ಐಎಸ್‌ಎಲ್: ಕೇರಳ ವಿರುದ್ಧ ಗೆಲ್ಲುವ ಛಲದಲ್ಲಿ ಮುಂಬೈ ಸಿಟಿ ತಂಡ

03-02-21 05:18 pm       Source: MYKHEL   ಕ್ರೀಡೆ

ಮುಂಬೈ ಸಿಟಿ ಎಫ್ ಸಿ ವಿರುದ್ಧ ಅತ್ಯಂತ ಕೇರಳ ಬ್ಲಾಸ್ಟರ್ಸ್ ತಂಡ ಜಿಎಂಸಿ ಕ್ರೀಡಾಂಗಣದಲ್ಲಿ ನಡೆಯಲಿರುವ ಮುಖಾಮುಖಿಯಲ್ಲಿ ಗೆಲ್ಲುವ ಆಶಯ ಹೊಂದಿದೆ.

ಗೋವಾ, ಫೆಬ್ರವರಿ 3: ಮುಂಬೈ ಸಿಟಿ ಎಫ್ ಸಿ ವಿರುದ್ಧ ಅತ್ಯಂತ ಕಳಪೆ ದಾಖಲೆಯನ್ನು ಹೊಂದಿರುವ ಕೇರಳ ಬ್ಲಾಸ್ಟರ್ಸ್ ತಂಡ ಬುಧವಾರ ಇಲ್ಲಿನ ಜಿಎಂಸಿ ಕ್ರೀಡಾಂಗಣದಲ್ಲಿ ನಡೆಯಲಿರುವ ಮುಖಾಮುಖಿಯಲ್ಲಿ ಗೆಲ್ಲುವ ಆಶಯ ಹೊಂದಿದೆ. ಕಳೆದ ಐದು ಮುಖಾಮುಖಿಯಲ್ಲಿ ಕೇರಳ ತಂಡ ಮುಂಬೈ ವಿರುದ್ಧ ಜಯ ಗಳಿಸುವಲ್ಲಿ ವಿಫಲವಾಗಿತ್ತು.ಎರಡು ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡರೆ ಮೂರು ಪಂದ್ಯಗಳಲ್ಲಿ ಸೋತಿತ್ತು.

"ಮುಂಬೈ ಸಿಟಿ ತಂಡ ಈಗ ಸ್ಪರ್ಧೆಯಲ್ಲಿ ನಾಯಕರು. ಅವರದ್ದು ಉತ್ತಮ ತಂಡ. ಉತ್ತಮ ಆಟಗಾರರು ಮತ್ತು ಉತ್ತಮ ತರಬೇತುದಾರರಿಂದ ಕೂಡಿದ ತಂಡ. ನಾಳೆ ಪಂದ್ಯದಲ್ಲಿ ಜಯ ಗಳಿಸುವುದು ನಮಗೆ ಕಠಿಣ ಸವಾಲೆನಿಸಿದೆ. ನಾವು ಮುಂಬೈ ಸಿಟಿ ತಂಡವನ್ನು ಎದುರಿಸಲು ಸಜ್ಜಾಗಿದ್ದೇವೆ," ಎಂದು ಕೇರಳ ಕೋಚ್ ವಿಕುನಾ ಹೇಳಿದ್ದಾರೆ.ಆರು ಪಂದ್ಯಗಳಲ್ಲಿ ಜಯ ಹಾಗೂ ಒಂದು ಪಂದ್ಯದಲ್ಲಿ ಡ್ರಾ ಗಳಿಸಿದ್ದಾರೆ.

ಸರ್ಗಿಯೋ ಲೊಬೆರಾ ತಂಡದ ವಿರುದ್ಧ ಕೇರಳ ತಂಡ ಹಿಂದಿನಿಂದ ಸಂಕಷ್ಟ ಎದುರಿಸುತ್ತಿತ್ತು. ಗೋವಾ ತಂಡದ ಮಾಜಿ ಕೋಚ್ ಲೊಬೆರಾ ಕೇರಳ ವಿರುದ್ಧ ಉತ್ತಮ ರೀತಿಯಲ್ಲಿ ಯಶಸ್ಸು ಕಂಡಿದ್ದಾರೆ. " ಅವರದ್ದು ಉತ್ತಮ ತಂಡ ನಾವು, ಮೂರು ಅಂಕ ಗಳಿಸಲು ಯತ್ನಿಸುತ್ತೇವೆ," ಎಂದರು. ಹಿಂದಿನ ಪಂದ್ಯದಲ್ಲಿ ಕೇರಳ ತಂಡ 2-3 ಗೋಲುಗಳ ಅಂತರದಲ್ಲಿ ಎಟಿಕೆ ಮೋಹನ್ ಬಾಗನ್ ತಂಡಕ್ಕೆ ಶರಣಾಗಿತ್ತು.

