ಐಎಸ್‌ಎಲ್: ಬೆಂಗಳೂರಿಗೆ ಭರ್ಜರಿ ಜಯ, ಪ್ಲೇ ಆಫ್ ಆಸೆ ಜೀವಂತ

16-02-21 11:18 am       Source: MYKHEL   ಕ್ರೀಡೆ

ಬೆಂಗಳೂರು ಎಫ್‌ಸಿ ಪರ 200ನೇ ಪಂದ್ಯವನ್ನಾಡಿದ ನಾಯಕ ಸುನಿಲ್ ಛೆಟ್ರಿ ಆ ಪಂದ್ಯವನ್ನು ಅವಿಸ್ಮರಣೀಯಗೊಳಿಸಿದ್ದಾರೆ.

ಗೋವಾ: ಬೆಂಗಳೂರು ಎಫ್‌ಸಿ ಪರ 200ನೇ ಪಂದ್ಯವನ್ನಾಡಿದ ನಾಯಕ ಸುನಿಲ್ ಛೆಟ್ರಿ ಆ ಪಂದ್ಯವನ್ನು ಅವಿಸ್ಮರಣೀಯಗೊಳಿಸಿದ್ದಾರೆ. ಬಲಿಷ್ಠ ಮುಂಬೈ ವಿರುದ್ಧದ ಪಂದ್ಯದಲ್ಲಿ ಬೆಂಗಳೂರು ತಂಡ 4-2 ಗೋಲುಗಳ ಅಂತರದಲ್ಲಿ ಜಯ ಗಳಿಸಿ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಪ್ಲೇ ಆಫ್ ತಲುಪುವ ಆಸೆಯನ್ನು ಜೀವಂತವಾಗಿರಸಿಕೊಂಡಿದೆ. ಬೆಂಗಳೂರು ಎಫ್‌ಸಿ ಪರ ಕ್ಲೈಟನ್ ಸಿಲ್ವಾ (1 ಮತ್ತು 22ನೇ ನಿಮಿಷ) ಮತ್ತು ಸುನಿಲ್ ಛೆಟ್ರಿ (57 ಮತ್ತು 90ನೇ ನಿಮಿಷ) ಗೋಲು ಗಳಿಸಿ ಜಯದ ರೂವಾರಿ ಎನಿಸಿದರು. ಮುಂಬೈ ಪರ ಜೇಮ್ಸ್ ಲೇ ಫಾಂಡ್ರೆ (50 ಮತ್ತು 72ನೇ ನಿಮಿಷ) ಗಳಿಸಿದ ಗೋಲು ಸೋಲಿನ ಅಂತರವನ್ನು ಕಡಿಮೆಮಾಡಿತು.

ಈ ಜಯದೊಂದಿಗೆ ಬೆಂಗಳೂರು 6ನೇ ಸ್ಥಾನ ತಲುಪಿತು. ಬಲಿಷ್ಠ ಮುಂಬೈ ಸಿಟಿ ವಿರುದ್ಧದ ಪಂದ್ಯದಲ್ಲಿ ಬೆಂಗಳೂರು ಎಫ್ ಸಿ ಪ್ರಥಮಾರ್ಧದಲ್ಲಿ 2-0 ಗೋಲಿನಿಂದ ಮುನ್ನಡೆದು ಜಯಕ್ಕೆ ಅಗತ್ಯವಿರುವ ವೇದಿಕೆ ನಿರ್ಮಿಸಿಕೊಂಡಿತು. ಕ್ಲೈಟನ್ ಸಿಲ್ವಾ (1 ಮತ್ತು 22ನೇ ನಿಮಿಷ) 2 ಗೋಲು ಗಳಿಸಿ ತಂಡಕ್ಕೆ ಅಗತ್ಯ ಮುನ್ನಡೆ ಕಲ್ಪಿಸಿದರು. ಹಿಂದಿನ ಪಂದ್ಯದಲ್ಲಿ ಗಾಯದ ಸಮಸ್ಯೆಯಿಂದಾಗಿ ಕ್ಲೈಟನ್ ಆಡಿರಲಿಲ್ಲ. ಇದರಿಂದಾಗಿ ಬೆಂಗಳೂರು ಸೋಲಿಗೆ ಶರಣಾಗಿತ್ತು. ಆದರೆ ಈ ಬಾರಿ ಪಂದ್ಯ ಆರಂಭಗೊಂಡ ಮೊದಲ ನಿಮಿಷದಲ್ಲೇ ಗೋಲು ಗಳಿಸಿ ತಂಡದಲ್ಲಿ ಆತ್ಮವಿಶ್ವಾಸವನ್ನು ತುಂಬಿದರು.



