2021ರ ಹರಾಜಿನ ನಂತರ ರಾಜಸ್ಥಾನ್ ರಾಯಲ್ಸ್ ತಂಡ ಹೀಗಿದೆ

19-02-21 04:55 pm       Source: MYKHEL Mahesh Malnad   ಕ್ರೀಡೆ

ಐಪಿಎಲ್ ಉದ್ಘಾಟನಾ ಸೀಸನ್ ನಲ್ಲಿ ಕಪ್ ಎತ್ತಿದ್ದ ರಾಜಸ್ಥಾನ್ ರಾಯಲ್ಸ್ ತಂಡ ಈ ಬಾರಿ ಹರಾಜಿನಲ್ಲಿ ಭರ್ಜರಿ ವ್ಯಾಪಾರ ನಡೆಸಿದೆ.

ಚೆನ್ನೈ ಫೆಬ್ರವರಿ 19: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಉದ್ಘಾಟನಾ ಸೀಸನ್ ನಲ್ಲಿ ಕಪ್ ಎತ್ತಿದ್ದ ರಾಜಸ್ಥಾನ್ ರಾಯಲ್ಸ್ ತಂಡ ಈ ಬಾರಿ ಹರಾಜಿನಲ್ಲಿ ಭರ್ಜರಿ ವ್ಯಾಪಾರ ನಡೆಸಿದೆ. ಫೆ.18ರಂದು ಚೆನ್ನೈನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ದಕ್ಷಿಣ ಆಫ್ರಿಕಾದ ಆಲ್ ರೌಂಡರ್ ಕ್ರಿಸ್ ಮೊರಿಸ್ ಅತಿ ಹೆಚ್ಚು ಮೊತ್ತಕ್ಕೆ ರಾಜಸ್ಥಾನ ಖರೀದಿ ಮಾಡಿದೆ.

75 ಲಕ್ಷದ ಮೂಲಬೆಲೆಯಲ್ಲಿ ಹರಾಜು ಪ್ರಕ್ರಿಯೆಯಲ್ಲಿದ್ದ ಮೊರಿಸ್ ಅವರಿಗೆ 16.25 ಕೋಟಿ ರು ಗೆ ರಾಜಸ್ಥಾನ ಖರೀದಿಸಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ರಿಲೀಸ್ ಆಗಿದ್ದ ಮೊರಿಸ್ ಅವರನ್ನು ಖರೀದಿಸಿದ್ದಲ್ಲದೆ, ಆಲ್ ರೌಂಡರ್ ಶಿವಂ ದುಬೆ(ಮೂಲ ಬೆಲೆ 50 ಲಕ್ಷ)ರನ್ನು 4.40 ಕೋಟಿ ರು ನೀಡಿ ಖರೀದಿ ಮಾಡಲಾಯಿತು.

ಬಾಂಗ್ಲಾದೇಶದ ವೇಗಿ ಮುಸ್ತಫಿಜುರ್ ರಹ್ಮಾನ್ 1 ಕೋಟಿ ರುಗೆ ಸೇಲ್ ಆದರೆ, ಅನ್ ಕ್ಯಾಪ್ಡ್ ಆಟಗಾರರಾದ ಚೇತನ್ ಸಕಾರಿಯಾ (1.20 ಕೋಟಿ) ಹಾಗೂ ಕೆಸಿ ಕಾರಿಯಪ್ಪ (20 ಲಕ್ಷ) ಅಲ್ಲದೆ ಇಂಗ್ಲೆಂಡಿನ ಓಪನರ್ ಲಿಯಾಮ್ ಲಿವಿಂಗ್ ಸ್ಟೋನ್ ಅವರನ್ನು 75 ಲಕ್ಷ ರು ಖರ್ಚು ಮಾಡಿ ಖರೀದಿಸಲಾಗಿದೆ. ರಾಯಲ್ಸ್ ನಿಂದ ರಿಲೀಸ್ ಆಗಿದ್ದ ಸ್ಟೀವ್ ಸ್ಮಿತ್ ರನ್ನು ಡೆಲ್ಲಿ ಕ್ಯಾಪಿಟಲ್ಸ್ 2.20 ಕೋಟಿ ರು ಕೊಟ್ಟು ಖರೀದಿಸಿದೆ. ಟಾಮ್ ಕರನ್ ಕೂಡಾ 5.25 ಕೋಟಿ ರುಗೆ ಡೆಲ್ಲಿ ಪಾಲಾಗಿದ್ದಾರೆ.

2021 ರಾಜಸ್ಥಾನ್ ರಾಯಲ್ಸ್ ತಂಡ: ಉಳಿಸಿಕೊಂಡ ಆಟಗಾರರು:

ಸಂಜು ಸ್ಯಾಮ್ಸನ್ (ನಾಯಕ), ಮಹಿಪಾಲ್ ಲೊಮ್ರೊರ್, ಮನನ್ ವೋಹ್ರಾ, ರಿಯಾನ್ ಪರಾಗ್, ಮಯಾಂಕ್ ಮಾರ್ಕಂಡೆ, ಶ್ರೇಯಸ್ ಗೋಪಾಲ್, ಜಯದೇವ್ ಉನದ್ಕತ್, ಕಾರ್ತಿಕ್ ತ್ಯಾಗಿ, ರಾಹುಲ್ ತೇವಾಟಿಯಾ, ಯಶಸ್ವಿ ಜೈಸ್ವಾಲ್, ಅನುಜ್ ರಾವತ್, ಡೇವಿಡ್ ಮಿಲ್ಲರ್, ಜೋಫ್ರಾ ಆರ್ಚರ್, ಆಂಡ್ರ್ಯೂ ಟೈ, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್.

ಹರಾಜಿನಲ್ಲಿ ಖರೀದಿ:

ಕೆಸಿ ಕಾರಿಯಪ್ಪ (20 ಲಕ್ಷ ರು)

ಚೇತನ್ ಸಕಾರಿಯಾ (1.20 ಕೋಟಿ)

ಕ್ರಿಸ್ ಮೊರಿಸ್ (16.25 ಕೋಟಿ )

ಶಿವಂ ದುಬೆ (4.40 ಕೋಟಿ)

ಮುಸ್ತಫಿಜುರ್ ರಹ್ಮಾನ್ (1ಕೋಟಿ)

ಲಿಯಾಮ್ ಲಿವಿಂಗ್ ಸ್ಟೋನ್ (75 ಲಕ್ಷ)

ಕುಲ್ದೀಪ್ ಯಾದವ್ (UC) (20 ಲಕ್ಷ)

This News Article is a Copy of MYKHEL