ಕರ್ನಾಟಕದಲ್ಲಿ 'ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್'ನ 2ನೇ ಆವೃತ್ತಿ

22-02-21 04:09 pm       Source: MYKHEL Sadashiva   ಕ್ರೀಡೆ

ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್ (ಕೆಐಯುಜಿ) ಎರಡನೇ ಆವೃತ್ತಿ ಕರ್ನಾಟಕದಲ್ಲಿ ನಡೆಯಲಿದೆ.

ಬೆಂಗಳೂರು: ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್ (ಕೆಐಯುಜಿ) ಎರಡನೇ ಆವೃತ್ತಿ ಕರ್ನಾಟಕದಲ್ಲಿ ನಡೆಯಲಿದೆ. ಈ ವರ್ಷದ ಅಂತ್ಯಕ್ಕೆ ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್‌ಗೆ ಕರ್ನಾಟಕ ಆತಿಥ್ಯ ವಹಿಸಲಿದೆ ಎಂದು ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಮತ್ತು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಘೋಷಿಸಿದ್ದಾರೆ.

ಅಸೋಸಿಯೇಶನ್ ಆಫ್ ಇಂಡಿಯನ್ ಯುನಿವರ್ಸಿಟಿ (ಎಐಯು) ಸಹಭಾಗಿತ್ವದಲ್ಲಿ ಎರಡನೇ ಆವೃತ್ತಿಯ ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್ ಬೆಂಗಳೂರಿನ ಜೈನ್ ಕಾಲೇಜಿನಲ್ಲಿ ಮತ್ತು ರಾಜ್ಯದ ಇತರ ತಾಣಗಳಲ್ಲಿ ನಡೆಯಲಿವೆ.

ಭಾರತದ ಕ್ರೀಡಾಪ್ರತಿಭೆಗಳನ್ನು ಹೆಕ್ಕಿ ಪ್ರೋತ್ಸಾಹಿಸಲು ನಡೆಸಲಾಗುತ್ತಿರುವ ಬೃಹತ್ ಕ್ರೀಡಾಕೂಟಗಳಲ್ಲಿ ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್ ಕೂಡ ಒಂದು. ಈ ಕೂಟದಲ್ಲಿ ಆಯ್ಕೆಯಾದ ಪ್ರತಿಭೆಗಳನ್ನು ಅಂತಾರಾಷ್ಟ್ರೀಯ ಮಟ್ಟ ಮತ್ತು ಒಲಿಂಪಿಕ್ಸ್‌ಗೆ ಸಜ್ಜುಗೊಳಿಸುವ ಉದ್ದೇಶವನ್ನು ಕ್ರೀಡಾಕೂಟ ಇಟ್ಟುಕೊಂಡಿದೆ.

This News Article is a Copy of MYKHEL