ಕೊಹ್ಲಿ ವಿಕೆಟ್ ವೃತ್ತಿ ಬದುಕಿನಲ್ಲಿ ಹೆಚ್ಚು ತೃಪ್ತಿ ನೀಡಿದೆ: ಡಾಮ್ ಬೆಸ್

08-02-21 03:56 pm       Source: MYKHEL Sadashiva   ಕ್ರೀಡೆ

ಇಂಗ್ಲೆಂಡ್‌ನ ಯುವ ಆಫ್ ಸ್ಪಿನ್ನರ್ ಡಾಮ್ ಬೆಸ್ ಗೆ ಭಾರತ ಪ್ರವಾಸ ಹೆಚ್ಚು ಅವಿಸ್ಮರಣೀಯವಾಗಿರಲಿದೆ.

ಚೆನ್ನೈ: ಇಂಗ್ಲೆಂಡ್‌ನ ಯುವ ಆಫ್ ಸ್ಪಿನ್ನರ್ ಡಾಮ್ ಬೆಸ್ ಗೆ ಭಾರತ ಪ್ರವಾಸ ಹೆಚ್ಚು ಅವಿಸ್ಮರಣೀಯವಾಗಿರಲಿದೆ. ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ಮೊದಲನೇ ಟೆಸ್ಟ್‌ನ 3ನೇ ದಿನದಾಟದ ವೇಳೆ ಬೆಸ್ 55 ರನ್‌ಗೆ 4 ವಿಕೆಟ್ ಮುರಿದಿದ್ದರು.

23ರ ಹರೆಯದ ಡೊಮಿನಿಕ್ ಬೆಸ್, 23 ಎಸೆತಗಳಲ್ಲಿ ಒಟ್ಟು 4 ವಿಕೆಟ್ ಮುರಿದಿದ್ದರು. ಅದರಲ್ಲಿ ಸಿಕ್ಕಿದ ಮೊದಲ ವಿಕೆಟ್ ಎಂದರೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರದ್ದು. 24.4ನೇ ಓವರ್‌ನಲ್ಲಿ ಬೆಸ್ ಎಸೆತಕ್ಕೆ ಕೊಹ್ಲಿ, ಆಲ್ಲಿ ಪೋಪ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

ಆಗ ಕೊಹ್ಲಿ ಕೇವಲ 11 ರನ್ ಗಳಿಸಿದ್ದರು. ಭಾನುವಾರ (ಫೆಬ್ರವರಿ 7) 3ನೇ ದಿನದಾಟ ಮುಕ್ತಾಯದ ಬಳಿಕ ಮಾತನಾಡಿದ ಡಾಮ್ ಬೆಸ್, 'ನನ್ನ ವೃತ್ತಿ ಬದುಕಿನಲ್ಲಿ ವಿರಾಟ್ ಕೊಹ್ಲಿ ವಿಕೆಟ್ ನನಗೆ ಅತೀ ಹೆಚ್ಚು ತೃಪ್ತಿ ನೀಡಿದ ವಿಕೆಟ್. ಕೊಹ್ಲಿ ಖಂಡಿತಾ ಒಬ್ಬ ಬೆಸ್ಟ್ ಪ್ಲೇಯರ್. ಆತ ತುಂಬಾ ವಿಶೇಷ. ಅದಕ್ಕಿಂತಲೂ ನಾನು ವಿಕೆಟ್ ಪಡೆದಿದ್ದು ಖುಷಿ ನೀಡಿದೆ,' ಎಂದು ಹೇಳಿದ್ದಾರೆ.

ಭಾನುವಾರ 3ನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ನಾಯಕ ಜೋ ರೂಟ್ ಅವರ ದ್ವಿಶತಕದ ಕೊಡುಗೆಯೊಂದಿಗೆ 190.1 ಓವರ್‌ಗೆ 578 ರನ್ ಗಳಿಸಿದ್ದರೆ, ಮೊದಲ ಇನ್ನಿಂಗ್ಸ್‌ ಆಡುತ್ತಿರುವ ಭಾರತ 74 ಓವರ್‌ಗೆ 6 ಪ್ರಮುಖ ವಿಕೆಟ್ ಕಳೆದು 257 ರನ್ ಪೇರಿಸಿತ್ತು.

This News Article is a Copy of MYKHEL