ಮುನ್ನಡೆದ ಬೆಂಗಳೂರು

ಅಜಿತ್ ಕುಮಾರ್ ಚೆಂಡನ್ನು ತಮ್ಮದೇ ಕಡೆಗೆ ಪಾಸ್ ಮಾಡಲು ಯತ್ನಿಸಿದರು. ಆದರೆ ರೇನಿಯರ್ ಫೆರ್ನಾಂಡೀಸ್ ಅದನ್ನು ತಡೆದರು. ಅದು ಸುನಿಲ್ ಛೆಟ್ರಿಯ ನಿಯಂತ್ರಣಕ್ಕೆ ಸಿಕ್ಕಿತು. ಛೆಟ್ರಿ ಚೆಂಡನ್ನು ಬಲಭಾಗದಲ್ಲಿದ್ದ ಉದಾಂತ್ ಸಿಂಗ್ ಗೆ ನೀಡಿದರು. ಪಂದ್ಯದಲ್ಲಿ ಸಿಕ್ಕ ಮೊದಲ ಪಾಸನ್ನು ನಿಖರವಾಗಿ ಕ್ಲೈಟನ್ ಸಿಲ್ವಾಗೆ ನೀಡಿದರು ಸಿಲ್ವಾ ಉತ್ತಮ ರೀತಿಯಲ್ಲಿ ನೇರವಾಗಿ ನೆಟ್ ಗೆ ತಳ್ಳಿದರು, ಕೇವಲ ಒಂದು ನಿಮಿಷದಲ್ಲೇ ಬೆಂಗಳೂರು ಖಾತೆ ತೆರೆಯಿತು. ಮೊದಲ ನಿಮಿಷದ 25 ಸೆಕೆಂಡುಗಳಲ್ಲೇ ಗೋಲು ದಾಖಲಾಗಿರುವುದು ವಿಶೇಷ. 22ನೇ ನಿಮಿಷದಲ್ಲಿ ಕ್ಲೈಟನ್ ಸಿಲ್ವಾ ತಂಡಕ್ಕೆ 2-0 ಮುನ್ನಡೆ ಕಲ್ಪಿಸಿದರು. ಬಲಭಾಗದಿಂದ ಬಂದ ಪಾಸನ್ನು ಸ್ವೀಕರಿಸಲು ಸಿಕ್ಸೋ ಹೆರ್ನಾಂಡೀಸ್ ಸಜ್ಜಾಗಿದ್ದರು. ಅವರು ಪಾಸನ್ನು ಪೆನಾಲ್ಟಿ ವಲಯಕ್ಕೆ ತಳ್ಳಿದರು. ವೇಗವಾಗಿ ಓಡಿ ಬಂದ ಕ್ಲೈಟನ್ ಸಿಲ್ವಾ ಹೆಡರ್ ಮೂಲಕ ಚೆಂಡನ್ನು ನೆಟ್ ಗೆ ತಳ್ಳಿದರು.


