ಐಎಸ್‌ಎಲ್: ಮೋಹನ್ ಬಾಗನ್ ಮತ್ತು ನಾರ್ಥ್ ಈಸ್ಟ್ ಸಮಬಲ

07-03-21 04:38 pm       Source: MYKHEL   ಕ್ರೀಡೆ

ಪ್ರಥಮಾರ್ಧದ 34ನೇ ನಿಮಿಷದಲ್ಲಿ ಡೇವಿಡ್ ವಿಲಿಯಮ್ಸ್ ಎಟಿಕೆಎಂಬಿಗೆ ಮುನ್ನಡೆ ನೀಡಿದ್ದರು. ಆದರೆ ದ್ವಿತಿಯಾರ್ಧದ 94+4ನೇ ನಿಮಿಷದಲ್ಲಿ ಇಡ್ರಿಸಾ ಸಿಲ್ಲಾ ಗಳಿಸಿದ ಗೋಲು ಪಂದ್ಯವನ್ನು ಸಮಬಲಗೊಳಿಸಿತು.

ಗೋವಾ, ಮಾರ್ಚ್ 7: ಹೀರೋ ಇಂಡಿಯನ್ ಸೂಪರ್ ಲೀಗ್ ಎರಡನೇ ಸೆಮಿಫೈನಲ್ ನ ಮೊದಲ ಲೆಗ್ ನ ಪಂದ್ಯ 1-1ರಲ್ಲಿ ಸಮಬಲಗೊಂಡಿದೆ. ಪ್ರಥಮಾರ್ಧದ 34ನೇ ನಿಮಿಷದಲ್ಲಿ ಡೇವಿಡ್ ವಿಲಿಯಮ್ಸ್ ಎಟಿಕೆಎಂಬಿಗೆ ಮುನ್ನಡೆ ನೀಡಿದ್ದರು. ಆದರೆ ದ್ವಿತಿಯಾರ್ಧದ 94+4ನೇ ನಿಮಿಷದಲ್ಲಿ ಇಡ್ರಿಸಾ ಸಿಲ್ಲಾ ಗಳಿಸಿದ ಗೋಲು ಪಂದ್ಯವನ್ನು ಸಮಬಲಗೊಳಿಸಿತು. ಮುನ್ನಡೆದ ಎಟಿಕೆಎಂಬಿ: ಡೇವಿಡ್‌ ವಿಲಿಯಮ್ಸ್ (34ನೇ ನಿಮಿಷ) ಗಳಿಸಿದ ಗೋಲಿನ ನೆರವಿನಿಂದ ಎಟಿಕೆ ಮೋಹನ್ ಬಾಗನ್ ತಂಡ ಪ್ರಥಮಾರ್ಧದಲ್ಲಿ 1-0 ಅಂತರದಲ್ಲಿ ಮೇಲುಗೈ ಸಾಧಿಸಿತು. ಹೆಚ್ಚಿನ ಪಂದ್ಯಗಳಲ್ಲಿ ಪ್ರಥಮಾರ್ಧದಲ್ಲೇ ಗೋಲು ಗಳಿಸಿ ಮೇಲುಗೈ ಸಾಧಿಸಿದ್ದ ನಾರ್ಥ್ ಈಸ್ಟ್ ಈ ಬಾರಿ ಉತ್ತಮ ಡಿಫೆನ್ಸ್ ವಿಭಾಗವನ್ನು ಹೊಂದಿರುವ ಎಟಿಕೆ ವಿರುದ್ಧ ಗೋಲು ಗಳಿಸಿ ಸಮಬಲ ಸಾಧಿಸಲು ವಿಫಲವಾಯಿತು.



