Zaheer-Ishant: ನಂಬಲಾಸಾಧ್ಯ, ಆದರೂ ಸತ್ಯ; ಟೆಸ್ಟ್ ಕ್ರಿಕೆಟ್‌ನಲ್ಲಿ ಈ ಇಬ್ಬರ ಅಂಕಿಅಂಶಗಳು ಒಂದೇ ಆಗಿವೆ!

26-07-23 02:48 pm       Source: Mykhel Kannada   ಕ್ರೀಡೆ

ಭಾರತೀಯ ಕ್ರಿಕೆಟ್ ತಂಡ ಈವರೆಗೆ ಹಲವು ಬೌಲಿಂಗ್ ದಿಗ್ಗಜರನ್ನು ಕಂಡಿದೆ. ಅವರ ಸಾಮರ್ಥ್ಯದೊಂದಿಗೆ ಅವರ ಅಂಕಿಅಂಶಗಳು ತೋರಿಸುತ್ತವೆ ಮತ್ತು ಒಬ್ಬರಿಗಿಂತ ಮತ್ತೊಬ್ಬರು ಭಿನ್ನಾವಾಗಿರುತ್ತಾರೆ.

ಭಾರತೀಯ ಕ್ರಿಕೆಟ್ ತಂಡ ಈವರೆಗೆ ಹಲವು ಬೌಲಿಂಗ್ ದಿಗ್ಗಜರನ್ನು ಕಂಡಿದೆ. ಅವರ ಸಾಮರ್ಥ್ಯದೊಂದಿಗೆ ಅವರ ಅಂಕಿಅಂಶಗಳು ತೋರಿಸುತ್ತವೆ ಮತ್ತು ಒಬ್ಬರಿಗಿಂತ ಮತ್ತೊಬ್ಬರು ಭಿನ್ನಾವಾಗಿರುತ್ತಾರೆ. ಆದರೆ, ಒಂದೇ ರೀತಿಯ ಪ್ರದರ್ಶನದೊಂದಿಗೆ ಒಂದೇ ರೀತಿ ಅಂಕಿಅಂಶ ಹೊಂದಿರುವುದನ್ನು ಎಲ್ಲಾದರೂ ಕೇಳಿದ್ದೀರಾ?.

ಭಾರತೀಯ ಬೌಲರ್‌ಗಳಾದ ಜಹೀರ್ ಖಾನ್ ಮತ್ತು ಇಶಾನ್ ಶರ್ಮಾ ಆ ಪಟ್ಟಿಗೆ ಸೇರುತ್ತಾರೆ. ಆದಾಗ್ಯೂ, ಈ ಜೋಡಿಯ ಅಂಕಿಅಂಶಗಳ ಹಿಂದೆ ಒಂದು ಅದ್ಭುತ ಆಶ್ಚರ್ಯವಿದೆ. ಇಬ್ಬರು ಆಟಗಾರರ ಅಂಕಿಅಂಶಗಳ ನಡುವೆ ಅಪರೂಪದ ಹೋಲಿಕೆ ಕಂಡುಬಂದಿದೆ.

Zaheer-Ishant: ನಂಬಲಾಸಾಧ್ಯ, ಆದರೂ ಸತ್ಯ; ಟೆಸ್ಟ್ ಕ್ರಿಕೆಟ್‌ನಲ್ಲಿ ಈ ಇಬ್ಬರ  ಅಂಕಿಅಂಶಗಳು ಒಂದೇ ಆಗಿವೆ! | Interesting Facts About Zaheer And Ishant's Stats  Revealed During Match Commentary - Kannada MyKhel

ಟೆಸ್ಟ್ ಕ್ರಿಕೆಟ್‌ನಲ್ಲಿ ಈವರೆಗೆ ಜಹೀರ್ ಖಾನ್ ಮತ್ತು ಇಶಾನ್ ಶರ್ಮಾ ಅವರ ಬೌಲಿಂಗ್ ಅಂಕಿಅಂಶಗಳು, ಅವರ ವಿಕೆಟ್‌ಗಳು, ಐದು-ವಿಕೆಟ್‌ಗಳ ಸಾಧನೆಗಳು, ಭಾರತದಲ್ಲಿನ ವಿಕೆಟ್‌ಗಳು ಮತ್ತು ಭಾರತದ ಹೊರಗಿನ ವಿಕೆಟ್‌ ಸಂಖ್ಯೆಗಳನ್ನು ಪರಿಗಣಿಸಿದಾಗ ಸಂಪೂರ್ಣವಾಗಿ ಒಂದೇ ಆಗಿವೆ.

ಭಾರತದ ಮಾಜಿ ವೇಗಿ ಜಹೀರ್ ಖಾನ್ ಮತ್ತು ಇಶಾಂತ್ ಶರ್ಮಾ ಕ್ರಿಕೆಟ್‌ನ ಮೂರು ಸ್ವರೂಪಗಳಲ್ಲಿ ರಾಷ್ಟ್ರೀಯ ತಂಡಕ್ಕೆ ಬೌಲಿಂಗ್‌ನಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. ಅವರ ಕ್ರಿಕೆಟ್ ಇಷ್ಟು ಗಮನ ಸೆಳೆಯಲು ಕಾರಣವೆನೆಂದರೆ, ಈ ಜೋಡಿಯು ಕ್ರಿಕೆಟ್‌ನ ಟೆಸ್ಟ್ ಸ್ವರೂಪದಲ್ಲಿ ಒಂದೇ ರೀತಿಯ ಅಂಕಿಅಂಶಗಳನ್ನು ಹಂಚಿಕೊಂಡಿರುವುದು.

