ಆರ್‌ಸಿಬಿ ಪರ ಆರಂಭಿಕರಾಗಿ ಆಡುವುದಾಗಿ ವಿರಾಟ್ ಕೊಹ್ಲಿ ಘೋಷಣೆ!

22-03-21 12:58 pm       Source: MYKHEL   ಕ್ರೀಡೆ

ಒಂದು ಸಾರಿಯೂ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ರೋಫಿ ಗೆಲ್ಲದ ತಂಡವೆಂಬ ಕೆಟ್ಟ ಹಣೆಪಟ್ಟಿ ಆಕರ್ಷಣೀಯ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೇಲಿದೆ.

ಬೆಂಗಳೂರು: ಒಂದು ಸಾರಿಯೂ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ರೋಫಿ ಗೆಲ್ಲದ ತಂಡವೆಂಬ ಕೆಟ್ಟ ಹಣೆಪಟ್ಟಿ ಆಕರ್ಷಣೀಯ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೇಲಿದೆ. ಒಟ್ಟು ಮೂರು ತಂಡಗಳು ಇನ್ನೂ ಈ ಕೆಟ್ಟ ದಾಖಲೆ ಉಳಿಸಿಕೊಂಡಿವೆ. ಆರ್‌ಸಿಬಿ ಬಿಟ್ಟರೆ ಕಪ್ ಗೆಲ್ಲದ ಇನ್ನೆರಡು ತಂಡಗಳೆಂದರೆ ಅದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್. ಆದರೆ 2021ರ ಐಪಿಎಲ್‌ ಸೀಸನ್‌ನಲ್ಲಿ ಆರ್‌ಸಿಬಿ ಕಪ್ ಗೆಲ್ಲುವ ಎಲ್ಲಾ ಸಾಧ್ಯತೆಗಳಿವೆ. ಗೆಲ್ಲಬೇಕು ಕೂಡ. ಭಾರತದ ವಿರುದ್ಧದ ಏಕದಿನ ಸರಣಿಗೆ ಇಂಗ್ಲೆಂಡ್ ತಂಡ ಘೋಷಣೆ: ಜೋ

14ನೇ ಆವೃತ್ತಿಯ ಐಪಿಎಲ್‌ಗಾಗಿ ಸಿದ್ಧತೆ ನಡೆಸುತ್ತಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿಕೊಂಡಿದೆ. ಸಾಕಷ್ಟು ಬಲಿಷ್ಠ ಆಟಗಾರರನ್ನು ಆರ್‌ಸಿಬಿ ಈ ಬಾರಿ ಟ್ರೇಡಿಂಗ್ ಮೂಲಕ ಮತ್ತು ಹರಾಜಿನ ಮುಖಾಂತರ ತನ್ನ ತೆಕ್ಕೆಗೆ ತಂದುಕೊಂಡಿದೆ.

ಆರ್‌ಸಿಬಿಯಲ್ಲಿ ಬಲಿಷ್ಠರ ಬಣ

ಆರ್‌ಸಿಬಿಯಲ್ಲಿ ಬಲಿಷ್ಠರ ಬಣ

ಈ ಬಾರಿ ಆರ್‌ಸಿಬಿ ತಂಡದಲ್ಲಿ ಆಸ್ಟ್ರೇಲಿಯಾದ ಆಲ್ ರೌಂಡರ್ ಡೇನಿಯಲ್ ಸ್ಯಾಮ್ಸ್, ನ್ಯೂಜಿಲೆಂಡ್ ಆಲ್ ರೌಂಡ್ ಕೈಲ್ ಜೇಮಿಸನ್, ಆಸ್ಟ್ರೇಲಿಯಾದ ಬೀಸುಗೈ ದಾಂಡಿಗ ಗ್ಲೆನ್ ಮ್ಯಾಕ್ಸ್‌ವೆಲ್, ನ್ಯೂಜಿಲೆಂಡ್‌ನ ಸ್ಫೋಕ ಬ್ಯಾಟ್ಸ್‌ಮನ್‌ ಫಿನ್ ಅಲೆನ್, ಪ್ರತಿಭಾನ್ವಿತ ಆಟಗಾರ ದೇವದತ್ ಪಡಿಕ್ಕಲ್ ಇದ್ದಾರೆ. ಇನ್ನು ವಿರಾಟ್ ಕೊಹ್ಲಿ, ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಹೇಗೂ ತಂಡಕ್ಕೆ ಬಲ ತುಂಬುತ್ತಾರೆ. ಹೀಗಾಗಿ ಆರ್‌ಸಿಬಿ ಈ ಸಾರಿ ಇನ್ನಷ್ಟು ಬಲಿಷ್ಠಗೊಂಡಿದೆ.