ಜಯವೊಂದೇ ಮಂತ್ರ

ಲೀಗ್ ಹಂತದಲ್ಲಿ ಅಚ್ಚರಿಯ ಫಲಿತಾಂಶಗಳನ್ನು ಕಂಡು ಪ್ಲೇ ಆಫ್ ತಲುಪಿರುವ ನಾರ್ಥ್ ಈಸ್ಟ್ ಯುನೈಟೆಡ್ ಎಫ್ ಸಿ.ಗೆ ಈಗ ಮೋಹನ್ ಬಾಗನ್ ವಿರುದ್ಧ ಕಠಿಣ ಸವಾಲು. ಲೀಗ್ ನಲ್ಲಿ ಒಂದು ಹಂತದಲ್ಲಿ ವೈಫಲ್ಯದ ಹಾದಿ ಹಿಡಿದಿದ್ದ ತಂಡ ಇದ್ದಕ್ಕಿದ್ದಂತೆ ಪ್ರಮುಖ ಪಂದ್ಯಗಳನ್ನು ಗೆದ್ದು, ಎರಡನೇ ಬಾರಿಗೆ ಪ್ಲೇ ಆಫ್ ತಲುಪಿತು. ಖಾಲೀದ್ ಜಮೀಲ್ ಕೋಚ್ ಜವಾಬ್ದಾರಿಯನ್ನು ವಹಿಸಿಕೊಂಡ ನಂತರ ನಾರ್ಥ್ ಈಸ್ಟ್ ನ ಅದೃಷ್ಟ ಬದಲಾಯಿತೆಂದರೆ ತಪ್ಪಾಗಲಾರದು. 9 ಪಂದ್ಯಗಳಲ್ಲಿ ಸೋಲನ್ನೇ ಕಂಡಿರದ ತಂಡಕ್ಕೆ ಅದೇ ಆತ್ಮವಿಶ್ವಾಸ.

ಭರ್ಜರಿ ಪ್ರದರ್ಶನ

ಅದರಲ್ಲಿ ಆರು ಜಯ ಮತ್ತು ಮೂರು ಡ್ರಾ ಸೇರಿದೆ. 13 ಪಂದ್ಯಗಳಲ್ಲಿ ಆರಂಭದಲ್ಲಿ ಮುನ್ನಡೆದ ತಂಡ ಎಂಟು ಪಂದ್ಯಗಳಲ್ಲಿ ಜಯ ಗಳಿಸಿದೆ. ಉಳಿದ ಪಂದ್ಯಗಳಲ್ಲಿ ಅಂಕ ಹಂಚಿಕೊಂಡಿದೆ. ಅದೇ ರೀತಿ ಬಾಗನ್ ತಂಡ 14 ಬಾರಿ ಆರಂಭಿಕ ಮುನ್ನಡೆ ಗಳಿಸಿ 12 ಪಂದ್ಯಗಳಲ್ಲಿ ಜಯ ಗಳಿಸಿ 2 ಪಂದ್ಯಗಳಲ್ಲಿ ಡ್ರಾ ಸಾಧಿಸಿತ್ತು.



ಐಎಸ್‌ಎಲ್ ಗೆಲ್ಲುವ ಫೇವರೀಟ್

ನಾರ್ಥ್ ಈಸ್ಟ್ ತಂಡ ಇತಿಹಾಸವನ್ನು ಗಮನಿಸಬೇಕು. ಬಗಾನ್ ಕೋಚ್ ಆಂಟೋನಿಯೊ ಹಬ್ಬಾಸ್ ಐಎಸ್ ಎಲ್ ಸೆಮಿಫೈನಲ್ ನ ಮೊದಲ ಲೆಗ್ ನಲ್ಲಿ ಮೂರು ಬಾಗಿ ಜಯ ಕಂಡಿರಲಿಲ್ಲ. 2 ಸೋಲು ಹಾಗೂ 1 ಡ್ರಾ. ಕೊನೆಯ ಮೂರು ಪಂದ್ಯಗಳ ಫಲಿತಾಂಶ ಎಟಿಕೆ ಮೋಹನ್ ಬಾಗನ್ ತಂಡ ಲೀಗ್ ವಿನ್ನರ್ಸ್ ಶೀಲ್ಡ್ ಕಳೆದುಕೊಳ್ಳುವಂತೆ ಮಾಡಿತು. ಆದರೆ ಕ್ಲಬ್ ಈಗಲೂ ಐಎಸ್ ಎಲ್ ಪ್ರಶಸ್ತಿ ಗೆಲ್ಲುವ ಫೇವರಿಟ್ ಎನಿಸಿದೆ.

This News Article Is A Copy Of MYKHEL