ಅವಹೇಳನಕಾರಿ ಹೇಳಿಕೆಗೆ ವ್ಯಾಪಕ ಟೀಕೆ: ರಾಜೀನಾಮೆ ನೀಡಿದ ಟೋಕಿಯೋ 2020 ಒಲಿಂಪಿಕ್ಸ್ ಅಧ್ಯಕ್ಷ

11-02-21 01:03 pm       Source: MYKHEL Madhukara Shetty   ಕ್ರೀಡೆ

ಟೋಕಿಯೋ ಒಲಿಂಪಿಕ್ಸ್‌ನ ಮುಖ್ಯಸ್ಥ ಸ್ಥಾನಕ್ಕೆ ಯೊಶಿರೋ ಮೋರಿ ರಾಜೀನಾಮೆಯನ್ನು ನೀಡಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌ನ ಮುಖ್ಯಸ್ಥ ಸ್ಥಾನಕ್ಕೆ ಯೊಶಿರೋ ಮೋರಿ ರಾಜೀನಾಮೆಯನ್ನು ನೀಡಿದ್ದಾರೆ. ಜಪಾನ್‌ನಲ್ಲಿ ಇತ್ತೀಚೆಗೆ ನಿಡಿದ ಹೇಳಿಕೆ ಅವರ ಈ ಸ್ಥಾನಕ್ಕೆ ಮುಳುವಾಗಿದ್ದು ಅನಿವಾರ್ಯವಾಗಿ ರಾಜೀನಾಮೆ ನಿಡುವಂತೆ ಮಾಡಿದೆ. ಮಹಿಳೆಯರ ಬಗ್ಗೆ ನೀಡಿದ ಅವಹೇಳನಕಾರಿ ಹೇಳಿಕೆಗೆ ತೀವ್ರ ಟೀಕೆ ಎದುರಾದ ಹಿನ್ನೆಲೆಯಲ್ಲಿ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದಾರೆ.

ಒಲಿಂಪಿಕ್ಸ್‌ನ ಇತ್ತೀಚಿನ ಸಭೆಯಲ್ಲಿ ಯೊಶಿರೋ ಮೋರಿ ನಿಡಿದ್ದ ಹೇಳಿಕೆಯನ್ನು ಜಪಾನ್ ಮಾಧ್ಯಮಗಳು ವರದಿ ಮಾಡಿದ್ದವು. ಆ ವರದಿಯಂತೆ ಅಂದು ಮೀರಿ ಅವರು "ಮಂಡಳಿಯ ಸಭೆಯಲ್ಲಿ ಮಹಿಳಾ ಸದಸ್ಯರು ಹೆಚ್ಚಾಗಿದ್ದರೆ ಸಭೆ ಬಹಳ ಸಮಯವನ್ನು ತೆಗೆದುಕೊಳ್ಳುತ್ತದೆ. ಯಾಕೆಂದರೆ ಮಹಿಳೆಯರು ಸ್ಪರ್ಧಾತ್ಮಕ ಮನೋಭಾವ ಹೊಂದಿದವರು. ಓರ್ವ ಮಹಿಳೆ ಮಾತನಾಡಲು ಕೈ ಎತ್ತಿದರೆ ಉಳಿದವರಿಗೂ ಮಾತನಾಡುವ ಬಯಕೆ ಉಂಟಾಗುತ್ತದೆ" ಎಂದಿದ್ದರು.

ಇದರ ಜೊತೆಗೆ ಯೆಶರೋ ಮೊರಿ "ನೀವು ಮಹಿಳಾ ಸದಸ್ಯರ ಸಂಖ್ಯೆಯನ್ನು ಹೆಚ್ಚಳ ಮಾಡಲು ಬಯಸಿದರೆ ಸಭೆಯ ಅವಧಿಯನ್ನು ಕೂಡ ಹೆಚ್ಚಳ ಮಾಡಬೇಕಾಗುತ್ತದೆ. ಇಲ್ಲವಾದಲ್ಲಿ ನೀವು ಸಂಕಷ್ಟಕ್ಕೆ ಸಿಲುಕುತ್ತೀರಿ" ಎಂದು ಹೇಳಿಕೆಯನ್ನು ನೀಡಿದ್ದರು ಎಂಬುದು ವರದಿಯಾಗಿತ್ತು. ಇದು ಸಾರ್ವಜನಿಕವಾಗಿ ತೀವ್ರ ಟೀಕೆಗೆ ಈಡಾಗುತ್ತಿದ್ದಂತೆಯೇ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ(IOC )ಕೂಡ ಈ ಹೇಳಿಕೆಯನ್ನು ಖಂಡಿಸಿತ್ತು.

ಯೊಶಿರೋ ಮೋರಿ ತನ್ನ ಹೇಳಿಕೆ ವಿವಾದದ ಸ್ವರೂಪವನ್ನು ಪಡೆದುಕೊಲ್ಳುತ್ತಿದ್ದಂತೆಯೇ ಕ್ಷಮಾಪಣೆಯನ್ನೂ ಕೇಳಿದ್ದರು. ಆದರೆ ರಾಜೀನಾಮೆಯನ್ನು ನೀಡುವುದಿಲ್ಲ ಎಂದು ಹೇಳಿಕೊಂಡಿದ್ದರು. ಆದರೆ ಸಾರ್ವಜನಿಕರ ಆಕ್ರೋಶಗಳು ಹೆಚ್ಚಾಗುತ್ತಿದ್ದಂತೆಯೇ ಅಂತಿಮವಾಗಿ ಯೊಶಿರಿ ಮೋರಿ ರಾಜೀನಾಮೆ ನೀಡಿದ್ದಾರೆ.

This News Article is a Copy of MYKHEL