

ಆದರೆ ಆ ಸರಣಿಯಿಂದ ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ ನೀಡಲು ಬಿಸಿಸಿಐ ಚಿಂತನೆ ನಡೆಸಿದೆಯಂತೆ. ಜೊತೆಗೆ ಶುಭ್‌ಮನ್ ಗಿಲ್‌ಗೂ ವಿಶ್ರಾಂತಿ ನೀಡುವ ಯೋಜನೆ ಇದೆ ಎಂದು ವರದಿಯಾಗಿದೆ.

Sanju samson Ruturaj Gaikwad IND vs IRE SuryaKumar Yadav Sanju samson hardik  Pandya Shubman Gill | आयरलैंड दौरे पर कप्‍तानी के ये 2 दावेदार, जानिए कैसी  हो सकती है टीम इंडिया -

ಆದರೆ, ಈ ಬಗ್ಗೆ ಬಿಸಿಸಿಐ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಶೀಘ್ರದಲ್ಲೇ ಹಾರ್ದಿಕ್ ಪಾಂಡ್ಯ ಅವರೊಂದಿಗೆ ಈ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಐರ್ಲೆಂಡ್ ಪ್ರವಾಸದಲ್ಲಿ ಪಾಂಡ್ಯ ಭಾಗವಹಿಸುವುದು ಖಚಿತವಾದರೆ ಅವರೇ ನಾಯಕರಾಗಲಿದ್ದಾರೆ.

ಆದರೆ, ಏಷ್ಯಾಕಪ್ ಹಾಗೂ ಏಕದಿನ ವಿಶ್ವಕಪ್ ನೊಂದಿಗೆ ಪಾಂಡ್ಯ ಜತೆಗೆ ಹಿರಿಯ ಆಟಗಾರರಿಗೂ ವಿಶ್ರಾಂತಿ ನೀಡಲು ಬಿಸಿಸಿಐ ಚಿಂತನೆ ನಡೆಸಿದೆಯಂತೆ. ಏಷ್ಯನ್ ಗೇಮ್ಸ್ ಗೆ ಆಯ್ಕೆಯಾಗಿರುವ ತಂಡದೊಂದಿಗೆ ಐರ್ಲೆಂಡ್ ಸರಣಿ ಆಡಿಸುವ ಉದ್ದೇಶ ಹೊಂದಿದೆ ಎಂದು ವರದಿಯಾಗಿದೆ.

Team India For Ireland Series and Asian Games 2023 Ajit Agarkar | Ajit  Agarkar will now have his biggest test, another Team India announcement

ಅಂದಹಾಗೆ, ಐರ್ಲೆಂಡ್ ಪ್ರವಾಸದ ವೇಳೆ ರುತುರಾಜ್ ಗಾಯಕ್ವಾಡ್ ಭಾರತ ತಂಡದ ನಾಯಕರಾಗುವ ಸಾಧ್ಯತೆ ಇದೆ. ಭಾರತೀಯ ಯುವ ತಂಡ ಸೆಪ್ಟೆಂಬರ್‌ನಲ್ಲಿ ಏಷ್ಯನ್ ಗೇಮ್ಸ್ ಆಡಲು ಚೀನಾಕ್ಕೆ ತೆರಳಲಿದೆ. ಅವರಿಗೆ ಅಭ್ಯಾಸ ನೀಡುವ ಉದ್ದೇಶದಿಂದ ಐರ್ಲೆಂಡ್ ಸರಣಿಗೆ ಆ ತಂಡವನ್ನು ಆಯ್ಕೆ ಮಾಡಲು ಬಿಸಿಸಿಐ ಉದ್ದೇಶಿಸಿದೆ ಎಂದು ವರದಿಯಾಗಿದೆ.

Hardik Pandya rest for Ireland series and Ruturaj Gaikwad as team India captain t20 series