ಚಿಕಿತ್ಸೆಗೆ ಯುಕೆಗೆ ತೆರಳಿದ ಸ್ಟೋಕ್ಸ್‌ಗೆ ಶುಭ ಹಾರೈಸಿದ ರಾಜಸ್ಥಾನ

17-04-21 05:43 pm       Source: MYKHEL   ಕ್ರೀಡೆ

ಗಾಯಕ್ಕೀಡಾಗಿರುವ ಇಂಗ್ಲೆಂಡ್‌ನ ಆಲ್ ರೌಂಡರ್ ಬೆನ್ ಸ್ಟೋಕ್ಸ್‌ ಇಂಡಿಯನ್ ಪ್ರೀಮಿಯರ್ (ಐಪಿಎಲ್) ಲೀಗ್‌ ಬಯೋ ಬಬಲ್ ತೊರೆದು ಯುನೈಟೆಡ್ ಕಿಂಗ್ಡಮ್‌ಗೆ ತೆರಳಿದ್ದಾರೆ. ಕೈ ಬೆರಳಿನ ಶಸ್ತ್ರ ಚಿಕಿತ್ಸೆಗಾಗಿ ತನ್ನ ತವರು ದೇಶಕ್ಕೆ ತೆರಳುತ್ತಿರುವ ಸ್ಟೋಕ್ಸ್‌ಗೆ ರಾಜಸ್ಥಾನ್ ರಾಯಲ್ಸ್‌ ಶುಭ ಹಾರೈಸಿದೆ.

ಮುಂಬೈ: ಗಾಯಕ್ಕೀಡಾಗಿರುವ ಇಂಗ್ಲೆಂಡ್‌ನ ಆಲ್ ರೌಂಡರ್ ಬೆನ್ ಸ್ಟೋಕ್ಸ್‌ ಇಂಡಿಯನ್ ಪ್ರೀಮಿಯರ್ (ಐಪಿಎಲ್) ಲೀಗ್‌ ಬಯೋ ಬಬಲ್ ತೊರೆದು ಯುನೈಟೆಡ್ ಕಿಂಗ್ಡಮ್‌ಗೆ ತೆರಳಿದ್ದಾರೆ. ಕೈ ಬೆರಳಿನ ಶಸ್ತ್ರ ಚಿಕಿತ್ಸೆಗಾಗಿ ತನ್ನ ತವರು ದೇಶಕ್ಕೆ ತೆರಳುತ್ತಿರುವ ಸ್ಟೋಕ್ಸ್‌ಗೆ ರಾಜಸ್ಥಾನ್ ರಾಯಲ್ಸ್‌ ಶುಭ ಹಾರೈಸಿದೆ.

ಶುಕ್ರವಾರ (ಏಪ್ರಿಲ್ 16) ರಾತ್ರಿಯೇ ಬೆನ್‌ ಸ್ಟೋಕ್ಸ್‌ ಯುಕೆಗೆ ವಿಮಾನಯಾನ ಬೆಳೆಸಿದ್ದಾರೆ. ಸ್ಕ್ಯಾನಿಂಗ್‌ ಮಾಡಿದಾಗ ಅವರಿಗೆ ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ ಎಂದು ತಿಳಿದುಬಂತು. ಹೀಗಾಗಿ ಸ್ಟೋಕ್ಸ್‌ ಸ್ವದೇಶಕ್ಕೆ ವಾಪಸ್ ತೆರಳಿದ್ದಾರೆ. ಈ ಸಂಗತಿಯನ್ನು ರಾಜಸ್ಥಾನ ಫ್ರಾಂಚೈಸಿ ಟ್ವೀಟ್‌ ಮೂಲಕ ತಿಳಿಸಿದೆ. ಟ್ವೀಟ್‌ ಮಾಡಿರುವ ರಾಜಸ್ಥಾನ್, 'ಬೈ ಬೆನ್, ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಾಗಿರುವುದಾಗಿ ಸ್ಕ್ಯಾನ್‌ ವೇಳೆ ತಿಳಿದು ಬಂದಿದ್ದರಿಂದ ಆಲ್ ರೌಂಡರ್ ಕಳೆದ ರಾತ್ರಿ ತವರು ದೇಶಕ್ಕೆ ಹಾರಿದ್ದಾರೆ' ಎಂದು ಬರೆದುಕೊಂಡಿದೆ. ಟ್ವೀಟ್‌ ಜೊತೆಗೆ ಹಾಕಿಕೊಂಡಿರುವ ಫೋಟೋದಲ್ಲಿ ಸ್ಟೋಕ್ಸ್‌ ಅವರನ್ನು ಆರ್‌ಆರ್ ಸದಸ್ಯರು, ಅಭಿಮಾನಿಗಳು ಬೀಳ್ಕೊಡುತ್ತಿರುವ ಚಿತ್ರಣವಿದೆ.

ಈ ಐಪಿಎಲ್‌ ಸೀಸನ್‌ ಆರಂಭಿಕ ಪಂದ್ಯದಲ್ಲಿ ಅಂದರೆ ಪಂಜಾಬ್‌ ಕಿಂಗ್ಸ್‌ ವಿರುದ್ಧ ಪಂದ್ಯದಲ್ಲಿ ಫೀಲ್ಡಿಂಗ್‌ ವೇಳೆ ಸ್ಟೋಕ್ಸ್‌ ಕೈ ಬೆರಳಿಗೆ ಗಾಯವಾಗಿತ್ತು. ಹೀಗಾಗಿ ಸ್ಟೋಕ್ಸ್‌ ಐಪಿಎಲ್‌ನಿಂದ ಹೊರ ಬಿದ್ದಿರುವುದಲ್ಲದೆ ಮೂರು ತಿಂಗಳ ಕಾಲ ಇಂಗ್ಲೆಂಡ್‌ ತಂಡದಿಂದಲೂ ಹೊರಗಿದ್ದು ಚೇತರಿಸಿಕೊಳ್ಳಲಿದ್ದಾರೆ.

This News Article Is A Copy Of MYKHEL