ನಾಯಕ ವಿರಾಟ್ ಕೊಹ್ಲಿ ಬಗ್ಗೆ ಹೇಳಿಕೆ ಕೊಟ್ಟ ಕನ್ನಡಿಗ ಪ್ರಸಿದ್ಧ್ ಕೃಷ್ಣ!

20-03-21 12:33 pm       Source: MYKHEL   ಕ್ರೀಡೆ

ಭಾರತ ಪ್ರವಾಸದಲ್ಲಿರುವ ಇಂಗ್ಲೆಂಡ್ ಕ್ರಿಕೆಟ್ ತಂಡದ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಭಾರತ ಕ್ರಿಕೆಟ್ ತಂಡ ಪ್ರಕಟಗೊಂಡಿದೆ.

ಬೆಂಗಳೂರು: ಭಾರತ ಪ್ರವಾಸದಲ್ಲಿರುವ ಇಂಗ್ಲೆಂಡ್ ಕ್ರಿಕೆಟ್ ತಂಡದ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಭಾರತ ಕ್ರಿಕೆಟ್ ತಂಡ ಪ್ರಕಟಗೊಂಡಿದೆ. ಏಕದಿನ ಸರಣಿಗಾಗಿ ಪ್ರಕಟವಾಗಿರುವ 18 ಜನರ ಭಾರತ ತಂಡದಲ್ಲಿ ಬೆಂಗಳೂರು ಮೂಲದ ಕನ್ನಡಿಗ ಪ್ರಸಿದ್ಧ್ ಕೃಷ್ಣ ಕೂಡ ಇದ್ದಾರೆ. 25ರ ಹರೆಯದ ಕೃಷ್ಣ ತಂಡಕ್ಕೆ ಆಯ್ಕೆಯಾಗಿರುವ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಬಗ್ಗೆಯೂ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ ಜೊತೆಗೆ ಜಸ್‌ಪ್ರೀತ್‌ ಬೂಮ್ರಾ ಪತ್ನಿಯಿರುವ ಚಿತ್ರ ವೈರಲ್! 4 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 3-1ರಿಂದ ಗೆದ್ದು ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಂಡಿರುವ ಭಾರತ, 5 ಪಂದ್ಯಗಳ ಟಿ20 ಸರಣಿಯಲ್ಲಿ 2-2ರ ಸಮಬಲ ಸಾಧಿಸಿದೆ. 3 ಪಂದ್ಯಗಳ ಏಕದಿನ ಸರಣಿ ಮಾರ್ಚ್ 23ರಿಂದ ಆರಂಭಗೊಳ್ಳಲಿದೆ.

ಏಕದಿನ ಸರಣಿಯ ಪ್ರಮುಖಾಂಶಗಳು

ಭಾರತ-ಇಂಗ್ಲೆಂಡ್ ಮೂರು ಪಂದ್ಯಗಳ ಏಕದಿನ ಸರಣಿಯ ಮೂರೂ ಪಂದ್ಯಗಳು ಪೂಣೆಯಲ್ಲಿರುವ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್‌ ಸ್ಟೇಡಿಯಂನಲ್ಲಿ ಮಾರ್ಚ್‌ 23ರಿಂದ ನಡೆಯಲಿದೆ. ಆರಂಭಿಕ ಪಂದ್ಯ ಮಾರ್ಚ್ 23ರಂದು, ದ್ವಿತೀಯ ಪಂದ್ಯ ಮಾರ್ಚ್ 26, ತೃತೀಯ ಪಂದ್ಯ ಮಾರ್ಚ್ 28ರಂದು ನಡೆಯಲಿವೆ. ಮೂರೂ ಪಂದ್ಯಗಳು ಭಾರತೀಯ ಕಾಲಮಾನ 1:30 PMಗೆ ಆರಂಭಗೊಳ್ಳಲಿದೆ. ಈ ಬಾರಿ ಏಕದಿನ ಸರಣಿಗಾಗಿ ಹೆಸರಿಸಲಾದ ಟೀಮ್ ಇಂಡಿಯಾದಲ್ಲಿ ಬೆಂಗಳೂರಿನ ಪ್ರಸಿದ್ಧ್ ಕೃಷ್ಣ, ಮುಂಬೈಯ ಕೃನಾಲ್ ಪಾಂಡ್ಯ ಮತ್ತು ಸೂರ್ಯಕುಮಾರ್ ಯಾದವ್ ಕಾಣಿಸಿಕೊಂಡಿರುವುದು ವಿಶೇಷ.

