ಐಪಿಎಲ್ ಹರಾಜು ಕಣದಲ್ಲಿರುವ ಅರ್ಜುನ್ ತೆಂಡೂಲ್ಕರ್ ಮೂಲಬೆಲೆ ಬಹಿರಂಗ

06-02-21 03:01 pm       Source: MYKHEL Sadashiva   ಕ್ರೀಡೆ

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಈ ಬಾರಿಯ ಐಪಿಎಲ್ ನಲ್ಲಿ ಆಡುವ ಸಾಧ್ಯತೆ ಹೆಚ್ಚಿದೆ.

ನವದೆಹಲಿ: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಆಡುವ ಸಾಧ್ಯತೆ ಹೆಚ್ಚಿದೆ. ಆಟಗಾರರ ಹರಾಜಿಗಾಗಿ ನೋಂದಾಯಿಸಿಕೊಂಡಿದ್ದ ಅರ್ಜುನ್ ಸದ್ಯ ಹರಾಜು ಕಣದಲ್ಲಿರುವ ಆಟಗಾರರ ಪಟ್ಟಿಯಲ್ಲಿದ್ದಾರೆ.

ಒಟ್ಟು 1097 ಮಂದಿ ಹರಾಜಿಗಾಗಿ ನೋಂದಾಯಿಸಿಕೊಂಡಿದ್ದಾರೆ. ಹರಾಜಿಗೆ ನೋಂದಾಯಿಸಿಕೊಂಡ 1097 ಮಂದಿಯಲ್ಲಿ 814 ಮಂದಿ ಭಾರತೀಯರು, 283 ಜನ ವಿದೇಶಿಯರು. ಫೆಬ್ರವರಿ 4ರಂದು ಐಪಿಎಲ್ ಹರಾಜಿಗೆ ಆಟಗಾರರ ನೋಂದಾವಣೆ ಪ್ರಕ್ರಿಯೆ ಕೊನೆಗೊಂಡಿದೆ. ಫೆಬ್ರವರಿ 18ರಂದು ಹರಾಜು ಪ್ರಕ್ರಿಯೆ ಚೆನ್ನೈನಲ್ಲಿ 3 pmಗೆ ಆರಂಭಗೊಳ್ಳಲಿದೆ. ಹರಾಜಿಗಾಗಿ ನೋಂದಾಯಿಸಿಕೊಂಡಿರುವ 1097 ಆಟಗಾರರಲ್ಲಿ ಒಬ್ಬರಾಗಿರುವ ಅರ್ಜುನ್ ತೆಂತೂಲ್ಕರ್ ಅವರ ಮೂಲ ಬೆಲೆ 20 ಲಕ್ಷ ರೂ. ಐಪಿಎಲ್‌ನಲ್ಲಿ ನಿಷೇಧಕ್ಕೀಡಾಗಿ ಮತ್ತೆ ವಾಪಸ್ಸಾತಿ ಮಾಡಲಿರುವ ಎಸ್‌ ಶ್ರೀಶಾಂತ್ ಮೂಲಬೆಲೆ 57 ಲಕ್ಷ ರೂ. ಚೇತೇಶ್ವರ ಪೂಜಾರ ಮೂಲಬೆಲೆ 75 ಲಕ್ಷ ರೂ.

ಸದ್ಯ ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ಪ್ರವಾಸ ಸರಣಿ ನಡೆಯುತ್ತಿದೆ. ಈ ಸರಣಿ ಬಳಿಕ ಐಪಿಎಲ್ 2021ರ ಆವೃತ್ತಿ ನಡೆಯಲಿದೆ. ಭಾರತ-ಇಂಗ್ಲೆಂಡ್ ಟೆಸ್ಟ್‌ ಸರಣಿ ಮುಂಬರಲಿರುವ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಸ್ಪರ್ಧಿಯನ್ನೂ ನಿರ್ಧರಿಸಲಿದೆ. ಅಂದ್ಹಾಗೆ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಮುಂಬೈ ಪರ 2 ಪಂದ್ಯಗಳಲ್ಲಿ 2 ವಿಕೆಟ್ ಪಡೆದಿದ್ದ ಅರ್ಜುನ್, 2017ರಲ್ಲಿ ಮಹಿಳಾ ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡಕ್ಕೆ ನೆಟ್ ಬೌಲರ್ ಆಗಿ ಕರ್ತವ್ಯ ನಿರ್ವಹಿಸಿದ್ದರು.

This News Article is a Copy of MYKHEL