4ನೇ ಟೆಸ್ಟ್‌ಗೂ ಅದೇ ಮಾದರಿಯ ಪಿಚ್ ತಯಾರಿಸಿ: ಪಿಚ್ ಬಗ್ಗೆ ಟೀಕೆಗೆ ವಿವಿಯನ್ ರಿಚರ್ಡ್ಸ್ ತಿರುಗೇಟು

01-03-21 02:29 pm       Source: MYKHEL   ಕ್ರೀಡೆ

ಅಹ್ಮದಾಬಾದ್‌ನಲ್ಲಿ ನಡೆ ಭಾರತ ಹಾಗೂ ಇಂಗ್ಲೆಂಡ್ ನಡಿವಿನ ಟೆಸ್ಟ್ ಸರಣಿಯ ಮೂರನೇ ಪಂದ್ಯ ಎರಡನೇ ದಿನಕ್ಕೆ ಅಂತ್ಯವಾದ ಬಳಿಕ ಸಾಕಷ್ಟು ಚರ್ಚೆಗಳು ನಡೆದಿದೆ.

ಅಹ್ಮದಾಬಾದ್‌ನಲ್ಲಿ ನಡೆ ಭಾರತ ಹಾಗೂ ಇಂಗ್ಲೆಂಡ್ ನಡಿವಿನ ಟೆಸ್ಟ್ ಸರಣಿಯ ಮೂರನೇ ಪಂದ್ಯ ಎರಡನೇ ದಿನಕ್ಕೆ ಅಂತ್ಯವಾದ ಬಳಿಕ ಸಾಕಷ್ಟು ಚರ್ಚೆಗಳು ನಡೆದಿದೆ. ಅದರಲ್ಲೂ ಅಹ್ಮದಾಬಾದ್ ಪಿಚ್ ಬಗ್ಗೆ ಇಂಗ್ಲೆಂಡ್ ಮಾಜಿ ಆಟಗಾರರು ಟೀಕೆಯನ್ನು ವ್ಯಕ್ತಪಡಿಸಿರುವುದು ಚರ್ಚೆಯ ಕೇಂದ್ರ ಬಿಂದುವಾಗಿದೆ. ಆದರೆ ಪಿಚ್‌ಅನ್ನು ಸಮರ್ಥನೆ ಮಾಡಿಕೊಂಡು ಹಲವಾರು ಮಾಜಿ ಆಟಗಾರರು ಕೂಡ ಮಾತನಾಡಿದ್ದಾರೆ.

ಈಗ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ದಿಗ್ಗಜ ಕ್ರಿಕೆಟಿಗ ಮಾಜಿ ಆಟಗಾರ ವಿವಿಯನ್ ರಿಚರ್ಡ್ಸ್ ಕೂಡ ಈ ವಿಚಾರವಾಗಿ ಮಾತನಾಡಿದ್ದಾರೆ. ಆದರೆ ವೆಸ್ಟ್ ಇಂಡೀಸ್‌ನ ಈ ದಿಗ್ಗಜ ಇಂಗ್ಲೆಂಡ್ ಮಾಜಿ ಆಟಗಾರರ ಟೀಕೆಗಳಿಗೆ ಕಠಿಣ ಮಾತುಗಳಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಸ್ಪಿನ್ ನೆಲದಲ್ಲಿ ತಿರುವು ಪಡೆಯುವಂತಾ ಟ್ರ್ಯಾಕ್‌ಗಳನ್ನು ಹೊಂದಿರುವುದು ಆಶ್ಚರ್ಯ ತರುವಂತಾ ಸಂಗತಿಯಲ್ಲ ಎಂದು ರಿಚರ್ಡ್ಸ್ ಹೇಳಿದ್ದಾರೆ. ಇದರ ಜೊತೆಗೆ ಇಂಗ್ಲೆಂಡ್‌ನ ಮಾಜಿ ಆಟಗಾರರು ರೋಧನೆ ನರಳುವಿಕೆಯನ್ನು ನಿಲ್ಲಿಸಿ ಪ್ರವಾಸಿ ತಂಡದ ಆಟಗಾರಿಗೆ ಆಟದಲ್ಲಿ ಗುಣಮಟ್ಟವನ್ನು ಹೆಚ್ಚಿಸಬೇಕು ಎಂದು ತಿಳಿಸುವಂತೆ ಹೇಳಿದ್ದಾರೆ.

"ಜನರು ಏನು ಆಡುತ್ತಿದ್ದಾರೆ ಎಂನುದನ್ನು ಮರೆತಿರುವಂತೆ ಭಾಸವಾಗುತ್ತಿದೆ. ನೀವು ಭಾರತಕ್ಕೆ ಪ್ರವಾಸ ಮಾಡುತ್ತಿದ್ದೀರಿ ಎಂಬುದಾದರೆ ಸ್ಪಿನ್ ದಾಳಿಯನ್ನು ನೀವು ನಿರೀಕ್ಷಿಸಬೇಕು. ಯಾಕೆಂದರೆ ನೀವಿ ಸ್ಪಿನ್ ನೆಲಕ್ಕೆ ತೆರುತ್ತಿದ್ದೀರಿ. ನೀವು ಯಾವ ಹೋರಾಟಕ್ಕೆ ತೆರಖುತ್ತಿದ್ದೀರಿ ಎಂದು ಅರಿತು ಅದಕ್ಕಾಗಿ ನಿಮ್ಮನ್ನು ತಳಮಟ್ಟದಲ್ಲಿಯೇ ಸಿದ್ಧಪಡಿಸಿಕೊಂಡಿರಬೇಕು" ಎಂದಿದ್ದಾರೆ ವಿವಿಯನ್ ರಿಚರ್ಡ್ಸ್.

ಇನ್ನು ಇದೇ ನಾಲ್ಕನೇ ಪಂದ್ಯವನ್ನು ಕೂಡ ನರೇಂದ್ರ ಮೋದಿ ಸ್ಟೇಡಿಯಂನಲ್ಲಿಯೇ ಆಡುತ್ತಿರುವ ಹಿನ್ನೆಲೆಯಲ್ಲಿ ಆ ಪಂದ್ಯಕ್ಕೂ ಮೂರನೇ ಪಂದ್ಯದ ಮಾದರಿಯಲ್ಲಿಯೇ ಪಿಚ್ ತಯಾರಿಸಬೇಕು ಎಂದು ರಿಚರ್ಡ್ಸ್ ಸಲಹೆ ನೀಡಿದ್ದಾರೆ. ನಾಲ್ಕನೇ ಪಂದ್ಯ ಮಾರ್ಚ್ 4ರಿಂದ ಆರಂಭವಾಗಲಿದೆ.

This News Article Is A Copy Of MYKHEL