ಬ್ರೇಕಿಂಗ್ ನ್ಯೂಸ್
19-06-24 11:54 pm Sports Correspondent, Headline Karnataka ಕ್ರೀಡೆ
ನಾರ್ತ್ ಸೌಂಡ್, ಜೂ 19: ಒತ್ತಡ ನಿಭಾಯಿಸಲು ಎಡವಿದ ಅಮೆರಿಕಾ ತಂಡ ಟಿ20 ವಿಶ್ವಕಪ್ ಸೂಪರ್ -8 ಹಂತದ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೊನೆ ಕ್ಷಣದವರೆಗೂ ಹೋರಾಡಿ 18 ರನ್ ಅಂತರದ ವೀರೋಚಿತ ಸೋಲು ಅನುಭವಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ದಕ್ಷಿಣ ಆಫ್ರಿಕಾ ನಿಗದಿತ 20 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 194 ರನ್ ದಾಖಲಿಸಿತು. ಈ ಬಾರಿಯ ಟಿ20 ವಿಶ್ವಕಪ್ ನಲ್ಲಿ ಮೊದಲ ಸಲ ಅರ್ಧಶತಕದ ಗಡಿ ದಾಟಿದ ಕ್ವಿಂಟನ್ ಡಿಕಾಕ್( 74 ರನ್, 40 ಎಸೆತ, 7x4, 5x6) ಯುಎಸ್ಎ ತಂಡದ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಿದರು. ಆರಂಭಿಕ ಬ್ಯಾಟರ್ ರೀಜಾ ಹೆಂಡ್ರಿಕ್ಸ್ (11) ಬೇಗನೆ ಔಟಾದ ಬಳಿಕ ಎರಡನೇ ವಿಕೆಟ್ ಗೆ ನಾಯಕ ಐಡನ್ ಮಾರ್ಕ್ರಮ್ (46 ರನ್ 32 ಎಸೆತ, 4x4, 1x6) ಜೊತೆ ಡಿಕಾಕ್ 110 ರನ್ ಜೊತೆಯಾಟವಾಡಿದರು. ನಂತರ ಡೇವಿಡ್ ಮಿಲ್ಲರ್(0) ಖಾತೆ ತೆರೆಯದೆ ನಿರ್ಗಮಿಸಿದರು. ಡೆತ್ ಓವರ್ ನಲ್ಲಿ ಹೊಡೆಬಡಿಯ ಆಟವಾಡಿದ ಹೆನ್ರಿಕ್ ಕ್ಲಾಸೆನ್ (ಅಜೇಯ 36, 22 ಎಸೆತ, 3x6) ಮತ್ತು ಟ್ರಿಸ್ಟನ್ ಸ್ಟಬ್ಸ್ (ಅಜೇಯ 20) ಮುರಿಯದ ಐದನೇ ವಿಕೆಟ್ ಗೆ 53 ರನ್ ಸೇರಿಸಿ ತಂಡದ ಮೊತ್ತವನ್ನು 200ರ ಗಡಿಗೆ ತಂದರು. ಅಮೇರಿಕಾ ತಂಡದ ಪರ ಭಾರತೀಯ ಸಂಜಾತ ಬೌಲರ್ ಸೌರಭ್ ನೇತ್ರಾವಲ್ಕರ್(21/2) ತಮ್ಮ ಮೊನಚಿನ ದಾಳಿ ಪ್ರದರ್ಶಿಸಿ ಗಮನ ಸೆಳೆದರು. ಹರ್ಮಿತ್ ಸಿಂಗ್ (24/2) ಕೂಡ ಉತ್ತಮ ದಾಳಿ ಸಂಘಟಿಸಿದರು.
