ಬಾಬರ್ ಅಜಂ ನಂ.1 ಸ್ಥಾನದಲ್ಲಿರಲು ವಿರಾಟ್ ಬಿಡಲ್ಲ ಎಂದ ಮಾಜಿ ಕ್ರಿಕೆಟಿಗ

14-04-21 07:03 pm       Source: MYKHEL   ಕ್ರೀಡೆ

ಐಸಿಸಿ ನೂತನ ಏಕದಿನ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು ಇದರಲ್ಲಿ ಬಾಬರ್ ಅಜಂ ಅಗ್ರ ಸ್ಥಾನಕ್ಕೇರಿದ್ದಾರೆ. ಸತತವಾಗಿ 1258 ದಿನಗಳ ಕಾಲ ಅಗ್ರಸ್ಥಾನದಲ್ಲಿದ್ದ ವಿರಾಟ್ ಕೊಹ್ಲಿ ಅವರು ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.

ಐಸಿಸಿ ನೂತನ ಏಕದಿನ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು ಇದರಲ್ಲಿ ಬಾಬರ್ ಅಜಂ ಅಗ್ರ ಸ್ಥಾನಕ್ಕೇರಿದ್ದಾರೆ. ಸತತವಾಗಿ 1258 ದಿನಗಳ ಕಾಲ ಅಗ್ರಸ್ಥಾನದಲ್ಲಿದ್ದ ವಿರಾಟ್ ಕೊಹ್ಲಿ ಅವರು ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.

ನೂತನವಾಗಿ ಏಕದಿನ ಕ್ರಿಕೆಟ್‌ನ ನಂ.1 ಬ್ಯಾಟ್ಸ್‌ಮನ್‌ ಆಗಿರುವ ಬಾಬರ್ ಅಜಂಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳು ಹರಿದುಬರುತ್ತಿವೆ. ಬಾಬರ್ ಅಜಂ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿರುವುದರ ಕುರಿತು ಭಾರತದ ಮಾಜಿ ಕ್ರಿಕೆಟಿಗ , ಪ್ರಸ್ತುತ ಪಂಜಾಬ್ ಕಿಂಗ್ಸ್ ತಂಡದ ಬ್ಯಾಟಿಂಗ್ ಕೋಚ್ ವಾಸಿಮ್ ಜಾಫರ್ ಅವರು ಸಹ ಟ್ವೀಟ್ ಮಾಡಿದ್ದು ಬಾಬರ್ ಅಜಂನ ಕಾಲೆಳೆದಿದ್ದಾರೆ.

ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿರುವ ಬಾಬರ್ ಅಜಂಗೆ ಶುಭಾಶಯ ತಿಳಿಸಿದ ವಾಸಿಮ್ ಜಾಫರ್ ಅಗ್ರ ಸ್ಥಾನದಲ್ಲಿ ಹೆಚ್ಚು ದಿನಗಳ ಆರಾಮದಾಯಕವಾಗಿ ಇರುತ್ತೇನೆ ಎಂದು ಕೊಳ್ಳುವುದು ಬೇಡ ಏಕೆಂದರೆ ವಿರಾಟ್ ಕೊಹ್ಲಿಗೆ ಚೇಸಿಂಗ್ ಮಾಡುವುದೆಂದರೆ ತುಂಬಾ ಇಷ್ಟ ನೆನಪಿರಲಿ ಎಂದು ವಾಸಿಮ್ ಜಾಫರ್ ಟ್ವೀಟ್ ಮಾಡಿದ್ದಾರೆ.

ವಿರಾಟ್ ಕೊಹ್ಲಿ ಮತ್ತೆ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಏರುತ್ತಾರೆ ಎಂದು ಪರೋಕ್ಷವಾಗಿ ಬಾಬರ್ ಅಜಂಗೆ ವಾಸಿಂ ಜಾಫರ್ ಟಾಂಗ್ ನೀಡಿದ್ದಾರೆ. ಸದ್ಯ ವಾಸಿಮ್ ಜಾಫರ್ ಮಾಡಿರುವ ಈ ಟ್ವೀಟ್ ವೈರಲ್ ಆಗಿದೆ.

This News Article Is A Copy Of MYKHEL