ವಿಶ್ವಕಪ್‌ ವೇಳಾಪಟ್ಟಿ ಬದಲಾವಣೆಗೆ ಸಮ್ಮತಿಸಿದ ಪಾಕಿಸ್ತಾನ!

02-08-23 01:54 pm       Source: Vijayakarnataka   ಕ್ರೀಡೆ

ಭಾರತದ ಆತಿಥ್ಯದಲ್ಲಿ ನಡೆಯಲಿರುವ 2023ರ ಸಾಲಿನ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್‌ ಟೂರ್ನಿಯ ವೇಳಾಪಟ್ಟಿಯಲ್ಲಿ ಕೆಲ ಮಹತ್ವದ ಬದಲಾವಣೆ ಆಗಿದೆ.

ಭಾರತದ ಆತಿಥ್ಯದಲ್ಲಿ ನಡೆಯಲಿರುವ 2023ರ ಸಾಲಿನ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್‌ ಟೂರ್ನಿಯ ವೇಳಾಪಟ್ಟಿಯಲ್ಲಿ ಕೆಲ ಮಹತ್ವದ ಬದಲಾವಣೆ ಆಗಿದೆ. ಪ್ರಮುಖವಾಗಿ ಬಹುನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಣ ಹೈ ವೋಲ್ಟೇಜ್ ಪಂದ್ಯವನ್ನು ಒಂದು ದಿನ ಮುಂಚಿತವಾಗಿಯೇ ನಡೆಸಲು ಬಿಸಿಸಿಐ ಮತ್ತು ಐಸಿಸಿ ಮುಂದಾಗಿವೆ. ಭದ್ರತೆ ದೃಷ್ಟಿಯಲ್ಲಿ ಅಕ್ಟೋಬರ್ 15ರಂದು ನಡೆಯಬೇಕಿದ್ದ ಪಂದ್ಯವನ್ನು ಅಕ್ಟೋಬರ್‌ 14ರಂದು ಆಯೋಜಿಸಲು ನಿರ್ಧರಿಸಲಾಗಿದೆ. ಬದಲಾದ ವೇಳಾಪಟ್ಟಿ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕೂಡ ಸಮ್ಮತಿ ಸೂಚಿಸಿದೆ.

WI vs IND: Want to try everything possible ahead of ODI World Cup 2023,  says Rohit Sharma - India Today

ಭಾರತಕ್ಕೆ ವಿಂಡೀಸ್‌ ವಿರುದ್ಧ ಭರ್ಜರಿ ಜಯ:

ಆತಿಥೇಯ ವೆಸ್ಟ್‌ ಇಂಡೀಸ್‌ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಟೀಮ್ ಇಂಡಿಯಾ 2-1 ಅಂತರದ ಜಯ ದಾಖಲಿಸಿದೆ. ಮಂಗಳವಾರ ನಡೆದ ಸರಣಿ ನಿರ್ಣಾಯಕ ಮೂರನೇ ಹಾಗೂ ಅಂತಿಮ ಹಣಾಹಣಿಯಲ್ಲಿ ಅಧಿಕಾರಯುತ ಆಟವಾಡಿದ ಹಾರ್ದಿಕ್‌ ಪಾಂಡ್ಯ ಸಾರಥ್ಯದ ಟೀಮ್ ಇಂಡಿಯಾ, ಎಲ್ಲ ವಿಭಾಗಗಳಲ್ಲಿಯೂ ಆತಿಥೇಯರ ಸದ್ದಡಗಿಸಿ 200 ರನ್‌ಗಳ ಜಯ ದಾಖಲಿಸಿತು. ಮೊದಲಿಗೆ ವಿಂಡೀಸ್‌ ನೆಲದಲ್ಲಿ ದಾಖಲೆಯ ಗರಿಷ್ಠ ಸ್ಕೋರ್‌ ಆಗಿ 351 ರನ್‌ ಸಿಡಿಸಿದ ಭಾರತ ತಂಡ, ಬಳಿಕ ಎದುರಾಳಿಯನ್ನು 151 ರನ್‌ಗಳಿಗೆ ಆಲ್‌ಔಟ್‌ ಮಾಡಿತು.

Team India Schedule Till ODI Cricket World Cup 2023 Revealed: From West  Indies Tour To Asia Cup 2023, Check All Details HERE | Cricket News | Zee  News

