ಆ್ಯಶಸ್ ಎದುರಾಳಿ ಇಂಗ್ಲೆಂಡ್‌ಗೆ ಬೆಂಬಲ ವ್ಯಕ್ತಪಡಿಸಿದ ಆಸಿಸ್ ಕೋಚ್

02-03-21 03:19 pm       Source: MYKHEL   ಕ್ರೀಡೆ

ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಟೆಸ್ಟ್ ಸರಣಿಯ ಅಂತಿಮ ಟೆಸ್ಟ್ ಪಂದ್ಯವನ್ನಾಡಲು ಕ್ಷಣಗಣನೆ ಆರಂಭವಾಗಿದ್ದರೆ ಅತ್ತ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಹಾಗೂ ಅಭಿಮಾನಿಗಳು ಕೂಡ ಈ ಪಂದ್ಯವನ್ನು ಸಾಕಷ್ಟು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಟೆಸ್ಟ್ ಸರಣಿಯ ಅಂತಿಮ ಟೆಸ್ಟ್ ಪಂದ್ಯವನ್ನಾಡಲು ಕ್ಷಣಗಣನೆ ಆರಂಭವಾಗಿದ್ದರೆ ಅತ್ತ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಹಾಗೂ ಅಭಿಮಾನಿಗಳು ಕೂಡ ಈ ಪಂದ್ಯವನ್ನು ಸಾಕಷ್ಟು ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಈ ಪಂದ್ಯ ಭಾರತ ಹಾಗೂ ಇಂಗ್ಲೆಂಡ್‌ನಷ್ಟೇ ಆಸ್ಟ್ರೇಲಿಯಾಗೂ ಮುಖ್ಯವಾಗಿದೆ.

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೇರಲು ಭಾರತವನ್ನು ಇಂಗ್ಲೆಂಡ್ ತಂಡ ಮಣಿಸಬೇಕಿದೆ. ಹಾಗಿದ್ದರೆ ಮಾತ್ರ ಆಸ್ಟ್ರೇಲಿಯಾ ಈ ಪ್ರತಿಷ್ಟಿತ ಟೂರ್ನಿಯ ಫೈನಲ್ ಹಂತಕ್ಕೇರಲು ಸಫಲವಾಗಲಿದೆ. ಹೀಗಾಗಿ ಆಸ್ಟ್ರೇಲಿಯಾ ತನ್ನ ಬದ್ಧ ಎದುರಾಳಿಗೆ ಈ ಬಾರಿ ಗೆಲ್ಲುವುದಕ್ಕಾಗಿ ಪ್ರಾರ್ಥಿಸಬೇಕಿದೆ. ಇಂಗ್ಲೆಂಡ್ ಮೂರನೇ ಪಂದ್ಯವನ್ನು ಸೋಲುವ ಮೂಲಕ ಈ ಸ್ಪರ್ಧೆಯಿಂದ ಹೊರಬಿದ್ದಿತ್ತು.

"ಇಲ್ಲಿ ನಮ್ಮ ಸ್ವ ಹಿತಾಸಕ್ತಿ ಇದೆ. ಸುದೀರ್ಘ ಕಾಲದ ಬಳಿಕ ನಾವು ಮೊದಲ ಬಾರಿಗೆ ಇಂಗ್ಲೆಂಡ್ ತಂಡವನ್ನು ಬೆಂಬಲಿಸುತ್ತಿದ್ದೇವೆ" ಎಂದು ಆಸ್ಟ್ರೇಲಿಯಾ ತಂಡ ಹಂಗಾಮಿ ಕೋಚ್ ಆಂಡ್ರೋ ಮ್ಯಾಕ್‌ಡೊನಾಲ್ಡ್ ವೆಲ್ಲಿಂಗ್ಟನ್‌ನಲ್ಲಿ ಮಂಗಳವಾರ ಪ್ರತಿಕ್ರಿಯೆ ನೀಡಿದ್ದಾರೆ.

 

"ಅವರು ತಮ್ಮ ಜವಾಬ್ಧಾರಿಯನ್ನು ನೆರವೇರಿಸಲಿದ್ದಾರೆ ಎಂಬ ಭರವಸೆಯನ್ನು ಹೊಂದಿದ್ದೇವೆ. ಅದು ತುಂಬಾ ಕಠಿಣವಾಗಿದೆ ಎಂಬುದರಲ್ಲಿ ಅನುಮಾನವಿಲ್ಲ. ಅವರು ಆಡಿದ ಕೆಲವು ಮೇಲ್ಮೈಗಳು ಸ್ಪಿನ್ ಬೌಲಿಂಗ್‌ಗೆ ಅನುಕೂಲಕರವಾಗಿವೆ ಮತ್ತು ಬಹುಶಃ ಭಾರತದ ಸ್ಪಿನ್ ಆಡುವ ಸಾಮರ್ಥ್ಯ ಅತ್ಯುತ್ತಮವಾಗಿದೆ" ಎಂದು ಮಾಕ್‌ಡೊನಾಲ್ಡ್ ಹೇಳಿದ್ದಾರೆ.

"ಅವರು(ಇಂಗ್ಲೆಂಡ್) ಅತ್ಯುತ್ತಮವಾಗಿ ಪ್ರದರ್ಶನವನ್ನು ನೀಡಲಿ ಎಂದು ಹಾರೈಸುತ್ತೇವೆ. ಆದರೆ ನಮ್ಮ ಕೈಯ್ಯಲ್ಲಿ ಯಾವುದು ಕೂಡ ಇಲ್ಲ. ಆದರೆ ನಾವು ಈ ಪಂದ್ಯವನ್ನು ಬಹಳ ಕುತೂಹಲದಿಂದ ನೋಡುತ್ತೇವೆ" ಎಂದಿದ್ದಾರೆ ಆಸ್ಟ್ರೇಲಿಯಾ ತಂಡದ ಹಂಗಾಮಿ ಕೋಚ್.

This News Article Is A Copy Of  MYKHEL