ಭಾರತ vs ಇಂಗ್ಲೆಂಡ್: ಧೋನಿ ದಾಖಲೆ ಸರಿದೂಗಿಸಿದ ವಿರಾಟ್ ಕೊಹ್ಲಿ

04-03-21 12:11 pm       Source: MYKHEL   ಕ್ರೀಡೆ

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾಜಿ ನಾಯಕ ಎಂಎಸ್ ಧೋನಿ ಹೆಸರಿನಲ್ಲಿದ್ದ ಧಾಖಲೆಯೊಂದನ್ನು ಸರಿದೂಗಿಸಿಕೊಂಡಿದ್ದಾರೆ.

ಅಹ್ಮದಾಬಾದ್: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾಜಿ ನಾಯಕ ಎಂಎಸ್ ಧೋನಿ ಹೆಸರಿನಲ್ಲಿದ್ದ ಧಾಖಲೆಯೊಂದನ್ನು ಸರಿದೂಗಿಸಿಕೊಂಡಿದ್ದಾರೆ. ಭಾರತ ಕ್ರಿಕೆಟ್‌ ತಂಡವನ್ನು ಟೆಸ್ಟ್‌ನಲ್ಲಿ ಅತೀ ಹೆಚ್ಚು ಬಾರಿ ಮುನ್ನಡೆಸಿದ ದಾಖಲೆಗಾಗಿ ಕೊಹ್ಲಿ, ಧೋನಿ ದಾಖಲೆಯನ್ನು ಸರಿದೂಗಿಸಿದ್ದಾರೆ.

ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ-ಇಂಗ್ಲೆಂಡ್ ನಾಲ್ಕನೇ ಟೆಸ್ಟ್‌ ಪಂದ್ಯ ನಡೆಯುತ್ತಿದೆ. ಈ ಪಂದ್ಯದೊಂದಿಗೆ ವಿರಾಟ್ ಕೊಹ್ಲಿ 60ನೇ ಪಂದ್ಯದಲ್ಲಿ ಭಾರತಕ್ಕೆ ಟೆಸ್ಟ್‌ನಲ್ಲಿ ನಾಯಕತ್ವದ ವಹಿಸಿಕೊಂಡಂತಾಗುತ್ತದೆ.

ಇಷ್ಟೇ ಟೆಸ್ಟ್‌ ಪಂದ್ಯಗಳಿಗೆ ಧೋನಿ ಕೂಡ ನಾಯಕತ್ವ ವಹಿಸಿಕೊಂಡಿದ್ದರು. ಹೀಗಾಗಿ ಇಬ್ಬರ ದಾಖಲೆ ಸರಿಸಮವೆನಿಸಿದೆ. ಹಿಂದೆ 59 ಟೆಸ್ಟ್‌ ಪಂದ್ಯಗಳಲ್ಲಿ ನಾಯಕತ್ವ ವಹಿಸಿಕೊಂಡಿದ್ದಾಗ ಭಾರತ 35 ಪಂದ್ಯಗಳಲ್ಲಿ ಗೆದ್ದು, 14 ಪಂದ್ಯಗಳಲ್ಲಿ ಸೋತಿತ್ತು. ಇದರಲ್ಲಿ 10 ಪಂದ್ಯಗಳು ಡ್ರಾ ಅನ್ನಿಸಿತ್ತು. 60 ಟೆಸ್ಟ್‌ ಪಂದ್ಯಗಳಿಗೆ ಧೋನಿ ನಾಯಕರಾಗಿದ್ದಾಗ 27 ಪಂದ್ಯಗಳಲ್ಲಿ ಭಾರತ ಗೆದ್ದಿತ್ತು.

ಹೀಗಾಗಿ ಭಾರತಕ್ಕೆ ಟೆಸ್ಟ್‌ನಲ್ಲಿ ನಾಯಕತ್ವ ವಹಿಸಿ ಗೆದ್ದ ದಾಖಲೆ ಪಟ್ಟಿಯಲ್ಲಿ ಕೊಹ್ಲಿ, ಧೋನಿಯನ್ನು ಮೀರಿಸಿದ್ದಾರೆ. ಭಾರತ-ಇಂಗ್ಲೆಂಡ್ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಮೂರು ಪಂದ್ಯಗಳು ಮುಗಿದಿದ್ದು, ಭಾರತ 2-1ರ ಮುನ್ನಡೆಯಲ್ಲಿದೆ. ಕೊನೇಯ ಪಂದ್ಯದ ಫಲಿತಾಂಶ ಕುತೂಹಲ ಮೂಡಿಸಿದೆ.

This News Article Is A Copy Of MYKHEL