ಆರಂಭಿಕರಾಗಿ ವಿರಾಟ್ ಕೊಹ್ಲಿ

ಆರಂಭಿಕರಾಗಿ ವಿರಾಟ್ ಕೊಹ್ಲಿ

ಐಪಿಎಲ್ 2021ರ ಸೀಸನ್‌ನಲ್ಲಿ ನಾವು ಆರ್‌ಸಿಬಿಯಿಂದ ಕಾಣಬಹುದಾದ ಪ್ರಮುಖ ಬದಲಾವಣೆಯೆಂದರೆ ನಾಯಕ ವಿರಾಟ್ ಕೊಹ್ಲಿ ಆರಂಭಿಕರಾಗಿ ಬರುವ ಎಲ್ಲಾ ಸಾಧ್ಯತೆಗಳಿವೆ. ಇದನ್ನು ಸ್ವತಃ ಕೊಹ್ಲಿಯೇ ಖಾತರಿಪಡಿಸಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಭಾರತ-ಇಂಗ್ಲೆಂಡ್ 5ನೇ ಟಿ20ಐ ಪಂದ್ಯದಲ್ಲಿ ರೋಹಿತ್ ಶರ್ಮಾ ಜೊತೆಗೆ ಯಶಸ್ವಿಯಾಗಿ ಆರಂಭಿಕರಾಗಿ ಆಡಿದ ಬಳಿಕ ಬಳಿಕ ಈ ಹೇಳಿಕೆ ನೀಡಿದ್ದರು. ಈ ಪಂದ್ಯದಲ್ಲಿ ರೋಹಿತ್-ಕೊಹ್ಲಿ 94 ರನ್ ಜೊತೆಯಾಟ ನೀಡಿತ್ತು. ಪಂದ್ಯದಲ್ಲಿ 36 ರನ್ ಜಯ ಕಂಡಿತ್ತ ಭಾರತ 5 ಪಂದ್ಯ ಪಂದ್ಯಗಳ ಟಿ20 ಸರಣಿಯನ್ನು 3-2ರಿಂದ ಗೆದ್ದಿತ್ತು.

ರೋಹಿತ್ ಜೊತೆಗೆ ಓಪನಿಂಗ್

ರೋಹಿತ್ ಜೊತೆಗೆ ಓಪನಿಂಗ್

ಇಂಗ್ಲೆಂಡ್ ವಿರುದ್ಧದ 5ನೇ ಪಂದ್ಯದಲ್ಲಿ ಆರಂಭಿಕರಾಗಿ 52 ಎಸೆತಗಳಿಗೆ 80 ರನ್ ಬಾರಿಸಿದ್ದ ಕೊಹ್ಲಿ ಆ ಬಳಿಕ ಮಾತನಾಡಿ, 'ನೋಡಿ, ನಾನು ಈಗಾಗಲೇ ಬೇರೆ ಬೇರೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಆಡಿದ್ದೇನೆ. ಆದರೆ ನಮ್ಮ ಸದ್ಯದ ಮಧ್ಯಮ ಕ್ರಮಾಂಕ ಚೆನ್ನಾಗಿದೆ ಎಂದು ನನಗನ್ನಿಸುತ್ತಿದೆ. ಈಗ ನಿಮ್ಮ ಇಬ್ಬರು ನೆಚ್ಚಿನ ಆಟಗಾರರು ಟಿ20ಐನಲ್ಲಿ ಅತ್ಯಧಿಕ ರನ್ ಗಳಿಸಿದ್ದೇವೆ. ಹೀಗಾಗಿ ನಾನು ಮುಂಬರುವ ಪಂದ್ಯಗಳಲ್ಲಿ ರೋಹಿತ್ ಜೊತೆಗೆ ಟಾಪ್ ಆರ್ಡರ್‌ನಲ್ಲಿ ಬರಲು ಬಯಸುತ್ತೇನೆ,' ಎಂದಿದ್ದಾರೆ.

ಆರ್‌ಸಿಬಿಯಲ್ಲಿ ಕೊಹ್ಲಿಗೆ ಜೊತೆ ಯಾರು?

ಆರ್‌ಸಿಬಿಯಲ್ಲಿ ಕೊಹ್ಲಿಗೆ ಜೊತೆ ಯಾರು?

ಅಂತಾರಾಷ್ಟ್ರೀಯ ಟಿ20ಐನಲ್ಲಿ ಕೊಹ್ಲಿ ಅವರು ರೋಹಿತ್ ಜೊತೆಗೆ ಆರಂಭಿಸಲಿರುವುದಾದರೆ ಐಪಿಎಲ್‌ನಲ್ಲಿ ಕೊಹ್ಲಿಗೆ ಜೊತೆಯಾರು? ಒಂದೋ ದೇವದತ್ ಪಡಿಕ್ಕಲ್ ಅಥವಾ ಫಿನ್ ಅಲೆನ್ ಜೊತೆಗೆ ಕೊಹ್ಲಿ ಅವರು ಆರ್‌ಸಿಬಿ ಪರ ಆರಂಭಿಕರಾಗಿ ಆಡುವ ನಿರೀಕ್ಷೆಯಿದೆ. ಐಪಿಎಲ್‌ನಲ್ಲೂ ಆರ್‌ಸಿಬಿ ಪರ ತಾನು ಆರಂಭಿಕರಾಗಿ ಆಡುತ್ತೇನೆ ಎಂದು ಕೊಹ್ಲಿ ಈಗಾಗಲೇ ಹೇಳಿಕೆ ನೀಡಿದ್ದಾರೆ. ಹೀಗಾಗಿ ಮುಂಬರುವ ಐಪಿಎಲ್‌ನಲ್ಲಿ ಆರ್‌ಸಿಬಿಯಿಂದ ನಾವು ಕುತೂಹಲಕಾರಿ ಪ್ರದರ್ಶನ ನಿರೀಕ್ಷಿಸಬಹುದು. ಏಪ್ರಿಲ್ 9ರಿಂದ ಐಪಿಎಲ್ ಆರಂಭವಾಗಲಿದೆ.

This News Articlee Is A copy Of MYKHEL