ಐಎಸ್‌ಎಲ್: ಪ್ಲೇಆಫ್ ಆಸೆಯಲ್ಲಿ ಚೆನ್ನೈಯಿನ್ ಮತ್ತೊಂದು ಹೋರಾಟ

10-02-21 04:46 pm       Source: MYKHEL   ಕ್ರೀಡೆ

ಪಂದ್ಯಗಳನ್ನು ಗೆಲ್ಲುವ ಸಾಮರ್ಥ್ಯ ನಮ್ಮಲ್ಲಿದೆ. ಆದರೆ ನಾವು ನಮ್ಮ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಅಫೆನ್ಸ್ ವಿಚಾರದಲ್ಲೂ ನಮ್ಮಲ್ಲಿ ಸ್ಥಿರ ಪ್ರದರ್ಶನದ ಅಗತ್ಯ ಇದೆ.

ಗೋವಾ: ಈ ಋತುವಿನ ಇಂಡಿಯನ್ ಸೂಪರ್ ಲೀಗ್ ನಲ್ಲಿ ಚೆನ್ನೈಯಿನ್ ತಂಡ ನಿರೀಕ್ಷಿಸಿದಂತೆ ಯಾವುದೂ ಆಗುತ್ತಿಲ್ಲ. ಕಳೆ ಪಂದ್ಯದಲ್ಲಿ ಬೆಂಗಳೂರು ಎಫ್ ಸಿ ವಿರುದ್ಧದ ಪಂದ್ಯದಲ್ಲಿ ಗೋಲಿಲ್ಲದೆ ಡ್ರಾ ಗಳಿಸುವ ಮೂಲಕ ಈ ಋತುವಿನಲ್ಲಿ ಒಂಬತ್ತನೇ ಬಾರಿಗೆ ಗೋಲು ಗಳಿಸುವಲ್ಲಿ ವಿಫಲವಾಯಿತು. ಈಗ ತಂಡಕ್ಕೆ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಇಲ್ಲಿ ಗೆದ್ದರೆ ಮಾತ್ರ ತಂಡ ಮತ್ತೊಮ್ಮೆ ಪ್ಲೇ ಆಫ್ ತಲಪುವ ಆಸೆಯನ್ನು ಜೀವಂತವಾಗಿ ಉಳಿಯಲಿದೆ. ಈಗ ಹೆಚ್ಚಿನ ಎಲ್ಲ ತಂಡಗಳು ಪ್ಲೇ ಆಫ್ ಗಾಗಿ ಹೋರಾಟ ಮುಂದುವರಿಸಿವೆ. ಆದ್ದರಿಂದ ಚೆನ್ನೈಯಿನ್ ತಂಡಕ್ಕೆ ಜಯವಲ್ಲದೆ ಬೇರೇನೂ ಬೇಕಾಗಿಲ್ಲ.

ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯಬೇಕಾದರೆ ಇನ್ನೂ ಆರು ಅಂಕ ಬೇಕಾಗಿದೆ. ಹಾದಿ ಕಠಿಣವಾಗಿದೆ, ಆದರೆ ಲೆಕ್ಕಾಚಾರದಲ್ಲಿ ಇದು ಸಾಧ್ಯವಿದೆ. ಅಂತಿಮ ಕ್ಷಣದವರೆಗೂ ಹೋರಾಟ ನಡೆಸುವಂತೆ ಚೆನ್ನೈಯಿನ್ ತಂಡಕ್ಕೆ ಸಾಬಾ ಲಾಜ್ಲೋ ತಂಡಕ್ಕೆ ಕರೆನೀಡಿದ್ದಾರೆ.



