ಐಎಸ್‌ಎಲ್: ಚೆನ್ನೈಯಿನ್ ತಂಡಕ್ಕೆ ಪ್ಲೇ ಆಫ್ ತಲುಪಲು ಕೊನೆಯ ಅವಕಾಶ

13-02-21 03:07 pm       Source: MYKHEL   ಕ್ರೀಡೆ

ಹೀರೋ ಇಂಡಿಯನ್ ಸೂಪರ್ ಲೀಗ್ ನ 7ನೇ ಆವೃತ್ತಿಯಲ್ಲಿ ಪ್ಲೇ ಆಫ್ ಹಂತ ತಲುಪುವ ಚೆನ್ನೈಯಿನ್ ಎಫ್ ಸಿ ತಂಡದ ಅವಕಾಶ ಈಗ ಕೊನೆಯ ಹಂತಕ್ಕೆ ತಲುಪಿದೆ.

ಗೋವಾ: ಹೀರೋ ಇಂಡಿಯನ್ ಸೂಪರ್ ಲೀಗ್ ನ 7ನೇ ಆವೃತ್ತಿಯಲ್ಲಿ ಪ್ಲೇ ಆಫ್ ಹಂತ ತಲುಪುವ ಚೆನ್ನೈಯಿನ್ ಎಫ್ ಸಿ ತಂಡದ ಅವಕಾಶ ಈಗ ಕೊನೆಯ ಹಂತಕ್ಕೆ ತಲುಪಿದೆ. ಶನಿವಾರ ಇಲ್ಲಿನ ಜಿಎಂಸಿ ಕ್ರೀಡಾಂಗಣದಲ್ಲಿ ಗೋವಾ ವಿರುದ್ಧ ಆಡಲಿರುವ ಎರಡು ಬಾರಿ ಚಾಂಪಿಯನ್ ಚೆನ್ನೈಯಿನ್ ಎಫ್ ಸಿ ಸೋಲು ಅನುಭವಿಸಿದರೆ ಟೂರ್ನಿಯಿಂದ ಹೊರನಡೆದಂತೆ. ಒಂದು ವೇಳೆ ಜಯ ಗಳಿಸಿದರೂ ಹಲವಾರು ಅಂಶಗಳು ತಂಡದ ಪರವಾಗಿ ಘಟಿಸಬೇಕಾಗುತ್ತದೆ.

ಕೋಚ್ ಸಾಬಾ ಲಾಜ್ಲೋ ಅವರು ಮುಂದೆ ಎಷ್ಟೇ ಪಂದ್ಯಗಳು ಉಳಿದಿರಲಿ ಆದರೆ ನಾಳೆಯ ಪಂದ್ಯದಲ್ಲಿ ಜಯ ಗಳಿಸುವ ಗುರಿಯನ್ನು ನಮ್ಮ ಆಟಗಾರರು ಹೊಂದಿದ್ದಾರೆ ಎಂದು ಹೇಳಿದ್ದಾರೆ. "ಜೆಮ್ಷೆಡ್ಪುರ ವಿರುದ್ಧ ಜಯ ಗಳಿಸಲು ನಮಗೆ ಉತ್ತಮ ಅವಕಾಶವಿದ್ದಿತ್ತು, ಆದರೆ ಉಡುಗೊರೆ ಗೋಲು ಕೊನೆಯ ಕ್ಷಣದಲ್ಲಿ ನಮ್ಮ ಜಯವನ್ನು ಕಸಿದುಕೊಂಡಿತು. ಇದು ಬಹಳ ನೋವನ್ನು ತರುವಂಥದ್ದು ಏಕೆಂದರೆ ನಮಗೆ ಗೋಲು ಗಳಿಸಲು ಮತ್ತು ಪಂದ್ಯವನ್ನು ಗೆಲ್ಲಲು ಉತ್ತಮ ಅವಕಾಶವಿದ್ದಿತ್ತು. ಆದರೆ ನೋವನ್ನು ಸ್ವೀಕರಿಸಿ ಮುಂದಿನ ಪಂದ್ಯಕ್ಕಾಗಿ ನಾವು ಸಜ್ಜಾಗಿದ್ದೇವೆ.

ಮುಂದಿನ ಮೂರು ಪಂದ್ಯಗಳಲ್ಲಿ ಜಯ ಗಳಿಸುವುದು ನಮ್ಮ ಗುರಿ. ನಾಳೆಯ ಪಂದ್ಯದಲ್ಲಿ ಗೋವಾದ ವಿರುದ್ಧ ಆಡಿ ಈಗಲೂ ನಮ್ಮದು ಉತ್ತಮ ತಂಡ ಎಂಬುದನ್ನು ತೋರಿಸಬೇಕಾಗಿದೆ," ಎಂದು ಚೆನ್ನೈಯಿನ್ ಕೋಚ್ ಹೇಳಿದ್ದಾರೆ.