ಬೆಂಗಳೂರಿಗೆ ಜಯದ ಗುರಿ

ಇಂಡಿಯನ್ ಸೂಪರ್ ಲೀಗ್ ನಲ್ಲಿ ಈಗಾಗಲೇ ಪ್ಲೇ ಆಫ್ ಹಂತ ತಲುಪಿರುವ ಮುಂಬೈ ಸಿಟಿ ಎಫ್ ಸಿ ತಂಡ ಸುಸ್ಥಿತಿಯಲ್ಲಿದೆ. ಋತುವಿನ ಹೆಚ್ಚಿನ ಸಮಯವನ್ನು ಅಗ್ರ ಸ್ಥಾನದಲ್ಲೇ ಕಳೆದರುವ ಸರ್ಗಿಯೊ ಲೊಬೆರಾ ಪಡೆ ಇತ್ತೀಚಿನ ಪಂದ್ಯಗಳಲ್ಲಿ ಅಮೂಲ್ಯ ಅಂಕಗಳನ್ನು ಕಳೆದುಕೊಂಡಿತ್ತು. ಎಟಿಕೆ ಮೋಹನ್ ಬಾಗನ್ ತಂಡ ಜಯ ಗಳಿಸುವ ಮೂಲಕ ಮುಂಬೈ ಈಗ ಎರಡನೇ ಸ್ಥಾನಕ್ಕೆ ಕುಸಿದಿದೆ. ಈ ಮಾನಸಿಕ ಲಾಭವನ್ನು ಜಯವಾಗಿ ಪರಿವರ್ತಿಸಲು ಬೆಂಗಳೂರು ಎಫ್ ಸಿಗೆ ಇದು ಸಕಾಲ. ಬೆಂಗಳೂರು ಕೂಡ ಸಂಕಷ್ಟದಲ್ಲಿದೆ. ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳಬೇಕಾದರೆ ಬಲಿಷ್ಠ ಮುಂಬೈ ವಿರುದ್ಧ ಜಯ ಗಳಿಸಲೇಬೇಕಾದ ಒತ್ತಡದಲ್ಲಿ ಬೆಂಗಳೂರು ಇದೆ. ಹಿಂದಿನ ನಾಲ್ಕು ಪಂದ್ಯಗಳಲ್ಲಿ ಮುಂಬೈ ತಂಡ ಕ್ಲೀನ್ ಶೀಟ್ ಸಾಧನೆಯನ್ನು ಮಾಡಿಲ್ಲ. ಅಲ್ಲದೆ ಏಳು ಗೋಲುಗಳನ್ನು ನೀಡಿದೆ. ಹಿಂದಿನ 12 ಪಂದ್ಯಗಳಲ್ಲಿ ನೀಡಿದ್ದು ಕೇವಲ 7 ಗೋಲುಗಳು.



ಸಾಲು ಸಾಲು ಸವಾಲು 

ಕಳೆದ ನಾಲ್ಕು ಪಂದ್ಯಗಳಲ್ಲಿ 12 ಅಂಕ ಗಳಿಸುವ ಗುರಿ ಹೊಂದಿದ್ದ ತಂಡ ಗಳಿಸಿದ್ದು ಕೇವಲ 5 ಅಂಕಗಳು. ಹಿಂದಿನ ಪಂದ್ಯದಲ್ಲಿ ಗೋವಾ ವಿರುದ್ಧ 3-3 ಗೋಲುಗಳ ಅಂತರದಲ್ಲಿ ಡ್ರಾ ಸಾಧಿಸಿತ್ತು. ಹ್ಯುಗೋ ಬೌಮಾಸ್ ಅಮಾನತುಗೊಂಡಿರುವ ಕಾರಣ ಇಂದಿನ ಪಂದ್ಯದಲ್ಲಿ ಆಡುತ್ತಿಲಲ. ಇದು ಮುಂಬೈ ಪಡೆಗೆ ತುಂಬಲಾರದ ನಷ್ಟವಾಗಲಿದೆ. ಬೆಂಗಳೂರಿಗೆ ಇಲ್ಲಿ ಗೆಲ್ಲಲೇಬೇಕಾದ ಒತ್ತಡವಿದೆ. ಹಿಂದಿನ ಪಂದ್ಯದಲ್ಲಿ ಕ್ಲೈಟನ್ ಸಿಲ್ವಾ ಆಡಿರಲಿಲ್ಲ. ಇದು ತಂಡದ ಫಲಿತಾಂಶದ ಮೇಲೆ ಪರಿಣಾಮಬೀರಿತ್ತು. ನಾಯಕ ಸುನಿಲ್ ಛೆಟ್ರಿ ಕೂಡ ಈ ಬಾರಿ ಹಿಂದಿನಂತೆ ಮಿಂಚಲಿಲ್ಲ. ಗಳಿಸಿದ್ದು ಕೇವಲ 5 ಗೋಲುಗಳು.

This News Article is a Copy of MYKHEL