ಎಪ್ರಿಲ್ 9ರಿಂದ ಐಪಿಎಲ್, ಮೇ 30ರಂದು ಮೋದಿ ಸ್ಟೇಡಿಯಂನಲ್ಲಿ ಅದ್ದೂರಿ ಫೈನಲ್ !

07-03-21 07:54 pm       Headline Karnataka News Network   ಕ್ರೀಡೆ

ಕೊರೊನಾ ಕಾರಣ ಕಳೆದ ಬಾರಿ ಭಾರತದಲ್ಲಿ ಕ್ರಿಕೆಟ್ ಪ್ರಿಯರಿಗೆ ವಂಚಿತವಾಗಿದ್ದ ಐಪಿಎಲ್ ಪಂದ್ಯಾವಳಿ ಈ ಬಾರಿ ಎಪ್ರಿಲ್ 9ರಿಂದ ಎಂದಿನ ಅದ್ದೂರಿ ಶೈಲಿಯಲ್ಲೇ ನಡೆಸಲು ಬಿಸಿಸಿಐ ನಿರ್ಧರಿಸಿದೆ.

ಮುಂಬೈ, ಮಾ.7: ಕೊರೊನಾ ಕಾರಣ ಕಳೆದ ಬಾರಿ ಭಾರತದಲ್ಲಿ ಕ್ರಿಕೆಟ್ ಪ್ರಿಯರಿಗೆ ವಂಚಿತವಾಗಿದ್ದ ಐಪಿಎಲ್ ಪಂದ್ಯಾವಳಿ ಈ ಬಾರಿ ಎಪ್ರಿಲ್ 9ರಿಂದ ಎಂದಿನ ಅದ್ದೂರಿ ಶೈಲಿಯಲ್ಲೇ ನಡೆಸಲು ಬಿಸಿಸಿಐ ನಿರ್ಧರಿಸಿದೆ. ಇದಕ್ಕಾಗಿ ಭಾರತದ ವಿವಿಧ ನಗರಗಳಲ್ಲಿ ನಡೆಯುವ ಐಪಿಎಲ್ ಪಂದ್ಯಾಟದ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ.

ಎರಡು ವರ್ಷಗಳ ನಂತರ ಐಪಿಎಲ್ ಪಂದ್ಯಾಟ ಈ ಬಾರಿ ದೆಹಲಿ, ಚೆನ್ನೈ, ಬೆಂಗಳೂರು, ಕೊಲ್ಕತ್ತಾ, ಮುಂಬೈ, ಅಹಮದಾಬಾದ್ ನಗರಗಳಲ್ಲಿ ನಡೆಯಲಿದೆ ಎಂದು ಬಿಸಿಸಿಐ ಹೇಳಿದೆ. ಎಪ್ರಿಲ್ 9ರಂದು ಉದ್ಘಾಟನಾ ಪಂದ್ಯ ಚೆನ್ನೈನಲ್ಲಿ ನಡೆಯಲಿದ್ದು, ಚೆನ್ನೈ ಕಿಂಗ್ಸ್ ಮತ್ತು ಬೆಂಗಳೂರು ರಾಯಲ್ ಚಾಲೆಂಜರ್ಸ್ ಸೆಣಸಲಿದೆ.

ಫೈನಲ್ ಪಂದ್ಯಾಟ ಮೇ 30ರಂದು ಅಹಮದಾಬಾದ್ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಅದ್ದೂರಿ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಇತ್ತೀಚೆಗಷ್ಟೆ ಒಂದೂವರೆ ಲಕ್ಷ ಆಸನ ಸಾಮರ್ಥ್ಯವುಳ್ಳ ಜಗತ್ತಿನ ಅತಿ ದೊಡ್ಡ ಕ್ರೀಡಾಂಗಣವಾಗಿ ಇಲ್ಲಿನ ಸ್ಟೇಡಿಯಂ ಅನ್ನು ಪರಿವರ್ತಿಸಲಾಗಿದ್ದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಲೋಕಾರ್ಪಣೆ ಮಾಡಿದ್ದರು. ಇದೀಗ ಮೊದಲ ಬಾರಿಗೆ ಐಪಿಎಲ್ ಪಂದ್ಯಾವಳಿ ಅದರಲ್ಲಿ ನಡೆಯಲಿದ್ದು, ಫೈನಲ್ ಪಂದ್ಯಾಟದ ಆಕರ್ಷಣೆಗೆ ಬೃಹತ್ ಕ್ರೀಡಾಂಗಣ ಸಾಕ್ಷಿಯಾಗಲಿದೆ.

ಒಟ್ಟು 56 ಲೀಗ್ ಪಂದ್ಯಗಳಲ್ಲಿ ಚೆನ್ನೈ, ಬೆಂಗಳೂರು, ಕೊಲ್ಕತ್ತಾ, ಮುಂಬೈ ತಲಾ ಹತ್ತು ಪಂದ್ಯಗಳನ್ನು ಆಯೋಜನೆ ಮಾಡಲಿವೆ. ಅಹಮದಾಬಾದ್, ದೆಹಲಿ ತಲಾ 8 ಪಂದ್ಯಗಳನ್ನು ಆಯೋಜಿಸಲಿದೆ. ಆದರೆ, ಈ ಬಾರಿ ವಿಶೇಷ ಏನಂದ್ರೆ, ಯಾವುದೇ ತಂಡವು ತಮ್ಮ ಹೋಮ್ ಪಿಚ್ ನಲ್ಲಿ ಆಡುವುದಿಲ್ಲ. ಮಧ್ಯಾಹ್ನ 3.30ಕ್ಕೆ ಮತ್ತು ಸಂಜೆಯ ಪಂದ್ಯ 7.30ಕ್ಕೆ ಆರಂಭಗೊಳ್ಳಲಿದೆ.

The BCCI announced the schedule for the Indian Premier League 2021 on Sunday. The IPL 2021 season will begin on April 9 in Chennai, with defending champions Mumbai Indians taking on Royal Challengers Bangalore.