ಐಪಿಎಲ್ ತಂಡಗಳಿಗೆ ನೋ ವ್ಯಾಕ್ಸಿನೇಶನ್, ಪಾಸಿಟಿವ್ ಬಂದರೆ ಐಸೊಲೇಶನ್!

22-03-21 11:23 am       Source: MYKHEL   ಕ್ರೀಡೆ

ಮುಗಿಯದ ಕೊರೊನಾವೈರಸ್ ಪಿಡುಗಿನ ನಡುವೆಯೇ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಮತ್ತೊಂದು ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಆವೃತ್ತಿ ಅಯೋಜನೆಗೆ ಸಿದ್ಧತೆ ನಡೆಸುತ್ತಿದೆ.

ಬೆಂಗಳೂರು: ಮುಗಿಯದ ಕೊರೊನಾವೈರಸ್ ಪಿಡುಗಿನ ನಡುವೆಯೇ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಮತ್ತೊಂದು ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಆವೃತ್ತಿ ಅಯೋಜನೆಗೆ ಸಿದ್ಧತೆ ನಡೆಸುತ್ತಿದೆ. 

14ನೇ ಆವೃತ್ತಿಯ ಐಪಿಎಲ್‌ನಲ್ಲಿ ಪಾಲ್ಗೊಳ್ಳುವ ಎಂಟು ತಂಡಗಳಿಗೆ ಕೋವಿಡ್-19 ವ್ಯಾಕ್ಸಿನೇಶನ್ ಇಲ್ಲ. ತಂಡದ ಯಾವುದಾದರೂ ಆಟಗಾರನಿಗೆ ಕೊರೊನಾ ಪಾಸಿಟಿವ್ ಬಂದರೆ ಅವರನ್ನು 10 ದಿನಗಳ ಐಸೊಲೇಶನ್‌ನಲ್ಲಿ ಇಡಲಾಗುತ್ತದೆ ಎಂದು ಬಿಸಿಸಿಐ ಹೇಳಿದೆ. 2021ರ ಐಪಿಎಲ್ ಆವೃತ್ತಿ ಭಾರತದ ಮುಂಬೈ, ಕೋಲ್ಕತ್ತಾ, ಬೆಂಗಳೂರು, ಚೆನ್ನೈ, ಅಹ್ಮದಾಬಾದ್ ಮತ್ತು ದೆಹಲಿ ತಾಣಗಳಲ್ಲಿ ನಡೆಯಲಿದೆ. ಏಪ್ರಿಲ್ 9ರಿಂದ ಮೇ 30ರ ವರೆಗೆ ಭಾರತದ ಅದ್ದೂರಿ ಕ್ರಿಕೆಟ್ ಟೂರ್ನಿ ಅಭಿಮಾನಿಗಳನ್ನು ರಂಜಿಸಲಿದೆ.

ಸದ್ಯ ಭಾರತ ಮತ್ತು ಇಂಗ್ಲೆಂಡ್ ಪ್ರವಾಸ ಸರಣಿ ಭಾರತದಲ್ಲಿ ನಡೆಯುತ್ತಿದೆ. ಮಾರ್ಚ್ 23ರಿಂದ ಏಕದಿನ ಸರಣಿ ಆರಂಭಗೊಳ್ಳಲಿದೆ. ಶರ್ಮಾ-ಕೊಹ್ಲಿ ಆರಂಭಿಕರಾದರೆ ರಾಹುಲ್ ಕಥೆಯೇನು? ಸ್ಪಷ್ಟನೆ ನೀಡಿದ ಉಪನಾಯಕ ರೋಹಿತ್ ಐಪಿಎಲ್ ಮಧ್ಯಸ್ಥದಾರರು ಮತ್ತು ಎಲ್ಲಾ ಎಂಟು ಫ್ರಾಂಚೈಸಿಗಳಿಗೆ ಬಿಸಿಸಿಐ 'ಆರೋಗ್ಯ ಮತ್ತು ಸುರಕ್ಷೆ'ಗೆ ಸಂಬಂಧಿಸಿ ಮಾರ್ಗಸೂಚಿಗಳನ್ನು ನೀಡಿದೆ. ಈ ಬಾರಿಯ ಟೂರ್ನಿ ವೇಳೆ 12 ಬಯೋಬಬಲ್‌ಗಳು ಇರಲಿವೆ. ಇದರಲ್ಲಿ 8 ವಿಭಿನ್ನ ತಂಡಗಳಿಗೆ, 2 ಮ್ಯಾಚ್ ಅಫೀಶಿಯಲ್‌ಗಳಿಗೆ ಮತ್ತು ಪಂದ್ಯ ನಿರ್ವಹಣಾ ತಂಡಕ್ಕೆ, 2 ಪ್ರಸಾರಕರ ತಂಡಕ್ಕೆ ಇರಲಿವೆ.

This News Article Is A Copy Of MYKHEL