ಗೋಲು ಗಳಿಸಬೇಕಾಗಿದೆ

ಗೋವಾ ವಿರುದ್ಧ ಏನೇ ಮಾಡಿದರೂ ಚೆನ್ನೈಯಿನ್ ತಂಡ ಗೋಲು ಗಳಿಸಬೇಕಾಗಿದೆ. ಟಾರ್ಗೆಟ್ ಗೆ ಗುರಿ ಇಡವುದರಲ್ಲಿ ಮತ್ತು ಅವಕಾಶಗಳನ್ನು ನಿರ್ಮಿಸುವುದರಲ್ಲಿ ಚೆನ್ನೈಯಿನ್ ಲೀಗ್ ನಲ್ಲೇ ಎರಡನೇ ಸ್ಥಾನದಲ್ಲಿದೆ. ಆದರೆ ತಂಡ ಗಳಿಸಿರುವುದು ಅತಿ ಕಡಿಮೆ ಸಂಖ್ಯೆಯ ಗೋಲು. 17 ಪಂದ್ಯಗಳಲ್ಲಿ ಚೆನ್ನೈಯಿನ್ ತಂಡ 10 ಪಂದ್ಯಗಳಲ್ಲಿ ಗೋಲು ಗಳಿಸಿರಲಿಲ್ಲ. ಹತ್ತು ಗಂಟೆಗೂ ಹೆಚ್ಚು ಅವಧಿಯ ಫುಟ್ಬಾಲ್ ಆಡಡಿದರೂ ತಂಡ ಗೋಲು ದಾಖಲಿಸಲಿಲ್ಲ.


ಕ್ಲೀನ್ ಶೀಟ್ ಸಾಧನೆ ಮಾಡಿದೆ

ಗೋವಾ ತಂಡ ಇಡೀ ಋತುವಿನಲ್ಲಿ ಇದುವರೆಗೂ ಕೇವಲ ಎರಡು ಕ್ಲೀನ್ ಶೀಟ್ ಸಾಧನೆ ಮಾಡಿದೆ, ಗೋವಾ ತಂಡಕ್ಕೆ ಈ ತಡೆಯನ್ನು ಮೀರಿ ಸಾಗಬೇಕಿದೆ. ಕೋಚ್ ಜುವಾನ್ ಫೆರಾಂಡೊ ಅವರಿಗೆ ಗುರಿ ಬಹಳ ಸರಳ. ಜಯ ಗಳಿಸಿದರೆ ಇನ್ನೂ ಮೂರು ಪಂದ್ಯ ಬಾಕಿ ಇರುವಾಗಲೇ ಪ್ಲೇ ಆಫ್ ತಲುಪಿದಂತಾಗುತ್ತದೆ. ಮುಂಬೈ ಸಿಟಿ ಎಫ್ ಸಿ ವಿರುದ್ಧದ ಪಂದ್ಯದಲ್ಲಿ 3-3 ಗೋಲುಗಳಿಂದ ಡ್ರಾ ಸಾದಿಸಿರುವುದು ತಂಡದ ಉತ್ತಮ ಸಾಧನೆ. "ಈ ತಂಡವು ತರಬೇತಿ ಮತ್ತು ಪಂದ್ಯದ ವೇಳೆ ಸಾಕಷ್ಟು ಕಠಿಣ ಶ್ರಮ ವಹಿಸುತ್ತಿದೆ. ಅತಿ ಪ್ರಮುಖವಾದ ಅಂಶವೆಂದರೆ ಅವರಲ್ಲಿ ಬಲಿಷ್ಠ ಆಟಗಾರರಿದ್ದಾರೆ. ಅವರಿಗೆ ಎಲ್ಲ ಪಂದ್ಯಗಳನ್ನು ಗೆಲ್ಲಬೇಕಾಗಿದೆ. ನನಗೆ ಒಂದು ಖುಷಿಯ ಸಂಗತಿಯೆಂದರೆ ಗೋಲು ಗಳಿಸದೇ ಇರುವಾಗ ಮತ್ತು ಕಠಿಣ ಪರಿಸ್ಥಿತಿಯಲ್ಲಿದ್ದಾಗ ನಮ್ಮ ಆಟಗಾರರು ಉತ್ತಮವಾಗಿಯೇ ಆಡುತ್ತಾರೆ," ಎಂದರು.



ಹಗುರವಾಗಿ ಪರಿಗಣಿಸುವಂತಿಲ್ಲ

ಚೆನ್ನೈಯಿನ್ ತಂಡದಲ್ಲಿ ಸಾಕಷ್ಟು ಸಮಸ್ಯೆಗಳಿದ್ದರೂ ಎದುರಾಳಿಯನ್ನು ಹಗುರವಾಗಿ ಪರಿಗಣಿಸುವಂತಿಲ್ಲ ಎಂದು ಫೆರಾಡೋ ಹೇಳಿದ್ದಾರೆ. ಹಿಂದಿನ ಫಲಿತಾಂಶಗಳು ಶನಿವಾರದ ಪಮದ್ಯದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ. "ಚೆನ್ನೈಯಿನ್ ವಿರುದ್ಧದ ಮೊದಲ ಪಂದ್ಯವನ್ನು ನಾನು ನೆನಪಿಟ್ಟಕೊಂಡಿದ್ದೇನೆ. ನಮಗೆ ಆವಾಗ ಪಂದ್ಯಕ್ಕೆ ಸಜ್ಜಾಗಲು ಕೇವಲ ಎರಡು ದಿನಗಳ ಕಾಲಾವಕಾಶವಿದ್ದಿತ್ತು. ಆಗ ತಂಡದ ಆಟಗಾರರು ದಣಿದಿದ್ದರು, ಈಗಲೂ ದಣಿದಿದ್ದಾರೆ, ಆದರೆ ಈಗಿನ ಮನಸ್ಥತಿಯೇ ಬೇರೆ." ಎಂದರು.

This News Article is a Copy of MYKHEL