ಸ್ಥಾನ ಪಡೆಯುವವರೆಗೂ ನಮ್ಮ ಹೋರಾಟ

"ನಾವು ಈಗಲೂ ಗೆಲ್ಲುವ ಭರವಸೆ ಹೊಂದಿದ್ದೇವೆ. ಅಂತಿಮ ನಾಲ್ಕರಲ್ಲಿ ಸ್ಥಾನ ಪಡೆಯುವವರೆಗೂ ನಮ್ಮ ಹೋರಾಟ ಮುಂದುವರಿಸಬೇಕು ಸಾಧ್ಯತೆ ಇದೆ. ನಾಳೆಯ ಪಂದ್ಯ ಕೇವಲ ಜೆಮ್ಷೆಡ್ಪುರ ತಂಡಕ್ಕೆ ಮಾತ್ರವಲ್ಲ ಇತರ ತಂಡಗಳಿಗೂ ಪ್ರಮುಖವಾಗಿದೆ" ಎಂದರು. ಗೋಲ್ ಸಮ್ಮುಖದಲ್ಲಿ ವಿಫಲವಾಗುತ್ತಿರುವುದು ಚೆನ್ನೈಯಿನ್ ತಂಡದ ಹಿನ್ನಡೆಗೆ ಪ್ರಮುಖ ಕಾರಣವಾಗಿದೆ. ಎರಡು ಬಾರಿ ಚಾಂಪಿಯನ್ ಪಟ್ಟಗೆದ್ದಿರುವ ತಂಡ ಹಲವಾರು ಅವಕಾಶಗಳನ್ನು ನಿರ್ಮಿಸಿದರೂ ಗೋಲು ಗಳಿಸುವಲ್ಲಿ ವಿಫಲವಾಗಿರುತ್ತದೆ. ಕಳೆದ ಐದು ಪಂದ್ಯಗಳಲ್ಲಿ ಚೆನ್ನೈಯಿನ್ ಓಪನ್ ಪ್ಲೇ ಮೂಲಕ ಗೋಲು ಗಳಿಸಿಲ್ಲ.



ಸದುಪಯೋಗಪಡಿಸಿಕೊಳ್ಳಬೇಕು

"ಪಂದ್ಯಗಳನ್ನು ಗೆಲ್ಲುವ ಸಾಮರ್ಥ್ಯ ನಮ್ಮಲ್ಲಿದೆ. ಆದರೆ ನಾವು ನಮ್ಮ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಅಫೆನ್ಸ್ ವಿಚಾರದಲ್ಲೂ ನಮ್ಮಲ್ಲಿ ಸ್ಥಿರ ಪ್ರದರ್ಶನದ ಅಗತ್ಯ ಇದೆ. ಹಲವಾರು ಅವಕಾಶಗಳನ್ನು ನಿರ್ಮಿಸಿದರು ಅವುಗಳನ್ನು ಗೋಲಾಗಿ ಪರಿವರ್ತಿಸುವಲ್ಲಿ ವಿಫಲವಾಗುವುದು ಸೂಕ್ತವಲ್ಲ. ಆದರೂ ನಮ್ಮ ಆಟಗಾರರ ಮೇಲೆ ನಂಬಿಕೆ ಇದೆ, ನಾವು ನಮ್ಮ ನೈಜ ಆಟವನ್ನು ಆಡಲಿದ್ದೇವೆ," ಎಂದು ಲಾಜ್ಲೋ ಹೇಳಿದರು.



ಇತ್ತಂಡಗಳನ್ನು ಪ್ರತ್ಯೇಕಿಸಿದೆ

ಜೆಮ್ಷೆಡ್ಪುರ ತಂಡ ತಮ್ಮ ಎದುರಾಳಿಗಿಂತ ಒಂದು ಸ್ಥಾನ ಮೇಲೆ ಇದ್ದು, ಕೇವಲ ಒಂದು ಅಂಕ ಇತ್ತಂಡಗಳನ್ನು ಪ್ರತ್ಯೇಕಿಸಿದೆ. "ಅವರದ್ದು ಬಲಿಷ್ಠ ತಂಡ. ಅವರು ಸಾಕಷ್ಟು ಅವಕಾಶಗಳನ್ನು ನಿರ್ಮಿಸಿದ್ದಾರೆ. ಆದರೆ ಅವರು ಸಾಮರ್ಥ್ಯಕ್ಕೆ ತಕ್ಕಂತೆ ಆಡಿಲ್ಲ. ಆದರೆ ಅವರು ಕಠಿಣ ಎದುರಾಳಿ ಎಂಬುದನ್ನು ನಾವು ಬಲ್ಲೆವು," ಎಂದು ಓವೆನ್ ಕೊಯ್ಲ್ ಹೇಳಿದರು.

This News Article is a Copy of MYKHEL