ಭಾರತ ತಂಡದ ಆಯ್ಕೆಯೇ ಸರಿ ಇಲ್ಲ ಎಂದ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್

18-03-21 01:17 pm       Source: MYKHEL   ಕ್ರೀಡೆ

ಟೀಮ್ ಇಂಡಿಯಾ ವಿರುದ್ಧದ ಹೇಳಿಕೆಗಳಿಂದ ಪದೇ ಪದೇ ಸುದ್ದಿಯಾಗುತ್ತಿರುವ ಮೈಕಲ್ ವಾನ್ ಈಗ ಭಾರತ ತಂಡದ ಆಯ್ಕೆಯ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ.

ಟೀಮ್ ಇಂಡಿಯಾ ವಿರುದ್ಧದ ಹೇಳಿಕೆಗಳಿಂದ ಪದೇ ಪದೇ ಸುದ್ದಿಯಾಗುತ್ತಿರುವ ಮೈಕಲ್ ವಾನ್ ಈಗ ಭಾರತ ತಂಡದ ಆಯ್ಕೆಯ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಆಡುವ ಬಳಗದಲ್ಲಿದ್ದ ಆಟಗಾರರನ್ನು ಉದ್ದೇಶಿಸಿ ಮೈಕಲ್ ವಾನ್ ಈ ರೀತಿಯ ಅಭಿಪ್ರಾಯವನ್ನು ಕ್ರಿಕ್‌ಬಜ್‌ ಜೊತೆಗೆ ಮಾತುಕತೆಯ ಸಂದರ್ಭದಲ್ಲಿ ಹಂಚಿಕೊಂಡಿದ್ದಾರೆ.

"ಭಾರತದ ವಿರುದ್ಧದ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ನನಗೆ ಇಂಗ್ಲೆಂಡ್ ಈಗ ವಿಶ್ವದ ಅತ್ಯುತ್ತಮ ತಂಡದ ವಿರುದ್ಧ ಆಡುತ್ತದೆ ಎಂದು ಎನಿಸಿತ್ತು. ಆದರೆ ಟಿ20ಯಲ್ಲಿ ಎಲ್ಲವನ್ನೂ ಬದಲಾಯಿಸಿಕೊಂಡು ಆ ಟೆಸ್ಟ್ ತಂಡದಷ್ಟು ತಂಡ ಬಲಿಷ್ಠವಾಗಿಲ್ಲ. ಭಾರತದ ಈ ಟಿ20 ತಂಡ ಅಷ್ಟು ಉತ್ತಮವಾಗಿಲ್ಲ" ಎಂದಿದ್ದಾರೆ ಮೈಕಲ್‌ವಾನ್.

ಭಾರತ vs ಇಂಗ್ಲೆಂಡ್: ಕೆಟ್ಟ ದಾಖಲೆ ಪಟ್ಟಿಯಲ್ಲಿ ಕೊಹ್ಲಿಯೇ ಮುಂದು! "ನನಗೆ ಭಾರತ ತಂಡದಲ್ಲಿ ಅರ್ಥವಾಗದಿರುವುದು ಅವರು ಕೊನೆಯ ಪಂದ್ಯದಲ್ಲಿ ಉತ್ತಮವಾಗಿ ಆಡಿದ ಇಬ್ಬರ ಸ್ಥಾನವನ್ನು ಅದು ಹೇಗೆ ಬದಲಾಯಿಸಿದರು ಎಂಬುದು. ಎರಡನೇ ಪಂದ್ಯದಲ್ಲಿ ಆರಂಭಿಕನಾಗಿ ಆಡಿ ಮಿಂಚಿದ ಇಶಾನ್ ಕಿಶನ್ ಮೂರನೇ ಕ್ರಮಾಂಕದಲ್ಲಿ ಹಾಗೂ 3ನೇ ಕ್ರಮಾಂಕದಲ್ಲಿ ಅದ್ಭುತವಾಗಿ ಆಡಿದ ವಿರಾಟ್ ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬಂದಿದ್ದರು.

ನೀವು ಖಂಡಿತವಾಗಿಯೂ ಹಿಂದಿನ ಪಂದ್ಯದಲ್ಲಿ ನಿಮ್ಮ ಪರವಾಗಿ ಕೆಲಸ ಮಾಡಿದ್ದನ್ನು ಹಾಗೆಯೇ ಉಳಿಸಿಕೊಳ್ಳಬೇಕು" ಎಂದು ಮೈಕಲ್ ವಾನ್ ಹೇಳಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬೂಮ್ರಾ ಹಾಗೂ ರವೀಂದ್ರ ಜಡೇಜಾ ಅವರ ಅಲಭ್ಯತೆಯನ್ನು ಅನುಭವಿಸುತ್ತಿದೆ ಎಂದು ಮೈಕಲ್ ವಾನ್ ಹೇಳಿದ್ದಾರೆ. ಜಸ್ಪ್ರೀತ್ ಬೂಮ್ರಾ ಇತ್ತೀಚೆಗಷ್ಟೇ ತಮ್ಮ ವಿವಾಹದ ಕಾರಣದಿಂದಾಗಿ ವಿರಾಮವನ್ನು ಪಡೆದುಕೊಂಡಿದ್ದರು. ಆಲ್‌ರೌಂಡರ್ ರವೀಂದ್ರ ಜಡೇಜಾ ಬೆರಳಿಗೆ ಗಾಯವಾಗಿದ್ದ ಹಿನ್ನೆಲೆಯಲ್ಲಿ ವಿಶ್ರಾಂತಿಯಲ್ಲಿದ್ದಾರೆ. ವೆಸ್ಟ್ ಇಂಡೀಸ್ ಲೆಜೆಂಡ್ಸ್ ಮಣಿಸಿದ ಇಂಡಿಯಾ ಲೆಜೆಂಡ್ಸ್‌ ಫೈನಲ್‌ಗೆ ಎಂಟ್ರಿ!

"ನನ್ನ ಪ್ರಕಾರ ರವೀಂದ್ರ ಜಡೇಜಾ ಹಾಗೂ ಜಸ್ಪ್ರೀತ್ ಬೂಮ್ರಾ ತಂಡದಲ್ಲಿದ್ದರೆ ತಂಡವನ್ನು ಸಾಕಷ್ಟು ಬಲಿಷ್ಠವನ್ನಾಗಿ ಮಾಡುತ್ತಿದ್ದರು. ಜಡೇಜಾ ಇದ್ದರೆ ಬ್ಯಾಟಿಂಗ್ ಸಾಮರ್ಥ್ಯದ ಜೊತೆಗೆ ಹೆಚ್ಚುವರಿ ಬೌಲಿಂಗ್ ಆಯ್ಕೆಯೂ ದೊರೆಯುತ್ತಿತ್ತು. ಜಸ್‌ಪ್ರೀತ್ ಬೂಮ್ರಾ ವಿಶ್ವದರ್ಜೆಯ ಬೌಲರ್ ಆಗಿದ್ದು ತಂಡದ ಬಲ ಹೆಚ್ಚಿಸುತ್ತಿದ್ದರು" ಎಂದು ಮೈಕಲ್ ವಾನ್ ಅಭಿಪ್ರಾಯಪಟ್ಟಿದ್ದಾರೆ.

This News Article Is A Copy Of MYKHEL