ಆಸ್ಟ್ರೇಲಿಯಾದಲ್ಲಿ ನಡೆದಿರುವುದನ್ನು ಭಾರತ ಮರೆಯಬೇಕು: ವಾಸಿಂ ಜಾಫರ್

03-02-21 05:14 pm       Source: MYKHEL Madhukara Shetty   ಕ್ರೀಡೆ

ಆಸ್ಟ್ರೇಲಿಯಾ ನೆಲದಲ್ಲಿ ಭಾರತ ಶ್ರೇಷ್ಠ ಮಟ್ಟದ ಪ್ರದರ್ಶನವನ್ನು ನೀಡಿ ಐತಿಹಾಸಿಕ ಸರಣಿ ಗೆಲುವನ್ನು ಸಾಧಿಸಿತ್ತು,

ಆಸ್ಟ್ರೇಲಿಯಾ ನೆಲದಲ್ಲಿ ಭಾರತ ಶ್ರೇಷ್ಠ ಮಟ್ಟದ ಪ್ರದರ್ಶನವನ್ನು ನೀಡಿ ಐತಿಹಾಸಿಕ ಸರಣಿ ಗೆಲುವನ್ನು ಸಾಧಿಸಿತ್ತು, ಆದರೆ ಆ ಗೆಲುವನ್ನು ಭಾರತ ಈಗ ಮರೆತು ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಹೊಸತಾಗಿ ಆರಂಭವನ್ನು ಪಡೆಯಬೇಕು ಎಂಬ ಸಲಹೆಯನ್ನು ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ನೀಡಿದ್ದಾರೆ.

"ಭಾರತಕ್ಕೆ ಇದು ಹೊಸ ಸರಣಿ. ಆಸ್ಟ್ರೇಲಿಯಾದಲ್ಲಿ ಏನು ನಡೆದಿದೆಯೋ ಅದನ್ನು ಟೀಮ್ ಇಂಡಿಯಾ ಆಟಗಾರರು ಮರೆಯಬೇಕು. ಇಂಗ್ಲೆಂಡ್ ವಿರುದ್ಧ ಅವರು ಹೊಸತಾಗಿ ಆರಂಭಿಸಬೇಕಿದೆ" ಎಂದು ವಾಸಿಂ ಜಾಫರ್ ಇಂಗ್ಲೆಂಡ್ ವಿರುದ್ಧದ ಸರಣಿಯ ಬಗ್ಗೆ ಸಲಹೆ ನೀಡಿದ್ದಾರೆ.

"ಭಾರತಕ್ಕೆ ಖಂಡಿತವಾಗಿಯೂ ತವರು ಅಂಗಳದ ಲಾಭವನ್ನು ಪಡೆದುಕೊಳ್ಳಲಿದೆ. ಆದರೆ ಯಾವುದನ್ನೂ ಹಗುರವಾಗಿ ತೆಗೆದುಕೊಳ್ಳುವಂತಿಲ್ಲ. ಆಸ್ಟ್ರೇಲಿಯಾದಲ್ಲಿ ನಡೆದಿರುವುದನ್ನು ನೀವು ಬಿಡಬೇಕಾಗುತ್ತದೆ. ಆ ಆತ್ಮವಿಶ್ವಾಸವನ್ನು ಮುಂದುವರಿಸಿಕೊಂಡು ಹೊಸ ಆರಂಭವನ್ನು ಪಡೆಯಬೇಕು" ಎಂದು ವಾಸಿಂಗ್ ಜಾಫರ್ ಪ್ರತಿಕ್ರಿಯಿಸಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಭಾರತೀಯ ಯುವ ಆಟಗಾರರ ಬಗ್ಗೆ ವಾಸಿಂಗ್ ಜಾಫರ್ ಪ್ರಶಂಸೆಯನ್ನು ವ್ಯಕ್ತಪಡಿಸಿದರು. ಶುಬ್ಮನ್ ಗಿಲ್ ಹಾಗೂ ರಿಷಭ್ ಪಂತ್ ಪ್ರದರ್ಶನವನ್ನು ಕೊಂಡಾಡಿದ ಜಾಫರ್ ಆಸ್ಟ್ರೇಲಿಯಾ ನೆಲದಲ್ಲಿ ವಾಶಿಂಗ್ಟನ್ ಸುಂದರ್ ಹಾಗೂ ಶಾರ್ದೂಲ್ ಠಾಕೂರ್ ಟೆಸ್ಟ್ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸುತ್ತಾರೆ ಎಂದು ಊಹೆಯನ್ನೂ ಮಾಡಿರಲಿಲ್ಲ ಎಂದಿದ್ದಾರೆ.

"ಐಪಿಎಲ್‌ಗೆ ಮುನ್ನ ನಟರಾಜನ್ ಟೀಮ್ ಇಂಡಿಯಾಗೆ ಮೂರು ಮಾದರಿಯಲ್ಲೂ ಪದಾರ್ಪಣೆಯನ್ನು ಮಾಡಲಿದ್ದಾರೆ ಎಂದು ಯಾರು ಊಹಿಸಲು ಸಾಧ್ಯವಿತ್ತು. ಅವರೆಲ್ಲರೂ ಶ್ರೇಷ್ಠವಾದ ಪ್ರದರ್ಶನವನ್ನು ನೀಡಿದ್ದಾರೆ. ಅದು ಯುವ ಆಟಗಾರರ ಅದ್ಭುತವಾದ ಪ್ರದರ್ಶನ. ನನಗೆ ಈ ಹುಡುಗರು ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲೂ ಅದ್ಭುತವಾಗಿ ಆಡಲಿದ್ದಾರೆ ಎಂಬ ಸಂಪೂರ್ಣ ಭರವಸೆಯಿದೆ" ಎಂದು ಮಾಜಿ ಆರಂಭಿಕ ಆಟಗಾರ ವಾಸಿಂ ಜಾಫರ್ ಟೀಮ್ ಇಂಡಿಯಾ ಆಟಗಾರರ ಬಗ್ಗೆ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

This News Article is a Copy of MYKHEL