IPL 2023 Points Table: Today IPL Team Rankings List, Net Run Rate, Records,  Playoffs, Final

IPL Points Table 2023: ಪಾಯಿಂಟ್ ಟೇಬಲ್ ನಲ್ಲಿ ದಿಢೀರ್ ಕುಸಿತ ಕಂಡ ಫಾಫ್ ಪಡೆ

ಗಮನಾರ್ಹವಾಗಿ, ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್‌ ಪಂದ್ಯದ 4ನೇ ದಿನದಂದು, ಇಶಾಂತ್ ಶರ್ಮಾ ಮತ್ತು ಜಹೀರ್ ಖಾನ್ ಅವರು ಜಿಯೋಸಿನಿಮಾದಲ್ಲಿ ವೀಕ್ಷಕ ವಿವರಣೆ ತಂಡದ ಭಾಗವಾಗಿದ್ದರು. ಎರಡನೇ ಟೆಸ್ಟ್‌ ಪಂದ್ಯವನ್ನು ಕವರ್ ಮಾಡುವ ಮಧ್ಯೆ, ಇವರು ಟೆಸ್ಟ್ ಕ್ರಿಕೆಟ್‌ನಲ್ಲಿ ಅವರಿಬ್ಬರ ಅಂಕಿಅಂಶಗಳನ್ನು ಪ್ರದರ್ಶಿಸಿದರು. ಅದು ಎಲ್ಲರನ್ನು ಬೆರಗುಗೊಳಿಸುವಂತಿತ್ತು. ಟೆಸ್ಟ್ ಕ್ರಿಕೆಟ್‌ನಲ್ಲಿ ಇಬ್ಬರೂ ವೇಗಿಗಳು ತವರಿನಲ್ಲಿ 207 ವಿಕೆಟ್‌ಗಳು ಮತ್ತು ವಿದೇಶದಲ್ಲಿ 104 ವಿಕೆಟ್‌ಗಳನ್ನು ಪಡೆದಿದ್ದು, ಒಟ್ಟಾರೆ ಒಂದೇ ರೀತಿಯಾಗಿ 311 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಜಹೀರ್ ಖಾನ್ ಮತ್ತು ಇಶಾಂತ್ ಶರ್ಮಾ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ತಲಾ 11 ಬಾರಿ ಐದು ವಿಕೆಟ್ ಸಾಧನೆ ಮಾಡಿದ್ದಾರೆ ಮತ್ತು ತಲಾ 1 ಬಾರಿ ಹತ್ತು ವಿಕೆಟ್ ಸಾಧನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

Zaheer Khan Biography: Age, Wife, Stats, Family, IPL

ಮಾಜಿ ವೇಗಿ ಜಹೀರ್ ಖಾನ್ 2011ರ ಏಕದಿನ ವಿಶ್ವಕಪ್ ಗೆದ್ದ ನಂತರ 2015ರಲ್ಲಿ ತಮ್ಮ ಸುಪ್ರಸಿದ್ಧ ಕ್ರಿಕೆಟ್‌ ವೃತ್ತಿಜೀವನಕ್ಕೆ ತೆರೆ ಎಳೆದರು. 2002ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಜಂಟಿ ವಿಜೇತ ತಂಡದಲ್ಲಿ ಜಹೀರ್ ಖಾನ್ ಒಬ್ಬರಾಗಿದ್ದರು.

ಮತ್ತೊಂದೆಡೆ, ಇನ್ನೂ ಕ್ರಿಕೆಟ್‌ನಿಂದ ನಿವೃತ್ತಿಯಾಗಿರದ ಇಶಾಂತ್ ಶರ್ಮಾ ಇತ್ತೀಚೆಗೆ 2023ರ ಐಪಿಎಲ್‌ಗೆ ಹಿಂದಿರುಗಿದರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಚೆಂಡಿನೊಂದಿಗೆ ಉತ್ತಮ ಋತುವನ್ನು ಆಡಿದರು.

WI vs IND, 2nd Test Day 4 Highlights: West Indies need 289 to win after  Ashwin double strike - India Today

ಇನ್ನು ವೆಸ್ಟ್ ಇಂಡೀಸ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡ 1-0 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿತು. ಇದೀಗ ಎರಡೂ ತಂಡಗಳು ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ.

ಭಾರತ ತಂಡಕ್ಕೆ ಅಕ್ಟೋಬರ್‌-ನವೆಂಬರ್‌ನಲ್ಲಿ ನಡೆಯುವ ಏಕದಿನ ವಿಶ್ವಕಪ್ ಪಂದ್ಯಾವಳಿಯನ್ನು ಪರಿಗಣಿಸಿದರೆ, ಈ ಏಕದಿನ ಸರಣಿಯು ಪ್ರಮುಖವಾಗಿರಲಿದೆ. ಇನ್ನು ವೆಸ್ಟ್ ಇಂಡೀಸ್ ತಂಡ ಇದೇ ಮೊದಲ ಬಾರಿಗೆ ವಿಶ್ವಕಪ್‌ಗೆ ಅರ್ಹತೆ ಪಡೆಯಲು ವಿಫಲವಾಗಿದ್ದು, ತಂಡದ ಸ್ಥೈರ್ಯ ಹೆಚ್ಚಿಸಿಕೊಳ್ಳಲು ಗೆಲುವು ಅನಿವಾರ್ಯವಾಗಿದೆ.

Interesting facts about Zaheer and Ishants stats revealed during match commentary.