ಕಮ್‌ಬ್ಯಾಕ್‌ ಪಂದ್ಯದಲ್ಲಿ ಜಯದೇವ್ ಉನಾದ್ಕಟ್‌ಗೆ ವಿಕೆಟ್‌

ಟ್ರಿನಿಡಾಡ್‌: ಬರೋಬ್ಬರಿ 3539 ದಿನಗಳ ಬಳಿಕ ಭಾರತದ ಏಕದಿನ ಕ್ರಿಕೆಟ್‌ ತಂಡದಲ್ಲಿ ಮರಳಿ ಸ್ಥಾನ ಪಡೆದ ಎಡಗೈ ವೇಗದ ಬೌಲರ್‌ ಜಯದೇವ್‌ ಉನಾದ್ಕಟ್‌, ಕಮ್‌ಬ್ಯಾಕ್‌ ಪಂದ್ಯದಲ್ಲಿ ವಿಕೆಟ್‌ ಕೂಡ ಪಡೆದರು. ಬ್ರಿಯಾನ್‌ ಲಾರಾ ಕ್ರಿಕೆಟ್‌ ಸ್ಟೇಡಿಯಂನಲ್ಲಿ ವೆಸ್ಟ್‌ ಇಂಡೀಸ್‌ ಎದುರು ನಡೆದ 3ನೇ ಹಾಗೂ ಸರಣಿ ನಿರ್ಣಾಯಕ ಒಡಿಐ ಪಂದ್ಯದಲ್ಲಿ ಎದುರಾಳಿಯ ಅಪಾಯಕಾರಿ ಬ್ಯಾಟರ್‌ ಕೇಸಿ ಕಾರ್ಟಿ (6) ವಿಕೆಟ್‌ ಪಡೆದು ಸಂಭ್ರಮಿಸಿದರು.

Ishan Kishan Shares Emotional Instagram Post After Asia Cup Snub - News18

ಶುಭಮನ್ ಗಿಲ್‌ - ಇಶಾನ್‌ ಕಿಶನ್‌ ದಾಖಲೆಯ ಜೊತೆಯಾಟ

ಟ್ರಿನಿಡಾಡ್‌: ವೆಸ್ಟ್ ಇಂಡೀಸ್‌ ಎದುರು ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಟೀಮ್ ಇಂಡಿಯಾದ ಯುವ ಆರಂಭಿಕ ಜೋಡಿ ಇಶಾನ್‌ ಕಿಶನ್‌ ಮತ್ತು ಶುಭಮನ್‌ ಗಿಲ್‌, ಏಕದಿನ ಕ್ರಿಕೆಟ್‌ ಸರಣಿಯ ಮೂರನೇ ಹಾಗೂ ಸರಣಿ ನಿರ್ಣಾಯಕ ಅಂತಿಮ ಪಂದ್ಯದಲ್ಲಿ ಮೊದಲ ವಿಕೆಟ್‌ಗೆ 118 ಎಸೆತಗಳಲ್ಲಿ 141 ರನ್‌ ಕಲೆಹಾಕುವ ಮೂಲಕ, ವೆಸ್ಟ್‌ ಇಂಡೀಸ್‌ ನೆಲದಲ್ಲಿ ಮೊದಲ ವಿಕೆಟ್‌ಗೆ ಅತಿ ಹೆಚ್ಚು ರನ್‌ ಗಳಿಸಿದ ಭಾರತೀಯ ಜೋಡಿ ಎಂದೆನಿಸಿಕೊಂಡಿದೆ. ಈ ಮೂಲಕ 6 ವರ್ಷ ಹಳೇ ದಾಖಲೆಯನ್ನು ಗಿಲ್‌-ಕಿಶನ್‌ ಅಳಿಸಿಹಾಕಿದ್ದಾರೆ.

Deodhar Trophy का नाम कैसे पड़ा? भारतीय क्रिकेट में इस टूर्नामेंट का महत्‍व  कितना है? जानें यहां सबकुछ - Deodhar Trophy History when did it started and  why the trophy is named

ದೇವಧರ್‌ ಟ್ರೋಫಿ 2023: ದಕ್ಷಿಣ ವಲಯ ಫೈನಲ್‌ಗೆ

ಬೆಂಗಳೂರು: ತಮಿಳುನಾಡಿನ ಯುವ ಆರಂಭಿಕ ಬ್ಯಾಟರ್‌ ಸಾಯ್‌ ಸುದರ್ಶನ್‌ (132) ಬಾರಿಸಿದ ಮನಮೋಹಕ ಶತಕದ ಬಲದಿಂದ ಅಬ್ಬರಿಸಿದ ದಕ್ಷಿಣ ವಲಯ ತಂಡ ಕೇಂದ್ರ ವಲಯ ಎದುರು 7 ವಿಕೆಟ್‌ಗಳ ಜಯ ದಾಖಲಿಸಿ ಫೈನಲ್‌ಗೆ ದಾಪುಗಾಲಿಟ್ಟಿದೆ. ಅತ್ತ ರಿಯಾನ್‌ ಪರಾಗ್‌ ಶತಕದ ಬಲದಿಂದ ಮಿಂಚಿದ ಪೂರ್ವ ವಲಯ ತಂಡ ಪಶ್ಚಿಮ ವಲಯವನ್ನು 157 ರನ್‌ಗಳಿಂದ ಮಣಿಸಿ ಫೈನಲ್‌ ಪ್ರವೇಶಿಸಿದೆ. ಆಗಸ್ಟ್‌ 3ರಂದು ಪುದುಚರಿಯ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಫೈನಲ್‌ ನಡೆಯಲಿದೆ.

Latest sports news today live 2 august 2023 India wins ODC series south zone storm in to Deodhar trophy final