ಆಸ್ಟ್ರೇಲಿಯಾ ಓಪನ್: ಸೆರೆನಾಗೆ ಮುನ್ನಡೆ, ಅಭಿಮಾನಿಗಳಿಗೆ ನಿಷೇಧ

12-02-21 04:42 pm       Source: MYKHEL Sadashiva   ಕ್ರೀಡೆ

ಮೆಲ್ಬರ್ನ್‌ನಲ್ಲಿ ನಡೆದ ಆಸ್ಟ್ರೇಲಿಯಾ ಓಪನ್‌ ಮಹಿಳಾ ವಿಭಾಗದ ಮೂರನೇ ಸುತ್ತಿನ ಪಂದ್ಯದಲ್ಲಿ ಅಮೆರಿಕಾ ಬಲಿಷ್ಠೆ ಸೆರೆನಾ ವಿಲಿಯಮ್ಸ್ ನಾಲ್ಕನೇ ಸುತ್ತಿಗೆ ಪ್ರವೇಶಿಸಿದ್ದಾರೆ.

ಮೆಲ್ಬರ್ನ್:  ಮೆಲ್ಬರ್ನ್‌ನಲ್ಲಿ ನಡೆದ ಆಸ್ಟ್ರೇಲಿಯಾ ಓಪನ್‌ ಮಹಿಳಾ ವಿಭಾಗದ ಮೂರನೇ ಸುತ್ತಿನ ಪಂದ್ಯದಲ್ಲಿ ಅಮೆರಿಕಾ ಬಲಿಷ್ಠೆ ಸೆರೆನಾ ವಿಲಿಯಮ್ಸ್ ನಾಲ್ಕನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಆದರೆ ಟೂರ್ನಿಯಲ್ಲಿ ಮುಂದಿನ ಐದು ದಿನಗಳ ಕಾಲ ಅಭಿಮಾನಿಗಳ ಪ್ರವೇಶ ನಿಷೇಧಿಸಲಾಗಿದೆ.

ಮೂರನೇ ಸುತ್ತಿನ ಪಂದ್ಯದಲ್ಲಿ 23 ಗ್ರ್ಯಾಂಡ್‌ಸ್ಲ್ಯಾಮ್‌ ಪ್ರಶಸ್ತಿ ವಿಜೇತ ಸೆರೆನಾ ವಿಲಿಯಮ್ಸ್ ಅವರು ರಷ್ಯಾದ ಅನಸ್ತಾಸಿಯಾ ಪೊಟಪೋವಾ ಅವರನ್ನು 7-6 (5), 6-2 ಅಂತರದಿಂದ ಸೋಲಿಸಿ 4ನೇ ಸುತ್ತಿನ ಸ್ಪರ್ಧೆಗೆ ಮುನ್ನಡೆ ಗಿಟ್ಟಿಸಿಕೊಂಡಿದ್ದಾರೆ. ಶುಕ್ರವಾರದ ಪಂದ್ಯ ರಾಡ್ ಲಾವರ್ ಅರೆನಾದಲ್ಲಿ ಸಾಧಾರಣ ಪ್ರೇಕ್ಷಕರನ್ನು ರಂಜಿಸಿತ., ಆದರೆ ಮೆಲ್ಬೋರ್ನ್ ಹೋಟೆಲ್ನಲ್ಲಿ ಕೋವಿಡ್-19 ಪ್ರಕರಣಗಳು ಏಕಾಏಕಿ ಹೆಚ್ಚಾದ ಕಾರಣ ಶನಿವಾರದಿಂದ ಐದು ದಿನಗಳವರೆಗೆ ಅಭಿಮಾನಿಗಳನ್ನು ಪಂದ್ಯಾವಳಿಯಿಂದ ನಿಷೇಧಿಸಲಾಗುವುದು ಎಂದು ಸರ್ಕಾರಿ ಅಧಿಕಾರಿಗಳು ಘೋಷಿಸಿದ್ದಾರೆ.

ಮುಂದಿನ ಐದು ದಿನಗಳವರೆಗೆ ಅಭಿಮಾನಿಗಳು ಸ್ಟೇಡಿಯಂ ಒಳಗೆ ಬರುತ್ತಿಲ್ಲ ಎಂದು ಅರಿವಾದಾಗ ಸೆರೆನಾ, 'ಅಭಿಮಾನಿಗಳು ಬರುತ್ತಿಲ್ಲವೆ? ಛೆ, ಇದು ಬೇಸರದ ಸಂಗತಿ. ಹಾಗಾದರೆ ನಾನು ಅಲ್ಲೀವರೆಗೂ ಉಳಿದುಕೊಳ್ಳಲೇಬೇಕು' (ಟೂರ್ನಿಯಿಂದ ಹೊರ ಬೀಳಬಾರದು ಎಂಬರ್ಥದಲ್ಲಿ) ಎಂದಿದ್ದಾರೆ

This News Article is a Copy of MYKHEL