ಏಕದಿನಕ್ಕೆ 18 ಮಂದಿಯ ಭಾರತ ತಂಡ

ಕೊಹ್ಲಿ ಬಗ್ಗೆ ಪ್ರಸಿದ್ಧ್ ಪ್ರತಿಕ್ರಿಯೆ

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗಾಗಿ ಭಾರತ ತಂಡದಲ್ಲಿ ಹೆಸರಿಸಲಾಗಿರುವ ಬಗ್ಗೆ ಐಎಎನ್‌ಎಸ್‌ ಜೊತೆ ಮಾತನಾಡಿದ ಪ್ರಸಿದ್ಧ್ ಕೃಷ್ಣ, 'ವಿರಾಟ್ ಕೊಹ್ಲಿ ಕಳೆದ ವರ್ಷ ನನ್ನ ಹೆಸರು ಉಲ್ಲೇಖಿಸಿದ್ದೇ ನನ್ನಲ್ಲಿ ಸಾಕಷ್ಟು ಆತ್ಮವಿಶ್ವಾಸ ತುಂಬಿತ್ತು. ರಾಷ್ಟ್ರೀಯ ತಂಡದ ನಾಯಕನೊಬ್ಬ ನಿಮ್ಮ ಬಗ್ಗೆ ಮಾತನಾಡಿದರೆ ಅದು ನಿಮ್ಮನ್ನು ಇನ್ನೂ ಪರಿಶ್ರಮದಲ್ಲಿ ತೊಡಗಿಕೊಳ್ಳುವಂತೆ ಮಾಡುತ್ತದೆ. ಆ ಸ್ಫೂರ್ತಿ ನನ್ನ ಆತ್ಮವಿಶ್ವಾಸವನ್ನು ಇನ್ನೂ ಬೂಸ್ಟ್ ಮಾಡಿತು. ನಾನು ಅಭ್ಯಾಸ ಮಾಡಿದ್ದೇನೆ, ನನ್ನ ಸ್ಫೂರ್ತಿಯ ಮಟ್ಟ ತುಂಬಾ ಹೆಚ್ಚಿದೆ,' ಎಂದಿದ್ದಾರೆ. ಅಂದ್ಹಾಗೆ, ಬಲಗೈ ಮಧ್ಯಮ ವೇಗಿಯಾಗಿರುವ 25ರ ಹರೆಯದ ಕೃಷ್ಣ 24 ಐಪಿಎಲ್ ಪಂದ್ಯಗಳಲ್ಲಿ 18 ವಿಕೆಟ್‌ ದಾಖಲೆ ಹೊಂದಿದ್ದಾರೆ. ಐಪಿಎಲ್‌ನಲ್ಲಿ ಕೃಷ್ಣ ಸದ್ಯ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುತ್ತಿದ್ದಾರೆ.

ಏಕದಿನಕ್ಕೆ 18 ಮಂದಿಯ ಭಾರತ ತಂಡ

ಏಕದಿನ ಸರಣಿಗೆ ಭಾರತ ತಂಡ ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪ ನಾಯಕ), ಶಿಖರ್ ಧವನ್, ಶುಬ್ಮನ್ ಗಿಲ್, ಶ್ರೇಯಸ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ (ವಿಕೆಟ್ ಕೀಪರ್), ಕೆಎಲ್ ರಾಹುಲ್ (ವಿಕೆಟ್ ಕೀಪರ್), ಯುಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಕೃನಾಲ್ ಪಾಂಡ್ಯ, ಸುಂದರ್, ಟಿ ನಟರಾಜನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಸಿರಾಜ್, ಪ್ರಸಿದ್ ಕೃಷ್ಣ, ಶಾರ್ದೂಲ್ ಠಾಕೂರ್.

This News Article Is A Copy Of MYKHEL