ಐಪಿಎಲ್ 2021: ಡಿಸ್ನಿ ಸ್ಟಾರ್‌ ಸ್ಪೋರ್ಟ್ಸ್‌ ಗಳಿಕೆಯ ಗುರಿ 3200 ಕೋ.ರೂ.

10-03-21 12:23 pm       Source: MYKHEL   ಕ್ರೀಡೆ

2021ರ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ವೇಳೆ ಜಾಹೀರಾತುಗಳಿಂದ 3200 ಕೋ.ರೂ.

ನವದೆಹಲಿ: 2021ರ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ವೇಳೆ ಜಾಹೀರಾತುಗಳಿಂದ 3200 ಕೋ.ರೂ. ಗಳಿಕೆಯ ಗುರಿಯನ್ನು ಡಿಸ್ನಿ ಸ್ಟಾರ್ ಸ್ಪೋರ್ಟ್ಸ್‌ ಇಟ್ಟುಕೊಂಡಿರುವುದಾಗಿ ವರದಿಯೊಂದು ಹೇಳಿದೆ. ಏಪ್ರಿಲ್ 9ರಿಂದ ಮೇ 30ರ ವರೆಗೆ ಭಾರತದ ಅದ್ದೂರಿ ಕ್ರಿಕೆಟ್ ಟೂರ್ನಿ ನಡೆಯಲಿದೆ.

ಟಿ20ಐನಲ್ಲಿ ಭಾರತ-ಇಂಗ್ಲೆಂಡ್: ಕುತೂಹಲಕಾರಿ ಅಂಕಿ-ಅಂಶಗಳು! ಲಭ್ಯ ಮಾಹಿತಿಯ ಪ್ರಕಾರ ಈ ಬಾರಿಯ ಐಪಿಎಲ್ ಸೀಸನ್‌ನಲ್ಲಿ ಜಾಹೀರಾತುಗಳಿಂದ ಸುಮಾರು 3200 ಕೋ.ರೂ. ಗಳಿಕೆಯ ಗುರಿಯನ್ನು ಡಿಸ್ನಿ ಸ್ಟಾರ್‌ ಸ್ಪೋರ್ಟ್ಸ್ ಇಟ್ಟುಕೊಂಡಿದೆ. ಸ್ಟಾರ್ ಇಂಡಿಯಾ ಐಪಿಎಲ್ ಆನ್-ಏರ್ ಪ್ಯಾಕೇಜ್‌ಗಳ ದರವನ್ನು ಸುಮಾರು 15-20% ಹೆಚ್ಚಿಸಿರುವುದಾಗಿ ಇನ್‌ಸೈಡ್‌ಸ್ಪೋರ್ಟ್ ಡಾಟ್ ಕಾಮ್ ವರದಿ ಮಾಡಿದೆ.

ಇತರ ದೊಡ್ಡ ಬ್ರ್ಯಾಂಡ್‌ಗಳಾದ ಏರ್‌ಟೆಲ್, ಆನ್‌ಲೈನ್ ಇನ್ವೆಸ್ಟ್‌ಮೆಂಟ್ ಕಂಪನಿ 'ಗ್ರೋವ್' ಕೂಡ ಸ್ಟಾರ್‌ ಸ್ಪೋರ್ಟ್ಸ್‌ ನೆಟ್ವರ್ಕ್ಸ್‌ನೊಂದಿಗೆ ಆನ್‌ ಏರ್ ಪ್ರಾಯೋಜಕತ್ವದ ಬಗ್ಗೆ ಸಮಾಲೋಚನೆ ನಡೆಸುತ್ತಿದ್ದು, ಮಾತುಕತೆ ಅಂತಿಮ ಹಂತದಲ್ಲಿದೆ ಎಂದು ಹೇಳಲಾಗಿದೆ.

ಈ ಬಾರಿ ಐಪಿಎಲ್ ವೇಳೆ ಜಾಹೀರಾತು ಪ್ರತೀ 10 ಸೆಕೆಂಡ್‌ಗಳಿಗೆ 13 ರಿಂದ 13.5 ಲಕ್ಷ ರೂ.ಗಳನ್ನು ವಿಧಿಸಲಿರುವುದಾಗಿ ಸ್ಟಾರ್‌ ಸ್ಪೋರ್ಟ್ಸ್‌ ಈ ಹಿಂದೆ ಹೇಳಿತ್ತು. ಐಪಿಎಲ್ 2020ರ ವೇಳೆ ಸ್ಟಾರ್‌ ಸ್ಪೋರ್ಟ್ಸ್‌ ಪ್ರತೀ 10 ಸೆಕೆಂಡ್‌ಗೆ 11/11.5 ಲಕ್ಷ ರೂ. ವಿಧಿಸಿತ್ತು. ಸದ್ಯ ಭಾರತ ಮತ್ತು ಇಂಗ್ಲೆಂಡ್ ಪ್ರವಾಸ ಸರಣಿ ನಡೆಯುತ್ತಿದ್ದು, ಇದರ ಅಧಿಕೃತ ಪ್ರಸಾರಕ ಹಕ್ಕನ್ನೂ ಸ್ಟಾರ್‌ ಸ್ಪೋರ್ಟ್ಸ್‌ ವಹಿಸಿಕೊಂಡಿದೆ.

This News Article Is A Copy Of MYKHEL