ಕೆಲವು ವಿವಾದಾತ್ಮಕ ತೀರ್ಮಾನಗಳು ಕೇರಳದ ವಿರುದ್ಧವಾಗಿ ಬಂದಿತ್ತು. ಅದೆಲ್ಲವನ್ನು ಮರರೆತು ಮುಂದಿನ ಪಂದ್ಯದಲ್ಲಿ ಜಯ ಗಳಿಸಬೇಕಾಗಿದೆ ಎಂದು ವಿಕುನಾ ಹೇಳಿದ್ದಾರೆ. "ನಾವು ನಾಳೆಪ ಪಂದ್ಯದ ಬಗ್ಗೆ ಗಮನ ಹರಿಸಬೇಕು. ಅಷ್ಟು ಮಾತ್ರ ನಾವು ಮಾಡಡಬಲ್ಲೆವು. ನಾವು ಉತ್ತಮ ರೀತಿಯಲ್ಲಿ ಆಡಿ ಪಂದ್ಯವನ್ನು ಗೆಲ್ಲಬೇಕು," ಎಂದರು. ಮುಂಬೈ ತಂಡ ಕೂಡ ಇತ್ತೀಚಿನ ದಿನಗಳಲ್ಲಿ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲವಾಗಿದೆ. ಕಳೆದ ನಾಲ್ಕು ಪಂದ್ಯಗಳಲ್ಲಿ ಗೆದ್ದಿರುವುದು ಒಂದು ಪಂದ್ಯದಲ್ಲಿ ಮಾತ್ರ. ನಾರ್ಥ್ ಈಸ್ಟ್ ವಿರುದ್ಧ ಲೀಗ್ ನಲ್ಲಿ ಎರಡನೇ ಸೋಲು ಅನುಭವಿಸಿತು.

ಈ ಪರಿಸ್ಥಿತಿ ಬಂದೇ ಬರುತ್ತದೆ ಎಂದು ನಾವು ತಿಳಿದಿದ್ದೆವು, ಏಕೆಂದರೆ ಋತುವಿನಲ್ಲಿ ಒಂದೇ ಒಂದೂ ಪಂದ್ಯವನ್ನು ಸೋಲದೆ ಇರಲು ಸಾಧ್ಯವಿಲ್ಲ. ನಾವು ಮೊದಲ ಪಂದ್ಯದಲ್ಲಿ ನಾರ್ಥ್ ಈಸ್ಟ್ ವಿರುದ್ಧ ಸೋತಿದ್ದೆವು, 12 ಪಂದ್ಯಗಳ ನಂತರ ನಾವು ಅದೇ ತಂಡದ ವಿರುದ್ಧ ಸೋಲು ಅನುಭವಿಸಿದೆವು. ನಾವು ಪ್ರತಿಕ್ರೆಯೆ ನೀಡಡಲು ಸಿದ್ಧರಾಗಿದ್ದೇವೆ. ಇದು ಸ್ಪರ್ಧಾತ್ಮಕ ಲೀಗ್ ಎನ್ನುವುದು ನಮಗೆ ಗೊತ್ತು. ನಮಗೆ ಮುನ್ನಡೆಗೆ ಇದು ಪರಿಣಾಮ ಬೀರಬಾರದು ಎಂಬ ರೀತಿಯಲ್ಲಿ ಆಡುತ್ತಿದ್ದೇವೆ, ನಾವು ಪ್ರತಿಯೊಂದು ಪಂದ್ಯದಲ್ಲೂ ಸುಧಾರಣೆ ಕಂಡುಕೊಳ್ಳುತ್ತಿದ್ದೇವೆ. ನಾವು ಯಾವಾಗಲು ತಪ್ಪಿನಿಂದ ಪಾಠ ಕಲಿಯಲು ಯತ್ನಿಸುತ್ತೇವೆ, ಆದರೆ ಆ ಬಗ್ಗೆ ಚಿಂತಿಸುವುದಿಲ್ಲ," ಎಂದು ಲೊಬೆರಾ ಹೇಳಿದರು.

This News Article is a Copy of MYKHEL