ಗುರಿ ಬೆನ್ನಟ್ಟಿದ ಅಮೇರಿಕಾ ತಂಡಕ್ಕೆ ಸ್ಟೀವನ್ ಟೇಲರ್(24 ರನ್, 14 ಎಸೆತ , 4x4, 1x6) ಬಿರುಸಿನ ಆರಂಭ ಒದಗಿಸಿದರು. ಈ ಸಂದರ್ಭ ವೇಗಿ ಕಾಗಿಸೊ ರಬಾಡ (18/3) ಅಮೆರಿಕಾದ ವೇಗಕ್ಕೆ ಕಡಿವಾಣ ಹಾಕಿದರು. ಮೊದಲ ವಿಕೆಟ್ ಪತನದ ನಂತರ ಯುಎಸ್ಎ ತಂಡ ಚೇತರಿಸಿಕೊಳ್ಳಲು ಪರದಾಡಿತು. ಆರಂಭಿಕ ಬ್ಯಾಟರ್ ಆ್ಯಂಡ್ರೀಸ್ ಗೌಸ್( 80* 47 ಎಸೆತ, 5x4, 5x6) ಒಂದು ಬದಿಯಲ್ಲಿ ಕ್ರೀಸ್ ಆಕ್ರಮಿಸಿಕೊಂಡು ಆಡಿದರೂ ಅವರಿಗೆ ಸಮರ್ಥ ಬೆಂಬಲ ಸಿಗಲಿಲ್ಲ. ಅಂತಾರಾಷ್ಟ್ರೀಯ ಅನುಭವಿ ಆಟಗಾರ ನ್ಯೂಜಿಲೆಂಡ್ ಮೂಲದ ಕೋರಿ ಆ್ಯಂಡರ್ಸನ್ (12) ಕೂಡ ತಂಡಕ್ಕೆ ಆಸರೆಯಾಗಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಹರ್ಮಿತ್ ಸಿಂಗ್ (38 ರನ್, 22 ಎಸೆತ, 2x4, 3x6) ಬಿರುಸಿನ ಆಟಕ್ಕಿಳಿದು ಗೌಸ್ ಜೊತೆ ಆರನೇ ವಿಕೆಟ್ ಗೆ ಕೇವಲ 42 ಎಸೆತಗಳಲ್ಲಿ 93 ರನ್ ಜೊತೆಯಾಟವಾಡಿದಾಗ ಯುಎಸ್ಎ ಗೆಲುವಿನ ಆಸೆ ಗರಿಗೆದರಿತು. ಆದರೆ ರಬಾಡ ಈ ಜೊತೆಯಾಟ ಮುರಿದು ಮರಳಿ ದಕ್ಷಿಣ ಆಫ್ರಿಕಾ ಪಾಳಯದಲ್ಲಿ ನಗು ಮೂಡಿಸಿದರು. ಗಳಿಕೆ ರನ್ ರೇಟ್ ಹೆಚ್ಚುತ್ತಾ ಹೋದಂತೆ ಅಮೇರಿಕಾ ತಂಡ ಒತ್ತಡ ನಿಭಾಯಿಸುವಲ್ಲಿ ಎಡವಿತು. ಅಂತಿಮವಾಗಿ ಆರು ವಿಕೆಟ್ ಗೆ 176 ರನ್ ಗಳಿಸಿ 18 ರನ್ ಸೋಲನುಭವಿಸಿತು.

ಸಂಕ್ಷಿಪ್ತ ಸ್ಕೋರ್ :
Anrich Nortje gets South Africa over the line, conceding just seven runs off the final over to close it out. It was a lot closer than it looked like being though, USA really made the Proteas graft for it in the final five overs. The game looked dead but some remarkable and gutsy hitting from Andries Gous and Harmeet Singh saw the host nation roar back into contention. They’ll take plenty of heart from that. South Africa might well breathe a heavy sigh of relief.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
25-08-26 10:39 pm
HK News Staffer
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm
ಮಲ್ಪೆ ಬಂದರಿನಲ್ಲಿ ಮೀನುಗಾರರಿಬ್ಬರ ಗಲಾಟೆ ಕೊಲೆಯಲ್ಲ...
25-08-26 12:45 pm
ಡೇವಿಡ್ ಡಿಸೋಜ ಹತ್ಯೆ ಪ್ರಕರಣದಲ್ಲಿ ಮಹತ್ತರ ತಿರುವು...
25-08-26 11:38 am